ಸುಶಾಂತ್ ಸಿಂಗ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯನ್ ನಿಗೂಢ ಸಾವು ಪ್ರಕರಣ: ಆದಿತ್ಯ ಠಾಕ್ರೆಗೆ 500 ಕೋಟಿ ರೂ. ಗಳ ನೋಟಿಸ್
ಬಾಲಿವುಡ್ ನ ದಿವಂಗತ ನಟ ಸುಶಾಂತ್ ಸಿಂಗ್ ಅವರ ಮ್ಯಾನೇಜರ್ ಆಗಿದ್ದ ದಿಶಾ ಸಾಲಿಯನ್ ನಿಗೂಢ ಸಾವು ಪ್ರಕರಣಕ್ಕೆ ಸಂಬಂಧಿಸಿ ಶಿವಸೇನೆ (ಯುಬಿಟಿ) ನಾಯಕ ಆದಿತ್ಯ ಠಾಕ್ರೆ ಹಾಗೂ ಎನ್‌ಸಿಪಿ (ಎಸ್‌ಪಿ) ನಾಯಕ, ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಅವರಿಗೆ 500 ಕೋಟಿ ರೂ. ಗಳ ನೋಟಿಸ್ ಜಾರಿ ಮಾಡಲಾಗಿದೆ.
ಸಂಗ್ರಹ ಚಿತ್ರ -
ಮುಂಬೈ: ಕ್ರಿಕೆಟ್ ತಾರೆ ಮಹೇಂದ್ರ ಸಿಂಗ್ ಧೋನಿ ಅವರ ಬಯೋಪಿಕ್ 'ಎಂ.ಎಸ್. ಧೋನಿ: ದಿ ಅನ್‌ಟೋಲ್ಡ್ ಸ್ಟೋರಿ' (M.S. Dhoni: The Untold Story) ಚಿತ್ರದ ಮೂಲಕ ಖ್ಯಾತಿ ಪಡೆದ ಬಾಲಿವುಡ್ ನ ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ (actor Sushant Singh Rajput) ಅವರ ಮ್ಯಾನೇಜರ್ ಆಗಿದ್ದ ದಿಶಾ ಸಾಲಿಯನ್ ಅವರ ನಿಗೂಢ ಸಾವು ಪ್ರಕರಣಕ್ಕೆ (Disha Salian death case) ಸಂಬಂಧಿಸಿ ಶಿವಸೇನೆ (ಯುಬಿಟಿ) ನಾಯಕ ಆದಿತ್ಯ ಠಾಕ್ರೆ (Aditya Thackeray) ಹಾಗೂ ಎನ್‌ಸಿಪಿ (ಎಸ್‌ಪಿ) ನಾಯಕ, ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ (Anil Deshmukh) ಅವರಿಗೆ 500 ಕೋಟಿ ರೂ. ಗಳ ನೋಟಿಸ್ ಜಾರಿ ಮಾಡಲಾಗಿದೆ. ದಿಶಾ ಅವರ ತಂದೆ ಸತೀಶ್ ಸಾಲಿಯನ್ ಅವರು ನ್ಯಾಯಕ್ಕಾಗಿ ನಡೆಸುತ್ತಿರುವ ಹೋರಾಟವನ್ನು "ರಾಜಕೀಯ ಪ್ರೇರಿತ" ಎಂದು ಬಿಂಬಿಸಲು ಈ ಇಬ್ಬರು ನಾಯಕರು ಪ್ರಯತ್ನಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ನಟ ಸುಶಾಂತ್ ಸಿಂಗ್ ರಜಪೂತ್ ಅವರು ಸಾವನ್ನಪ್ಪಿದ ಆರು ದಿನಗಳ ಬಳಿಕ ದಿಶಾ ಸಾಲಿಯನ್ (28) 2020ರ ಜೂನ್ 8 ರಂದು ಮುಂಬೈನ ಮಲಾಡ್ ಪ್ರದೇಶದಲ್ಲಿರುವ ಎತ್ತರದ ವಸತಿ ಕಟ್ಟಡವೊಂದರಿಂದ ಬಿದ್ದು ಸಾವನ್ನಪ್ಪಿದ್ದರು. ಇದನ್ನು ಆಕಸ್ಮಿಕ ಸಾವು ಎಂದು ಪರಿಗಣಿಸಿ ಪೊಲೀಸರು ಪ್ರಕರಣ ದಾಖಲಿಸಿದ್ದರು.
