Male Mahadeshwar hills: ಮಲೆ ಮಹದೇಶ್ವರ ದೇಗುಲದ ಗೋಪುರ ಏರಿ ಆತ್ಮಹತ್ಯೆಗೆ ಯತ್ನಿಸಿದ ಭೂಪ!
Male Mahadeshwar hills: ಹನೂರು ತಾಲೂಕಿನಲ್ಲಿರುವ ಮಲೆ ಮಹದೇಶ್ವರ ಬೆಟ್ಟದಲ್ಲಿ ವ್ಯಕ್ತಿಯೋರ್ವ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ವರದಿಯಾಗಿದೆ. ಇನ್ನು ಆ ವ್ಯಕ್ತಿಯನ್ನು ಪ್ರಾಧಿಕಾರದ ಸಿಬ್ಬಂದಿ ರಕ್ಷಿಸಿದ್ದಾರೆ. ಇನ್ನು ಈ ಘಟನೆ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.


ಚಾಮರಾಜನಗರ: ವಿಶ್ವ ವಿಖ್ಯಾತ ಮಲೆ ಮಹದೇಶ್ವರ ಬೆಟ್ಟದಲ್ಲಿನ (Male Mahadeshwar hill) ಮಾದಪ್ಪನ ದೇವಸ್ಥಾನದ ಗೋಪುರವನ್ನು ಏರಿ ವ್ಯಕ್ತಿಯೋರ್ವ ಆತ್ಮಹತ್ಯೆಗೆ ಯತ್ನಿಸಿರುವ ವಿಲಕ್ಷಣ ಘಟನೆ ವರದಿಯಾಗಿದೆ. ಹನೂರು ತಾಲೂಕಿನಲ್ಲಿರುವ ಮಲೆ ಮಹದೇಶ್ವರ ಬೆಟ್ಟದಲ್ಲಿ ಈ ಘಟನೆ ನಡೆದಿದ್ದು, ಆತ್ಮಹತ್ಯೆಗೆ ಯತ್ನಸಿರುವ ವ್ಯಕ್ತಿಯನ್ನು ಪ್ರಾಧಿಕಾರದ ಸಿಬ್ಬಂದಿ ರಕ್ಷಿಸಿದ್ದಾರೆ. ಇನ್ನು ಈ ಘಟನೆ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. ಇನ್ನು ಮೃತ್ಯುಂಜಯ ಎಂಬಾತನೇ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ಈತನ ಗೋಪುರವೆನ್ನೇರಿ ಉಘೇ ಮಾದಪ್ಪ ಎಂದು ಜೋರಾಗಿ ಕೂಗಿ ದೇವಸ್ಥಾನದ ಗೋಪುರದ ಮೇಲಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದ ಎನ್ನಲಾಗಿದೆ. ಇನ್ನು ಭಕ್ತರೊಬ್ಬರು ಈ ಘಟನೆಯನ್ನು ರೆಕಾರ್ಡ್ ಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ: Self Harming: ಬೆಳಗಾವಿಯ ಹಾಸ್ಟೆಲ್‌ನಲ್ಲಿ ಬಿಸಿಎ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು
Robbery Case: ಮಠದಲ್ಲಿ 300 ಕೋಟಿ ರೂ. ಇದೆಯೆಂದು ದರೋಡೆಗೆ ಬಂದ ಕಳ್ಳರು
ಶಿವಮೊಗ್ಗ: ಮಠದಲ್ಲಿ ಕೋಟ್ಯಂತರ ರೂ. ಹಣ ಇದೆ ಎಂದು ತಿಳಿದು ಮಠಕ್ಕೆ ಕನ್ನ ಹಾಕಲು ಹೋದ ಖದೀಮರು 50 ಸಾವಿರ ರೂ. ಹಣ ದರೋಡೆ ಮಾಡಿ, ಕೊನೆಗೆ ಪೊಲೀಸರ ಅತಿಥಿಯಾಗಿದ್ದಾರೆ. ಈ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಮಹಿಷಿ ಉತ್ತರಾಧಿ ಮಠದಲ್ಲಿ ನಡೆದಿದೆ. (Robbery Case) ಹಣವಿದೆ ಎಂಬ ಸುಳ್ಳು ಸುದ್ದಿಯನ್ನು ನಂಬಿ 12 ದರೋಡೆಕೋರರು ದರೋಡೆಗೆ ಯತ್ನಿಸಿದ್ದಾರೆ. ಆದರೆ ದರೋಡೆಗಿಳಿದವರಿಗೆ ಸಿಕ್ಕಿದ್ದು ಕೇವಲ 50 ಸಾವಿರ ರೂ. ಮಾತ್ರ. ಈ ಸಂಬಂಧ 12 ದರೋಡೆಕೋರರನ್ನು ಪೊಲೀಸರು ಬಂಧಿಸಿದ್ದಾರೆ.
