ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

109 ಬಾಕ್ಸ್‌ ಸ್ಫೋಟಕಗಳಿದ್ದ ಟ್ರಕ್‌ ವಶಕ್ಕೆ; ದೆಹಲಿ ದಾಳಿಯಂತೆ ಸ್ಫೋಟ ನಡೆಸಲು ಇತ್ತಾ ಪ್ಲಾನ್‌?

ಸುಮಾರು 109 ಪೆಟ್ಟಿಗೆಗಳಲ್ಲಿ ಸ್ಫೋಟಕಗಳನ್ನು ಸಾಗಿಸುತ್ತಿದ್ದ ಟ್ರಕ್ ವೊಂದನ್ನು ರಾಜಸ್ಥಾನದಲ್ಲಿ ವಶಕ್ಕೆ ಪಡೆಯಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಬಂಧಿಸಲಾಗಿದೆ. 10 ಕಿಮೀ ವ್ಯಾಪ್ತಿಗೆ ಹಾನಿ ಉಂಟು ಮಾಡಬಹುದಾದ 100 ಕ್ಕೂ ಹೆಚ್ಚು ಪೆಟ್ಟಿಗೆಗಳಲ್ಲಿ ಜೆಲಾಟಿನ್ ಸ್ಟಿಕ್‌ಗಳು, ಡಿಟೋನೇಟರ್‌ಗಳು ಇದ್ದವು.

109 ಪೆಟ್ಟಿಗೆ ಸ್ಫೋಟಕ ಸಾಗಿಸುತ್ತಿದ್ದ ಟ್ರಕ್

(ಸಂಗ್ರಹ ಚಿತ್ರ) -

ಜೈಪುರ: ಭಾರಿ ಪ್ರಮಾಣದಲ್ಲಿ ಸ್ಪೋಟಕಗಳನ್ನು (explosives seized) ಸಾಗಿಸುತ್ತಿದ್ದ ಟ್ರಕ್ (truk) ವೊಂದನ್ನು ವಶಕ್ಕೆ ಪಡೆದಿರುವ ರಾಜಸ್ಥಾನ ಪೊಲೀಸರು (rajasthan police) ಇಬ್ಬರನ್ನು ಬಂಧಿಸಿದ್ದಾರೆ. ರಾಜಸ್ಥಾನದ ರಾಜ್‌ಸಮಂದ್‌ನಲ್ಲಿ ಅಪಾರ ಪ್ರಮಾಣ ಸ್ಪೋಟಕಗಳನ್ನು ತುಂಬಿಕೊಂಡು ಪಿಕಪ್ ವಾಹನವೊಂದು ಸಾಗುತ್ತಿತ್ತು. ಇದರ ಮಾಹಿತಿ ತಿಳಿದ ಪೊಲೀಸರು ಟ್ರಕ್ ಅನ್ನು ವಶಕ್ಕೆಪಡೆದಿದೆ. ಸುಮಾರು 10 ಕಿ.ಮೀ. ವ್ಯಾಪ್ತಿಗೆ ಹಾನಿ ಉಂಟು ಮಾಡಬಹುದಾದ ಸಾಮರ್ಥ್ಯವಿರುವ 100ಕ್ಕೂ ಹೆಚ್ಚು ಪೆಟ್ಟಿಗೆಗಳ ಜೆಲಾಟಿನ್ ಸ್ಟಿಕ್‌ಗಳು, ಡಿಟೋನೇಟರ್‌ಗಳು ಇದ್ದವು. ಗಣಿಗಾರಿಕಾ ಚಟುವಟಿಕೆಗಳಿಗಾಗಿ ಇದನ್ನು ಸಾಗಿಸಲಾಗುತ್ತಿತ್ತು ಎನ್ನಲಾಗಿದೆ.

ಖಚಿತ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ರಾಜಸ್ಥಾನದ ರಾಜ್‌ಸಮಂದ್‌ನ ತ್ರಿನೇತ್ರ ವೃತ್ತದಲ್ಲಿ ಟ್ರಕ್ ವೊಂದನ್ನು ವಶಕ್ಕೆ ಪಡೆದಿದ್ದಾರೆ. ಇದರಲ್ಲಿ ಭಾರಿ ಪ್ರಮಾಣದ ಸ್ಫೋಟಕಗಳು ಪತ್ತೆಯಾಗಿವೆ. ಟ್ರಕ್ ನಲ್ಲಿದ್ದ ಸುಮಾರು 109 ಪೆಟ್ಟಿಗೆಗಳಲ್ಲಿ ಒಟ್ಟು 981 ಜೆಲಾಟಿನ್ ಸ್ಟಿಕ್‌ಗಳು, 93 ಡಿಟೋನೇಟರ್‌ಗಳು ಮತ್ತು ಸುರಕ್ಷತಾ ಫ್ಯೂಸ್ ಅನ್ನು ಪೊಲೀಸ್ ತಂಡ ವಶಕ್ಕೆ ಪಡೆದಿದೆ.

