ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

maha shivaratri 2025: ಫೆ.26ರಂದು ಮಹಾ ಶಿವರಾತ್ರಿ, ಬೆಂಗಳೂರಲ್ಲಿ ಪ್ರಾಣಿವಧೆ, ಮಾಂಸ ಮಾರಾಟ ನಿಷೇಧ

ಈ ಬಗ್ಗೆ ಬಿಬಿಎಂಪಿ ಪಶುಪಾಲನೆ ವಿಭಾಗದ ಜಂಟಿ ನಿರ್ದೇಶಕರು ಆದೇಶ ಹೊರಡಿಸಿದ್ದು, ದಿನಾಂಕ: 26-02-2025 ಬುಧವಾರದಂದು “ಮಹಾ ಶಿವರಾತ್ರಿ ಹಬ್ಬ”ದ ಪ್ರಯುಕ್ತ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕಸಾಯಿಖಾನೆಯಲ್ಲಿ ಪ್ರಾಣಿವಧೆ ಹಾಗೂ ಮಾರಾಟ ಮಳಿಗೆಗಳಲ್ಲಿ ಮಾಂಸ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ.

ಫೆ.26ರಂದು ಮಹಾ ಶಿವರಾತ್ರಿ, ಬೆಂಗಳೂರಲ್ಲಿ ಪ್ರಾಣಿವಧೆ, ಮಾಂಸ ಮಾರಾಟ ನಿಷೇಧ

ಮಹಾ ಶಿವರಾತ್ರಿ

ಹರೀಶ್‌ ಕೇರ ಹರೀಶ್‌ ಕೇರ Feb 24, 2025 3:32 PM

ಬೆಂಗಳೂರು: ಫೆಬ್ರವರಿ 26ರಂದು ಮಹಾ ಶಿವರಾತ್ರಿ (Maha Shivratri 2025) ಹಬ್ಬದ ಆಚರಣೆಯ ಹಿನ್ನಲೆಯಲ್ಲಿ ಬೆಂಗಳೂರಿನಲ್ಲಿ (Bengaluru) ಪ್ರಾಣಿವಧೆ (Animal Slaughter) ಹಾಗೂ ಮಾಂಸ ಮಾರಾಟ (Meat sale) ನಿಷೇಧ ಮಾಡಿ ಬಿಬಿಎಂಪಿ (BBMP) ಆದೇಶ ಹೊರಡಿಸಿದೆ. ಈ ಬಗ್ಗೆ ಬಿಬಿಎಂಪಿ ಪಶುಪಾಲನೆ ವಿಭಾಗದ ಜಂಟಿ ನಿರ್ದೇಶಕರು ಆದೇಶ ಹೊರಡಿಸಿದ್ದು, ದಿನಾಂಕ: 26-02-2025 ಬುಧವಾರದಂದು “ಮಹಾ ಶಿವರಾತ್ರಿ ಹಬ್ಬ”ದ ಪ್ರಯುಕ್ತ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕಸಾಯಿಖಾನೆಯಲ್ಲಿ ಪ್ರಾಣಿವಧೆ ಹಾಗೂ ಮಾರಾಟ ಮಳಿಗೆಗಳಲ್ಲಿ ಮಾಂಸ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ.

ಈ ವರ್ಷ ಹಿಂದೂಗಳ ಪವಿತ್ರ ಪರ್ವಗಳಲ್ಲಿ ಒಂದಾದ ಮಹಾ ಶಿವರಾತ್ರಿ ಫೆಬ್ರವರಿ 26ರಂದು ಆಗಮಿಸಿದೆ. ಅಂದೇ ಪ್ರಯಾಗ್‌ರಾಜ್‌ನಲ್ಲಿ ಮಹಾ ಕುಂಭ ಮೇಳದ ಅಂತಿಮ ಪವಿತ್ರ ಸ್ನಾನದ ದಿನವೂ ಆಗಿದೆ. ಅದರೊಂದಿಗೆ 45 ದಿನಗಳ ಈ ಮಹಾ ಪರ್ವ ಮುಕ್ತಾಯವಾಗಲಿದೆ. ಮಹಾ ಶಿವರಾತ್ರಿಯು ಶಿವನಿಗೆ ಅರ್ಪಿತವಾದ ಹಿಂದೂ ಹಬ್ಬವಾಗಿದ್ದು, ಇದನ್ನು ಪ್ರತಿ ವರ್ಷ ಫಾಲ್ಗುಣ ಮಾಸದ 14ನೇ ರಾತ್ರಿಯಂದು ಆಚರಿಸಲಾಗುತ್ತದೆ. ಭಕ್ತರು ಅಂದು ಉಪವಾಸ ಆಚರಿಸಿ, ಮಹಾ ಶಿವರಾತ್ರಿ ಪೂಜೆ ಮಾಡಿ, ಪವಿತ್ರ ಸ್ತೋತ್ರಗಳನ್ನು ಪಠಿಸಿ ಶಿವನಿಂದ ಆಶೀರ್ವಾದ ಪಡೆಯಲು ಬಯಸುತ್ತಾರೆ.

