Physical Abuse: ತುತ್ತು ಕೊಟ್ಟು ಸಾಕಿದ ಅಜ್ಜಿ ಅಂತಾನು ನೋಡ್ಲಿಲ್ಲಈ ನೀಚ ... ಪಾಪಿ ಮೊಮ್ಮಗನಿಂದಲೇ ಅತ್ಯಾಚಾರ!
ಹಿಮಾಚಲ ಪ್ರದೇಶದ ಶಿಮ್ಲಾ ಜಿಲ್ಲೆಯ ರೋಹ್ರು ಪಟ್ಟಣದಲ್ಲಿ 25 ವರ್ಷದ ಯುವಕನೊಬ್ಬ ತನ್ನ 65 ವರ್ಷದ ಅಜ್ಜಿಯ ಮೇಲೆ ಅತ್ಯಾಚಾರ ಎಸಗಿದ ಆಘಾತಕಾರಿ ಘಟನೆ ನಡೆದಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ಆರೋಪಿಯನ್ನು ಮಂಗಳವಾರ ಬಂಧಿಸಲಾಗಿದೆ ಎಂದು ವರದಿಯಾಗಿದೆ.

ಸಾಂದರ್ಭಿಕ ಚಿತ್ರ

ಶಿಮ್ಲಾ: ಹಿಮಾಚಲ ಪ್ರದೇಶದ (Himachal Pradesh) ಶಿಮ್ಲಾ (Shimla) ಜಿಲ್ಲೆಯ ರೋಹ್ರು ಪಟ್ಟಣದಲ್ಲಿ 25 ವರ್ಷದ ಯುವಕನೊಬ್ಬ ತನ್ನ 65 ವರ್ಷದ ಅಜ್ಜಿಯ (Grandmother) ಮೇಲೆ ಅತ್ಯಾಚಾರ ಎಸಗಿದ ಆಘಾತಕಾರಿ ಘಟನೆ ನಡೆದಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ಆರೋಪಿಯನ್ನು ಮಂಗಳವಾರ ಬಂಧಿಸಲಾಗಿದೆ ಎಂದು ವರದಿಯಾಗಿದೆ.
65 ವರ್ಷದ ಮಹಿಳೆ ತನ್ನ ಪತಿಯ ನಿಧನದ ನಂತರ ಒಂಟಿಯಾಗಿ ವಾಸಿಸುತ್ತಿದ್ದರು. ಜುಲೈ 3ರ ಮಧ್ಯಾಹ್ನ ಆರೋಪಿಯಾದ ತನ್ನ ಮೊಮ್ಮಗ ನನ್ನ ಮನೆಗೆ ಬಂದು ಅತ್ಯಾಚಾರ ಎಸಗಿದ್ದಾನೆ ಎಂದು ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ. ಘಟನೆಯನ್ನು ಬಹಿರಂಗಪಡಿಸಿದರೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಆತ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಆರೋಪದ ಕುರಿತು ಸಂಪೂರ್ಣವಾಗಿ ತನಿಖೆ ಮಾಡಲಾಗುತ್ತಿದೆ ಎಂದು ಡೆಪ್ಯೂಟಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಪ್ರಾಣವ್ ಚೌಹಾನ್ ತಿಳಿಸಿದ್ದಾರೆ.
ಮದುವೆಯ ಆಮಿಷದಡಿ ಮತ್ತೊಂದು ಅತ್ಯಾಚಾರ
ಮಹಾರಾಷ್ಟ್ರದ ಥಾಣೆಯ ಭಿವಾಂಡಿ ಪ್ರದೇಶದಲ್ಲಿ 26 ವರ್ಷದ ಯುವಕನೊಬ್ಬ ಮದುವೆಯ ಆಮಿಷದಡಿ 25 ವರ್ಷದ ಮಹಿಳೆಯ ಮೇಲೆ ಪದೇಪದೇ ಅತ್ಯಾಚಾರ ಎಸಗಿದ ಘಟನೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಅಶ್ರಫ್ ಅಫ್ಸರ್ ಚೌಧರಿ, ದುಬೈಗೆ ಓಡಿಹೋಗಲು ಯೋಜಿಸಿದ್ದಾಗ ಮಹಿಳೆ ಸಲ್ಲಿಸಿದ ದೂರಿನ ಆಧಾರದ ಮೇಲೆ ಅರೆಸ್ಟ್ ಮಾಡಲಾಗಿದೆ.
ಈ ಸುದ್ದಿಯನ್ನು ಓದಿ: Viral Video: ಸಿಕ್ಕಾಪಟ್ಟೆ ವೈರಲ್ ಆಯ್ತು ಈತನ ರೆಸ್ಯೂಮ್; ಅಂಥದ್ದೇನಿದೆ ಇದರಲ್ಲಿ?
ಮಹಿಳೆಗೆ ಕಳೆದ ವರ್ಷ ಇನ್‌ಸ್ಟಾಗ್ರಾಮ್‌ನಲ್ಲಿ ಆರೋಪಿಯ ಪರಿಚಯವಾಗಿದ್ದ. ಆಕೆಯ ವಿಶ್ವಾಸ ಗಳಿಸಿದ ಆರೋಪಿ, ಮದುವೆಯ ಭರವಸೆ ನೀಡಿ, 2024ರ ಜುಲೈನಿಂದ ಈ ವರ್ಷದ ಜೂನ್‌ವರೆಗೆ ವಿವಿಧ ಸ್ಥಳಗಳಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಮಹಿಳೆಯ ಮೊದಲ ಪತಿ ಆರೋಗ್ಯ ಸಮಸ್ಯೆಯಿಂದ ನಿಧನರಾದ ಬಳಿಕ, ಆಕೆ ರಾಜಸ್ಥಾನದ ವ್ಯಕ್ತಿಯನ್ನು ಮದುವೆಯಾದಳು. ಆದರೆ ಆತನಿಂದಲೂ ವಿಚ್ಛೇದನ ಪಡೆಯುವಂತೆ ಆಕೆಯನ್ನು ಒತ್ತಾಯಿಸಿದ್ದ. ಆದರೂ, ಭರವಸೆಯಂತೆ ಆರೋಪಿ ಆಕೆಯನ್ನು ಮದುವೆಯಾಗಲಿಲ್ಲ. ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ಆರಂಭಿಸಿದ್ದಾರೆ.