Micro Finance harassment: ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಮತ್ತೆ ಮೂವರ ಬಲಿ, ನಾಲೆಗೆ ಹಾರಿ ಆತ್ಮಹತ್ಯೆ
ಆತ್ಮಹತ್ಯೆ ಮಾಡಿಕೊಂಡವರು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ನಿವಾಸಿಗಳು ಎಂದು ಬಂದಿದೆ. ಮಂಡ್ಯ ತಾಲೂಕಿನ ವಿಸಿ ನಾಲೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತರನ್ನು ಮಾಸ್ತಪ್ಪ (65) ಪತ್ನಿ ರತ್ನಮ್ಮ (45) ಮಗಳು ಲಕ್ಷ್ಮಿ (18) ಎಂದು ಗುರುತಿಸಲಾಗಿದೆ.

ಸಾಂದರ್ಭಿಕ ಚಿತ್ರ

ಮಂಡ್ಯ: ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳ ಕಿರುಕುಳ (Micro Finance harassment) ತಡೆಗೆ ರಾಜ್ಯ ಸರ್ಕಾರ (Karnataka Government) ಸುಗ್ರೀವಾಜ್ಞೆ (Ordinance) ಜಾರಿ ಮಾಡಿದರೂ ಕೂಡ ಸಿಬ್ಬಂದಿಗಳ ಕಿರುಕುಳ ನಿಲ್ಲುತ್ತಿಲ್ಲ. ಇದಕ್ಕೆ ಸಾಕ್ಷಿಯಾಗಿ ಮಂಡ್ಯ ಜಿಲ್ಲೆಯಲ್ಲಿ (Mandya news) ವಿಸಿ ನಾಲೆಗೆ ಹಾರಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಶರಣಾಗಿರುವ (Self harming) ಘಟನೆ ನಡೆದಿದೆ. ಸಾವಿಗೆ ಕಾರಣ ಸಾಲದ ಹೊರೆ ಹಾಗೂ ಮೈಕ್ರೋಫೈನಾನ್ಸ್ ಕಿರುಕುಳ ಎನ್ನಲಾಗಿದೆ.
ಸಾಲದಿಂದ ಬೇಸತ್ತು ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಂಡ್ಯದ ಯಲಿಯೂರು ಬಳಿ ನಡೆದಿದ್ದು, ಆತ್ಮಹತ್ಯೆ ಮಾಡಿಕೊಂಡವರು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ನಿವಾಸಿಗಳು ಎಂದು ಬಂದಿದೆ. ಮಂಡ್ಯ ತಾಲೂಕಿನ ವಿಸಿ ನಾಲೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತರನ್ನು ಮಾಸ್ತಪ್ಪ (65) ಪತ್ನಿ ರತ್ನಮ್ಮ (45) ಮಗಳು ಲಕ್ಷ್ಮಿ (18) ಎಂದು ಗುರುತಿಸಲಾಗಿದೆ.
