ನೀಟ್ ನಲ್ಲಿ 650 ಅಂಕಗಳ ನಿರೀಕ್ಷೆಯಲ್ಲಿದ್ದ ರಾಜಸ್ಥಾನದ ವಿದ್ಯಾರ್ಥಿ ಆತ್ಮಹತ್ಯೆ
ನೀಟ್-ಯುಜಿ 2026 ಪರೀಕ್ಷೆ ರದ್ದುಗೊಂಡಿದ್ದರಿಂದ ನೊಂದ ರಾಜಸ್ಥಾನದ ವಿದ್ಯಾರ್ಥಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಆತ ನೀಟ್ ಪರೀಕ್ಷೆಯಲ್ಲಿ 650 ಅಂಕಗಳನ್ನು ಗಳಿಸುವ ನಿರೀಕ್ಷೆ ಹೊಂದಿದ್ದನು ಎನ್ನಲಾಗಿದೆ. ಮನೆಯಲ್ಲಿ ತಮ್ಮ ಸಹೋದರಿಯ ಸ್ಕಾರ್ಫ್ ಬಳಸಿ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದು ಆತ್ಮಹತೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂಗ್ರಹ ಚಿತ್ರ -
ರಾಜಸ್ಥಾನ: ನೀಟ್ ಆಕಾಂಕ್ಷಿಯೊಬ್ಬರು (NEET-UG 2026) ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಜಸ್ಥಾನದಲ್ಲಿ (Rajasthan) ನಡೆದಿದೆ. ನೀಟ್ ಯುಜಿ 2026 ಪರೀಕ್ಷೆ ರದ್ದುಗೊಂಡಿದ್ದರಿಂದ ಮನನೊಂದ ಜುನ್ಜುನು ಜಿಲ್ಲೆಯ ಗುಧಾ ಗೌಡ್ಜಿಯ ಪ್ರದೀಪ್ ಮಹಿಚ್ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ (self harming) ಮಾಡಿಕೊಂಡಿದ್ದಾನೆ. ಆತ ಈ ಬಾರಿಯ ನೀಟ್ ಪರೀಕ್ಷೆಯಲ್ಲಿ 650 ಅಂಕಗಳ ನಿರೀಕ್ಷೆಯಲ್ಲಿದ್ದನು ಎನ್ನಲಾಗಿದೆ. ಸಿಕಾರ್‌ನಲ್ಲಿ ಇಬ್ಬರು ಸಹೋದರಿಯರೊಂದಿಗೆ ವಾಸಿಸುತ್ತಿದ್ದ ಪ್ರದೀಪ್ ನ ಓರ್ವ ಸಹೋದರಿ ತರಗತಿಗೆ ಹೋಗಿದ್ದು, ಇನ್ನೋರ್ವ ಸಹೋದರಿ ಬಾತ್ರೂಮ್‌ಗೆ ತೆರಳಿದ್ದ ವೇಳೆ ಸಹೋದರಿಯ ಸ್ಕಾರ್ಫ್ ಬಳಸಿ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.
ಮೇ 3ರಂದು ನಡೆಯಬೇಕಿದ್ದ ನೀಟ್-ಯುಜಿ 2026ರ ಪರೀಕ್ಷೆ ರದ್ದುಗೊಂಡಿದ್ದರಿಂದ ಮನನೊಂದ ವಿದ್ಯಾರ್ಥಿಗಳ ಆತ್ಮಹತ್ಯೆ ಸರಣಿ ಮುಂದುವರಿದಿದೆ. ಇದೀಗ ರಾಜಸ್ಥಾನದ ವೈದ್ಯಕೀಯ ಆಕಾಂಕ್ಷಿ ಪ್ರದೀಪ್ ಎಂಬ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಈ ಬಾರಿ ಸುಮಾರು 650 ಅಂಕಗಳನ್ನು ನಿರೀಕ್ಷಿಸಿದ್ದ ಆತ ಪರೀಕ್ಷೆ ರದ್ದುಗೊಂಡಿದ್ದರಿಂದ ದುಃಖಿತನಾಗಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.
Kiara Advani: ಮಗಳು ಒಬ್ಬರ ಜೊತೆ ಮಾತ್ರ ಡೇಟಿಂಗ್ ಮಾಡ್ಬೇಕು; ಟೀಕೆಗೆ ಗುರಿಯಾದ ಕಿಯಾರಾ
ಜುನ್ಜುನು ಜಿಲ್ಲೆಯ ಪ್ರದೀಪ್ ಮಹಿಚ್ ಖಾಸಗಿ ಕೋಚಿಂಗ್ ಸಂಸ್ಥೆಯಲ್ಲಿ ವೈದ್ಯಕೀಯ ಪ್ರವೇಶ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದು ಶುಕ್ರವಾರ ಮಧ್ಯಾಹ್ನ ಆತ್ಮಹತ್ಯೆ ಮಾಡಿಕೊಂಡಿದ್ದು, ಇದನ್ನು ನೋಡಿದ ತಕ್ಷಣವೇ ಆತನ ಹಿರಿಯ ಸಹೋದರಿ ಮನೆ ಮಾಲೀಕರು ಮತ್ತು ಪೊಲೀಸರಿಗೆ ಮಾಹಿತಿ ನೀಡಿದಳು. ಬಳಿಕ ಆತನನ್ನು ಎಸ್‌ಕೆ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದ್ದು, ವೈದ್ಯರು ಆತ ಸತ್ತಿರುವುದಾಗಿ ಘೋಷಣೆ ಮಾಡಿದರು.ಶವವನ್ನು ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.
