ಮೃತ ತಂದೆಯ 45 ಲಕ್ಷ ರುಪಾಯಿ, ಅನುಕಂಪದ ಉದ್ಯೋಗ, ಐಷಾರಾಮಿ ಜೀವನದ ಕನಸು; ಪ್ರೇಮಿಯೊಂದಿಗೆ ಸೇರಿ ತಾಯಿಯನ್ನೇ ಕೊಂದ ಹದಿಹರೆಯದ ಬಾಲಕಿ
Crime News: ಪ್ರೇಮಿ ಜತೆ ಸೇರಿ ಹದಿಹರೆಯದ ಬಾಲಕಿಯೊಬ್ಬಳು ತನ್ನ ತಾಯಿಯನ್ನೇ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಜಾರ್ಖಂಡ್‌ನ ರಾಂಚಿಯಲ್ಲಿ ನಡೆದಿದೆ. ಆಕೆಯ ಮೃತ ತಂದೆಯ 45 ಲಕ್ಷ ರುಪಾಯಿ ಹಾಗೂ ಅನುಕಂಪದ ಉದ್ಯೋಗಕ್ಕಾಗಿ ಈ ಕೃತ್ಯ ಎಸಗಿದ್ದಾಳೆ. ನಂತರ ಕಾಲು ಜಾರಿ ಮೃತಪಟ್ಟಿದ್ದಾಗಿ ಸುಳ್ಳು ಕಥೆ ಹೆಣೆದಿದ್ದಾಳೆ.
ಸಾಂದರ್ಭಿಕ ಚಿತ್ರ -
ರಾಂಚಿ, ಏ. 30: ಪ್ರೇಮಿ ಜತೆ ಸೇರಿ ಹದಿಹರೆಯದ ಬಾಲಕಿಯೊಬ್ಬಳು ತನ್ನ ತಾಯಿಯನ್ನೇ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಜಾರ್ಖಂಡ್‌ನ ರಾಂಚಿಯಲ್ಲಿ ನಡೆದಿದೆ (Crime News). ಆಕೆಯ ಮೃತ ತಂದೆಯ 45 ಲಕ್ಷ ರುಪಾಯಿ ಹಾಗೂ ಅನುಕಂಪದ ಉದ್ಯೋಗಕ್ಕಾಗಿ ಈ ಕೃತ್ಯ ಎಸಗಿದ್ದಾಳೆ ಎನ್ನುವ ಆರೋಪ ಕೇಳಿ ಬಂದಿದೆ. ನಹಿದಾ ಪರ್ವೀನ್ ಮೃತ ದುರ್ದೈವಿ. ತಾಯಿಯನ್ನು ಕೊಂದ ಬಳಿಕ, ಅವರು ಸ್ನಾನಗೃಹದಲ್ಲಿ ಕಾಲುಜಾರಿ ಬಿದ್ದು ಮೃತಪಟ್ಟಿದ್ದಾರೆ ಎಂದು ಮಗಳು ಸಂಬಂಧಿಕರಿಗೆ ಕಥೆ ಕಟ್ಟಿದ್ದಾಳೆ.
ಉತ್ತರ ಪ್ರದೇಶ ಮತ್ತು ಹಜಾರಿಬಾಗ್‌ನಲ್ಲಿ ವಾಸಿಸುವ ಪರ್ವೀನ್ ಅವರ ಸಂಬಂಧಿಕರು, ಮೃತರಿಗೆ ಅಂತಿಮ ನಮನ ಸಲ್ಲಿಸಲು ಮತ್ತು ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ರಾಂಚಿಗೆ ಆಗಮಿಸಿದರು. ಎರಡು ದಿನಗಳ ನಂತರ, ಶವವನ್ನು ಹೊರತೆಗೆದಾಗ ಅಪ್ರಾಪ್ತ ಬಾಲಕಿಯ ಸಂಚು ಬಯಲಾಯಿತು. ಇದೇ ಕಾರಣಕ್ಕೆ ಆಕೆ ಮತ್ತು ಆಕೆಯ ಗೆಳೆಯನನ್ನು ಪರ್ವೀನ್ ಕೊಲೆಗೆ ಸಂಬಂಧಿಸಿದಂತೆ ಬಂಧಿಸಲಾಯಿತು.