ಕಾಶ್ಮೀರದ ಉಧಂಪುರದಲ್ಲಿ ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಸೇನೆ, ಮುಂದುವರಿದ ಶೋಧ ಕಾರ್ಯ
ಬಳಿಕ ದಿಶಾ ಸಾವಿನ ಕುರಿತು ಅನುಮಾನ ವ್ಯಕ್ತಪಡಿಸಿ ಅವರ ತಂದೆ ಹೊಸದಾಗಿ ತನಿಖೆ ನಡೆಸಲು ಕೋರಿ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದರು. ಇದರಲ್ಲಿ ಅವರು ಆದಿತ್ಯ ಠಾಕ್ರೆ, ಡಿನೋ ಮೋರಿಯಾ ಮತ್ತು ಸೂರಜ್ ಪಂಚೋಲಿ ಸೇರಿದಂತೆ ಹಲವು ವ್ಯಕ್ತಿಗಳ ವಿರುದ್ಧ ಆರೋಪಗಳನ್ನು ಮಾಡಿದ್ದು ಈ ಕುರಿತು ತನಿಖೆ ನಡೆಸುವಂತೆ ಮನವಿ ಮಾಡಿದ್ದರು.ಇದಾಗಿ ಆರು ವರ್ಷಗಳ ಅನಂತರ ಇದೀಗ ಕೇಂದ್ರೀಯ ತನಿಖಾ ದಳ ಈ ಕುರಿತು ತನಿಖೆಯನ್ನು ಕೈಗೆತ್ತಿಕೊಂಡಿದೆ.
Satish Salian, the father of the late Disha Salian, has issued a ₹500 crore defamation notice to Shiv Sena (UBT) leader Aaditya Thackeray and NCP (SP) leader Anil Deshmukh. He has demanded an apology, retraction of the statements, and ₹500 crore in damages, giving them seven… pic.twitter.com/3heIEriFdi
— IANS (@ians_india) September 17, 2026
ದಿಶಾ ಸಾವಿನ ಕುರಿತು ನ್ಯಾಯಕ್ಕಾಗಿ ಹೋರಾಡುತ್ತಿರುವ ಸತೀಶ್ ಸಾಲಿಯನ್ ಅವರ ಉದ್ದೇಶ ರಾಜಕೀಯ ಪ್ರೇರಿತವಾಗಿದೆ. ತಮ್ಮ ವರ್ಚಸ್ಸಿಗೆ ಧಕ್ಕೆ ತರುವ ಉದ್ದೇಶವನ್ನು ಹೊಂದಿದೆ ಎಂದು ಬಿಂಬಿಸಲು ಆದಿತ್ಯ ಠಾಕ್ರೆ ಪ್ರಯತ್ನಿಸಿದ್ದಾರೆ. ಹೀಗಾಗಿ 500 ಕೋಟಿ ರೂ. ಗಳ ಪರಿಹಾರ ಕೋರಿ ಅವರು ಕಾನೂನಿನ ಮೊರೆ ಹೋಗಿದ್ದಾರೆ.
