Crime News: ಸೇನಾಧಿಕಾರಿಯಂತೆ ನಟಿಸಿ ವಂಚನೆ; ಮಾದಕ ದ್ರವ್ಯ ಸೇವಿಸಿ ವೈದ್ಯೆಯನ್ನು ಅತ್ಯಾಚಾರ!
Delivery Boy Arrested: ವೈದ್ಯೆಯೊಬ್ಬರಿಗೆ ತಾನು ಸೇನಾಧಿಕಾರಿ ಎಂದು ನಂಬಿಸಿ ವಂಚಿಸಿದ್ದಲ್ಲದೆ, ಆಕೆಯ ಮೇಲೆ ಅತ್ಯಾಚಾರವೆಸಗಿದ ಆಘಾತಕಾರಿ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ. ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
-
Priyanka P
Oct 27, 2025 12:52 PM
ನವದೆಹಲಿ: ಸೇನಾ ಅಧಿಕಾರಿ ಎಂದು ನಂಬಿಸಿದ ವ್ಯಕ್ತಿಯೊಬ್ಬ ಸಾಮಾಜಿಕ ಜಾಲತಾಣಗಳ ಮೂಲಕ ವೈದ್ಯೆಯೊಬ್ಬಳನ್ನು ವಂಚಿಸಿ, ಸ್ನೇಹ ಬೆಳೆಸಿ ಆಕೆಯ ಮೇಲೆ ಅತ್ಯಾಚಾರ ಎಸಗಿರುವ ಆಘಾತಕಾರಿ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (Delhi) ನಡೆದಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಛತ್ತರ್‌ಪುರ ಪ್ರದೇಶದಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ (Crime News).
ಅಮೆಜಾನ್‌ನಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿರುವ ಆರವ್ ಮಲಿಕ್, ತಾನು ಭಾರತೀಯ ಸೇನಾ ಲೆಫ್ಟಿನೆಂಟ್ ಎಂದು ನಟಿಸಿದ್ದಾನೆ. ಸಫ್ದರ್ಜಂಗ್ ಆಸ್ಪತ್ರೆಯಲ್ಲಿ ವೈದ್ಯೆಯಾಗಿರುವ ಯುವತಿಯೊಬ್ಬಳ ಜೊತೆ ಸ್ನೇಹ ಬೆಳೆಸಿ ವಂಚಿಸಿದ್ದಾನೆ. ಅಧಿಕಾರಿಗಳ ಪ್ರಕಾರ, ಮಲಿಕ್ ಇನ್‌ಸ್ಟಾಗ್ರಾಮ್‌ನಲ್ಲಿ 27 ವರ್ಷದ ವೈದ್ಯೆಯೊಂದಿಗೆ ಸ್ನೇಹ ಬೆಳೆಸಿಕೊಂಡನು. ನಂತರ ವಾಟ್ಸಾಪ್ ಸಂಖ್ಯೆ ಪಡೆದುಕೊಂಡು ಅವಳೊಂದಿಗೆ ಮತ್ತಷ್ಟು ಹತ್ತಿರವಾಗಿದ್ದಾನೆ.
ಏಪ್ರಿಲ್ 30 ಮತ್ತು ಸೆಪ್ಟೆಂಬರ್ 27 ರ ನಡುವೆ, ಅವನು ಕಾಶ್ಮೀರದಲ್ಲಿ ನಿಯೋಜಿತ ಸೇನಾ ಅಧಿಕಾರಿಯಂತೆ ನಟಿಸಿದ್ದಾನೆ. ತನ್ನ ಹೇಳಿಕೆಯನ್ನು ನಂಬಿಸುವ ಸಲುವಾಗಿ ಅವನು ಮಿಲಿಟರಿ ಸಮವಸ್ತ್ರ ಧರಿಸಿದ ತನ್ನ ಫೋಟೋಗಳನ್ನು ವೈದ್ಯಗೆ ಕಳುಹಿಸಿದ್ದಾನೆ ಎಂದು ಆರೋಪಿಸಲಾಗಿದೆ. ಅಕ್ಟೋಬರ್ ತಿಂಗಳಿನಲ್ಲಿ ಮಲಿಕ್, ಮಸೀದಿ ಮಾತ್ ಪ್ರದೇಶದಲ್ಲಿರುವ ವೈದ್ಯೆಯ ನಿವಾಸಕ್ಕೆ ಭೇಟಿ ನೀಡಿದ್ದಾನೆ. ಮಾದಕ ದ್ರವ್ಯ ಸೇವಿಸಿದ ಆರೋಪಿಯು ವೈದ್ಯೆಯ ಮೇಲೆ ಅತ್ಯಾಚಾರಗೈದು, ಹಲ್ಲೆ ಮಾಡಿ ಪರಾರಿಯಾಗಿದ್ದಾನೆ ಎಂದು ಹೇಳಲಾಗಿದೆ.
