Physical Assaulting: ಮತ್ತು ಬರುವ ಮಾತ್ರೆಗಳನ್ನು ನೀಡಿ ವಿದ್ಯಾರ್ಥಿ ಮೇಲೆ ಲೈಂಗಿಕ ದೌರ್ಜನ್ಯ -ಶಿಕ್ಷಕಿ ಅರೆಸ್ಟ್
16 ವರ್ಷದ ವಿದ್ಯಾರ್ಥಿಯ ಮೇಲೆ ಕಳೆದ ಒಂದು ವರ್ಷದಿಂದ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಮುಂಬೈನ ಪ್ರತಿಷ್ಠಿತ ಶಾಲೆಯೊಂದರ 40 ವರ್ಷದ ಇಂಗ್ಲಿಷ್ ಶಿಕ್ಷಕಿಯನ್ನು ಪೊಲೀಸರು ಬಂಧಿಸಿದ್ದಾರೆ. ವಿವಾಹಿತೆಯಾಗಿ ಮಕ್ಕಳಿರುವ ಈ ಶಿಕ್ಷಕಿಯ ವಿರುದ್ಧ ಪೋಕ್ಸೊ ಕಾಯಿದೆ, ಜುವೆನೈಲ್ ಜಸ್ಟೀಸ್ ಕಾಯಿದೆ ಮತ್ತು ಭಾರತೀಯ ದಂಡ ಸಂಹಿತೆಯಡಿ ಪ್ರಕರಣ ದಾಖಲಾಗಿದೆ.


ಮುಂಬೈ: 16 ವರ್ಷದ ವಿದ್ಯಾರ್ಥಿಯ (Student) ಮೇಲೆ ಕಳೆದ ಒಂದು ವರ್ಷದಿಂದ ಲೈಂಗಿಕ ದೌರ್ಜನ್ಯ (physical Assaulting) ಎಸಗಿದ ಆರೋಪದ ಮೇಲೆ ಮುಂಬೈನ (Mumbai) ಪ್ರತಿಷ್ಠಿತ ಶಾಲೆಯೊಂದರ 40 ವರ್ಷದ ಇಂಗ್ಲಿಷ್ ಶಿಕ್ಷಕಿಯನ್ನು (English Teacher) ಪೊಲೀಸರು ಬಂಧಿಸಿದ್ದಾರೆ. ವಿವಾಹಿತೆಯಾಗಿ ಮಕ್ಕಳಿರುವ ಈ ಶಿಕ್ಷಕಿಯ ವಿರುದ್ಧ ಪೋಕ್ಸೊ ಕಾಯಿದೆ, ಜುವೆನೈಲ್ ಜಸ್ಟೀಸ್ ಕಾಯಿದೆ ಮತ್ತು ಭಾರತೀಯ ದಂಡ ಸಂಹಿತೆಯಡಿ ಪ್ರಕರಣ ದಾಖಲಾಗಿದೆ.
ವಿದ್ಯಾರ್ಥಿಯು 11 ತರಗತಿ ಓದುತ್ತಿದ್ದು, 2023ರ ಡಿಸೆಂಬರ್ ಬೇಳೆ ಶಾಲೆಯ ವಾರ್ಷಿಕೋತ್ಸವದ ವೇಳೆ ಡ್ಯಾನ್ಸ್ ಗ್ರೂಪ್ ಮಾಡುವ ಸಮಯದಲ್ಲಿ ಶಿಕ್ಷಕಿ ವಿದ್ಯಾರ್ಥಿಯ ಕಡೆಗೆ ಆಕರ್ಷಿತರಾಗಿದ್ದಾರೆ. ಜನವರಿ 2024ರಲ್ಲಿ ಆಕೆ ಲೈಂಗಿಕ ಸನ್ನೆಗಳನ್ನು ಮಾಡಿದ್ದು, ವಿದ್ಯಾರ್ಥಿಯು ಆರಂಭದಲ್ಲಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಆದರೆ ಶಿಕ್ಷಕಿ ತನ್ನ ಸ್ನೇಹಿತೆಯೊಬ್ಬರ ಸಹಾಯವನ್ನು ಕೇಳಿದ್ದರು. ಈ ಸ್ನೇಹಿತೆಯು ಶಾಲೆಗೆ ಸಂಬಂಧವಿಲ್ಲದವರಾಗಿದ್ದು, ವಿದ್ಯಾರ್ಥಿಗೆ "ಹಿರಿಯ ಮಹಿಳೆಯರು ಮತ್ತು ಕಿರಿಯ ಹುಡುಗರ ನಡುವಿನ ಸಂಬಂಧ ಈಗ ಸಾಮಾನ್ಯವಾಗಿದೆ" ಎಂದು ಹೇಳಿ ಶಿಕ್ಷಕಿಯನ್ನ ಭೇಟಿಯಾಗಲು ಒಪ್ಪಿಸಿದ್ದಾಳೆ.
