ದೆಹಲಿ ಪೊಲೀಸ್ ಕಮಾಂಡೋ ಹತ್ಯೆ ಕೇಸ್; ಕೊಲೆಗೂ ಮುನ್ನ ವಿಡಿಯೋ ಮಾಡಿದ್ದ ಪಾಪಿ ಪತಿ
ದೆಹಲಿಯ ಪೊಲೀಸ್ ಇಲಾಖೆಯ SWAT ಟೀಮ್‌ನಲ್ಲಿ ಕಮಾಂಡೊ ಆಗಿದ್ದ 27 ವರ್ಷದ ನಾಲ್ಕು ತಿಂಗಳ ಗರ್ಭಿಣಿ ಮಹಿಳೆಯನ್ನು ಪತಿಯೇ ಕ್ರೂರವಾಗಿ ಹತ್ಯೆ ಮಾಡಿದ ಪ್ರಕರಣದಲ್ಲಿ ಮತ್ತೊಂದು ಬೆಚ್ಚಿಬೀಳಿಸುವ ಸಂಗತಿ ಬೆಳಕಿಗೆ ಬಂದಿದೆ. ಪತ್ನಿ ತನ್ನ ಸಹೋದರಿಯೊಂದಿಗೆ ಫೋನ್‌ನಲ್ಲಿ ಮಾತನಾಡುತ್ತಿದ್ದ ವೇಳೆ, ಆರೋಪಿ ಅಂಕುರ್ ಚೌಧರಿ ಡಂಬ್ಬೆಲ್‌ನಿಂದ ಹಲ್ಲೆ ಆರಂಭಿಸಿದ್ದು, ನಂತರ ಫೋನ್ ಕಿತ್ತುಕೊಂಡು “ಈ ಮಾತನ್ನು ರೆಕಾರ್ಡ್ ಮಾಡಿಕೊ, ಪೊಲೀಸರಿಗೆ ಸಾಕ್ಷಿಯಾಗುತ್ತದೆ. ನಾನು ನಿನ್ನ ತಂಗಿಯನ್ನು ಕೊಲ್ಲುತ್ತಿದ್ದೇನೆ” ಎಂದು ಹೇಳಿದ್ದ ಎನ್ನಲಾಗಿದೆ.
ಕಮಾಂಡೋ ಪತ್ನಿಯನ್ನು ಕೊಂದ ಪತಿ -
ನವದಿಲ್ಲಿ: ದೆಹಲಿಯ ಪೊಲೀಸ್ ಇಲಾಖೆಯ ವಿಶೇಷ ಘಟಕವಾದ SWAT ಟೀಮ್‌ನಲ್ಲಿ ಕಮಾಂಡೊ ( SWAT Commando) ಆಗಿ ಕಾರ್ಯನಿರ್ವಹಿಸುತ್ತಿದ್ದ 27 ವರ್ಷದ ನಾಲ್ಕು ತಿಂಗಳ ಗರ್ಭಿಣಿ ಮಹಿಳೆಯನ್ನು (Pregnant Women) ಪತಿಯೇ ಕ್ರೂರವಾಗಿ ಹತ್ಯೆ(Death) ಮಾಡಿದ ಘಟನೆಗೆ ಸಂಬಂಧಿಸಿದಂತೆ ಮತ್ತೊಂದು ಅಘಾತಕಾರಿ ವಿಷಯ ಹೊರಬಿದ್ದಿದೆ. ತಾನು ತನ್ನ ಸಹೋದರಿಯೊಂದಿಗೆ ಫೋನ್‌ನಲ್ಲಿ ಮಾತನಾಡುತ್ತಿದ್ದಾಗಲೇ, ಅಂಕುರ್ ಡಂಬ್ಬೆಲ್‌ನಿಂದ ಆಕೆಗೆ ಹೊಡೆಯಲು ಪ್ರಾರಂಭಿಸಿದ್ದು, ಅಂಕುರ್ ಫೋನ್ ಕಿತ್ತುಕೊಂಡು, ನಾನು ಮಾತಾನಾಡುವುದನ್ನು ರೆಕಾರ್ಡ್ ಮಾಡಿಕೊ, ಪೊಲೀಸರಿಗೆ ಸಾಕ್ಷಿಯಾಗುತ್ತದೆ. ನಾನು ನಿನ್ನ ತಂಗಿಯನ್ನು ಕೊಲ್ಲುತ್ತಿದ್ದೇನೆ ಎಂದು ಹೇಳಿದ ಎಂದು ಹೇಳಿದ್ದ ಎನ್ನಲಾಗಿದೆ. ಸದ್ಯ ಕೇಂದ್ರ ಸರ್ಕಾರದ ರಕ್ಷಣಾ ಸಚಿವಾಲಯದಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದ ಪ್ರಕರಣದ ಆರೋಪಿ ಅಂಕುರ್ ಚೌಧರಿಯನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.
