ಕಾಶ್ಮೀರದ ಉಧಂಪುರದಲ್ಲಿ ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಸೇನೆ, ಮುಂದುವರಿದ ಶೋಧ ಕಾರ್ಯ
Encounter in Jammu and Kashmir: ಜಮ್ಮು ಮತ್ತು ಕಾಶ್ಮೀರದ (Jammu and Kashmir) ಉಧಂಪುರ ಜಿಲ್ಲೆಯಲ್ಲಿ ಜಂಟಿ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಇಬ್ಬರು ಭಯೋತ್ಪಾದಕರು ಹತರಾಗಿದ್ದಾರೆ. ಆ ಪ್ರದೇಶದಲ್ಲಿ ಇನ್ನೂ ಕಾರ್ಯಾಚರಣೆ ಮುಂದುವರೆದಿದೆ. ಹತ್ಯೆಗೀಡಾದ ಭಯೋತ್ಪಾದಕರ ನಿಖರ ಗುರುತನ್ನು ಖಚಿತಪಡಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ -
ಜಮ್ಮು, ಸೆ.17: ಜಮ್ಮು ಮತ್ತು ಕಾಶ್ಮೀರದ (Jammu and Kashmir) ಉಧಂಪುರ ಜಿಲ್ಲೆಯಲ್ಲಿ ಜಂಟಿ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಇಬ್ಬರು ಭಯೋತ್ಪಾದಕರು ಹತರಾಗಿದ್ದಾರೆ (Terrorists killed) ಉಧಂಪುರ ಜಿಲ್ಲೆಯ ಮಜಲ್ತಾ ಪ್ರದೇಶದಲ್ಲಿ ಉಗ್ರರ ಚಲನವಲನದ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ಜಂಟಿ ಕಾರ್ಯಾಚರಣೆ ನಡೆಸಿ, ಪ್ರದೇಶವನ್ನು ಸುತ್ತುವರಿದು ಶೋಧ ಕಾರ್ಯಾಚರಣೆ ಆರಂಭಿಸಿದವು. ಈ ವೇಳೆ ಉಗ್ರರು ಗುಂಡು ಹಾರಿಸಿದ್ದಾರೆ. ಭಯೋತ್ಪಾದಕರ ದಾಳಿಗೆ ಪ್ರತಿಯಾಗಿ ಭದ್ರತಾ ಪಡೆ ಪ್ರತಿದಾಳಿ ನಡೆಸಿದ್ದು, ಇಬ್ಬರು ಉಗ್ರರನ್ನು ಹೊಡೆದುರುಳಿಸಿದೆ.
ಉಗ್ರರು ಮತ್ತು ಭದ್ರತಾ ಪಡೆಗಳು ನಡೆಸಿದ ಗುಂಡಿನ ಚಕಮಕಿಯಲ್ಲಿ, ಇಬ್ಬರು ಭಯೋತ್ಪಾದಕರು ಮೃತಪಟ್ಟಿದ್ದಾರೆ. ಆ ಪ್ರದೇಶದಲ್ಲಿ ಇನ್ನೂ ಕಾರ್ಯಾಚರಣೆ ಮುಂದುವರೆದಿದೆ. ಹತ್ಯೆಗೀಡಾದ ಭಯೋತ್ಪಾದಕರ ನಿಖರ ಗುರುತನ್ನು ಖಚಿತಪಡಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆರಂಭದಲ್ಲಿ ಕಾರ್ಯಾಚರಣೆಯನ್ನು ಜೆ & ಕೆ ಪೊಲೀಸರು ಮತ್ತು ಸೇನೆಯ ವಿಶೇಷ ಪ್ಯಾರಾ ಟ್ರೂಪರ್‌ಗಳು ಪ್ರಾರಂಭಿಸಿದರು. ಎನ್‌ಕೌಂಟರ್ ಪ್ರಾರಂಭವಾದ ತಕ್ಷಣ ಸೇನೆ, ಸಿಆರ್‌ಪಿಎಫ್, ಪೊಲೀಸರನ್ನು ಪ್ರದೇಶಕ್ಕೆ ರವಾನಿಸಲಾಯಿತು.
ಭಾರತೀಯ ಸೇನೆ, ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರ ವಿಶೇಷ ಕಾರ್ಯಾಚರಣೆ ಗುಂಪು (SOG) ಜಂಟಿಯಾಗಿ ಈ ಪ್ರದೇಶದಲ್ಲಿ ಶೋಧ ನಡೆಸುತ್ತಿದೆ. ರಾಜೌರಿಯಲ್ಲಿ ಲಷ್ಕರ್-ಎ-ತೈಬಾ (ಎಲ್‌ಇಟಿ) ಜೊತೆ ಸಂಪರ್ಕ ಹೊಂದಿರುವ ಒಜಿಡಬ್ಲ್ಯೂ ಜಾಲವನ್ನು ಇತ್ತೀಚೆಗೆ ಭೇದಿಸಿದ ನಂತರ ಪಿರ್ ಪಂಜಾಲ್ ಪ್ರದೇಶದಲ್ಲಿ ಭದ್ರತಾ ಚಟುವಟಿಕೆಗಳು ಹೆಚ್ಚುತ್ತಿರುವ ಮಧ್ಯೆ ಈ ಕಾರ್ಯಾಚರಣೆ ನಡೆದಿದೆ.
