ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಬೋಳು ತಲೆಯೇ ಈತನ ಪ್ಲಸ್‌ ಪಾಯಿಂಟ್‌; ವಿಗ್ ಧರಿಸಿ ಪೊಲೀಸರನ್ನು ಯಾಮಾರಿಸುತ್ತಿದ್ದ ಕುಖ್ಯಾತ ಕ್ರಿಮಿನಲ್ ಸಿಕ್ಕಿಬಿದ್ದಿದ್ದು ಹೇಗೆ?

ಹಲವು ಅಪರಾಧ ಪ್ರಕರಣದಲ್ಲಿ ಭಾಗಿಯಾಗಿದ್ದ ಜಿತೇಂದ್ರ ಅಲಿಯಾಸ್ ಜಿತು ಎಂಬ ಕುಖ್ಯಾತ ಆರೋಪಿಯನ್ನು ಬಂಧಿಸುವಲ್ಲಿ ಇದೀಗ ಪೊಲೀಸರು ಯಶಸ್ವಿಯಾಗಿದ್ದಾರೆ. ಉತ್ತರ ಪ್ರದೇಶ, ದೆಹಲಿ ಮತ್ತು ಹರಿಯಾಣದಲ್ಲಿ ಒಟ್ಟು 28 ಪ್ರಕರಣಗಳು ಈತನ ವಿರುದ್ಧ ದಾಖಲಾಗಿದ್ದವು.

ಅಪರಾಧ ಮಾಡಿ ವಿಗ್ ಧರಿಸುತ್ತಿದ್ದ ಕುಖ್ಯಾತ ಕ್ರಿಮಿನಲ್ ಅರೆಸ್ಟ್

ಜಿತೇಂದ್ರ ಅಲಿಯಾಸ್ ಜಿತು -

Profile
Pushpa Kumari Nov 27, 2025 9:39 PM

ದೆಹಲಿ, ನ. 27: ಹಲವು ಅಪರಾಧ ಪ್ರಕರಣದಲ್ಲಿ ಭಾಗಿಯಾಗಿದ್ದ ಜಿತೇಂದ್ರ ಅಲಿಯಾಸ್ ಜಿತು ಎಂಬ ಕುಖ್ಯಾತ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಉತ್ತರ ಪ್ರದೇಶ, ದೆಹಲಿ ಮತ್ತು ಹರಿಯಾಣದಲ್ಲಿ ಒಟ್ಟು 28 ಪ್ರಕರಣಗಳು ಈತನ ವಿರುದ್ಧ ದಾಖಲಾಗಿದ್ದವು. ಅಪರಾಧ ಎಸಗಿದ ನಂತರ ಪೊಲೀಸರ ಕೈಗೆ ಸಿಗದಂತೆ ತನ್ನ ಬೋಳಾದ ತಲೆಗೆ ವಿಗ್ ಧರಿಸಿ ವೇಷ ಬದಲಾಯಿಸುತ್ತಿದ್ದ. ಹೀಗಾಗಿ ಪೊಲೀಸರಿಗೆ ಈತನನ್ನು ಪತ್ತೆ ಮಾಡಲು ಸಾಧ್ಯವಾಗಿರಲಿಲ್ಲ.‌ ಸದ್ಯ ಕುಖ್ಯಾತ ಹಿಸ್ಟರಿ- ಶೀಟರ್‌ನನ್ನು ಉತ್ತರ ಪ್ರದೇಶದ ಬುಲಂದ್‌ಶಹರ್ ಪೊಲೀಸರು ಬಂಧಿಸಿದ್ದಾರೆ.

