ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬ್ಲೂ ಡ್ರಮ್‌ ಕೇಸ್‌: ಗಲ್ಲು ಶಿಕ್ಷೆ ತೀರ್ಪಿಗೂ ಮುನ್ನ ಭಗವದ್ಗೀತೆಯನ್ನು ಜಡ್ಜ್‌ ಉಲ್ಲೇಖಿಸಿದ್ದೇಕೆ?

ಉತ್ತರ ಪ್ರದೇಶದ ಮೀರತ್‌ನಲ್ಲಿ ಮರ್ಚೆಂಟ್ ನೇವಿ ಅಧಿಕಾರಿ ಸೌರಭ್ ರಜಪೂತ್ ಅವರ ಹತ್ಯೆ ಪ್ರಕರಣ ದೇಶಾದ್ಯಂತ ಆಘಾತ ಮೂಡಿಸಿತ್ತು. 2025ರ ಮಾರ್ಚ್‌ನಲ್ಲಿ ಪತ್ನಿ ಮುಸ್ಕಾನ್ ರಸ್ತೋಗಿ ಮತ್ತು ಆಕೆಯ ಪ್ರಿಯಕರ ಸಾಹಿಲ್ ಶುಕ್ಲಾ ಸೇರಿ ಸೌರಭ್ ಅವರನ್ನು ಹತ್ಯೆಗೈದು, ಮೃತದೇಹವನ್ನು ತುಂಡುಗಳಾಗಿ ಕತ್ತರಿಸಿ ನೀಲಿ ಡ್ರಮ್‌ನಲ್ಲಿ ಸಿಮೆಂಟ್ ಹಾಕಿ ಮುಚ್ಚಿದ್ದರೆಂದು ತನಿಖೆಯಲ್ಲಿ ತಿಳಿದು ಬಂದಿತ್ತು.

ಮೀರತ್‌ನ ಬ್ಲೂ ಡ್ರಮ್ ಮರ್ಡರ್ ಮಿಸ್ಟರಿ ಇಲ್ಲಿದೆ

ಸೌರಭ್ ರಜಪೂತ್ - ಕೊಲೆ ಆರೋಪಿಗಳು -

Profile
Sushmitha Jain Oct 14, 2026 8:32 PM

ಲಖನೌ: ಉತ್ತರ ಪ್ರದೇಶದ ಮೀರತ್‌ನಲ್ಲಿ 2025ರ ಮಾರ್ಚ್ 4ರಂದು ಭೀಕರ ಘಟನೆಯೊಂದು ನಡೆದಿತ್ತು. ಮಾಜಿ ಮರ್ಚೆಂಟ್ ನೇವಿ ಅಧಿಕಾರಿಯಾಗಿದ್ದ ಸೌರಭ್ ರಜಪೂತ್ ಅವರನ್ನು ಪತ್ನಿ ಮುಸ್ಕಾನ್ ರಸ್ತೋಗಿ ಹಾಗೂ ಆಕೆಯ ಪ್ರಿಯಕರ ಸಾಹಿಲ್ ಶುಕ್ಲಾ ಸೇರಿ ಭೀಕರವಾಗಿ ಹತ್ಯೆಗೈದಿದ್ದಲ್ಲದೇ, ಮೃತದೇಹವನ್ನು 15ಕ್ಕೂ ಹೆಚ್ಚು ತುಂಡುಗಳನ್ನಾಗಿ ಕತ್ತರಿಸಿ, ನೀಲಿ ಬಣ್ಣದ ಡ್ರಮ್‌ನಲ್ಲಿ ತುಂಬಿ ಸಿಮೆಂಟ್ ಹಾಕಿ ಸೀಲ್ ಮಾಡಿದ್ದರು. ಈ ಕೃತ್ಯಕ್ಕೆ ಇಡೀ ದೇಶವೇ ಬೆಚ್ಚಿಬಿದ್ದಿತ್ತು.

'ಬ್ಲೂ ಡ್ರಮ್' ಕೃತ್ಯ ನಡೆದದ್ದು ಹೇಗೆ?