ದಿಶಾ ಸಾಲಿಯನ್ ಅವರೊಂದಿಗೆ ತಮಗೆ ಯಾವುದೇ ಸಂಬಂಧವಿರಲಿಲ್ಲ. ಆದರೂ ಎಫ್ ಐಆರ್ ನಲ್ಲಿ ನನ್ನ ಹೆಸರಿಟ್ಟು. ಈ ಪ್ರಕರಣದ ತನಿಖೆಯನ್ನು ಸಿಬಿಐ ಈಗಾಗಲೇ ನಡೆಸಿದೆ. ತಮಗೆ ಕ್ಲೀನ್ ಚಿಟ್ ದೊರೆತಿದೆ. ಅವರನ್ನು ತಾವು ಇಂದಿಗೂ ಭೇಟಿಯಾಗಿರಲಿಲ್ಲ. ಆದರೂ ತಮಗೆ ಕಿರುಕುಳ ನೀಡಲು ದಿಶಾ ಸಾಲಿಯನ್ ಪ್ರಕರಣವನ್ನು ಒಂದು ಸಾಧನವಾಗಿ ಬಳಸಲಾಗುತ್ತಿದೆ ಎಂದು ಆದಿತ್ಯ ಠಾಕ್ರೆ ಹೇಳಿದ್ದಾರೆ.
ಆದಿತ್ಯ ಠಾಕ್ರೆ ಮತ್ತು ಅನಿಲ್ ದೇಶಮುಖ್ ಅವರು ಸಾರ್ವಜನಿಕ ಕ್ಷಮೆಯಾಚನೆ ನಡೆಸುವಂತೆ ಆಗ್ರಹಿಸಿರುವ ಸತೀಶ್ ಸಾಲಿಯಾನ್ ಅವರು ಈ ಕುರಿತು ಎಲ್ಲಾ ಪ್ರಮುಖ ಮುದ್ರಣ, ಟಿವಿ ಮತ್ತು ಡಿಜಿಟಲ್ ಮಾಧ್ಯಮ ವೇದಿಕೆಗಳಲ್ಲಿ ಪ್ರಕಟಿಸಬೇಕು ಮತ್ತು ಪ್ರಸಾರ ಮಾಡಬೇಕು. ಕ್ಷಮೆಯಾಚನೆ ವಿಡಿಯೊ ಕನಿಷ್ಠ ಮೂರು ನಿಮಿಷಗಳಷ್ಟು ಅವಧಿಯದ್ದಾಗಿರಬೇಕು. ಅದನ್ನು ಇಬ್ಬರು ನಾಯಕರ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಪೋಸ್ಟ್ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಮುಂಗಡ ಟಿಪ್ ರದ್ದುಗೊಳಿಸಲು ಓಲಾ, ಉಬರ್ ಮತ್ತು ರಾಪಿಡೋಗೆ ಕೇಂದ್ರದಿಂದ ಸೂಚನೆ
ದಿಶಾ ಸಾಲಿಯಾನ್ ಪ್ರಕರಣಕ್ಕೆ ಸಂಬಂಧಿಸಿ ಕೊಲೆ ಮತ್ತು ಕ್ರಿಮಿನಲ್ ಪಿತೂರಿ ಸೇರಿದಂತೆ ಇತರ ಕಾನೂನು ವಿಭಾಗಗಳ ಅಡಿಯಲ್ಲಿ ಸಿಬಿಐ ಸೋಮವಾರ ಹೊಸದಾಗಿ ಎಫ್‌ಐಆರ್ ದಾಖಲಿಸಿದೆ. ಇದರಲ್ಲಿ ಆದಿತ್ಯ ಠಾಕ್ರೆ, ನಟರಾದ ಡಿನೋ ಮೋರಿಯಾ, ಸೂರಜ್ ಪಾಂಚೋಲಿ ಮತ್ತು ರಿಯಾ ಚಕ್ರವರ್ತಿ ಹಾಗೂ ವಿಳಂಬವಾದ ಮರಣೋತ್ತರ ಪರೀಕ್ಷೆಗೆ ಸಂಬಂಧಿಸಿ ವೈದ್ಯರು ಮತ್ತು ಸಿಬ್ಬಂದಿಯನ್ನು ತನಿಖೆ ನಡೆಸಲು ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.