ಹಸು ಮಾರಾಟ ಮಾಡಲು ಒಪ್ಪದ ಪತ್ನಿಯನ್ನೇ ಕೊಂದ ಪತಿ; ವ್ಯಕ್ತಿಯ ಕೌರ್ಯಕ್ಕೆ ಬೆಚ್ಚಿಬಿದ್ದ ದೇಶ
Rajasthan Horror: ಪತ್ನಿ ಹಸು ಮಾರಾಟ ಮಾಡಲು ಒಪ್ಪದ ಕಾರಣಕ್ಕೆ ಮಧ್ಯವಯಸ್ಕನೊಬ್ಬ ಪತ್ನಿಯಲ್ಲೇ ಹತ್ಯೆ ಮಾಡಿದ ಭೀಕರ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಕೊಲೆ ಮಾಡಿದಾತನನ್ನು 56 ವರ್ಷದ ಚುನ್ನಿಲಾಲ್ ಕುಮಾವತ್ ಎಂದು ಗುರುತಿಸಲಾಗಿದ್ದು, ಕೃತ್ಯದ ಬಳಿಕ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ.
ಚಾಟ್‌ಜಿಪಿಟಿ ರಚಿತ ಚಿತ್ರ -
ಜೈಪುರ, ಅ. 5: ಸಣ್ಣಪುಟ್ಟ ಕಾರಣಕ್ಕೂ ಕೊಲೆಯಾಗುವ ಕಾಲಘಟ್ಟದಲ್ಲಿ ನಾವಿದ್ದೇವೆ. 1 ಮಾತು, 10 ರೂಪಾಯಿ ಸಾಲ ಹೀಗೆ ಕ್ಷುಲ್ಲಕ ಎನಿಸುವ ವಿಚಾರಗಳೇ ಹತ್ಯೆಯಂತಹ ಗಂಭೀರ ಅಪರಾಧಕ್ಕೆ ಕಾರಣವಾಗುತ್ತಿದೆ. ಈ ವಿಚಾರ ಈಗ ಪ್ರಸ್ತಾವಿಸಲು ಬಲವಾದ ಕಾರಣವಿದೆ. ಸಾಲ ತೀರಿಸಲು ಹಸು ಮಾರಾಟ ಮಾಡಲು ಮುಂದಾದ ತೀರ್ಮಾನವನ್ನು ಪ್ರಶ್ನಿಸಿದ ಪತ್ನಿಯನ್ನು ವ್ಯಕ್ತಿಯೊಬ್ಬ ಕೊಲೆ ಮಾಡಿದ ಭೀಕರ ಘಟನೆ ರಾಜಸ್ಥಾನದ ಸಿಕಾರ್‌ನಲ್ಲಿ ನಡೆದಿದೆ (Rajasthan Horror). ಪತ್ನಿ ಎನ್ನುವುದನ್ನು ನೋಡದೆ ಆಕೆಯ ಮೇಲೆ ಪಿಕ್‌ಅಪ್ ಹರಿಸಿದ ಪಾಪಿಯ ಕೃತ್ಯಕ್ಕೆ ದೇಶವೇ ಬೆಚ್ಚಿ ಬಿದ್ದಿದೆ.
ಸಿಕಾರ್ ಜಿಲ್ಲೆಯ ಕೊಳಿಡಾ ಗ್ರಾಮದ 56 ವರ್ಷದ ಚುನ್ನಿಲಾಲ್ ಕುಮಾವತ್ ಬುಧವಾರ (ನವೆಂಬರ್ 4) ಸಂಜೆ ಪತ್ನಿ ಚುಂಕಿ ದೇವಿ (52) ಅವರನ್ನು ಹತ್ಯೆಗೈದು ಬಳಿಕ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ.
ಪತ್ನಿಗೆ ಚಾಕುವಿನಿಂದ ಇರಿದು, ಇಟ್ಟಿಗೆಯಿಂದ ತಲೆ ಜಜ್ಜಿ ಕೊನೆಗೆ ಆತ್ಮಹತ್ಯೆಗೆ ಶರಣಾದ ಪಾಪಿ ಪತಿ
ಘಟನೆ ವಿವರ
ಚುನ್ನಿಲಾಲ್ ಕುಮಾವತ್ ಮೈತುಂಬ ಸಾಲ ಮಾಡಿಕೊಂಡಿದ್ದ. ಇದನ್ನು ತೀರಿಸಲು ಹಸುವನ್ನು ಮಾರಾಟ ಮಾಡಲು ಮುಂದಾಗಿದ್ದ. ಇದಕ್ಕೆ ಪತ್ನಿ ಚುಂಕಿ ದೇವಿ ವಿರೋಧಿಸಿದ್ದರು. ಈ ವಿಚಾರದಲ್ಲಿ ಮಾತಿಗೆ ಮಾತು ಬೆಳೆದು ಆರಂಭವಾದ ಜಗಳ ಕೊನೆಗೆ ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಮೂಲಗಳು ತಿಳಿಸಿವೆ.
