ಹಿಂದೂ ದೇವರ ಅವಹೇಳನ, ಮೈಮುಟ್ಟಿ ಕಿರುಕುಳ; ಬಗೆದಷ್ಟೂ ಹೊರ ಬೀಳುತ್ತಿದೆ ನಾಸಿಕ್‌ನ ಟಿಸಿಎಸ್ ಕಂಪನಿಯ ಕರ್ಮಕಾಂಡ
TCS Nashik Case: ನಾಸಿಕ್‌ನ ಟಿಸಿಎಸ್ ಕಂಪನಿಯಲ್ಲಿ ನಡೆದ ಲೈಂಗಿಕ ಕಿರುಕುಳ ಮತ್ತು ಬಲವಂತದ ಧಾರ್ಮಿಕ ಮತಾಂತರದ ಆರೋಪದ ಹಿನ್ನೆಲೆಯಲ್ಲಿ ದೂರು ದಾಖಲಿಸಿದ ಸಂತ್ರಸ್ತೆಯರ ಪೈಕಿ ಓರ್ವ ಮಹಿಳೆ ತಾವು ಅನುಭವಿಸಿದ ಕರಾಳ ಅನುಭವವನ್ನು ಬಿಚ್ಚಿಟ್ಟಿದ್ದಾರೆ. ಸಂತ್ರಸ್ತರು ನೀಡಿದ ದೂರುಗಳ ಆಧಾರದ ಮೇಲೆ ಒಂಬತ್ತು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ.
ಟಿಸಿಎಸ್ ಕರ್ಮಕಾಂಡದ ಆರೋಪಿಗಳ ಬಂಧನ -
ಮುಂಬೈ, ಏ. 22: ಐಟಿ ದೈತ್ಯ ಟಿಸಿಎಸ್ ಕಂಪನಿಯಲ್ಲಿ ನಡೆದಿರುವ ಪ್ರಕರಣ (TCS Nashik case) ದೇಶವನ್ನೇ ಬೆಚ್ಚಿ ಬೀಳಿಸಿದೆ. ಲೈಂಗಿಕ ದೌರ್ಜನ್ಯ ಮತ್ತು ಮತಾಂತರ ಪ್ರಕರಣಕ್ಕೆ (Religious Conversion Case) ಸಂಬಂಧಪಟ್ಟಂತೆ ದಿನಕ್ಕೊಂದು ಮಹತ್ವದ ಸಂಗತಿ ಹೊರಬೀಳುತ್ತಿದೆ. ಬಹಳಷ್ಟು ಮಂದಿ ಈ ದೌರ್ಜನ್ಯ ಎದುರಿಸಿದ್ದಾರೆ. ಪ್ರಕರಣ ಸಂಬಂಧ ಎಂಟು ಮಂದಿಯನ್ನು ಬಂಧಿಸಲಾಗಿದೆ. ಇದೀಗ ಟೆಕ್ಕಿಯೊಬ್ಬರು ನೀಡಿರುವ ದೂರಿನ ಪ್ರಕಾರ, ಅವರು 2024ರ ಜುಲೈನಲ್ಲಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್‌ನ ನಾಸಿಕ್ ಶಾಖೆಯಲ್ಲಿ ಅಸೋಸಿಯೇಟ್ ಆಗಿ ಸೇರಿದರು. ಅವರು ಕಚೇರಿಯಲ್ಲಿದ್ದಾಗ, ತಮ್ಮ ದೇವರು, ದೇಹದ ಆಕಾರ ಮತ್ತು ಗಾತ್ರದ ಬಗ್ಗೆ ಅಪಹಾಸ್ಯಕ್ಕೆ ಒಳಗಾಗಿದ್ದಾಗಿ ಹೇಳಿದ್ದಾರೆ.