2016ರಲ್ಲಿ ಪ್ರೇಮವಿವಾಹವಾಗಿದ್ದ ಸೌರಭ್, ಪತ್ನಿಗಾಗಿ ಕೆಲಸ ಬಿಟ್ಟು ಬಾಡಿಗೆ ಮನೆಗೆ ತೆರಳಿದ್ದರು. ಬಳಿಕ ಮುಸ್ಕಾನ್ ಮತ್ತು ಸಾಹಿಲ್ ನಡುವಿನ ಅಕ್ರಮ ಸಂಬಂಧ ತಿಳಿದು ದಾಂಪತ್ಯದಲ್ಲಿ ಬಿರುಕು ಮೂಡಿತ್ತು. ಮಗಳಿಗಾಗಿ ಮತ್ತೆ ಮರ್ಚೆಂಟ್ ನೇವಿ ಸೇರಿದ ಸೌರಭ್, ಮಗಳ ಆರನೇ ವರ್ಷದ ಹುಟ್ಟುಹಬ್ಬಕ್ಕಾಗಿ ಫೆಬ್ರವರಿ 24ರಂದು ಮನೆಗೆ ಮರಳಿದ್ದರು. ಮಾರ್ಚ್ 4ರಂದು ಮುಸ್ಕಾನ್ ಊಟದಲ್ಲಿ ನಿದ್ರೆ ಮಾತ್ರೆ ಬೆರೆಸಿದ್ದಳು. ಸೌರಭ್ ನಿದ್ದೆಗೆ ಜಾರಿದ ನಂತರ, ಇಬ್ಬರೂ ಸೇರಿ ಚಾಕುವಿನಿಂದ ಇರಿದು ಸಾಯಿಸಿದರು. ನಂತರ ದೇಹವನ್ನು ತುಂಡುಗಳಾಗಿ ಕತ್ತರಿಸಿ ಡ್ರಮ್‌ನಲ್ಲಿ ತುಂಬಿ ಹಸಿ ಸಿಮೆಂಟ್ ಸುರಿದು ಮುಚ್ಚಿದರು.

Meerut Murder Case: "ಅಪ್ಪ ಡ್ರಮ್‌ನೊಳಗಿದ್ದಾರೆ," ಎಂದು ನೆರೆಹೊರೆಯವರಿಗೆ ಹೇಳಿದ್ದ ಮೃತ ಮರ್ಚೆಂಟ್ ನೇವಿ ಅಧಿಕಾರಿಯ 6 ವರ್ಷದ ಮಗಳು

ಪ್ರಕರಣ ಬೆಳಕಿಗೆ ಬಂದದ್ದು ಹೇಗೆ?

ಜನರ ದಾರಿ ತಪ್ಪಿಸಲು ಅಪರಾಧಿಗಳು ಸೌರಭ್ ಫೋನ್ ತೆಗೆದುಕೊಂಡು ಮನಾಲಿ ಪ್ರವಾಸಕ್ಕೆ ಹೋಗಿ, ಅವರದೇ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳನ್ನು ಪೋಸ್ಟ್ ಮಾಡಿದರು. ಸೌರಭ್ ಹಲವು ದಿನಗಳಿಂದ ಕರೆ ಸ್ವೀಕರಿಸದಿದ್ದಾಗ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದರು. ಪೊಲೀಸರ ವಿಚಾರಣೆಯಲ್ಲಿ ಇಬ್ಬರು ಕೃತ್ಯ ಒಪ್ಪಿಕೊಂಡರು. ಗಟ್ಟಿಯಾಗಿದ್ದ ಸಿಮೆಂಟ್ ಒಡೆಯಲು ಸಾಧ್ಯವಾಗದೆ, ಕೊಲೆಯಾದ 14 ದಿನಗಳ ನಂತರ ಡ್ರಿಲ್ ಮೆಷಿನ್ ಬಳಸಿ ದೇಹದ ಅವಶೇಷಗಳನ್ನು ಹೊರತೆಗೆಯಲಾಗಿತ್ತು.

ಮಗುವಿನ ಪ್ರತ್ಯಕ್ಷದರ್ಶಿ ಸಾಕ್ಷ್ಯವೇನು?

ಘಟನೆ ನಡೆದ ಸಂದರ್ಭದಲ್ಲಿ ಮನೆಯಲ್ಲಿದ್ದ ಸೌರಭ್ ಅವರ ಆರು ವರ್ಷದ ಪುಟ್ಟ ಮಗಳು ಕೊಲೆಯ ರಹಸ್ಯವನ್ನು ಬಯಲಿಗೆಳೆಯುವಲ್ಲಿ ಪೊಲೀಸರಿಗೆ ಪ್ರಮುಖ ಸಾಕ್ಷಿಯಾಗಿದ್ದು, ಪೊಲೀಸರು ಪರಿಶೀಲನೆ ಮುಸ್ಕಾನ್‌ ಮನೆಗೆ ತೆರಳಿದಾಗ 6 ವರ್ಷದ ಮುಗ್ಧ ಮಗಳು "ಪಪ್ಪಾ ಡ್ರಮ್‌ನಲ್ಲಿದ್ದಾರೆ" ಎಂದು ಹೇಳಿದ್ದಳು. ಅನುಮಾನಗೊಂಡು ಪರಿಶೀಲನೆ ನಡೆಸಿದಾಗ ಅಪರಾಧಿಗಳ ಭೀಕರ ಕೃತ್ಯ ಬೆಳಕಿಗೆ ಬಂದಿತ್ತು.