ಗರ್ಭಿಣಿ ಮಗಳ ಹತ್ಯೆ: ತಂದೆಯ ಆಕ್ರೋಶ
ನಾಲ್ಕು ತಿಂಗಳ ಗರ್ಭಿಣಿಯಾಗಿದ್ದ ಪತ್ನಿಯನ್ನೇ ಪತಿ ಹತ್ಯೆ ಮಾಡಿದ್ದಾನೆ ಎಂದು ಕಾಜಲ್ ತಂದೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ನಮ್ಮ ಮಗಳು ಗರ್ಭಿಣಿಯಾಗಿದ್ದಳು. ಅಳಿಯ ಅಂಕುರ್ ನಮ್ಮ ಮಗಳನ್ನಷ್ಟೇ ಅಲ್ಲ, ಆಕೆಯ ಗರ್ಭದಲ್ಲಿ ಬೆಳೆಯುತ್ತಿದ್ದ ಮಗುವನ್ನೂ ಕೊಂದಿದ್ದಾನೆ. ಇದು ಎರಡು ಕೊಲೆಗಳಿಗೆ ಸಮಾನ,” ಎಂದು ಅವರು ಕಿಡಿಕಾರಿದ್ದಾರೆ.
ಪೊಲೀಸರ ಪ್ರಕಾರ, ಜನವರಿ 22ರಂದು ರಾತ್ರಿ ಸುಮಾರು 10 ಗಂಟೆಯ ವೇಳೆಗೆ ಹಣಕಾಸಿನ ವಿಚಾರವಾಗಿ ಪತಿ–ಪತ್ನಿ ನಡುವೆ ಜಗಳ ನಡೆದಿದೆ. ಈ ಸಂದರ್ಭ ಕೋಪೋದ್ರಿಕ್ತನಾದ ಅಂಕುರ್ ಡಂಬಲ್ಸ್‌ನಿಂದ ಪತ್ನಿಯ ತಲೆಗೆ ಹೊಡೆದಿದ್ದು, ಆಕೆ ಗಂಭೀರವಾಗಿ ಗಾಯಗೊಂಡಿದ್ದಾರೆ.
ಡಂಬಲ್ಸ್‌ನಿಂದ ಹಲ್ಲೆ, ನಂತರ ಬಂಧನ
ಪತ್ನಿ ಕಾಜಲ್ ಚೌಧರಿ ಮೇಲೆ ಪತಿ ಅಂಕುರ್ ಡಂಬಲ್ಸ್‌ನಿಂದ ತೀವ್ರ ಹಲ್ಲೆ ನಡೆಸಿದ್ದು, ತಲೆಗೆ ಬಲವಾದ ಪೆಟ್ಟು ಬಿದ್ದ ಪರಿಣಾಮ ಆಕೆ ಗಂಭೀರವಾಗಿ ಗಾಯಗೊಂಡಿದ್ದರು. ಹಲ್ಲೆಯ ಮಾಡಿದ ಬಳಿಕ ಕಾಜಲ್ ಅವರನ್ನು ಪತಿಯೇ ಮೊದಲು ಮೋಹನ್ ಗಾರ್ಡನ್ ಪ್ರದೇಶದಲ್ಲಿರುವ ತಾರಕ್ ಆಸ್ಪತ್ರೆಗೆ ದಾಖಲಿಸಿದ್ದಾನೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಗಾಜಿಯಾಬಾದ್‌ನ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಜನವರಿ 27ರಂದು ಕಾಜಲ್ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣ ಸಂಬಂಧ ಅಂಕುರ್‌ನ್ನು ಪೊಲೀಸರು ಬಂಧಿಸಿದ್ದು, ಸ್ಥಳೀಯ ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
Assault Case: ಮದುವೆ ರಿಸೆಪ್ಷನ್‌ಗೆ ತೆರಳುತ್ತಿದ್ದ ವರನಿಗೆ ಚೂರಿಯಿಂದ ಇರಿತ; ವಧುವಿನ ಹಳೆ ಲವರ್ ಕೃತ್ಯ?