45 ಲಕ್ಷ ರುಪಾಯಿ ಮತ್ತು ಐಷಾರಾಮಿ ಜೀವನದ ಕನಸು
ಮನಿಟೋಲಾದ ನಿವಾಸಿಯಾದ ನಹಿದಾ ಪರ್ವೀನ್, ತನ್ನ 17 ವರ್ಷದ ದತ್ತು ಪುತ್ರಿಯೊಂದಿಗೆ ವಾಸಿಸುತ್ತಿದ್ದರು. ನಾಲ್ಕು ವರ್ಷಗಳ ಹಿಂದೆ ವಿದ್ಯುತ್ ಇಲಾಖೆಯಲ್ಲಿ ಉದ್ಯೋಗದಲ್ಲಿದ್ದ ತನ್ನ ಪತಿಯ ಮರಣದ ನಂತರ ಪರ್ವೀನ್ ಅವರಿಗೆ 45 ಲಕ್ಷ ರುಪಾಯಿ ಆರ್ಥಿಕ ಪರಿಹಾರ ದೊರೆಯಿತು. ಇದಕ್ಕೆ ಅವರ ಮಗಳು ಏಕೈಕ ನಾಮಿನಿಯಾಗಿದ್ದಳು.
ಶ್ರೀ ಸಾಯಿ ಸಿಲ್ಕ್ಸ್ ಮಾಲಕಿ, ಇನ್‌ಸ್ಟಾಗ್ರಾಮ್ ಪ್ರಭಾವಿ ಪತ್ನಿಯನ್ನು ಕೊಂದು ಪತಿ ಆತ್ಮಹತ್ಯೆ
ಹದಿಹರೆಯದ ಬಾಲಕಿ ಆಗಾಗ ಬ್ಯಾಂಕ್ ಖಾತೆಯಿಂದ ಹಣವನ್ನು ತೆಗೆದು ತನ್ನ ಪ್ರೇಮಿ 20 ವರ್ಷದ ಅರ್ಬಾಜ್‌ಗೆ ನೀಡುತ್ತಿದ್ದಳು. ಪರ್ವೀನ್‌ಗೆ ಇದು ತಿಳಿದುಬಂದಾಗ ಈ ಬಗ್ಗೆ ಮಗಳನ್ನು ಪ್ರಶ್ನಿಸಿದ್ದರು. ಹೀಗಾಗಿ ಹಣ ಪಡೆದು ಐಷಾರಾಮಿ ಜೀವನದ ಕನಸು ಕಂಡಿದ್ದ ಹದಿಹರೆಯದ ಹುಡುಗಿ ಮತ್ತು ಆಕೆಯ ಪ್ರೇಮಿ, ಪರ್ವೀನ್ ಅವರನ್ನು ಕೊಲ್ಲಲು ನಿರ್ಧರಿಸಿದರು. ಹಾಗೆಯೇ ಅನುಕಂಪದ ಆಧಾರದ ಮೇಲೆ ತಂದೆಯ ಕೆಲಸ ಪಡೆಯುವ ಯೋಜನೆ ಹಾಕಿಕೊಂಡಿದ್ದರು.
ಕೊಲೆ ನಡೆದಿದ್ದು ಹೇಗೆ?
ಏಪ್ರಿಲ್ 24ರಂದು ಹದಿಹರೆಯದ ಬಾಲಕಿ ತನ್ನ ಗೆಳೆಯ ಅರ್ಬಾಜ್ ಮತ್ತು ಅವನ ಮೂವರು ಸ್ನೇಹಿತರೊಂದಿಗೆ, ಪರ್ವೀನ್ ಅವರನ್ನು ದಿಂಬಿನಿಂದ ಉಸಿರುಗಟ್ಟಿಸಿ ಕೊಂದಿದ್ದಾಳೆ. ಇದಕ್ಕಾಗಿ ಹುಡುಗಿ 12 ಲಕ್ಷ ರುಪಾಯಿ ಪಾವತಿಸಿದ್ದಾಳೆ ಎನ್ನಲಾಗಿದೆ.
ತನಿಖೆಯ ಪ್ರಕಾರ, ಆರೋಪಿಗಳು ಪರ್ವೀನ್ ನಿದ್ರಿಸುತ್ತಿದ್ದಾಗ ಈ ಯೋಜನೆಯನ್ನು ಕಾರ್ಯಗತಗೊಳಿಸಿದರು. ಆರೋಪಿಗಳಲ್ಲಿ ಓರ್ವ ಪರ್ವೀನ್ ಬಾಯಿಯ ಮೇಲೆ ದಿಂಬನ್ನು ಒತ್ತಿದ್ದ. ಮತ್ತೊಬ್ಬ ಅವರ ಕೈಗಳನ್ನು ಮತ್ತು ಮೂರನೆಯವನು ಕಾಲುಗಳನ್ನು ಹಿಡಿದಿದ್ದ.
