ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಹಾಡಹಗಲೇ ಮಹಿಳೆಯ ಸರಗಳವು : ಬೆಚ್ಚಿಬಿದ್ದ ಜನತೆ

ಮೇಲ್ಮಡಿಯಲ್ಲಿದ್ದ ಪ್ರಿಯಾ ಅವರು ತಳಮಹಡಿಗೆ ಸಂಪ್ ಪರೀಕ್ಷೆ ಮಾಡಲು ಬರುತ್ತಿದ್ದಂತೆ ಹೊಂಚು ಹಾಕಿ ಕಾದಿದ್ದ ಕಳ್ಳರು ಸರಕಳವು ಮಾಡಿಕೊಂಡು ಪರಾರಿಯಾಗಿದ್ದಾರೆ. ಘಟನೆಯಾದ ಕೂಡಲೇ ಪ್ರಿಯಾ ಅವರ ಪತಿ ಕಾರ್ತಿಕ್ ಮನೆಗೆ ಬಂದು ಮಾಹಿತಿ ಪಡೆದು ಕೂಡಲೇ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಹಾಡಹಗಲೇ ಮಹಿಳೆಯ ಸರಗಳವು : ಬೆಚ್ಚಿಬಿದ್ದ ಜನತೆ

-

Profile
Ashok Nayak May 3, 2026 11:48 PM

ಚಿಕ್ಕಬಳ್ಳಾಪುರ : ಮುಸುಕುಧಾರಿ ಇಬ್ಬರು ಕಳ್ಳರು ಹಾಡಹಗಲೇ ಮಹಿಳೆಯೋರ್ವರ 30 ಗ್ರಾಂ ಸರಗಳವು ಮಾಡಿರುವ ಘಟನೆ ನಗರದ ಚಾಮರಾಜಪೇಟೆಯಲ್ಲಿ ಭಾನುವಾರ ನಡೆದಿದೆ. ನಗರದ ವಾರ್ಡ್ 23ರ ನಿವಾಸಿ ಪ್ರಿಯ ಎಂಬ ಮಹಿಳೆಯೇ ಸರಕಳೆದುಕೊಂಡ ಮಹಿಳೆಯಾಗಿದ್ದು, ಪಲ್ಸರ್ 220 ಬೈಕ್‌ನಲ್ಲಿ ಬಂದ ಇಬ್ಬರು ಕಳ್ಳರು ಸರಗಳವು ಮಾಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Bengaluru Crime news: ಬೆಂಗಳೂರಿನ ಮನೆಯಲ್ಲಿ ದಂಪತಿ ಶವಗಳು ಪತ್ತೆ; ಕೊಲೆ ಮಾಡಿ ಆತ್ಮಹತ್ಯೆ ಶಂಕೆ

ಮೇಲ್ಮಡಿಯಲ್ಲಿದ್ದ ಪ್ರಿಯಾ ಅವರು ತಳಮಹಡಿಗೆ ಸಂಪ್ ಪರೀಕ್ಷೆ ಮಾಡಲು ಬರುತ್ತಿದ್ದಂತೆ ಹೊಂಚುಹಾಕಿ ಕಾದಿದ್ದ ಕಳ್ಳರು ಸರಕಳವು ಮಾಡಿಕೊಂಡು ಪರಾರಿಯಾಗಿದ್ದಾರೆ. ಘಟನೆಯಾದ ಕೂಡಲೇ ಪ್ರಿಯಾ ಅವರ ಪತಿ ಕಾರ್ತಿಕ್ ಮನೆಗೆ ಬಂದು ಮಾಹಿತಿ ಪಡೆದು ಕೂಡಲೇ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಸ್ಥಳಕ್ಕೆ ಬಂದ ಪೊಲೀಸರು ಸ್ಥಳಮಹಜರು ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದು ಕಳ್ಳರಿಗಾಗಿ ಬಲೆ ಬೀಸಿದ್ದು ಸಿಸಿಟಿವಿ ಪರಿಶೀಲನೆಗೆ ತೊಡಗಿದ್ದು ಶೀಘ್ರವೇ ಕಳ್ಳರ ಹೆಡೆಮುರಿ ಕಟ್ಟುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.