Shravana Special 2026: ಫೆಸ್ಟೀವ್ ಸೀಸನ್ನಲ್ಲಿ ಟ್ರೆಂಡಿಯಾದ ರೆಡಿಮೇಡ್ ವರಮಹಾಲಕ್ಷ್ಮೀಯರು
Shravana Special 2026: ಮುಂಬರುವ ವರಮಹಾಲಕ್ಷ್ಮೀ ಹಬ್ಬಕ್ಕೆ ಈಗಾಗಲೇ ನಾನಾ ಬಗೆಯ ರೆಡಿಮೇಡ್ ವರಮಹಾಲಕ್ಷ್ಮೀಯ ಉತ್ಸವ ಮೂರ್ತಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಈ ಬಾರಿ ಯಾವ್ಯಾವ ಬಗೆಯವು ಬಂದಿವೆ? ಈ ಬಗ್ಗೆ ಇಲ್ಲಿದೆ ವರದಿ.
ಚಿತ್ರಕೃಪೆ: ಮಿಂಚು -
ಮುಂಬರುವ ವರಮಹಾಲಕ್ಷ್ಮೀ ಹಬ್ಬಕ್ಕೆ ಈಗಾಗಲೇ ನಾನಾ ಬಗೆಯ ರೆಡಿಮೇಡ್ ವರಮಹಾಲಕ್ಷ್ಮೀಯ ಉತ್ಸವ ಮೂರ್ತಿಗಳು ಮಾರುಕಟ್ಟೆಯಲ್ಲಿ ರಾರಾಜಿಸುತ್ತಿವೆ. ಹೌದು, ದೇವಿಯನ್ನು ಸಿಂಗರಿಸಲು ಸಾಧ್ಯವಿಲ್ಲ ಅಥವಾ ಸಮಯವಿಲ್ಲ ಎನ್ನುವವರ ಮನೆಗೆ ಬರಲು ಈ ರೆಡಿಮೇಡ್ ವರಮಹಾಲಕ್ಷ್ಮೀ ಉತ್ಸವ ಮೂರ್ತಿಗಳು ರೆಡಿಯಾಗಿವೆ.
ತಾವರೆಯಲ್ಲಿ ಕುಳಿತ ವರಮಹಾಲಕ್ಷ್ಮೀ
ಅತ್ಯಾಕರ್ಷಕ ಡಿಸೈನ್ನ ನಾನಾ ಬಗೆಯ ವಿನ್ಯಾಸದ ಅರಳಿದ ತಾವರೆಯಲ್ಲಿ ಕುಳಿತ ಸುಂದರವಾಗಿ ಕಾಣಿಸುವ ವರಮಹಾಲಕ್ಷ್ಮೀ ಉತ್ಸವ ಮೂರ್ತಿಗಳು ಈ ಬಾರಿ ಮಿನಿ ಸೈಝಿನಿಂದಿಡದು ಆಳೆತ್ತರವದರೆಗೂ ದೊರೆಯುತ್ತಿವೆ. ಆಯಾ ಡಿಸೈನ್ ಹಾಗೂ ಅಲಂಕಾರಕ್ಕೆ ತಕ್ಕಂತೆ ಬೆಲೆ ನಿಗದಿಯಾಗಿದೆ ಎನ್ನುತ್ತಾರೆ ಮಾರಾಟಗಾರರು.
ಆದಿ ಲಕ್ಷ್ಮಿಯ ಅವತಾರದ ವರಮಹಾಲಕ್ಷ್ಮೀ
ಆದಿ ಶಕ್ತಿಯಂತೆ ಕಾಣಿಸುವ ನಿಂತ ವರಮಹಾಲಕ್ಷ್ಮೀ ಬೊಂಬೆಯಂತಿರುವ ಮೂರ್ತಿಗಳು ಕೂಡ ಈ ಬಾರಿ ನಾನಾ ಕಾನ್ಸೆಪ್ಸ್ಟನಲ್ಲಿ ಆಗಮಿಸಿವೆ.
ನಾನಾ ದೇವತೆಗಳ ರೂಪದ ವರಮಹಾಲಕ್ಷ್ಮೀಯರು
ಮಧುರೈ ಮೀನಾಕ್ಷಿ, ಕಂಚಿ ಕಾಮಾಕ್ಷಿ, ದಾವಣಿ-ಲಂಗ ಧರಿಸಿದ ಕನ್ಯಾ ಕುಮಾರಿಯಂತೆ ಕಾಣುವ ವರಮಹಾಲಕ್ಷ್ಮೀ ಉತ್ಸವ ಮೂರ್ತಿಗಳು ಕೂಡ ಮಾರುಕಟ್ಟೆಯಲ್ಲಿ ಲಭ್ಯ.
ಹೋಮ್ ಡೆಲಿವರಿ ಸೌಲಭ್ಯ ಲಭ್ಯ
ಆಯಾ ವರಮಹಾಲಕ್ಷ್ಮೀ ದೇವಿಯ ಸೈಝ್ ಹಾಗೂ ಅಲಂಕಾರಕ್ಕೆ ತಕ್ಕಂತೆ ಬೆಲೆ ನಿಗದಿಯಾಗಿರುತ್ತದೆ. ಚಿಕ್ಕ ಉತ್ಸವಮೂರ್ತಿ ಕಡಿಮೆಯೆಂದರೂ 1 ಸಾವಿರ ರೂ.ಗಳ ಬೆಲೆ ಇರುತ್ತದೆ. ಎತ್ತರ ಹಾಗೂ ಡೆಕೋರೇಷನ್ ಆಧಾರದ ಮೇಲೆ ಬೆಲೆ ನಿಗಧಿಯಾಗಿರುತ್ತದೆ. ಗರಿಷ್ಠ ಎಂದರೂ 30-40 ಸಾವಿರ ರೂ.ಗಳ ಬೆಲೆಯಿದೆ ಎನ್ನುತ್ತಾರೆ ಗಾಂಧಿ ಬಜಾರ್ ಶಾಪ್ವೊಂದರ ಮಾರಾಟಗಾರರು. ಅಲ್ಲದೇ ಗ್ರಾಹಕರಿಗೆ ಇವುಗಳ ಉಚಿತ ಹೋಮ್ ಡಿಲಿವಿರಿ ಸೌಲಭ್ಯ ಕೂಡ ನೀಡಲಾಗುತ್ತಿದೆ ಎನ್ನುತ್ತಾರೆ ಅವರು.
ರೆಡಿಮೇಡ್ ವರಮಹಾಲಕ್ಷ್ಮೀ ಖರೀದಿಸುವವರಿಗೆ ಟಿಪ್ಸ್
- ಇವನ್ನು ಹಬ್ಬದ ನಂತರ ಮರಳಿ ತೆಗೆದು ಮತ್ತೇ ಬಳಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಿ.
- ಆದಷ್ಟೂ ಗುಣಮಟ್ಟದ ಅಲಂಕಾರಿಕ ಸಾಮಗ್ರಿ ಬಳಸಿದಂತಹ ಉತ್ಸವಮೂರ್ತಿ ಖರೀದಿಸಿ.
- ಬಾಳಿಕೆ ಕುರಿತಂತೆ ಗೊತ್ತಿರಲಿ.