ತೀರ್ಥಹಳ್ಳಿ ತಾಲೂಕು ಮಹಿಷಿ ಗ್ರಾಮದ ಪುರಾತನ ಉತ್ತರಾದಿ ಮಠದಲ್ಲಿ 300 ಕೋಟಿ ರೂ. ಇದೆ ಎಂಬ ವದಂತಿ ಮೇರೆಗೆ 15ಕ್ಕೂ ಹೆಚ್ಚಿರುವ ಖದೀಮರ ತಂಡ, ಏ.5ರ ರಾತ್ರಿ ಮಠಕ್ಕೆ ನುಗ್ಗಿ ಅಲ್ಲಿದ್ದವರನ್ನು ಬೆದರಿಸಿ ಮಠದಲ್ಲಿದ್ದ 50 ಸಾವಿರ ರೂ.ಗಳನ್ನು ದರೋಡೆ ಮಾಡಿದ್ದರು. ಈ ಕುರಿತು ಮಾಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ದೂರಿನನ್ವಯ ಪೊಲೀಸರು ಮಠಕ್ಕೆ ಭೇಟಿ ನೀಡಿದಾಗ 50 ಸಾವಿರ ರೂ. ದರೋಡೆ ಆಗಿರುವುದು ತಿಳಿದುಬಂದಿತ್ತು. ಮಠದಲ್ಲಿನ ಬಂಗಾರ ಸೇರಿ ಬೇರೆ ಯಾವುದೇ ವಸ್ತು ಕಳುವಾಗಿರಲಿಲ್ಲ. ಪರಿಶೀಲಿಸಿದಾಗ ಖದೀಮರ ತಂಡವೊಂದು ಬಂದು ದರೋಡೆ ನಡೆಸಿರುವುದು ತನಿಖೆಯಿಂದ ತಿಳಿದುಬಂದಿತ್ತು.
ದರೋಡೆಗೂ ಮುನ್ನ ತಂಡ ಮಠವನ್ನೊಮ್ಮೆ ಬಂದು ಪರಿಶೀಲನೆ ನಡೆಸಿಕೊಂಡು ಹೋಗಿದ್ದು ಸಹ ತನಿಖೆಯಿಂದ ಗೊತ್ತಾಗಿತ್ತು. ಪೂರ್ವಸಂಚಿನಂತೆ ಏ.5ರ ರಾತ್ರಿ ಟಿಟಿ ವಾಹನ ಮಾಡಿಕೊಂಡು ಬಂದು ದರೋಡೆಗೆ ಯತ್ನಿಸಿದ್ದರು. ಆದರೆ, 300 ಕೋಟಿ ಸಿಗದೇ ಬ್ಯಾಂಕ್ನಿಂದ ತಂದಿಟ್ಟಿದ್ದ 50 ಸಾವಿರ ರೂ. ದೋಚಿ ತಂಡ ಪರಾರಿಯಾಗಿತ್ತು. ಪ್ರಕರಣ ಬೆನ್ನತ್ತಿದ ಪೊಲೀಸರು, ಕೃತ್ಯಕ್ಕೆ ಬಳಸಿದ್ದ ಟಿಟಿ ವಾಹನ, 1 ಮಹೀಂದ್ರಾ ಬೊಲೆರೋ, 2 ವಾಹನ ಹಾಗೂ ಆಯುಧಗಳು ಸೇರಿದಂತೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.