Nelamangala News: ಕರ್ತವ್ಯದ ವೇಳೆಯೇ ಪಿಡಿಒಗಳ ಎಣ್ಣೆ ಪಾರ್ಟಿ; ಕ್ಯಾಮೆರಾ ನೋಡ್ತಿದ್ದಂಗೆ ಕಾಲ್ಕಿತ್ತ ಅಧಿಕಾರಿಗಳು! Watch Video
ನೆಲಮಂಗಲ ತಾಲೂಕಿನ ಡಾಬಸ್ ಪೇಟೆ ಬಳಿಯ ಸಿದ್ದರಬೆಟ್ಟದಲ್ಲಿ ಅಧಿಕಾರಿಗಳು ಮೋಜು ಮಸ್ತಿಯಲ್ಲಿ ತೋಡಗಿರುವುದು ಬೆಳಕಿಗೆ ಬಂದಿದ್ದು, ಈ ಬಗ್ಗೆ ಸ್ಥಳೀಯರು ವಿಡಿಯೊ ಮಾಡುತ್ತಿದ್ದಂತೆ ಸ್ಥಳದಿಂದ ಅಧಿಕಾರಿಗಳು ಪರಾರಿಯಾಗಿದ್ದಾರೆ. ಧಾರ್ಮಿಕ ಸ್ಥಳದಲ್ಲಿ ಅಧಿಕಾರಿಗಳು ಈ ರೀತಿಯ ವರ್ತನೆ ತೋರಿರುವುದು ಸಾರ್ವಜನಿಕರ ಆಕ್ರೋಶಕ್ಕ ಕಾರಣವಾಗಿದೆ.
-
ನೆಲಮಂಗಲ: ಪಂಚಾಯಿತಿ ಕೆಲಸ ಬಿಟ್ಟು ಪಿಡಿಒಗಳು ಎಣ್ಣೆ ಪಾರ್ಟಿ (PDOs alcohol party) ಮಾಡಿರುವುದು ನೆಲಮಂಗಲ ತಾಲೂಕಿನ ಸಿದ್ದರ ಬೆಟ್ಟದ ತಪ್ಪಲಿನಲ್ಲಿ ನಡೆದಿದೆ. ಕರ್ತವ್ಯದ ಸಮಯದಲ್ಲಿ ಕಚೇರಿಯಲ್ಲಿ ಇರದೆ ಗುಂಡು ತುಂಡು ಪಾರ್ಟಿ ಮಾಡಿರುವ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.

ಡಾಬಸ್ ಪೇಟೆ ಪಿಡಿಒ ರವಿಶಂಕರ್, ಪಿಡಿಒ ದಿನೇಶ್, ಶಿವಗಂಗೆ ಪಿಡಿಒ ಗಿರೀಶ್, ಅಗಲಕುಪ್ಪೆ ಪಿಡಿಒ ಹರೀಶ್, ಮರಳಕುಂಟೆ ಪಿಡಿಒ, ಪ್ರಶಾಂತ್ ಸೇರಿ ಸೋಪುರ ಹೋಬಳಿ ಹಾಗೂ ತ್ಯಾಮಗೊಂಡ್ಲು ಹೋಬಳಿಯ ಪಿಡಿಒಗಳು ಪಾರ್ಟಿಯಲ್ಲಿ ಮೋಜು ಮಸ್ತಿ ಮಾಡಿದ್ದಾರೆ.

ಕೆಲಸ ಬಿಟ್ಟು ಅಧಿಕಾರಿಗಳು ಪಾರ್ಟಿ ಮಾಡಿರುವು ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದರಿಂದ ಅಧಿಕಾರಿಗಳ ವಿರುದ್ಧ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.
ಧಾರ್ಮಿಕ ಸ್ಥಳದಲ್ಲಿ ಅಧಿಕಾರಿಗಳು ಈ ರೀತಿಯ ವರ್ತನೆ ತೋರಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದ್ದು, ಪ್ರಕರಣದ ಕುರಿತು ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.