ಜಮ್ಮು ಕಾಶ್ಮೀರದಲ್ಲಿ ಭದ್ರತಾ ಪಡೆಯಿಂದ ಉಗ್ರನ ಎನ್‌ಕೌಂಟರ್; AK-47 ಜಪ್ತಿ
ಸೆಪ್ಟೆಂಬರ್ 15 ರಂದು, ಪಿರ್ ಪಂಜಾಲ್ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದೆ ಎನ್ನಲಾದ ಭಯೋತ್ಪಾದಕ ಸಂಘಟನೆಗೆ ಸಂಬಂಧಿಸಿದಂತೆ ರಾಜೌರಿ ಪೊಲೀಸರು ಮೂವರನ್ನು ಬಂಧಿಸಿದರು. ಆರೋಪಿಗಳನ್ನು ಜಾಕಿರ್ ಹುಸೇನ್, ಮೊಹಮ್ಮದ್ ಅಜಮ್ ಮತ್ತು ಮೊಹಮ್ಮದ್ ಮುಷ್ತಾಕ್ ಎಂದು ಗುರುತಿಸಲಾಗಿದೆ.
ಭದ್ರತಾ ಪಡೆಗಳು ಸ್ನಿಫರ್ ನಾಯಿಗಳನ್ನು ಬಳಸಿ ಶೋಧ ಕಾರ್ಯ ತೀವ್ರಗೊಳಿಸಿದ್ದು, ಉಳಿದ ಭಯೋತ್ಪಾದಕರನ್ನು ಪತ್ತೆಹಚ್ಚಲು ವೈಮಾನಿಕ ಕಣ್ಗಾವಲು ಕಾರ್ಯಾಚರಣೆ ನಡೆಸುತ್ತಿವೆ. ಉಧಂಪುರ-ರಿಯಾಸಿ ಶ್ರೇಣಿಯ ಕಾರ್ಯತಂತ್ರದ ಮಾರ್ಗಗಳಲ್ಲಿ ಹೈ ಅಲರ್ಟ್, ವಾಹನ ತಪಾಸಣೆ ನಡೆಸಲಾಗುತ್ತಿದ್ದು, ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಉಧಮ್‌ಪುರ, ರಿಯಾಸಿ, ರಾಂಬನ್, ಕಥುವಾ, ಪೂಂಚ್ ಮತ್ತು ರಾಜೌರಿ ಜಿಲ್ಲೆಗಳ ಗುಡ್ಡಗಾಡು ಪ್ರದೇಶಗಳು, ದುರ್ಗಮ ಪ್ರದೇಶಗಳಲ್ಲಿ ಪಾಕಿಸ್ತಾನಿ ಭಯೋತ್ಪಾದಕರ ಚಲನವಲನಗಳು ವರದಿಯಾಗಿರುವುದರಿಂದ ಭದ್ರತಾ ಪಡೆಗಳ ವಿಶೇಷ ಗಮನದಲ್ಲಿವೆ.
ಈ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಗಳು ಆರು ತಿಂಗಳಿಗಿಂತಲೂ ಹೆಚ್ಚು ಕಾಲ ಮುಂದುವರೆದಿದ್ದರೂ, ಭದ್ರತಾ ಪಡೆಗಳಿಗೆ ಯಶಸ್ಸು ಸಿಕ್ಕಿದೆ. ಏಕೆಂದರೆ ಈ ಕಾರ್ಯಾಚರಣೆಗಳಲ್ಲಿ ಕೆಲವು ಪ್ರಮುಖ ಭಯೋತ್ಪಾದಕರನ್ನು ತಟಸ್ಥಗೊಳಿಸಲಾಗಿದೆ. ಈ ಕಾರ್ಯಾಚರಣೆಗಳ ದೊಡ್ಡ ಪ್ರಯೋಜನವೆಂದರೆ ಭಯೋತ್ಪಾದಕರು ನಿರಂತರವಾಗಿ ತಲೆಮರೆಸಿಕೊಳ್ಳುತ್ತಲೇ ಇರುತ್ತಾರೆ. ಭದ್ರತಾ ಪಡೆಗಳು, ಸೇನೆ ಮತ್ತು ನಾಗರಿಕರ ವಿರುದ್ಧ ದಾಳಿಗಳನ್ನು ಯೋಜಿಸಲು ಮತ್ತು ನಡೆಸಲು ಅವರಿಗೆ ನೆಲೆ ಸಿಗುವುದಿಲ್ಲ.