ಪರ್ವೀನ್ ವಿರೋಧಿಸಿದಾಗ ಆಕೆಯ ಕುತ್ತಿಗೆಗೆ ಆಳವಾದ ಗಾಯವಾಯಿತು. ರಕ್ತಸ್ರಾವ ಆರಂಭವಾಗಿ ನಂತರ ಅವರು ಗಾಯಗಳಿಂದಾಗಿ ಮೃತಪಟ್ಟರು. ಶವವನ್ನು ಫ್ರಿಡ್ಜ್‌ನಲ್ಲಿ ಇರಿಸಲಾಯಿತು. ಹಾಸಿಗೆಯನ್ನು ತೆಗೆದು ಮನೆಯ ಸಮೀಪವಿರುವ ಮರದ ಬಳಿ ಮರೆ ಮಾಡಲಾಯಿತು.
ಉಡುಪಿಯಲ್ಲಿ ಭೀಕರ ಅಪಘಾತ; ಪೆಟ್ರೋಲ್ ಟ್ಯಾಂಕರ್‌ಗೆ ಪ್ರವಾಸಿ ಬಸ್ ಡಿಕ್ಕಿಯಾಗಿ ಇಬ್ಬರು ವಿದ್ಯಾರ್ಥಿಗಳ ಸಾವು
ಮರುದಿನ ಬೆಳಗ್ಗೆ, ಹದಿಹರೆಯದ ಬಾಲಕಿ ತನ್ನ ಸಂಬಂಧಿಕರಿಗೆ ಕರೆ ಮಾಡಿ ಪರ್ವೀನ್ ಸ್ನಾನಗೃಹದಲ್ಲಿ ಬಿದ್ದು ಹಠಾತ್ ಸಾವನ್ನಪ್ಪಿದ್ದಾಳೆಂದು ತಿಳಿಸಿದಳು. ಮರುದಿನ ಶವವನ್ನು ಸಮಾಧಿ ಮಾಡಲಾಯಿತು. ಆದರೆ ಪರ್ವೀನ್ ಕುತ್ತಿಗೆಯಲ್ಲಿ ಗಾಯದ ಗುರುತುಗಳನ್ನು ಗಮನಿಸಿದ ನಂತರ ಕೆಲವು ಸಂಬಂಧಿಕರು ಅನುಮಾನ ವ್ಯಕ್ತಪಡಿಸಿದರು. ಈ ಸಂಬಂಧ ಪರ್ವೀನ್ ಅವರ ಸೋದರ ಸಂಬಂಧಿ ಪೊಲೀಸರಿಗೆ ಲಿಖಿತ ದೂರು ದಾಖಲಿಸಿದರು.
ಪೊಲೀಸರು ಅಪ್ರಾಪ್ತ ಬಾಲಕಿಯನ್ನು ವಶಕ್ಕೆ ಪಡೆದು ಬಿಹಾರದ ಗಯಾದಲ್ಲಿ ಆಕೆಯ ಗೆಳೆಯ ಸೇರಿದಂತೆ ಇಬ್ಬರನ್ನು ಬಂಧಿಸಿದ್ದಾರೆ. ವಿಚಾರಣೆ ನಡೆಸಿದಾಗ, ಹದಿಹರೆಯದ ಬಾಲಕಿ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾಳೆ. ತನ್ನ ಗೆಳೆಯನಿಗೆ ಹಣ ನೀಡುತ್ತಿದ್ದೆ, ಇದರಿಂದ ಮನೆಯಲ್ಲಿ ಜಗಳವಾಗುತ್ತಿತ್ತು ಎಂದು ಆಕೆ ತಿಳಿಸಿದಸ್ದಾಳೆ.
ಈ ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದ್ದು, ಆರೋಪಿಗಳನ್ನು ವಿಚಾರಣೆ ನಡೆಸಲಾಗುತ್ತಿದೆ. ಹೊರತೆಗೆದ ಶವವನ್ನು ರಾಜೇಂದ್ರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (RIMS) ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.