Body Found: ದೇವನಹಳ್ಳಿಯ ಐಫೋನ್ ಫ್ಯಾಕ್ಟರಿ ಟಾಯ್ಲೆಟ್‌ನಲ್ಲಿ ನವಜಾತ ಶಿಶುವಿನ ಶವ ಪತ್ತೆ
ಶೌಚಾಲಯಕ್ಕೆ ಹೋದಾಗ ಆಕಸ್ಮಿಕವಾಗಿ ಹೊಟ್ಟೆಯಿಂದ ಹೊರಬಂದಿದ್ದ ನವಜಾತ ಶಿಶುವನ್ನು ಗಾಬರಿಯಲ್ಲಿ ತಾಯಿಯೇ ಕೊಂದು ಕಸದ ಬುಟ್ಟಿಗೆ ಎಸೆದಿದ್ದಾಳೆ ಎನ್ನಲಾಗುತ್ತಿದೆ. ಮದುವೆಯಾಗದೇ ಗರ್ಭಿಣಿಯಾಗಿದ್ದರಿಂದ ಮಹಿಳೆ ಭಯಗೊಂಡು ಮಗುವಿನ ಜೀವ ತೆಗೆದಿದ್ದಾಳೆ ಎಂದು ತಿಳಿದುಬಂದಿದ್ದು, ಪೊಲೀಸರು ಈಕೆಯನ್ನು ಪತ್ತೆ ಹಚ್ಚಿದ್ದಾರೆ.
ಸಾಂದರ್ಭಿಕ ಚಿತ್ರ -
ಬೆಂಗಳೂರು, ಏ.23: ಬೆಂಗಳೂರು (Bengaluru) ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ (Devanahalli) ಪ್ರತಿಷ್ಠಿತ ಐಫೋನ್ ತಯಾರಿಕೆ ಕಂಪನಿ ಫಾಕ್ಸ್‌ಕಾನ್‌ನ (Foxconn) ಕಸದ ಬುಟ್ಟಿಯಲ್ಲಿ ನವಜಾತ ಶಿಶು (Newborn body found) ಶವ ಪತ್ತೆಯಾಗಿದೆ. ಟಾಯ್ಲೆಟ್ಗೆ ಹೋದಾಗ ಹೊರ ಬಂದ ನವಜಾತ ಶಿಶುವಿನ ಕತ್ತು ಕೊಯ್ದು ತಾಯಿಯೇ ಕಸದ ಬುಟ್ಟಿಗೆ ಎಸೆದಿದ್ದಾಳೆ ಎಂದು ತಿಳಿದುಬಂದಿದೆ. ದೇವನಹಳ್ಳಿ ತಾಲ್ಲೂಕಿನ ಬೀರಸಂದ್ರದ ಬಳಿ ಇರುವ ಫಾಕ್ಸ್ ಕಾನ್ ಕಂಪನಿಯ ಬಾತ್ರೂಮ್ನ ಕಸದ ಬುಟ್ಟಿಯಲ್ಲಿ ನವಜಾತ ಶಿಶು ಶವ ಕಂಡು ಸಿಬ್ಬಂದಿ ಶಾಕ್ ಆಗಿದ್ದಾರೆ.
ಶೌಚಾಲಯಕ್ಕೆ ಹೋದಾಗ ಆಕಸ್ಮಿಕವಾಗಿ ಹೊಟ್ಟೆಯಿಂದ ಹೊರಬಂದಿದ್ದ ನವಜಾತ ಶಿಶುವನ್ನು ಗಾಬರಿಯಲ್ಲಿ ತಾಯಿಯೇ ಕೊಂದು ಕಸದ ಬುಟ್ಟಿಗೆ ಎಸೆದಿದ್ದಾಳೆ ಎನ್ನಲಾಗುತ್ತಿದೆ. ಮದುವೆಯಾಗದೇ ಗರ್ಭಿಣಿಯಾಗಿದ್ದ ಮಹಿಳೆ ಭಯಬಿದ್ದು ಮಗುವಿನ ಜೀವ ತೆಗೆದಿದ್ದಾಳೆ ಎನ್ನಲಾಗುತ್ತಿದೆ. ನವಜಾತ ಶಿಶುವಿನ ಕತ್ತು ಕೊಯ್ದು ಕಸದ ಬುಟ್ಟಿಗೆ ಎಸೆದು ಹೊರಬಂದ ಮಹಿಳೆ ಯಾರಿಗೂ ವಿಚಾರ ತಿಳಿಸಿಲ್ಲ. ಈ ವೇಳೆ ಬೇರೊಬ್ಬ ಮಹಿಳೆ ಶೌಚಾಲಯಕ್ಕೆ ಹೋದಾಗ ಈ ಘಟನೆ ಬೆಳಕಿಗೆ ಬಂದಿದೆ.
ಪೊಲೀಸರ ತನಿಖೆಯಿಂದ ಮಹಿಳೆ ಪತ್ತೆ
ಬಾತ್ ರೂಮ್ನ ಕಸದ ಬುಟ್ಟಿಯಲ್ಲಿ ಭ್ರೂಣ ಕಂಡು ಬೆಚ್ಚಿಬಿದ್ದ ಮಹಿಳೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ವಿಶ್ವನಾಥಪುರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತನಿಖೆ ವೇಳೆ ಅಲ್ಲೇ ರೇಣುಕಾ ಎಂಬಾಕೆಯೇ ನವಜಾತ ಶಿಶುವನ್ನು ಕೊಂದಿದ್ದಾಳೆ ಎನ್ನಲಾಗ್ತಿದೆ.
ಫಾಕ್ಸ್ ಕಾನ್ ಕಂಪನಿಯಲ್ಲಿ ರೇಣುಕಾ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದಾರೆ. ತಕ್ಷಣ ಆರೋಪಿಯನ್ನು ವಶಕ್ಕೆ ಪಡೆದು ಆಸ್ಪತ್ರೆಗೆ ದಾಖಲಿಸಿರುವ ಪೊಲೀಸರು, ಆರೋಪಿ ವಿರುದ್ಧ FIR ದಾಖಲಿಸಿ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.
Bengaluru Crime news: ಬೆಂಗಳೂರಿನ ಮನೆಯಲ್ಲಿ ದಂಪತಿ ಶವಗಳು ಪತ್ತೆ; ಕೊಲೆ ಮಾಡಿ ಆತ್ಮಹತ್ಯೆ ಶಂಕೆ