ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಉಚಿತ ಟ್ಯೂಷನ್ ನೀಡುವುದಾಗಿ ಹೇಳಿ ಲೈಂಗಿಕ ಕಿರುಕುಳ: ಉಪನ್ಯಾಸಕನನ್ನು ಥಳಿಸಿ ಮೆರವಣಿಗೆ ನಡೆಸಿದ ವಿದ್ಯಾರ್ಥಿಗಳು

ವಿದ್ಯಾರ್ಥಿನಿಯೊಬ್ಬಳಿಗೆ ಉಚಿತ ಟ್ಯೂಷನ್ ಕೊಡಿಸುವುದಾಗಿ ಹೇಳಿ ಲೈಂಗಿಕ ಕಿರುಕುಳ ನೀಡಿದ ಉಪನ್ಯಾಸಕನನ್ನು ಥಳಿಸಿ ಮೆರವಣಿಗೆ ನಡೆಸಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ಪಶ್ಚಿಮ ಬಂಗಾಳದ ಗೋಬರ್ದಂಗ ಹಿಂದೂ ಕಾಲೇಜಿನ ಅತಿಥಿ ಉಪನ್ಯಾಸಕನ ವಿರುದ್ಧ ಗೋಬರ್ದಂಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು, ಬಂಧಿಸಲಾಗಿದೆ.

ಮೊಟ್ಟೆಯಿಂದ ಹೊಡೆದು ಶೂ ಹಾರ ಹಾಕಿ ಉಪನ್ಯಾಸಕನ ಮೆರವಣಿಗೆ

ಸಂಗ್ರಹ ಚಿತ್ರ -

ಪಶ್ಚಿಮ ಬಂಗಾಳ: ವಿದ್ಯಾರ್ಥಿಯೊಬ್ಬಳಿಗೆ ಲೈಂಗಿಕ ಕಿರುಕುಳ (Physical abuse case) ನೀಡಿದ ಆರೋಪದಲ್ಲಿ ಉಪನ್ಯಾಸಕನೊಬ್ಬನಿಗೆ (lecturer ) ಥಳಿಸಿ ಮೆರವಣಿಗೆ ನಡೆಸಿ ಪೊಲೀಸರಿಗೊಪ್ಪಿಸಿದ ಘಟನೆ ಪಶ್ಚಿಮ ಬಂಗಾಳದಲ್ಲಿ (west bengal crime) ನಡೆದಿದೆ. ಗೋಬರ್ದಂಗ ಹಿಂದೂ ಕಾಲೇಜಿನ ಅತಿಥಿ ಉಪನ್ಯಾಸಕ ಸಂದೀಪ್ ದತ್ತ ವಿದ್ಯಾರ್ಥಿಯೊಬ್ಬಳಿಗೆ ಉಚಿತ ಟ್ಯೂಷನ್ ಕೊಡಿಸುವುದಾಗಿ ಭರವಸೆ ನೀಡಿ ಲೈಂಗಿಕ ಸಂಬಂಧ ಬೆಳೆಸಲು ಒತ್ತಾಯಿಸಿದ್ದನು. ಈ ಕುರಿತು ವಿದ್ಯಾರ್ಥಿನಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಉಪನ್ಯಾಸಕನಿಗೆ ಮೊಟ್ಟೆಯಿಂದ ಹೊಡೆದು, ಶೂ ಹಾರ ಹಾಕಿ ಥಳಿಸಿ ಕಾಲೇಜ್ ಕ್ಯಾಂಪಸ್ ನಲ್ಲಿ ಮೆರವಣಿಗೆ ನಡೆಸಿ ಪೊಲೀಸರಿಗೆ ಒಪ್ಪಿಸಲಾಗಿದೆ.

ಗೋಬರ್ದಂಗ ಹಿಂದೂ ಕಾಲೇಜಿನಲ್ಲಿ ಭೂಗೋಳಶಾಸ್ತ್ರ ಉಪನ್ಯಾಸಕನಾಗಿದ್ದ ಸಂದೀಪ್ ದತ್ತ ವಿರುದ್ಧ ಲೈಂಗಿಕ ಕಿರುಕುಳ ಮತ್ತು ಅನುಚಿತ ವರ್ತನೆಯ ಆರೋಪಗಳು ಕೇಳಿ ಬಂದಿದ್ದು, ಬಳಿಕ ವಿದ್ಯಾರ್ಥಿಗಳು ಆತನಿಗೆ ಮೊಟ್ಟೆ, ಪೊರಕೆ ಕೋಲುಗಳಿಂದ ಹೊಡೆದು, ಶೂ ಹಾರ ಹಾಕಿದರು. ಕ್ಯಾಂಪಸ್‌ನಾದ್ಯಂತ ಮೆರವಣಿಗೆ ನಡೆಸಿದರು.