ನಿನ್ನ ತಂಗಿಯನ್ನು ಕೊಲ್ಲುತ್ತಿದ್ದೇನೆ ಎಂದಿದ್ದ ಅಂಕುರ್
ಹಣಕಾಸು ಹಾಗೂ ವರದಕ್ಷಿಣೆ ವಿಚಾರಕ್ಕೆ ಸಂಬಂಧಿಸಿದಂತೆ ಪತಿ–ಪತ್ನಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು ಎಂದು ಕಾಜಲ್ ಪೋಷಕರು ಆರೋಪಿಸಿದ್ದಾರೆ. ಹಿಂದೆ ಹಲವು ಬಾರಿ ಅಂಕುರ್ ಪತ್ನಿ ಮೇಲೆ ಹಲ್ಲೆ ನಡೆಸಿದ್ದಾನೆ ಎಂಬ ಆರೋಪವೂ ಕೇಳಿಬಂದಿದೆ. ಅಲ್ಲದೇ ಘಟನೆಯ ದಿನ ಅಂಕುರ್, ಕಾಜಲ್ ಅಣ್ಣನಿಗೆ ಕರೆ ಮಾಡಿ “ನಿನ್ನ ತಂಗಿಯನ್ನು ಕೊಲ್ಲುತ್ತಿದ್ದೇನೆ, ಈ ಕರೆ ರೆಕಾರ್ಡ್ ಮಾಡಿಕೊ” ಎಂದು ಹೇಳಿದ್ದಾನೆ ಎಂದು ಆರೋಪಿಸಲಾಗಿದೆ. ನಂತರ ಕಾಜಲ್ ಅವರ ಚೀರಾಟ ಕೇಳಿಸಿಕೊಂಡಿದ್ದು, ಕರೆ ಕಟ್ ಆಗಿದೆ. ಐದು ನಿಮಿಷಗಳ ಬಳಿಕ ಮರುಕರೆ ಮಾಡಿ “ಅವಳು ಸತ್ತಿದ್ದಾಳೆ, ಆಸ್ಪತ್ರೆಗೆ ಬಾ” ಎಂದು ಹೇಳಿದ್ದಾನೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಪ್ರೀತಿಸಿ ಮದುವೆಯಾಗಿದ್ದರು
ಕಾಜಲ್ ಮತ್ತು ಅಂಕುರ್ 2022ರಲ್ಲಿ ಪರಿಚಯಗೊಂಡು ಪ್ರೀತಿಯಲ್ಲಿ ಬಿದ್ದಿದ್ದು, ಕುಟುಂಬಗಳ ಒಪ್ಪಿಗೆಯೊಂದಿಗೆ ಮದುವೆಯಾಗಿದ್ದರು. ಕಾಜಲ್ 2023ರಲ್ಲಿ ದೆಹಲಿ ಪೊಲೀಸ್ ಇಲಾಖೆಯ SWAT ಟೀಮ್‌ಗೆ ಕಮಾಂಡೊ ಆಗಿ ನೇಮಕಗೊಂಡಿದ್ದರು. ಆದರೆ ಕೌಟುಂಬಿಕ ಕಲಹ ಕೊನೆಗೆ ಭೀಕರ ಕೊಲೆಯಲ್ಲಿ ಅಂತ್ಯವಾಗಿದ್ದು, ಗಂಡ-ಹೆಂಡಿರ ಜಗಳದಲ್ಲಿ ಕೂಸು ಬಡವಾಯಿತು ಅನ್ನುವಾಗೇ ಏನೂ ಅರಿಯದ ಒಂದೂವರೆ ವರ್ಷದ ಪುಟ್ಟ ಕಂದಮ್ಮ ಅನಾಥವಾಗಿದೆ.