ಬಂಧನದ ನಂತರ ಅಪರಾಧಿಗಳನ್ನು ಮೀರತ್ ಜಿಲ್ಲಾ ಜೈಲಿಗೆ ಕಳುಹಿಸಲಾಯಿತು. ಜೈಲಿನಲ್ಲಿದ್ದ ಅವಧಿಯಲ್ಲೇ, ಅಂದರೆ ನವೆಂಬರ್ 24, 2025 ರಂದು ಮುಸ್ಕಾನ್ ಹೆಣ್ಣು ಮಗುವಿಗೆ ಜನ್ಮ ನೀಡಿದಳು. ತಾಯಿ ಮತ್ತು ನವಜಾತ ಶಿಶುವನ್ನು ಜೈಲಿನ ಮಹಿಳಾ ಬ್ಯಾರಕ್‌ಗೆ ಸ್ಥಳಾಂತರಿಸಲಾಯಿತು.

ಈ ಪ್ರಕರಣದ ವಿಚಾರಣೆಯು ಜುಲೈ 2025 ರಲ್ಲಿ ಜಿಲ್ಲಾ ನ್ಯಾಯಾಧೀಶರ ನ್ಯಾಯಾಲಯಕ್ಕೆ ವರ್ಗಾವಣೆಗೊಂಡಿತು. ಸುಮಾರು 13 ತಿಂಗಳುಗಳ ಕಾಲ ನಡೆದ ಸುದೀರ್ಘ ಕಾನೂನು ಹೋರಾಟದಲ್ಲಿ ಒಟ್ಟು 126 ಬಾರಿ ನ್ಯಾಯಾಲಯದ ವಿಚಾರಣೆಗಳು ನಡೆದವು. ಪ್ರಾಸಿಕ್ಯೂಷನ್ ಪರವಾಗಿ ಸೌರಭ್ ಕುಟುಂಬಸ್ಥರು, ಹೋಟೆಲ್ ಸಿಬ್ಬಂದಿ, ಕ್ಯಾಬ್ ಚಾಲಕರು ಮತ್ತು ಅಂಗಡಿಯವರು ಸೇರಿದಂತೆ 22 ಪ್ರಮುಖ ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಯಿತು. ನ್ಯಾಯಾಲಯವು ಎಲ್ಲಾ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿ ಮುಸ್ಕಾನ್ ಮತ್ತು ಸಾಹಿಲ್ ಇಬ್ಬರನ್ನೂ ಕೊಲೆ (IPC 302) ಹಾಗೂ ಸಾಕ್ಷ್ಯ ನಾಶಪಡಿಸಿದ ಜಂಟಿ ಸಂಚಿನ ಅಪರಾಧದಡಿಯಲ್ಲಿ ದೋಷಿಗಳು ಎಂದು ಘೋಷಿಸಿತು.

ನ್ಯಾಯಾಧೀಶರಾದ ಅರವಿಂದ್ ಕುಮಾರ್ ಮಿಶ್ರಾ ಅವರು ಇದೊಂದು "ಅಪರೂಪದಲ್ಲಿ ಅಪರೂಪದ ಪ್ರಕರಣ ಎಂದು ಎಂದು ಪರಿಗಣಿಸಿ, ಇಬ್ಬರಿಗೂ ಗಲ್ಲು ಶಿಕ್ಷೆ ಘೋಷಿಸಿದ್ದಾರೆ. ಶಿಕ್ಷೆಯ ಪ್ರಮಾಣ ಪ್ರಕಟಿಸುವ ವೇಳೆ ಜಿಲ್ಲಾ ನ್ಯಾಯಾಧೀಶ ಅರವಿಂದ್ ಕುಮಾರ್ ಮಿಶ್ರಾ ಅವರು ಮಹಾಭಾರತ ಮತ್ತು ಭಗವದ್ಗೀತೆಯ ಸಾರವನ್ನು ಉಲ್ಲೇಖಿಸಿದರು. "ತಪ್ಪು ಮಾಡಿದವರನ್ನು ಶಿಕ್ಷಿಸುವುದು ಕೂಡ ‘ಧರ್ಮ’ದ ಒಂದು ಭಾಗವಾಗಿದೆ. ಇಂತಹ ಕ್ರೂರ ಅಪರಾಧಗಳು ಇಡೀ ಸಮಾಜದಲ್ಲಿ ಭಯದ ವಾತಾವರಣವನ್ನು ಸೃಷ್ಟಿಸುತ್ತವೆ" ಎಂದು ಹೇಳಿದ್ದಾರೆ.