Murder Case: ಸಲಿಂಗ ಕಾಮಕ್ಕೆ ಒಲ್ಲೆ ಎಂದ ಯುವಕನನ್ನು ಕೊಂದೇ ಬಿಟ್ಟ ಬಾಲಕರು!
ಮಹಾರಾಷ್ಟ್ರದ (Maharastra) ಸಾಂಗ್ಲಿ ಜಿಲ್ಲೆಯ ಸಂಜೆ ಬೇಲಂಕಿ ಗ್ರಾಮದಲ್ಲಿ ಜೂನ್ 28ರ ಶನಿವಾರ ನಡೆದ ವಿವಾಹ ಪೂರ್ವ ಸಮಾರಂಭದಲ್ಲಿ ಪಾಲ್ಗೊಳ್ಳಲು ಬಂದಿದ್ದ ಮಿರಜ್ ನಿವಾಸಿ ಯುವಕನ ಬಳಿ ಇಬ್ಬರು ಅಪ್ರಾಪ್ತರು ಸಲಿಂಗ ಕಾಮಕ್ಕೆ ಕೇಳಿಕೊಂಡಿದ್ದಾರೆ. ಆದರೆ ಆತ ಒಪ್ಪದ ಕಾರಣ ಆತನನ್ನು ಅರಗ್ ಗ್ರಾಮದ ಬಳಿಯ ಸರೋವರಕ್ಕೆ ದೂಡಿ ಕೊಲೆ ಮಾಡಿದ್ದಾರೆ.


ಸಾಂಗ್ಲಿ: ಸಲಿಂಗ ಕಾಮಕ್ಕೆ (Homosexual Relations) ನಿರಾಕರಿಸಿದ ಯುವಕನನ್ನು ಇಬ್ಬರು ಬಾಲಕರು ಸೇರಿ ಕೊಲೆ (Murder case) ಮಾಡಿರುವ ಘಟನೆ ಮಹಾರಾಷ್ಟ್ರದ (Maharastra) ಸಾಂಗ್ಲಿಯಲ್ಲಿ (Sangli) ನಡೆದಿದೆ. ಸಾಂಗ್ಲಿ ಜಿಲ್ಲೆಯ ಅರಗ್ ಗ್ರಾಮದ ಬಳಿ 21 ವರ್ಷದ ಯುವಕನೊಂದಿಗೆ 17 ವರ್ಷ ವಯಸ್ಸಿನ ಅಪ್ರಾಪ್ತರಿಬ್ಬರು ಸಲಿಂಗ ಕಾಮ ನಡೆಸಲು ಕೇಳಿಕೊಂಡಿದ್ದಾರೆ. ಆದರೆ ಆತ ನಿರಾಕರಿಸಿದ ಕಾರಣ ಆತನನ್ನು ಸರೋವರಕ್ಕೆ ದೂಡಿ ಕೊಲೆ ಮಾಡಿದ್ದಾರೆ. ಜೂನ್ 28ರ ಶನಿವಾರ ಸಂಜೆ ಬೇಲಂಕಿ ಗ್ರಾಮದ ಬಳಿ ಈ ಘಟನೆ ನಡೆದಿದೆ. ಆರೋಪಿಗಳನ್ನು ಬಂಧಿಸಿ ಮಕ್ಕಳ ವೀಕ್ಷಣಾ ಗೃಹಕ್ಕೆ ಕಳುಹಿಸಲಾಗಿದೆ.
ಜೂನ್ 28ರ ಶನಿವಾರ ಸಂಜೆ ಬೇಲಂಕಿ ಗ್ರಾಮದಲ್ಲಿ ನಡೆದ ವಿವಾಹ ಪೂರ್ವ ಸಮಾರಂಭದಲ್ಲಿ ಪಾಲ್ಗೊಳ್ಳಲು ಬಂದಿದ್ದ ಮಿರಜ್ ನಿವಾಸಿ ಯುವಕನ ಬಳಿ ಇಬ್ಬರು ಅಪ್ರಾಪ್ತರು ಸಲಿಂಗ ಕಾಮಕ್ಕೆ ಕೇಳಿಕೊಂಡಿದ್ದಾರೆ. ಆದರೆ ಆತ ಒಪ್ಪದ ಕಾರಣ ಆತನನ್ನು ಅರಗ್ ಗ್ರಾಮದ ಬಳಿಯ ಸರೋವರಕ್ಕೆ ದೂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಯುವಕ ಶನಿವಾರ ನಾಪತ್ತೆಯಾಗಿದ್ದು, ಜೂನ್ 29ರ ಭಾನುವಾರ ಆತನ ಕುಟುಂಬವು ಮಿರಾಜ್ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿತ್ತು. ಪೊಲೀಸರು ತನಿಖೆಯನ್ನು ಪ್ರಾರಂಭಿಸಿದಾಗ ಬೇಲಂಕಿ ಗ್ರಾಮದಲ್ಲಿ ನಡೆದ ವಿವಾಹ ಪೂರ್ವ ಸಮಾರಂಭದಲ್ಲಿ ಇಬ್ಬರು ಅಪ್ರಾಪ್ತ ಬಾಲಕರು ಮತ್ತು ಯುವಕ ಭಾಗವಹಿಸಿದ್ದ ಎಂದು ತಿಳಿದುಬಂದಿದೆ.
ಇಬ್ಬರು ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಅಪ್ರಾಪ್ತ ಬಾಲಕರು ಯುವಕನೊಂದಿಗೆ ತಾವು ದೈಹಿಕ ಸಂಬಂಧ ನಡೆಸಲು ಕೇಳಿಕೊಂಡಿದ್ದು, ಆತ ನಿರಾಕರಿಸಿದ್ದಕ್ಕೆ ಕೊಲೆ ಮಾಡಿರುವುದಾಗಿ ಹೇಳಿದ್ದಾರೆ. ಸರೋವರದ ಬಳಿ ಯುವಕನೊಂದಿಗೆ ದೈಹಿಕ ಸಂಬಂಧ ನಡೆಸಲು ಅವರು ಪ್ರಯತ್ನಿಸಿದ್ದರು. ಆದರೆ ಯುವಕ ನಿರಾಕರಿಸಿದ್ದರಿಂದ ಕೋಪಗೊಂಡ ಹುಡುಗರು ಯುವಕನನ್ನು ಸರೋವರಕ್ಕೆ ತಳ್ಳಿದ್ದಾರೆ. ಸರೋವರದ ಆಳ ತಿಳಿಯದ ಯುವಕ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಮರುದಿನ ಯುವಕನ ಶವ ಸರೋವರದಲ್ಲಿ ಪತ್ತೆಯಾಗಿದೆ.
ಇದನ್ನೂ ಓದಿ: Monkey Massacre: ಹುಲಿ ಹತ್ಯೆ ಬಳಿಕ ಗುಂಡ್ಲುಪೇಟೆಯಲ್ಲಿ 20ಕ್ಕೂ ಅಧಿಕ ಕೋತಿಗಳ ಮಾರಣಹೋಮ
ಯುವಕನ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಬಂಧನಕ್ಕೊಳಗಾದ ಅನಂತರ ಇಬ್ಬರು ಅಪ್ರಾಪ್ತ ಬಾಲಕರು ಕುಡಿದ ಅಮಲಿನಲ್ಲಿ ತಾವು ಈ ರೀತಿ ನಡೆಸಿದ್ದಾಗಿ ಹೇಳಿಕೊಂಡಿದ್ದಾರೆ.