ಈ ಅಪಹಾಸ್ಯ ಅಲ್ಲಿಗೆ ನಿಲ್ಲಲಿಲ್ಲ. ಒಂದು ದಿನ, ಬಂಧಿತ ಆರೋಪಿಗಳಲ್ಲಿ ಒಬ್ಬನಾದ ಶಫಿ ಶೇಖ್, ಯುವತಿಯ ಪಕ್ಕದಲ್ಲಿ ಕುಳಿತು ತನ್ನ ಪಾದಗಳನ್ನು ಆಕೆಯ ಪಾದಗಳ ಮೇಲೆ ಉಜ್ಜಲು ಪ್ರಾರಂಭಿಸಿದ್ದ. ನಂತರ ಆಕೆಯ ಪಕ್ಕದಲ್ಲಿರುವ ಕೀಪ್ಯಾಡ್ ಬಳಸುವ ನೆಪದಲ್ಲಿ ಖಾಸಗಿ ಭಾಗಗಳನ್ನು ಸ್ಪರ್ಸಿಸಿದ್ದ. ಆಘಾತಕ್ಕೊಳಗಾದ ಆಕೆ ದೂರ ಸರಿದಿದ್ದಳು. ಶಫಿ ಮುಗುಳ್ನಕ್ಕು, ಕಣ್ಸನ್ನೆ ಮಾಡಿ ಹೊರಟುಹೋದನು ಎನ್ನುವ ವಿಚಾರ ಇದೀಗ ಬೆಳಕಿಗೆ ಬಂದಿದೆ.
ಕಚೇರಿಯಲ್ಲಿ ಲೈಂಗಿಕ ಕಿರುಕುಳ ಮತ್ತು ಬಲವಂತದ ಧಾರ್ಮಿಕ ಮತಾಂತರದ ಆರೋಪದ ಮೇಲೆ ದೂರು ದಾಖಲಿಸಿದ ಹಲವು ಮಹಿಳೆಯರಲ್ಲಿ ಇವರೂ ಒಬ್ಬರು. ಇವರೂ ಸೇರಿ ಆರು ಮಂದಿ ಮಹಿಳೆಯರು ದೂರು ನೀಡಿದ್ದಾರೆ. ಸಂತ್ರಸ್ತರು ನೀಡಿದ ದೂರಿನ ಆಧಾರದ ಮೇಲೆ ಒಂಬತ್ತು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ.
ಕಂಪನಿಯಲ್ಲಿ ಲೈಂಗಿಕ ಕಿರುಕುಳ, ಮತಾಂತರ ಕೇಸ್: ಯಾವುದೇ ಆಂತರಿಕ ದೂರು ಬಂದಿಲ್ಲ ಎಂದ ಟಿಸಿಎಸ್!
ನಾಸಿಕ್ ಕೇಂದ್ರದಲ್ಲಿ ಕೆಲಸದ ವಾತಾವರಣ ಭಯಾನಕವಾಗಿದೆ ಎಂದು ಸಂತ್ರಸ್ತರು ಆರೋಪಿಸಿದ್ದಾರೆ. ಆರೋಪಿ ಟೆಕ್ಕಿಗಳ ಗುಂಪು ನಿರ್ಭಯದಿಂದ ಕಾರ್ಯನಿರ್ವಹಿಸುತ್ತಿದೆ ಮತ್ತು ಹಿರಿಯ ಅಧಿಕಾರಿಗಳಿಂದ ರಕ್ಷಿಸಲ್ಪಟ್ಟಿದೆ ಎಂದು ಹೇಳಿದರು.
ಕಂಪನಿಯ ಪ್ರಧಾನ ವ್ಯವಸ್ಥಾಪಕರು ಸೇರಿ ಹಿರಿಯ ಮಟ್ಟದ ಅಧಿಕಾರಿಗಳು, ದೂರು ನೀಡದಂತೆ ಹೇಳಿದ್ದಾರೆ ಎನ್ನಲಾಗಿದೆ. ಆ ಮೂಲಕ ಆರೋಪಿಗಳನ್ನು ರಕ್ಷಿಸಲು ಮುಂದಾಗಿದ್ದರು. ತನ್ನನ್ನು ಅನುಚಿತವಾಗಿ ಸ್ಪರ್ಶಿಸಲಾಗಿದೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. ಜತೆಗೆ ತಮ್ಮ ದೇವರು ಮತ್ತು ದೇವತೆಗಳ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ. ಅವಹೇಳನಕಾರಿ ಪದಗಳನ್ನು ಬಳಸಲಾಗಿದೆ ಎಂದು ಅವರು ಹೇಳಿದ್ದಾರೆ.
