ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಅಕ್ರಮ ಸಂಬಂಧಕ್ಕೆ ಬಿತ್ತು ಹೆಣ: ಮಹಿಳೆಯಿಂದಲೇ ಪ್ರಿಯಕರನ ಕೊಲೆ, ಶಿರಚ್ಛೇದನ ಮಾಡಿ ಶವ ಹೂತ ನಾಲ್ವರು ಆರೋಪಿಗಳು ಅಂದರ್

Crime News: 31 ವರ್ಷದ ವ್ಯಕ್ತಿಯ ಶಿರಚ್ಛೇದ ಮಾಡಿದ ಆರೋಪದ ಮೇಲೆ ಮಹಿಳೆ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ. ಅಸ್ಸಾಂನ ಜೋರ್ಹತ್ ಜಿಲ್ಲೆಯಲ್ಲಿ ಘಟನೆ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ಅನಿಲ್ ರಾಜ್‌ಗಢ್ ಎಂದು ಗುರುತಿಸಲಾಗಿದೆ. ಈತ ಸೆಪ್ಟೆಂಬರ್ 12 ರಂದು ನಾಪತ್ತೆಯಾಗಿದ್ದ.

ಅಕ್ರಮ ಸಂಬಂಧಕ್ಕೆ ಬಿತ್ತು ಹೆಣ: ಮಹಿಳೆಯಿಂದಲೇ ವ್ಯಕ್ತಿಯ ಕೊಲೆ

ಸಾಂದರ್ಭಿಕ ಚಿತ್ರ -

Priyanka P
Priyanka P Sep 18, 2026 6:55 PM

ಗುವಾಹಟಿ, ಸೆ.18: 31 ವರ್ಷದ ವ್ಯಕ್ತಿಯ ಶಿರಚ್ಛೇದ ಮಾಡಿದ ಆರೋಪದ ಮೇಲೆ ಮಹಿಳೆ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ. ಅಸ್ಸಾಂ (Assam)ನ ಜೋರ್ಹತ್ ಜಿಲ್ಲೆಯಲ್ಲಿ ಘಟನೆ ನಡೆದಿದೆ. ಬಲಿಯಾದ ವ್ಯಕ್ತಿ ಮತ್ತು ಮತ್ತು ಪ್ರಕರಣದಲ್ಲಿ ಬಂಧಿಸಲ್ಪಟ್ಟ ಮಹಿಳೆಯ ನಡುವಿನ (Crime News) ಸಂಬಂಧವೇ ಹತ್ಯೆಗೆ ಕಾರಣವಾಗಿರಬಹುದು ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

ಕೊಲೆಯಾದ ವ್ಯಕ್ತಿಯನ್ನು ಅನಿಲ್ ರಾಜ್‌ಗಢ್ ಎಂದು ಗುರುತಿಸಲಾಗಿದೆ. ಈತ ಸೆಪ್ಟೆಂಬರ್ 12 ರಂದು ನಾಪತ್ತೆಯಾಗಿದ್ದ. ಹೀಗಾಗಿ ಆತನ ಕುಟುಂಬ ಸದಸ್ಯರು ನಾಪತ್ತೆ ದೂರು ದಾಖಲಿಸಿದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು. ನಂತರ ಆತನ ಶವ ಭೋಗ್ಡೋಯ್ ನದಿಯ ಬಳಿ ಪತ್ತೆಯಾಗಿತ್ತು.

ಶವವನ್ನು ನದಿಯ ಬಳಿ ಹೂಳಲಾಗಿತ್ತು, ಕತ್ತರಿಸಿದ ತಲೆಯನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಸಲಾಗಿತ್ತು. ಅನಿಲ್‌ನ ಕುತ್ತಿಗೆಯನ್ನು ಹರಿತವಾದ ಬ್ಲೇಡ್‌ನಿಂದ ಸೀಳಿ, ನಂತರ ಮಚ್ಚಿನಿಂದ ಶಿರಚ್ಛೇದ ಮಾಡಲಾಗಿದೆ ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ. ಪ್ರಕರಣ ಸಂಬಂಧ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಆರೋಪಿಗಳಾದ ಕಪಿಲ್ ಕರ್ಮಾಕರ್ (32), ಪತ್ನಿ ಅನಿಮಾ ಕರ್ಮಾಕರ್, ಕಿರಿಯ ಸಹೋದರ ಸಂಜಿತ್ ಕರ್ಮಾಕರ್ (30) ಮತ್ತು ಅವರ ಸ್ನೇಹಿತ ಮಹೇಶ್ ರಾಜ್‌ಗಢ (33) ನನ್ನು ಬಂಧಿಸಲಾಗಿದೆ.