ಪ್ರದೀಪ್ ತಂದೆ ರಾಜೇಶ್ ಕುಮಾರ್ ಮೇಘವಾಲ್ ಅವರು ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದು, ಪ್ರದೀಪ್ ಮೇ 3 ರಂದು ನಡೆದ ನೀಟ್ ಯುಜಿ 2026ರ ಪರೀಕ್ಷೆಗೆ ಹಾಜರಾಗಿದ್ದನು. ಪರೀಕ್ಷೆಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾನೆ. ಸುಮಾರು 50 ಅಂಕಗಳನ್ನು ಗಳಿಸುವ ನಿರೀಕ್ಷೆಯಲ್ಲಿದ್ದನು. ಈ ವರ್ಷ ಸರ್ಕಾರಿ ವೈದ್ಯಕೀಯ ಸೀಟು ಪಡೆಯುವ ವಿಶ್ವಾಸ ಹೊಂದಿದ್ದನು. ಆದರೆ ಪರೀಕ್ಷೆ ರದ್ದಾಗಿದ್ದರಿಂದ ಖಿನ್ನತೆಗೆ ಜಾರಿದ್ದನು ಎಂದು ಹೇಳಿದ್ದಾರೆ.
ಮೇ 3ರಂದು ಆಯೋಜಿದ್ದ ನೀಟ್ ಯುಜಿ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದರಿಂದ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು ಪರೀಕ್ಷೆಯನ್ನು ರದ್ದುಗೊಳಿಸಲಾಗಿತ್ತು. ಇದರಿಂದ 22 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳ ನಿರಾಶೆಗೊಂಡಿದ್ದಾರೆ. ಜೂನ್ 21ರಂದು ಮರು ಪರೀಕ್ಷೆ ನಡೆಸಲಾಗುವುದು. ಮುಂದಿನ ವರ್ಷದಿಂದ ವೈದ್ಯಕೀಯ ಪ್ರವೇಶ ಪರೀಕ್ಷೆಯು ಕಂಪ್ಯೂಟರ್ ಆಧಾರಿತ ಸ್ವರೂಪಕ್ಕೆ ಬದಲಾಗಲಿದೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಶುಕ್ರವಾರ ತಿಳಿಸಿದ್ದಾರೆ.
ಪ್ರದೀಪ್ ಸಾವಿಗೆ ರಾಜಸ್ಥಾನದ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಸಂತಾಪ ಸೂಚಿಸಿದ್ದು, ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್ ಖಾತೆಯಲ್ಲಿ ಬರೆದಿರುವ ಅವರು ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಪರೀಕ್ಷೆ ರದ್ದತಿ ಆಕಾಂಕ್ಷಿಗಳಲ್ಲಿ ಆತಂಕವನ್ನು ಉಂಟು ಮಾಡಿದೆ. ಗೋವಾ ಮತ್ತು ಉತ್ತರ ಪ್ರದೇಶದಲ್ಲೂ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ತಿಳಿದು ಮನಸ್ಸಿಗೆ ತೀವ್ರ ದುಃಖವಾಗಿದೆ ಎಂದು ಹೇಳಿದ್ದಾರೆ.
Mohan Vishwa Column: ಹಿಜಾಬ್: ಇರಾನ್ʼನಲ್ಲಿ ಬಂಡಾಯ, ರಾಜ್ಯದಲ್ಲಿ ಮಾನ್ಯತೆ
ನೀಟ್ ಪರೀಕ್ಷೆ ರದ್ದುಗೊಂಡಿದ್ದರಿಂದ ದೆಹಲಿಯ ಆಜಾದ್‌ಪುರದಲ್ಲಿ 20 ವರ್ಷದ ನೀಟ್ ಆಕಾಂಕ್ಷಿಯೊಬ್ಬರು, ಉತ್ತರ ಪ್ರದೇಶದ ಲಖಿಂಪುರ ಖೇರಿಯ 21 ವರ್ಷದ ರಿತಿಕ್ ಮಿಶ್ರಾ, ದಕ್ಷಿಣ ಗೋವಾ ಜಿಲ್ಲೆಯ 17 ವರ್ಷದ ವಿದ್ಯಾರ್ಥಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರು.