Sonu Sood: ಬಾಲಿವುಡ್‌ ನಟ ಸೋನು ಸೂದ್‌ಗೆ ಸಿಎಂ ಸ್ಥಾನ ಆಫರ್? ಭಾರೀ ವೈರಲ್‌ ಆಗ್ತಿದೆ ಈ ವಿಡಿಯೊ

Sonu Sood: ತಮಗೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಮತ್ತು ರಾಜ್ಯಸಭಾ ಸ್ಥಾನದಂತಹ ಹುದ್ದೆಗಳ ಆಫರ್‌ ಬಂದಿತ್ತು. ಆದರೆ ನಾನು ಎಲ್ಲವನ್ನೂ ನಯವಾಗಿ ತಿರಸ್ಕರಿಸಿದೆ ಎಂದು ಖ್ಯಾತ ನಟ ಸೋನು ಸೂದ್ ಹೇಳಿಕೊಂಡಿದ್ದಾರೆ.

Profile Deekshith Nair Dec 26, 2024 4:28 PM
ನವದೆಹಲಿ: ನಟನೆಯ ಜೊತೆಗೆ ತಮ್ಮ ಸಮಾಜ ಸೇವೆ ಮತ್ತು ಸಮಾಜ ಪರ ಕಾಳಜಿಯಿಂದ ಸಾಕಷ್ಟು ಅಭಿಮಾನಿಗಳನ್ನು ಗಳಿಸಿರುವ ಖ್ಯಾತ ನಟ ಸೋನು ಸೂದ್(Sonu Sood) ಅವರು ಇತ್ತೀಚೆಗೆ ಸಂದರ್ಶನವೊಂದರಲ್ಲಿ(Interview) ನೀಡಿರುವ ಹೇಳಿಕೆಯೊಂದು ಭಾರೀ ಸದ್ದು ಮಾಡುತ್ತಿದೆ. ಸಂದರ್ಶನದಲ್ಲಿ ಹತ್ತು ಹಲವು ವಿಷಯಗಳ ಬಗ್ಗೆ ಮನಸ್ಸು ಬಿಚ್ಚಿ ಮಾತನಾಡಿರುವ ನಟ ತಮಗೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಮತ್ತು ರಾಜ್ಯಸಭಾ ಸ್ಥಾನದಂತಹ ಹುದ್ದೆಗಳ ಆಫರ್‌ ಬಂದಿತ್ತು. ಆದರೆ ನಾನು ಎಲ್ಲವನ್ನೂ ನಯವಾಗಿ ತಿರಸ್ಕರಿಸಿದೆ ಎಂದು ಹೇಳಿಕೊಂಡಿದ್ದಾರೆ.
मुझे CM पद का ऑफर मिला था.मैंने मना किया तो उन्होंने डिप्टी CM का ऑफर दिया.फिर मैंने मना किया तो राज्य सभा की सीट ऑफर की.- अभिनेता सोनू सूद pic.twitter.com/Jr9zNW5zo9— Govind Pratap Singh | GPS (@govindprataps12) December 26, 2024
"ನನಗೆ ಮುಖ್ಯಮಂತ್ರಿ ಆಫರ್‌ ಬಂದಾಗ ಬೇಡ ಎಂದೆ. ಉಪಮುಖ್ಯಮಂತ್ರಿ ಸ್ಥಾನವನ್ನಾದರೂ ಒಪ್ಪಿಕೊಳ್ಳಿ ಎಂದರು ಅದನ್ನೂ ನಿರಾಕರಿಸಿದೆ. ಕಡೇ ಪಕ್ಷ ರಾಜ್ಯಸಭೆಯ ಸ್ಥಾನವನ್ನು ಅಲಂಕರಿಸಿ ಎಂದು ಹೇಳಲು ಮುಂದಾದರು. ನಾನು ಎಲ್ಲವನ್ನು ನಯವಾಗಿ ತಿರಸ್ಕರಿಸುತ್ತಾ ಬಂದೆ. ಈ ದೇಶದ ಪ್ರಮುಖ ವ್ಯಕ್ತಿಗಳು ನನ್ನನ್ನು ರಾಜಕೀಯಕ್ಕೆ ತರಲು ಸಾಕಷ್ಟು ಪ್ರಯತ್ನ ಮಾಡಿದರು. ಹತ್ತಾರು ಬಾರಿ ನನ್ನನ್ನು ಭೇಟಿಯೂ ಆದರು. ಆದರೆ ನಾನು ಯಾವುದಕ್ಕೂ ಒಪ್ಪಲಿಲ್ಲ. ರಾಜಕೀಯದಲ್ಲಿ ಯಾವುದಕ್ಕೂ ಹೋರಾಡುವ ಅಗತ್ಯವಿಲ್ಲ" ಎಂದು ಸೋನು ಸೂದ್ ಹ್ಯೂಮನ್ಸ್ ಆಫ್ ಬಾಂಬೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಸಂದರ್ಶಕರು "ಅಂತಹ ಪ್ರಭಾವಿ ವ್ಯಕ್ತಿಗಳು ನಿಮ್ಮನ್ನು ಭೇಟಿಯಾಗಿ ಅವರಾಗಿಯೇ ಅಧಿಕಾರ ನೀಡಲು ಬಯಸಿದರೂ ನೀವು ಒಪ್ಪಿಕೊಳ್ಳದೆ ಇರುವುದು ಆಶ್ಚರ್ಯ ಅನ್ನಿಸಿದೆʼʼ ಎಂದಾಗ "ಸ್ವಾತಂತ್ರ್ಯವನ್ನು ಕಳೆದುಕೊಳ್ಳಲು ನನಗೆ ಇಷ್ಟವಿಲ್ಲ ಹಾಗಾಗಿ ರಾಜಕೀಯದಿಂದ ಹೊರಗುಳಿದಿದ್ದೇನೆ. ಜನರು ಎರಡು ಕಾರಣಗಳಿಗಾಗಿ ರಾಜಕೀಯಕ್ಕೆ ಬರುತ್ತಾರೆ. ಹಣ ಸಂಪಾದಿಸಲು ಅಥವಾ ಅಧಿಕಾರವನ್ನು ಗಳಿಸಲು. ನನಗೆ ಇವೆರಡರಲ್ಲೂ ಆಸಕ್ತಿ ಇಲ್ಲ.ಜನರಿಗೆ ನನ್ನದೇ ದಾರಿಯಲ್ಲಿ ಈಗಾಗಲೇ ಸಹಾಯ ಮಾಡುತ್ತಿದ್ದೇನೆ. ರಾಜಕೀಯಕ್ಕೆ ಬಂದು ಸಹಾಯ ಮಾಡಬೇಕು ಅಂತೇನಿಲ್ಲ. ರಾಜಕೀಯದಲ್ಲಿ ಸ್ವಾತಂತ್ರ್ಯ ಇರುವುದಿಲ್ಲ" ಎಂದು ಸೋನು ಸೂದ್‌ ಸಂದರ್ಶನದಲ್ಲಿ ತಿಳಿಸಿದ್ದಾರೆ.
"ತುಂಬಾ ಸ್ನೇಹಿತರು ಮತ್ತು ಪರಿಚಿತರು ನಾನು ರಾಜಕೀಯಕ್ಕೆ ಬಂದರೆ ದೆಹಲಿಯಲ್ಲಿ ದುಬಾರಿ ಮನೆ, ದೊಡ್ಡ ಸ್ಥಾನ, ಭದ್ರತೆ, ಸರ್ಕಾರಿ ಮುದ್ರೆ ಇರುವ ಲೆಟರ್‌ಹೆಡ್‌ನಂತಹ ಐಷಾರಾಮಿ ವಸ್ತುಗಳು ಸಿಗುತ್ತವೆ ಎಂದು ಹೇಳಿದರು ಆದರೆ ನನಗೆ ಅದ್ಯಾವುದರ ಅಗತ್ಯವಿಲ್ಲ. ನನ್ನೊಳಗೆ ಇನ್ನೂ ಒಬ್ಬ ನಟ-ನಿರ್ದೇಶಕ ಉಳಿದಿದ್ದಾನೆ. ಹಾಗಾಗಿ ನಾನು ರಾಜಕೀಯ ರಂಗಕ್ಕೆ ಬರುವುದಿಲ್ಲ. ಆದರೆ ನಾನು ಉತ್ತಮ ಕೆಲಸ ಮಾಡುವ ರಾಜಕಾರಣಿಗಳನ್ನು ಗೌರವಿಸುತ್ತೇನೆ" ಎಂದು ನಟ ಹೇಳಿದ್ದಾರೆ.
ಸೋನು ಸೂದ್ ಅವರ ಸಹೋದರಿ ಮಾಳವಿಕಾ ಸೂದ್ ಅವರು 2022 ರಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರಿದರು. ಅವರು ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಮೊಗಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆದರೆ ಆಮ್ ಆದ್ಮಿ ಪಕ್ಷದ (ಎಎಪಿ) ಅಭ್ಯರ್ಥಿ ಅಮನದೀಪ್ ಕೌರ್ ಅರೋರಾ ವಿರುದ್ಧ ಹೀನಾಯವಾಗಿ ಸೋತರು.
ಈ ಸುದ್ದಿಯನ್ನೂ ಓದಿ:Haryana Horror: ಹಾಡಹಗಲೇ ಎಲ್ಲರದುರೇ ಬಾಲಕನನ್ನು ಇರಿದು ಕೊಂದ ದುರುಳರು; ರಕ್ಷಣೆಗೆ ಎಷ್ಟೇ ಕೂಗಿದರೂ ನೆರವಿಗೆ ಬಾರದ ಜನ!ʼ
Kichcha Sudeep and Rajath Kishan
7:31 AM January 29, 2025

Rajath BBK 11: ಫಿನಾಲೆಯಲ್ಲಿ ಯುವನ್​ಗೆ ಸುದೀಪ್ ಗಿಫ್ಟ್ ಕೊಟ್ಟ ಚೈನ್ ಬೆಲೆ ಎಷ್ಟು?, ರಜತ್ ಏನಂದ್ರು?

Bus accident
6:06 PM January 25, 2025

Bus Accident: ಬಸ್‌ನಿಂದ ತಲೆ ಹೊರ ಹಾಕಿದ ಮಹಿಳೆ; ಲಾರಿ ಡಿಕ್ಕಿಯಾಗಿ ತುಂಡಾಗಿ ಬಿದ್ದ ರುಂಡ!

Robbery
3:26 PM January 28, 2025

Robbery: ತಿಪಟೂರು ಎಪಿಎಂಸಿ ಮಾರುಕಟ್ಟೆಯಿಂದ 3,635 ಕೆಜಿ ಕೊಬ್ಬರಿ ಹೊತ್ತೊಯ್ದ ಕಳ್ಳರು

Lokayukta Raid in T.Begur
10:22 PM January 24, 2025

Lokayukta Raid: 5 ಬಾರಿ ಸಸ್ಪೆಂಡ್‌ ಆದ್ರೂ ತೀರದ ಲಂಚದ ದಾಹ; 20 ಸಾವಿರ ಲಂಚ ಪಡೆಯುವಾಗ ಸಿಕ್ಕಿಬಿದ್ದ ಟಿ.ಬೇಗೂರು ಪಿಡಿಒ

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

BBK 11 Final Elimination (1)
7:49 PM January 25, 2025

BBK 11 Final: ಬಿಗ್ ಬಾಸ್ ಫಿನಾಲೆಯಲ್ಲಿ ನಡೆಯಿತು ಎರಡು ಶಾಕಿಂಗ್ ಎಲಿಮಿನೇಷನ್: ಔಟ್ ಆಗಿದ್ದು ಇವರೇ

Hanumantha BBK 11 Winner
8:44 PM January 26, 2025

BBK 11 Winner: ಅಧಿಕೃತ ಘೋಷಣೆಗು ಮುನ್ನವೇ ರಿವೀಲ್ ಆಯ್ತು ಬಿಗ್ ಬಾಸ್ ಸೀಸನ್ 11ರ ವಿನ್ನರ್ ಯಾರೆಂದು: ಇವರೇ ನೋಡಿ

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?