ಪತ್ನಿ, ಮಗಳೊಂದಿಗೆ ಆತ್ಮಹತ್ಯೆ ಮಾಡಿಕೊಂಡ ಮಾಸ್ತಪ್ಪ ಅವರು ಶ್ರೀರಂಗಪಟ್ಟಣದ ಗಂಜಾಂ ನಿವಾಸಿ ಎಂದು ತಿಳಿದುಬಂದಿದ್ದು, ಆಟೋ ಚಾಲಕರಾಗಿ ಕುಟುಂಬ ನಿರ್ವಹಣೆ ಮಾಡುತ್ತಿದ್ದರು. ಇಬ್ಬರ ಮೃತದೇಹ ಪತ್ತೆಯಾಗಿದ್ದು, ಇನ್ನೊಬ್ಬರ ಮೃತ ದೇಹ ಪತ್ತೆಗಾಗಿ ಶೋಧ ಕಾರ್ಯ ಮುಂದುವರೆದಿದೆ. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಯಮ ಪಾಲಿಸದ ನೂರಕ್ಕೂ ಹೆಚ್ಚು ಶಾಲಾ ವಾಹನ ಸೀಜ್
ಬೆಂಗಳೂರು: ಬೆಂಗಳೂರಿನಲ್ಲಿ ನಿಯಮಾವಳಿ ಪಾಲಿಸದ ನೂರಕ್ಕೂ ಹೆಚ್ಚು ಶಾಲಾ ವಾಹನಗಳನ್ನು ಆರ್‌ಟಿಒ ಅಧಿಕಾರಿಗಳು ಸೀಜ್ ಮಾಡಿದ್ದಾರೆ. ಟ್ರಾಫಿಕ್ ಹಾಗೂ ಸುರಕ್ಷತಾ ರೂಲ್ಸ್ ಪಾಲಿಸದ ಖಾಸಗಿ ವಾಹನಗಳಿಗೆ ಬಿಸಿ ಮುಟ್ಟಿಸಿದ ಆರ್‌ಟಿಓ ಅಧಿಕಾರಿಗಳು, ಬೆಂಗಳೂರಿನ ಪ್ರಮುಖ ಶಾಲಾ ಕಾಲೇಜು ವಾಹನಗಳನ್ನು ಸೀಜ್ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಆರ್‌ಟಿಓ ಅಧಿಕಾರಿಗಳಿಂದ ಈ ಭರ್ಜರಿ ಕಾರ್ಯಾಚರಣೆ ನಡೆದಿದೆ. ಮಕ್ಕಳನ್ನು ಬೇಕಾಬಿಟ್ಟಿಯಾಗಿ ಕೂಡಿಸಿಕೊಂಡು ಹೋಗುವುದು, ವಾಹನಗಳ ಪರವಾನಿಗೆ ಇಲ್ಲದಿರುವುದು, ಚಾಲಕರು ಡಿಎಲ್ ಇಲ್ಲದೆ ಸಂಚರಿಸುವುದು ಮುಂತಾದ ಅಪರಾಧಗಳನ್ನು ಗುರುತಿಸಲಾಗಿದ್ದು, ನಿಯಮ ಪಾಲಿಸದ ಶಾಲಾ ವಾಹನಗಳನ್ನು ಆರ್‌ಟಿಓ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಶಾಲಾ ವಾಹನಗಳು ಶಾಲೆಯ ಹೆಸರಿನಲ್ಲಿ ನೋಂದಣಿ ಆಗಿರಬೇಕು. ಆದರೆ ಸಾಕಷ್ಟು ವಾಹನಗಳು ಯಾರದೋ ಹೆಸರಿನಲ್ಲಿ ನೋಂದಣಿ ಆಗಿವೆ. ಹಾಗಾಗಿ ಆರ್ ಟಿ ಓ ಅಧಿಕಾರಿಗಳು ನೂರಕ್ಕೂ ಹೆಚ್ಚು ಶಾಲಾ ವಾಹನಗಳನ್ನು ಸೀಸ್ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಶಾಲಾ-ಕಾಲೇಜು ವಾಹನಗಳ ಮೇಲೆ ಶಾಲೆ ಹೆಸರು ಮತ್ತು ವಿಳಾಸ, ದೂರವಾಣಿ ಸಂಖ್ಯೆ ಇರಬೇಕು. ವಾಹನದೊಳಗೆ ಸಿಸಿ ಕ್ಯಾಮರಾ, ಫ್ಯಾನಿಕ್ ಬಟನ್, ಫಸ್ಟ್ ಏಡ್ ಬಾಕ್ಸ್, ಫೈರ್ ಎಸ್ಟಿಂಗ್ವಿಷರ್ ಇರಬೇಕು. ಈ ಯಾವ ನಿಯಮಗಳು ಕೂಡ ಪಾಲನೆಯಾಗಿಲ್ಲ ಎಂದು ತಿಳಿದುಬಂದಿದೆ.
ಇದನ್ನೂ ಓದಿ: maha shivaratri 2025: ಫೆ.26ರಂದು ಮಹಾ ಶಿವರಾತ್ರಿ, ಬೆಂಗಳೂರಲ್ಲಿ ಪ್ರಾಣಿವಧೆ, ಮಾಂಸ ಮಾರಾಟ ನಿಷೇಧ