Nelamangala News: ಕರ್ತವ್ಯದ ವೇಳೆಯೇ ಪಿಡಿಒಗಳ ಎಣ್ಣೆ ಪಾರ್ಟಿ; ಕ್ಯಾಮೆರಾ ನೋಡ್ತಿದ್ದಂಗೆ ಕಾಲ್ಕಿತ್ತ ಅಧಿಕಾರಿಗಳು! Watch Video

ಅನಂತರ ಗೋಬರ್ದಂಗ ಪೊಲೀಸ್ ಠಾಣೆಯಲ್ಲಿ ವಿದ್ಯಾರ್ಥಿಗಳು ಔಪಚಾರಿಕ ದೂರು ದಾಖಲಿಸಿ ಉಪನ್ಯಾಸಕನನ್ನು ಪೊಲೀಸರಿಗೆ ಒಪ್ಪಿಸಿದರು. ಬಳಿಕ ಪೊಲೀಸರು ಆತನನ್ನು ಬಂಧಿಸಿದ್ದಾರೆ.



ಮನೆಯಲ್ಲಿ ಉಚಿತವಾಗಿ ಟ್ಯೂಷನ್ ಕೊಡಿಸುವುದಾಗಿ ಹೇಳಿದ ಆರೋಪಿಯು ತನ್ನೊಂದಿಗೆ ಸಂಬಂಧ ಬೆಳೆಸುವಂತೆ ಒತ್ತಾಯಿಸಿದ್ದಾನೆ. ನನಗೆ ಹೆಚ್ಚುವರಿ ಟ್ಯೂಷನ್ ಅಗತ್ಯವಿಲ್ಲದ ಕಾರಣ ನಾನು ಆತನ ಎಲ್ಲಾ ಪ್ರಸ್ತಾಪಗಳನ್ನು ತಿರಸ್ಕರಿಸಿದೆ. ತರಗತಿಯ ಉಪನ್ಯಾಸಗಳನ್ನು ನಾನು ಸುಲಭವಾಗಿ ಅರ್ಥಮಾಡಿಕೊಳ್ಳಬಲ್ಲೆ ಎಂದು ಹೇಳಿದೆ. ಆದರೆ ಆತ ಖಾಸಗಿ ಟ್ಯೂಷನ್ ಅವಧಿಗಳಿಗೆ ಹಾಜರಾಗಲು ನಿರಾಕರಿಸಿದರೆ ತನ್ನನ್ನು ಫೇಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ವಿದ್ಯಾರ್ಥಿನಿ ದೂರಿನಲ್ಲಿ ತಿಳಿಸಿದ್ದಾಳೆ.

ಮನೆ ಕಟ್ಟಲು 15 ಲಕ್ಷ ಸಾಲ; ಫೈನಾನ್ಸ್‌ನವರ ಕಾಟಕ್ಕೆ ಬೇಸತ್ತು ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ

ಅತಿಥಿ ಉಪನ್ಯಾಸಕನನ್ನು ವಿದ್ಯಾರ್ಥಿಗಳು ಹೊಡೆದು ಮೆರವಣಿಗೆ ನಡೆಸಿರುವ ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ. ಇದರಲ್ಲಿ ವಿದ್ಯಾರ್ಥಿಗಳು ಆತನನ್ನು ಸುತ್ತುವರಿದು ಮೊಟ್ಟೆಗಳನ್ನು ಎಸೆದು, ಶೂಗಳಿಂದ ಮಾಡಿದ ಹಾರವನ್ನು ತೊಡಿಸಿ ಮೆರವಣಿಗೆ ಮಾಡಿರುವುದನ್ನು ಕಾಣಬಹುದಾಗಿದೆ. ವಿದ್ಯಾರ್ಥಿಗಳು ನೀಡಿರುವ ದೂರಿನ ಆಧಾರದಲ್ಲಿ ಪೊಲೀಸರು ಉಪನ್ಯಾಸಕನನ್ನು ಬಂಧಿಸಿದ್ದು, ತನಿಖೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.