ನಾಯಿಗಳಿಗೆ ಆಹಾರವಾದ ಅತ್ಯಾಚಾರ ಸಂತ್ರಸ್ತೆಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆ

ಪೊಲೀಸ್ ಮೂಲಗಳ ಪ್ರಕಾರ, ಅನಿಲ್ ರಾಜ್‌ಗಢ್ ಕಳೆದ ಕೆಲವು ತಿಂಗಳುಗಳಿಂದ ಅನಿಮಾ ಕರ್ಮಾಕರ್ ಜೊತೆ ಸಂಪರ್ಕದಲ್ಲಿದ್ದ ಎನ್ನಲಾಗಿದೆ. ಸೆಪ್ಟೆಂಬರ್ 7 ರಂದು, ಚಹಾ ತೋಟದ ಪ್ರದೇಶದಲ್ಲಿ ತನ್ನನ್ನು ಭೇಟಿಯಾಗಲು ಆಕೆ ಕೇಳಿಕೊಂಡಿದ್ದಳು ಎನ್ನಲಾಗಿದೆ. ಅವನು ಬಂದಾಗ, ಅವಳು ಅವನ ಮೇಲೆ ಬ್ಲೇಡ್‌ನಿಂದ ಹಲ್ಲೆ ಮಾಡಿ, ಅವನ ಗಂಟಲು ಸೀಳಿದಳು ಎಂದು ಆರೋಪಿಸಲಾಗಿದೆ.

ಸ್ವಲ್ಪ ಸಮಯದ ನಂತರ ಅನಿಮಾಳ ಪತಿ ಮತ್ತು ಇತರ ಇಬ್ಬರು ಕೃತ್ಯದಲ್ಲಿ ಸೇರಿಕೊಂಡರು. ಆರೋಪಿಗಳು, ಅನಿಲ್ ರಾಜ್‌ಗಢ್‌ನ ಶಿರಚ್ಛೇದ ಮಾಡಿ, ಶವವನ್ನು ಚೀಲದಲ್ಲಿ ತುಂಬಿಸಿ ನದಿಯ ದಂಡೆಗೆ ತೆಗೆದುಕೊಂಡು ಹೋಗಿ ಹೂಳಿದ್ದಾರೆ ಎಂದು ಆರೋಪಿಸಲಾಗಿದೆ.

ಖುಲಾಸೆಗೊಂಡಿದ್ದ ಸುರೇಂದರ್ ಕೋಲಿ ಹರಿದ್ವಾರದಲ್ಲಿ ಆತ್ಮಹತ್ಯೆಗೆ ಶರಣು

2006 ರಲ್ಲಿ ನಡೆದಿದ್ದ ನಿಠಾರಿ ಸರಣಿ ಹತ್ಯಾಕಾಂಡದ ಆರೋಪಿಯಾಗಿ, ನಂತರ ನ್ಯಾಯಾಲಯದಿಂದ ಖುಲಾಸೆಗೊಂಡಿದ್ದ ಸುರೇಂದರ್ ಕೋಲಿ ಹರಿದ್ವಾರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ಶುಕ್ರವಾರ ನಗರದ ಉತ್ತರ ಭಾಗದಲ್ಲಿರುವ ಲಾಲ್ ಮಾತಾ ದೇವಸ್ಥಾನದ ಎದುರಿನ ಸಪ್ತ್ ಸರೋವರ ರಸ್ತೆಯಲ್ಲಿರುವ ಟೀ ಸ್ಟಾಲ್‌ನಲ್ಲಿ ಕೋಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಂಗಡಿಯ ಒಳಗೆ ಹಗ್ಗದಿಂದ ನೇಣು ಬಿಗಿದ ಸ್ಥಿತಿಯಲ್ಲಿ ಆತನ ಮೃತದೇಹ ಪತ್ತೆಯಾಗಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ಆತ ಬಾಡಿಗೆ ಚಹಾ ಅಂಗಡಿಯನ್ನು ನಡೆಸುತ್ತಿದ್ದ ಎಂದು ತಿಳಿದುಬಂದಿದೆ. ಸ್ಥಳದಲ್ಲಿ ಯಾವುದೇ ಡೆತ್‌ನೋಟ್ ಪತ್ತೆಯಾಗಿಲ್ಲ. ಅಲ್ಮೋರಾದಲ್ಲಿರುವ ಆತನ ಕುಟುಂಬಕ್ಕೆ ಮಾಹಿತಿ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಾಥಮಿಕ ತನಿಖೆ ನಡೆಸಿರುವ ಹರಿದ್ವಾರ ಪೊಲೀಸರು, ಕೋಲಿಯ ಆತ್ಮಹತ್ಯೆಗೆ ಕೌಟುಂಬಿಕ ಕಲಹಗಳೇ ಪ್ರಮುಖ ಕಾರಣ ಇರಬಹುದು ಎಂದು ಶಂಕಿಸಿದ್ದಾರೆ.