ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Gudibande News: ವಿವಿಧ ಬೇಡಿಕೆಗಳ ಈಡೇರಿಸುವಂತೆ ಒತ್ತಾಯಿಸಿ ಸಿಪಿಎಂ ಪಕ್ಷದಿಂದ ಡಿ.21 ರಂದು ಬೃಹತ್ ಪ್ರತಿಭಟನೆ

ಚುನಾವಣೆಗಳ ಸಮಯದಲ್ಲಿ ಸುಳ್ಳು ಭರವಸೆಗಳನ್ನು ಕೊಟ್ಟು ಎಲ್ಲರಿಗೂ ಮಂಕುಬೂದಿ ಎರಚಿ ಅಧಿಕಾರ ಗಿಟ್ಟಿಸಿಕೊಳ್ಳುತ್ತವೆ. ಚುನಾವಣೆಯ ಬಳಿಕ ಎಲ್ಲರನ್ನೂ ಮರೆತೆ ಹೋಗು ತ್ತಾರೆ. ಫಾರಂ ನಂ 57 ರಲ್ಲಿ ಅರ್ಜಿ ಸಲ್ಲಿಸಿರುವವರಿಗೆ ಇಲ್ಲಿಯವರೆಗು ಭೂಮಿ ನೀಡಿಲ್ಲ. ಅದರ ಬದಲಿಗೆ ಅರ್ಜಿ ಹಾಕಿದ ಪಹಣಿಯಲ್ಲಿ ಗೋಮಾಳ ಎಂದು ನಮೂದಾಗಿದ್ದರೇ, ಅಂತಹ ಜಮೀನು ಮಂಜೂರು ಮಾಡಬಾರದೆಂಬ ಮಾರ್ಗಸೂಚಿ ಬಂದಿದೆ.

ಸಿಪಿಎಂ ಪಕ್ಷದಿಂದ ಡಿ.21 ರಂದು ಬೃಹತ್ ಪ್ರತಿಭಟನೆ

ಪಟ್ಟಣದ ಸಿಪಿಎಂ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಟಿಯಲ್ಲಿ ಡಿ.21 ರ ಬೃಹತ್ ಹೋರಾಟದ ಬಿತ್ತಿಪತ್ರಗಳನ್ನು ಬಿಡುಗಡೆ ಮಾಡಲಾಯಿತು. -

Ashok Nayak
Ashok Nayak Dec 18, 2025 1:11 AM

ಗುಡಿಬಂಡೆ: ಬಗರ್‍ ಹುಕುಂ ಸಾಗುವಳಿ ಚೀಟಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿ ಸುವಂತೆ ಒತ್ತಾಯಿಸಿ ಡಿ.21 ರಂದು ಬೆಂಗಳೂರಿನ ಪ್ರೀಡಂಪಾರ್ಕ್ ನಲ್ಲಿ ಬೃಹತ್ ಪ್ರತಿಭ ಟನಾ ಬಹಿರಂಗ ಸಭೆಯನ್ನು ಸಿಪಿಎಂ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಈ ಹೋರಾಟಕ್ಕೆ ಸಾಥ್ ನೀಡಬೇಕೆಂದು ಸಿಪಿಎಂ ಪಕ್ಷದ ಮುಖಂಡರು ಮನವಿ ಮಾಡಿದರು.

ಈ ಸಂಬಂಧ ಪಟ್ಟಣದ ಸಿಪಿಎಂ ಕಚೇರಿಯಲ್ಲಿ ಸುದ್ದಿಗೋಷ್ಟಿಯನ್ನು ಹಮ್ಮಿಕೊಳ್ಳ ಲಾಗಿತ್ತು. ಈ ವೇಳೆ ಮಾತನಾಡಿದ ಪಕ್ಷದ ಜಿಲ್ಲಾ ಸಮಿತಿ ಸದಸ್ಯ ಜಯರಾಮರೆಡ್ಡಿ, ರೈತರು, ಬಡವರು, ಕೂಲಿಕಾರರು ಸೇರಿದಂತೆ ಬಡವರ ಪರ ಕೆಲಸ ಮಾಡುವಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳೆರಡೂ ವಿಫಲವಾಗಿದೆ.