ಇದನ್ನೂ ಓದಿ: Crime News: ರಕ್ಷಕನೇ ಭಕ್ಷಕನಾದ! ಎಸ್‌ಐ ವಿರುದ್ಧ ಅತ್ಯಾಚಾರ ಆರೋಪ; ಅಂಗೈನಲ್ಲಿ ಡೆತ್‌ನೋಟ್ ಬರೆದಿಟ್ಟು ವೈದ್ಯೆ ಸೂಸೈಡ್
ಈ ಸಂಬಂಧ ಸಂತ್ರಸ್ತ ವೈದ್ಯೆಯು ಅಕ್ಟೋಬರ್ 16 ರಂದು ಸಫ್ದರ್ಜಂಗ್ ಎನ್ಕ್ಲೇವ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನಂತರ ಪೊಲೀಸರು ಛತ್ತರ್‌ಪುರದಲ್ಲಿ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದರು. ವಿಚಾರಣೆಯ ಸಮಯದಲ್ಲಿ, ಮಲಿಕ್ ದೆಹಲಿ ಕಂಟೋನ್ಮೆಂಟ್‌ನಲ್ಲಿರುವ ಅಂಗಡಿಯಿಂದ ಆನ್‌ಲೈನ್‌ನಲ್ಲಿ ಸೇನಾ ಸಮವಸ್ತ್ರವನ್ನು ಖರೀದಿಸಿರುವುದಾಗಿ ಹೇಳಿದ್ದಾನೆ. ಆರೋಪಿ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ನ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇಂಗ್ಲೆಂಡ್‍ನಲ್ಲಿ ಭಾರತೀಯ ಯುವತಿಯ ಮೇಲೆ ಅತ್ಯಾಚಾರ
ಭಾರತೀಯ ಮೂಲದ 20 ವರ್ಷದ ಯುವತಿಯ ಮೇಲೆ ಅತ್ಯಾಚಾರವೆಸಗಿದ ಘಟನೆ ಉತ್ತರ ಇಂಗ್ಲೆಂಡ್‌ನ ವಾಲ್ಸಾಲ್‌ನಲ್ಲಿ ನಡೆದಿದೆ. ಜನಾಂಗೀಯ ಪ್ರೇರಿತ ದಾಳಿಯಾಗಿರಬಹುದು ಎಂದು ಶಂಕಿಸಲಾಗಿದೆ. ಅತ್ಯಾಚಾರ ಎಸಗಿದ ಆರೋಪಿ ವ್ಯಕ್ತಿಗಾಗಿ ಯುನೈಟೆಡ್ ಕಿಂಗ್‌ಡಮ್‌ನ ವೆಸ್ಟ್ ಮಿಡ್‌ಲ್ಯಾಂಡ್ಸ್ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.
ಶಂಕಿತನನ್ನು 30ರ ಹರೆಯದ ಬಿಳಿಯ ವ್ಯಕ್ತಿ ಎಂದು ವಿವರಿಸಲಾಗಿದೆ. ಸಣ್ಣ ಕೂದಲು ಮತ್ತು ಕಪ್ಪು ಬಟ್ಟೆ ಧರಿಸಿದ್ದಾನೆ. ಪೊಲೀಸರು ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದು, ಸಿಸಿಟಿವಿಗಳನ್ನು ಪರಿಶೀಲಿಸುತ್ತಿದ್ದಾರೆ. ಸಿಖ್ ಫೆಡರೇಶನ್ ಯುಕೆ ಸೇರಿದಂತೆ ಸ್ಥಳೀಯ ಸಮುದಾಯ ಗುಂಪುಗಳು ಯುವತಿಯು ಪಂಜಾಬಿ ಎಂದು ದೃಢಪಡಿಸಿವೆ. ಕಳೆದ ತಿಂಗಳು ಓಲ್ಡ್ಬರಿಯಲ್ಲಿ ಸಿಖ್ ಮಹಿಳೆಯ ಮೇಲೆ ಅತ್ಯಾಚಾರ ನಡೆದಿರುವುದನ್ನು ಗಮನಿಸಿ ಕಳವಳ ವ್ಯಕ್ತಪಡಿಸಿವೆ. ಇದನ್ನು ಪೊಲೀಸರು ಜನಾಂಗೀಯ ಪ್ರೇರಿತ ದಾಳಿ ಎಂದು ಬಣ್ಣಿಸಿದ್ದಾರೆ.