ಮೈನ್‌ಪುರಿಯಲ್ಲಿ ವಾಸ ಮಾಡುತ್ತಿದ್ದ ಜಿತೇಂದ್ರ, ತನ್ನ ಬೋಳಾದ ತಲೆಯನ್ನು ವಂಚನೆಯ ಸಾಧನವಾಗಿ ಬಳಕೆ ಮಾಡುತ್ತಿದ್ದ. ಹೆಚ್ಚಿನ ಅಪರಾಧಗಳನ್ನು ಆತ ಬೋಳು ತಲೆಯಾಗಿದ್ದಾಗ ಮಾಡುತ್ತಿದ್ದು ಅಪರಾಧ ಬಳಿಕ‌ ತನ್ನ ತಲೆಯ ಮೇಲೆ ವಿಗ್ ಧರಿಸಿ ಬದಲಾಯಿಸಿಕೊಳ್ಳುತ್ತಿದ್ದ. ಪೊಲೀಸ್ ಅಧಿಕಾರಿಗಳ ಪ್ರಕಾರ, ಸಿಸಿಟಿವಿ ದೃಶ್ಯದಲ್ಲಿ ಪರಿಶೀಲನೆ ಮಾಡುತ್ತಿದ್ದಾಗ ಈತನ ಎರಡು ವಿಭಿನ್ನ ರೂಪಗಳ ಕಂಡುಬರುತ್ತಿದ್ದರಿಂದ ಆತನ ಗುರುತನ್ನು ಖಚಿತಪಡಿಸಿ ಬಂಧಿಸಲು ಸಾಧ್ಯವಾಗುತ್ತಿರಲಿಲ್ಲ. ಈ ಕಾರಣಕ್ಕಾಗಿಯೇ ಆತ ಹಲವು ಅಪರಾಧ ಕೃತ್ಯದಲ್ಲಿ ಭಾಗಿಯಾಗುತ್ತಿದ್ದ.

ಮಹಿಳೆ ಮೇಲೆ ದಾಳಿ ಮಾಡಿದ ಸಾಕು ನಾಯಿ; ಸಂತ್ರಸ್ತೆಗೇ ಕಪಾಳ ಮೋಕ್ಷ ಮಾಡಿದ ಮಾಲಕಿ!

ಮಂಗಳವಾರ ರಾತ್ರಿ, ಸಿಕಂದರಾಬಾದ್ ಪೊಲೀಸರು ದಂಕೌರ್ ರಸ್ತೆಯ ಪವರ್ ಹೌಸ್ ಬಳಿ ನಿಯಮಿತ ತಪಾಸಣೆ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಬೈಕ್ ಸವಾರಿ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳ ಬಗ್ಗೆ ಅನುಮಾನ ಬಂದ ಪೊಲೀಸರು ನಿಲ್ಲಿಸುವಂತೆ ಸೂಚಿಸಿ ದರು. ಈ ಸಂದರ್ಭದಲ್ಲಿ ಪೊಲೀಸರ ವಿರುದ್ದವೇ ಅವರು ಗುಂಡಿನ ದಾಳಿ ನಡೆಸಿದ್ದಾರೆ. ಪೊಲೀಸರು ಕೂಡ ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದಾರೆ. ಇದರ ಪರಿಣಾಮವಾಗಿ ಅವರಲ್ಲಿ ಒಬ್ಬರಿಗೆ ಗಾಯವಾಗಿದ್ದು ಇನ್ನೊಬ್ಬ ಪರಾರಿಯಾಗಿದ್ದ.

ವಿಚಾರಣೆಯ ನಂತರ ಗಾಯಗೊಂಡ ವ್ಯಕ್ತಿಯನ್ನು ಮೈನ್‌ಪುರಿಯ ನಿವಾಸಿ ಜಿತೇಂದ್ರ ಅಲಿಯಾಸ್ ಜಿತು ಎಂದು ತಿಳಿದು ಬಂದಿದೆ. ಈತ ಅಪರಾಧಗಳನ್ನು ಮಾಡಲು‌ ‌ ವಿಗ್ ಧರಿಸುತ್ತಿದ್ದನು ಎಂದು ಬಹಿರಂಗವಾಗಿದೆ.‌ ಬಂಧಿತ ಆರೋಪಿಯಿಂದ ಪೊಲೀಸರು ಪಿಸ್ತೂಲ್‌, ಕಳುವಾದ ನಗದು, ಬೈಕ್, ಮತ್ತು ವೇಷ ಮರೆಸಲು ಬಳಸುತ್ತಿದ್ದ ವಿಗ್ ಅನ್ನು ವಶಪಡಿಸಿಕೊಂಡಿದ್ದಾರೆ.