ಚುನಾವಣೆಗಳ ಸಮಯದಲ್ಲಿ ಸುಳ್ಳು ಭರವಸೆಗಳನ್ನು ಕೊಟ್ಟು ಎಲ್ಲರಿಗೂ ಮಂಕುಬೂದಿ ಎರಚಿ ಅಧಿಕಾರ ಗಿಟ್ಟಿಸಿಕೊಳ್ಳುತ್ತವೆ. ಚುನಾವಣೆಯ ಬಳಿಕ ಎಲ್ಲರನ್ನೂ ಮರೆತೆ ಹೋಗು ತ್ತಾರೆ. ಫಾರಂ ನಂ 57 ರಲ್ಲಿ ಅರ್ಜಿ ಸಲ್ಲಿಸಿರುವವರಿಗೆ ಇಲ್ಲಿಯವರೆಗು ಭೂಮಿ ನೀಡಿಲ್ಲ. ಅದರ ಬದಲಿಗೆ ಅರ್ಜಿ ಹಾಕಿದ ಪಹಣಿಯಲ್ಲಿ ಗೋಮಾಳ ಎಂದು ನಮೂದಾಗಿದ್ದರೇ, ಅಂತಹ ಜಮೀನು ಮಂಜೂರು ಮಾಡಬಾರದೆಂಬ ಮಾರ್ಗಸೂಚಿ ಬಂದಿದೆ.

ಇದನ್ನೂ ಓದಿ: Gudibande News: ಗುಲಾಬಿ ಹೂ ಕೊಟ್ಟು ಹೆಲ್ಮೆಟ್ ಜಾಗೃತಿ ಮೂಡಿಸಿದ ಪೊಲೀಸರು

ಇದರಿಂದ ಅನೇಕ ರೈತರಿಗೆ ಅನ್ಯಾಯವಾಗಿದೆ. ಈ ರೀತಿಯಾಗಿ ಅನೇಕ ರೈತ ವಿರೋಧಿ, ಬಡವಿರೋಧಿ, ಸಾಮಾನ್ಯ ವರ್ಗದ ವಿರೋಧಿ ನೀತಿಗಳ ವಿರುದ್ದ ಡಿ.21 ರಂದು ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದು, ಈ ಹೋರಾಟಕ್ಕೆ ಎಲ್ಲರೂ ಸಾಥ್ ನೀಡಬೇಕು ಎಂದರು.

ಬಳಿಕ ಮುಖಂಡ ಚೆನ್ನರಾಯಪ್ಪ ಮಾತನಾಡಿ, ಇಂದು ಕೇಂದ್ರ ಹಾಗೂ ರಾಜ್ಯ ಸರ್ಕಾರ ಗಳು ಅನೇಕ ರೈತ ವಿರೋಧಿ ಕಾಯ್ದೆಗಳನ್ನು ಜಾರಿ ಮಾಡಿದೆ. ಇದರಿಂದ ರೈತರಿಗೆ ಅನ್ಯಾಯವಾಗುತ್ತಿದ್ದು, ಬೃಹತ್ ಕಂಪನಿಗಳಿಗೆ ಅನುಕೂಲವಾಗುತ್ತಿದೆ. ರಾಜ್ಯದಲ್ಲಿ ಬಡವರ ಪರಿತರ ಚೀಟಿಗಳನ್ನು ರದ್ದು ಮಾಡಲಾಗುತ್ತಿದೆ. ನಿರುದ್ಯೋಗ ಸಮಸ್ಯೆ ತಾಂಡವ ವಾಡುತ್ತಿದೆ. ಸಾಕಷ್ಟು ಕಚೇರಿಗಳಲ್ಲಿ ಸಿಬ್ಬಂದಿಯಿಲ್ಲದೇ ರೈತರು ಹಾಗೂ ಜನರ ಕೆಲಸಗಳೇ ನಡೆಯುತ್ತಿಲ್ಲ. ಇಲಾಖೆಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಈ ನಿಟ್ಟಿ ನಲ್ಲಿ ಸಿಪಿಎಂ ಪಕ್ಷ ಬೃಹತ್ ಹೋರಾಟಕ್ಕೆ ಸಿದ್ದವಾಗಿದೆ. ಪ್ರತಿ ಊರು ಊರಿಗೂ ನಮ್ಮ ಪಕ್ಷ ತೆರಳಿ ಈ ಹೋರಾಟದ ಕುರಿತು ಜಾಗೃತಿ ಮೂಡಿಸುತ್ತೇವೆ. ಜನರು ನಮ್ಮ ಹೋರಾ ಟಕ್ಕೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.

ಈ ಸಮಯದಲ್ಲಿ ಸಿಪಿಎಂ ಪಕ್ಷದ ತಾಲೂಕು ಕಾರ್ಯದರ್ಶಿ ವೆಂಕಟರಾಜು, ಮುಖಂಡ ರಾದ ರಮಣ, ದಪ್ಪರ್ತಿ ದೇವರಾಜು, ಉಪ್ಪಾರಹಳ್ಳಿ ಶ್ರೀನಿವಾಸ್, ಆದಿನಾರಾಯಣಸ್ವಾಮಿ ಸೇರಿದಂತೆ ಹಲವರು ಇದ್ದರು.