ಪ್ರಾಥಮಿಕ ವರದಿ ಪ್ರಕಾರ ಚುನ್ನಿಲಾಲ್ 15 ಲಕ್ಷ ರೂಪಾಯಿ ಸಾಲ ಮಾಡಿದ್ದ. ಇದನ್ನು ತೀರಿಸಲು ಮಕ್ಕಳ ಬಳಿ ಸಹಾಯ ಕೇಳಿದ್ದ. ಆದರೆ ಕಡಿಮೆ ಆದಾಯದ ಕಾರಣ ಹೇಳಿ ಅವರು ಹಣ ನೀಡಲು ನಿರಾಕರಿಸಿದ್ದರು. ವೃತ್ತಿಯಲ್ಲಿ ಚಾಲಕನಾಗಿರುವ ಚುನ್ನಿಲಾಲ್ ಬುಧವಾರ ಸಂಜೆ 3ರಿಂದ 4 ಗಂಟೆಗೆ ಮನೆಗೆ ಹಿಂದಿರುಗಿ, ಹಣ ಹೊಂದಿಸಲು ಹಸು ಮಾರಾಟ ಮಾಡುವುದಾಗಿ ತಿಳಿಸಿದ್ದ. ಈ ನಿರ್ಧಾರವನ್ನು ಚುಂಕಿ ದೇವಿ ಬಲವಾಗಿ ವಿರೋಧಿಸಿದರು. ಕೊನೆಗೆ ದಂಪತಿ ಮಧ್ಯೆ ದೊಡ್ಡ ಜಗಳವೇ ನಡೆಯಿತು.
ಪೊಲೀಸರು ಹೇಳಿದ್ದೇನು?
ಬಳಿಕ ಸಿಟ್ಟಿಗೆದ್ದ ಚುನ್ನಿಲಾಲ್ ತನ್ನ ಪಿಕ್‌ಅಪ್ ಅನ್ನು ಪತ್ನಿ ಮೇಲೆ ಹರಿಸಿ ಹತ್ಯೆ ಮಾಡಿದ್ದಾನೆ. ʼʼಚುನ್ನಿಲಾಲ್ ಹಸು ಮಾರಾಟ ಮಾಡಲು ಮುಂದಾಗಿದ್ದ. ಆದರೆ ಪತ್ನಿ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಇದರಿಂದ ಸಿಟ್ಟಿಗೆದ್ದು ಆಕೆಯ ಮೇಲೆ ಪಿಕ್‌ಟಪ್ ಹರಿಸಿದ್ದಾನೆʼʼ ಎಂದು ಸ್ಟೇಷನ್ ಹೌಸ್ ಆಫೀಸರ್ ರಾಕೇಶ್ ಕುಮಾರ್ ಮೀನಾ ತಿಳಿಸಿದ್ದಾರೆ. ಬಳಿಕ ಆತನೇ ಠಾಣೆಗೆ ತೆರಳಿ ಶರಣಾಗಿದ್ದಾನೆ. ʼʼಚುನ್ನಿಲಾಲ್ ಮಾಡಿಕೊಂಡಿರುವ 15 ಲಕ್ಷ ರೂಪಾಯಿ ಸಾಲವೇ ಈ ಕೃತ್ಯಕ್ಕೆ ಕಾರಣʼʼ ಎಂದು ಅವರು ವಿವರಿಸಿದ್ದಾರೆ.
ಪ್ರೀತಿಸಿ ಮದುವೆಯಾಗಿ 9 ತಿಂಗಳಿಗೆ ಪತ್ನಿ ಮೇಲೆ ಪೆಟ್ರೋಲ್ ಸುರಿದು ಕೊಂದ ಪಾಪಿ ಪತಿ
ದಂಪತಿಗೆ ಇಬ್ಬರು ಗಂಡು ಮಕ್ಕಳು. ಈ ಪೈಕಿ ಹಿರಿಯ ಪುತ್ರ ಉತ್ತರ ಪ್ರದೇಶದಲ್ಲಿ ಪತ್ನಿಯ ಜತೆ ನೆಲೆಸಿದ್ದಾರೆ. ಇನ್ನು ಕಿರಿಯ ಪುತ್ರ ಸಿಕಾರ್‌ನ ಖಾಟು ಎಂಬಲ್ಲಿ ಕೆಲಸ ಮಾಡುತ್ತಿದ್ದು, ಅಲ್ಲಿಯೇ ಇದ್ದಾರೆ. ಘಟನೆ ವೇಳೆ ಇಬ್ಬರು ಮಕ್ಕಳು ಸ್ಥಳದಲ್ಲಿ ಇರಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ವಿವರಿಸಿದ್ದಾರೆ.
ಇನ್ನಷ್ಟು ಕ್ರೈಂ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.