ತನ್ನ ಬಗ್ಗೆ ವಿವರಿಸುತ್ತ ಸಂತ್ರಸ್ತ ಯುವತಿ, 2004ರ ಜುಲೈ 12ರಿಂದ ಟಿಸಿಎಸ್ ನಾಸಿಕ್ ಶಾಖೆಯಲ್ಲಿ ಅಸೋಸಿಯೇಟ್ ಆಗಿ ಕೆಲಸಕ್ಕೆ ಸೇರಿದ್ದಾಗಿ ಹೇಳಿದ್ದಾರೆ. ಪ್ರಸ್ತುತ, ಅವರು ಟೆಲಿ-ಕಾಲಿಂಗ್ ಕಾರ್ಯಾಚರಣೆಗಳನ್ನು ನಿರ್ವಹಿಸುವ ತಂಡದಲ್ಲಿ ಕೆಲಸ ಮಾಡುತ್ತಿದ್ದಾರೆ.
2024ರ ಸೆಪ್ಟೆಂಬರ್ ಆರಂಭದಲ್ಲಿ ತರಬೇತಿ ಅವಧಿಯಲ್ಲಿ ಕಿರುಕುಳ ಪ್ರಾರಂಭವಾಯಿತು ಎಂದು ಅವರು ಹೇಳಿದರು. ಬಂಧಿತ ಮತ್ತೊಬ್ಬ ಆರೋಪಿ ಆಸಿಫ್ ಅನ್ಸಾರಿ ಯಾವುದೇ ಪ್ರಚೋದನೆಯಿಲ್ಲದೆ ತನ್ನ ಮುಂದೆ ನಿಂತು, ತನ್ನ ಎದೆಯನ್ನು ದಿಟ್ಟಿಸಿ ನೋಡಿ ಲೈಂಗಿಕವಾಗಿ ಸನ್ನೆ ಮಾಡಿದ್ದಾಗಿ ತಿಳಿಸಿದ್ದಾರೆ.
ನಿದಾ ಖಾನ್ ಇರುವ ಸ್ಥಳದ ಕುರಿತು ಪೊಲೀಸರಿಗೆ ಪತಿಯಿಂದಲೇ ಮಾಹಿತಿ! ಮತಾಂತರ ಜಾಲದ ಇನ್ನಷ್ಟು ರಹಸ್ಯ ಬಯಲು!
ಆರೋಪಿಗಳಾದ ಅನ್ಸಾರಿ, ತೌಸಿಫ್ ಅತ್ತರ್ ಆಗಾಗ ತನ್ನ ದೇಹವನ್ನು ದಿಟ್ಟಿಸಿ ನೋಡುತ್ತಿದ್ದರು. ತನ್ನ ಬಗ್ಗೆ ಅನುಚಿತ ಕಮೆಂಟ್ ಮಾಡುತ್ತಿದ್ದರು ಎಂದು ಅವರು ಹೇಳಿದ್ದಾರೆ. ಕಿರುಕುಳ ಕೇವಲ ದೈಹಿಕ ನೋಟಕ್ಕೆ ಸೀಮಿತವಾಗಿಲ್ಲ ಎಂದೂ ವಿವರಿಸಿದ್ದಾರೆ.
ಹಿಂದೂ ಧಾರ್ಮಿಕ ಗ್ರಂಥಕ್ಕೆ ಅವಮಾನ
2026ರ ಫೆಬ್ರವರಿಯಲ್ಲಿ ಅತ್ತರ್ ಹಿಂದೂ ಧಾರ್ಮಿಕ ಗ್ರಂಥಗಳು ಮತ್ತು ದೇವತೆಗಳ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾನೆ. 2024ರ ಸೆಪ್ಟೆಂಬರ್ ಮತ್ತು 2026ರ ಫೆಬ್ರವರಿ ನಡುವೆ, ಆಸಿಫ್ ಅನ್ಸಾರಿ ಮತ್ತು ಶಫಿ ಶೇಖ್ ಸೇರಿದಂತೆ ಅನೇಕ ಆರೋಪಿ ಉದ್ಯೋಗಿಗಳು ತನ್ನ ದೇಹದ ಬಗ್ಗೆ ಅಶ್ಲೀಲ ಕಮೆಂಟ್‌ಗಳನ್ನು ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.