ಭಾರತದ ವಿವಿಧ ಭಾಗಗಳಲ್ಲಿ ಮಹಾ ಶಿವರಾತ್ರಿಯನ್ನು ಭವ್ಯವಾಗಿ ಆಚರಿಸಲಾಗುತ್ತದೆ. ವಾರಣಾಸಿಯ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆಗಳು ಮತ್ತು ಮೆರವಣಿಗೆಗಳು ನಡೆಯುತ್ತವೆ. ಉಜ್ಜಯಿನಿಯಲ್ಲಿ ರಾತ್ರಿಯಿಡೀ ಭಕ್ತರು ಮಹಾಕಾಳೇಶ್ವರ ಜ್ಯೋತಿರ್ಲಿಂಗಕ್ಕೆ ಭೇಟಿ ನೀಡುತ್ತಾರೆ. ತಮಿಳುನಾಡಿನ ಚಿದಂಬರಂ ನಟರಾಜ ದೇವಸ್ಥಾನದಲ್ಲಿ ಹಾಗೂ ಕರ್ನಾಟಕದ ಮುರುಡೇಶ್ವರ ಮತ್ತು ಗೋಕರ್ಣ ದೇವಾಲಯಗಳಿಗೆ ಭಕ್ತರು ಬೃಹತ್ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ.

ನಿಯಮ ಪಾಲಿಸದ ನೂರಕ್ಕೂ ಹೆಚ್ಚು ಶಾಲಾ ವಾಹನ ಸೀಜ್‌

ಬೆಂಗಳೂರು: ಬೆಂಗಳೂರಿನಲ್ಲಿ ನಿಯಮಾವಳಿ ಪಾಲಿಸದ ನೂರಕ್ಕೂ ಹೆಚ್ಚು ಶಾಲಾ ವಾಹನಗಳನ್ನು ಆರ್‌ಟಿಒ ಅಧಿಕಾರಿಗಳು ಸೀಜ್ ಮಾಡಿದ್ದಾರೆ. ಟ್ರಾಫಿಕ್‌ ಹಾಗೂ ಸುರಕ್ಷತಾ ರೂಲ್ಸ್‌ ಪಾಲಿಸದ ಖಾಸಗಿ ವಾಹನಗಳಿಗೆ ಬಿಸಿ ಮುಟ್ಟಿಸಿದ ಆರ್‌ಟಿಓ ಅಧಿಕಾರಿಗಳು, ಬೆಂಗಳೂರಿನ ಪ್ರಮುಖ ಶಾಲಾ ಕಾಲೇಜು ವಾಹನಗಳನ್ನು ಸೀಜ್ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಆರ್‌ಟಿಓ ಅಧಿಕಾರಿಗಳಿಂದ ಈ ಭರ್ಜರಿ ಕಾರ್ಯಾಚರಣೆ ನಡೆದಿದೆ. ಮಕ್ಕಳನ್ನು ಬೇಕಾಬಿಟ್ಟಿಯಾಗಿ ಕೂಡಿಸಿಕೊಂಡು ಹೋಗುವುದು, ವಾಹನಗಳ ಪರವಾನಿಗೆ ಇಲ್ಲದಿರುವುದು, ಚಾಲಕರು ಡಿಎಲ್ ಇಲ್ಲದೆ ಸಂಚರಿಸುವುದು ಮುಂತಾದ ಅಪರಾಧಗಳನ್ನು ಗುರುತಿಸಲಾಗಿದ್ದು, ನಿಯಮ ಪಾಲಿಸದ ಶಾಲಾ ವಾಹನಗಳನ್ನು ಆರ್‌ಟಿಓ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

ಶಾಲಾ ವಾಹನಗಳು ಶಾಲೆಯ ಹೆಸರಿನಲ್ಲಿ ನೋಂದಣಿ ಆಗಿರಬೇಕು. ಆದರೆ ಸಾಕಷ್ಟು ವಾಹನಗಳು ಯಾರದೋ ಹೆಸರಿನಲ್ಲಿ ನೋಂದಣಿ ಆಗಿವೆ. ಹಾಗಾಗಿ ಆರ್ ಟಿ ಓ ಅಧಿಕಾರಿಗಳು ನೂರಕ್ಕೂ ಹೆಚ್ಚು ಶಾಲಾ ವಾಹನಗಳನ್ನು ಸೀಸ್ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಶಾಲಾ-ಕಾಲೇಜು ವಾಹನಗಳ ಮೇಲೆ ಶಾಲೆ ಹೆಸರು ಮತ್ತು ವಿಳಾಸ, ದೂರವಾಣಿ ಸಂಖ್ಯೆ ಇರಬೇಕು. ವಾಹನದೊಳಗೆ ಸಿಸಿ ಕ್ಯಾಮರಾ, ಫ್ಯಾನಿಕ್ ಬಟನ್, ಫಸ್ಟ್ ಏಡ್ ಬಾಕ್ಸ್, ಫೈರ್ ಎಸ್ಟಿಂಗ್ವಿಷರ್ ಇರಬೇಕು. ಈ ಯಾವ ನಿಯಮಗಳು ಕೂಡ ಪಾಲನೆಯಾಗಿಲ್ಲ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಹೃದಯಾಂತರಾಳದಲ್ಲಿ ದೇವರನ್ನು ಪ್ರತಿಷ್ಠಾಪಿಸುವ ದಿನ ಶಿವರಾತ್ರಿ