ಆ ಬಳಿಕ ಶಿಕ್ಷಕಿ ವಿದ್ಯಾರ್ಥಿಯನ್ನು ಸೆಡಾನ್ ಕಾರಿನಲ್ಲಿ ಏಕಾಂತ ಸ್ಥಳಕ್ಕೆ ಕರೆದೊಯ್ದು ಬಲವಂತವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾಳೆ. ವಿದ್ಯಾರ್ಥಿಯು ಆತಂಕಗೊಂಡಾಗ, ಆಕೆ ಆತಂಕ-ನಿವಾರಕ ಮಾತ್ರೆಗ ಳನ್ನು ನೀಡಿದ್ದಾಳೆ. ಆಕೆ ವಿದ್ಯಾರ್ಥಿಗೆ ಮದ್ಯಪಾನ ಮಾಡಿಸಿ, ದಕ್ಷಿಣ ಮುಂಬೈ ಮತ್ತು ವಿಮಾನ ನಿಲ್ದಾಣದ ಬಳಿಯ ಫೈವ್ ಸ್ಟಾರ್ ಹೋಟೆಲ್‌ಗಳಿಗೆ ಕರೆದೊಯ್ದು ಲೈಂಗಿಕ ಸಂಬಂಧಕ್ಕೆ ಒತ್ತಾಯಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸುದ್ದಿಯನ್ನು ಓದಿ:International Yoga Day: ಸಿಕ್ಕಾಪಟ್ಟೆ ವೈರಲ್ ಆಯ್ತು ಶ್ವಾನದ ಈ ಯೋಗಾಸನ; ವಿಡಿಯೊ ವೈರಲ್!
ವಿದ್ಯಾರ್ಥಿಯ ವರ್ತನೆಯಲ್ಲಿ ಬದಲಾವಣೆ ಕಂಡು ಕುಟುಂಬವರು ಮಾತನಾಡಿದಾಗ ಘಟನೆ ಬೆಳಕಿಗೆ ಬಂದಿದೆ. ಆರಂಭದಲ್ಲಿ ಕುಟುಂಬದವರು ಈ ವಿಷಯವನ್ನು ಗೌಪ್ಯವಾಗಿಡಲು ನಿರ್ಧರಿಸಿದ್ದಾರೆ. ಆದರೆ ವಿದ್ಯಾರ್ಥಿಯು 12ನೇ ತರಗತಿ ಪರೀಕ್ಷೆಯನ್ನು ಪಾಸ್ ಆದ ಬಳಿಕವೂ ಶಿಕ್ಷಕಿಯ ಜೊತೆ ಸಂಪರ್ಕ ಮುಂದುವರಿಸಿದಾಗ ಕುಟುಂಬವರು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಪೋಕ್ಸೊ ಕಾಯಿದೆಯ ಸೆಕ್ಷನ್ 4, 6, ಮತ್ತು 17ರ ಜೊತೆಗೆ ಐಪಿಸಿ ಮತ್ತು ಜುವೆನೈಲ್ ಜಸ್ಟೀಸ್ ಕಾಯಿದೆ, 2015ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ತನಿಖೆಗಾಗಿ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.