Physical abuse: ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಬೆಂಕಿ ಹಚ್ಚುವುದಾಗಿ ಬೆದರಿಕೆ! ಆಟೋ ಚಾಲಕ ಅರೆಸ್ಟ್
ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಬೆಂಕಿ ಹಚ್ಚಿ ಸುಟ್ಟು ಬಿಡುವುದಾಗಿ ಹೇಳಿದ ಆಟೋ ಚಾಲಕನನ್ನು ಬಂಧಿಸಿರುವ ಘಟನೆ ಒಡಿಶಾದ ಕಟಕ್‌ನಲ್ಲಿ ನಡೆದಿದೆ. ಈ ಘಟನೆ ಆಗಸ್ಟ್ 8 ರಂದು ನಡೆದಿದ್ದು, ಬಾಲಕಿ ಕುಟುಂಬಕ್ಕೆ ಮಾಹಿತಿ ನೀಡಿದ ಬಳಿಕ ಪೊಲೀಸ್ ದೂರು ದಾಖಲಾಗಿ ಆಟೋ ಚಾಲಕನನ್ನು ಬಂಧಿಸಲಾಗಿದೆ.


ಕಟಕ್: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ (Physical abuse) ಎಸಗಿ ಬೆಂಕಿ ಹಚ್ಚುವುದಾಗಿ ಒಡಿಶಾದ (Odisha News) ಆಟೋ ಚಾಲಕನೊಬ್ಬ (Auto driver) ಬೆದರಿಕೆಯೊಡ್ಡಿರುವ ಘಟನೆ ಒಡಿಶಾದ ಕಟಕ್ (Cuttack) ನಲ್ಲಿ ನಡೆದಿದೆ. ಆಗಸ್ಟ್ 8ರಂದು ಬಾಲಕಿ ರಿಕ್ಷಾ ಚಾಲಕನ ಆಟೋದಲ್ಲಿ ಬಾಡಿಗೆಗೆ ಎಂದು ಹೋಗಿದ್ದ ವೇಳೆ ಈ ಘಟನೆ ನಡೆದಿದೆ. ಬಾಲಕಿ ತನ್ನ ಮನೆಯವರಿಗೆ ಮಾಹಿತಿ ನೀಡಿದ ಬಳಿಕ ಪೊಲೀಸರಿಗೆ ದೂರು ನೀಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಆಟೋ ಚಾಲಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪ್ರಾಪ್ತ ಬಾಲಕಿಯು ತನ್ನ ಸ್ನೇಹಿತನೊಂದಿಗೆ ಜಗತ್‌ಪುರದಿಂದ ಬಾದಂಬಾಡಿಗೆ ಆಟೋರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದಳು. ಶಿಖರ್‌ಪುರ ಬಳಿ ಬಂದಾಗ ಹುಡುಗಿ ಆಟೋ ಚಾಲಕನ ಬಳಿ ನೀರು ಇದೆಯೇ ಎಂದು ಕೇಳಿದಳು. ಆತ ನಿರಾಕರಿಸಿದ್ದಾನೆ. ಬಳಿಕ ಅವರು ಆಟೋ ನಿಲ್ಲಿಸಲು ಹೇಳಿದರು. ಆಟೋ ನಿಂತಾಗ ಬಾಲಕಿಯ ಸ್ನೇಹಿತ ನೀರು ತರಲು ಹೋಗಿದ್ದಾನೆ. ಈ ವೇಳೆ ಆಟೋ ಚಾಲಕ ಬಾಲಕಿಯನ್ನು ಅನುಚಿತವಾಗಿ ಸ್ಪರ್ಶಿಸಿದ್ದಾನೆ. ಅಲ್ಲದೆ ವಾಹನದೊಳಗೆ ಅವಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಪ್ರಯತ್ನಿಸಿದನು. ಇದಕ್ಕೆ ಬಾಲಕಿಯು ವಿರೋಧಿಸಿದಾಗ, ಆತ ಪೆಟ್ರೋಲ್ ಸುರಿದು ಜೀವಂತವಾಗಿ ಸುಡುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ ಎಂದು ಬಾಲಕಿ ದೂರಿನಲ್ಲಿ ತಿಳಿಸಿದ್ದಾಳೆ.
ಈ ಸುದ್ದಿಯನ್ನೂ ಓದಿ: Physical Abuse Case: ಮಸೀದಿಯಲ್ಲಿ 5 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಮೌಲ್ವಿ ಬಂಧನ
ಈ ಕುರಿತು ಕೆಲವು ದಿನಗಳ ಬಳಿಕ ಆಕೆ ತನ್ನ ಮನೆಯವರಿಗೆ ತಿಳಿಸಿದ್ದಾಳೆ. ಅವರು ತಕ್ಷಣ ಚೌಲಿಯಗಂಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ಆರೋಪಿಯನ್ನು ಹುಡುಕಲು ಪೊಲೀಸರು ಹಲವು ತಂಡಗಳನ್ನು ರಚಿಸಿದರು. ಬಳಿಕ ಆತನನ್ನು ಬಂಧಿಸಲಾಯಿತು. ಬಾಲಕಿಯ ವೈದ್ಯಕೀಯ ಪರೀಕ್ಷೆಯನ್ನು ಮಾಡಲಾಯಿತು. ಸಿಸಿಟಿವಿ ಪರಿಶೀಲನೆಯ ಬಳಿಕ ಆಟೋ ಮಾಹಿತಿ ಸಿಕ್ಕಿದ್ದರಿಂದ ಆರೋಪಿಯನ್ನು ಬಂಧಿಸುವುದು ಸುಲಭವಾಯಿತು, ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಕಟಕ್ ಉಪ ಪೊಲೀಸ್ ಆಯುಕ್ತ ಖಿಲಾರಿ ರಿಷಿಕೇಶ್ ದ್ನ್ಯಾಂಡಿಯೊ ತಿಳಿಸಿದ್ದಾರೆ.