Spying for Pakistan: ಪಾಕ್‌ ಪರ ಬೇಹುಗಾರಿಕೆ ಆರೋಪ; ಹಣ ಸಂಗ್ರಹಿಸುತ್ತಿದ್ದ ವಕೀಲನ ಬಂಧನ

ಟ್ರಕ್ ನಲ್ಲಿದ್ದ ರಾಜಸ್ಥಾನದ ಭಗವತ್ ಸಿಂಗ್, ಹಿಮ್ಮತ್ ಸಿಂಗ್ ಎಂಬವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಟ್ರಕ್ ನಲ್ಲಿ ಸ್ಫೋಟಕಗಳನ್ನು ಸಾಗಿಸಲು ಅಗತ್ಯವಾದ ದಾಖಲೆಗಳನ್ನು ಒದಗಿಸಲು ವಿಫಲರಾಗಿರುವುದರಿಂದ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ನಾಥದ್ವಾರದ ಉಪ ಪೊಲೀಸ್ ವರಿಷ್ಠಾಧಿಕಾರಿ ಶಿಪ್ರಾ ರಾಜಾವತ್, ಈ ಬಗ್ಗೆ ಸಂಪೂರ್ಣ ತನಿಖೆ ನಡೆಯುತ್ತಿದ್ದು, ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ. ಖಚಿತ ಮಾಹಿತಿ ಮೇರೆಗೆ ಪೊಲೀಸರು ದಿಗ್ಬಂಧನ ಹಾಕಿ ಟ್ರಕ್ ಅನ್ನು ವಶಕ್ಕೆ ಪಡೆದರು. ಒಟ್ಟು 981 ಶೆಲ್‌ಗಳು, 93 ಡಿಟೋನೇಟರ್‌ಗಳು ಮತ್ತು 30 ಅಡಿ ಸುರಕ್ಷತಾ ಫ್ಯೂಸ್ ಅನ್ನು ಒಳಗೊಂಡಿರುವ 100ಕ್ಕೂ ಹೆಚ್ಚು ಪೆಟ್ಟಿಗೆಗಳಲ್ಲಿ ಸ್ಫೋಟಕ ವಸ್ತುಗಳು ಪತ್ತೆಯಾಗಿವೆ ಎಂದರು.



ಪ್ರಕರಣಕ್ಕೆ ಸಂಬಂಧಿಸಿ ಚಾಲಕ ಮತ್ತು ಸಹಚರನ ಬಳಿ ಯಾವುದೇ ಅಗತ್ಯವಾದ ಕಡ್ಡಾಯ ದಾಖಲೆಗಳು ಇಲ್ಲದೇ ಇದ್ದುದರಿಂದ ಅವರನ್ನು ಬಂಧಿಸಲಾಗಿದೆ ಮತ್ತು ಟ್ರಕ್ ಅನ್ನು ವಶಕ್ಕೆ ಪಡೆಯಲಾಗಿದೆ. ಈ ಪ್ರದೇಶದಲ್ಲಿ ಅನೇಕ ಅಮೃತಶಿಲೆ ಗಣಿಗಳು ಇರುವುದರಿಂದ ಗಣಿಗಾರಿಕೆಗೆ ಬಳಸಲು ಈ ಸ್ಫೋಟಕಗಳನ್ನು ಸಾಗಿಸುತ್ತಿದ್ದ ಶಂಕೆ ಇದೆ. ಈ ಕುರಿತು ಬಂಧಿತರಿಂದ ವಿಚಾರಣೆ ನಡೆಸುವುದಾಗಿ ಅವರು ಹೇಳಿದರು.

Imran Khan:" ಅಸೀಮ್‌ ಮುನೀರ್‌ ಮಾನಸಿಕ ಅಸ್ವಸ್ಥ"; ಜೈಲಿನಲ್ಲಿರುವ ಇಮ್ರಾನ್‌ ಖಾನ್‌ಗೆ ನೀಡ್ತಾ ಇರೋ ಚಿತ್ರಹಿಂಸೆ ಏನು?

ಬಾಂಬ್ ಬೆದರಿಕೆ

ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ನಗರದ ಕೆಲವು ಮಾಲ್​ಗಳಿಗೆ ಬಾಂಬ್ ಬೆದರಿಕೆ ಹಾಕಲಾಗಿದೆ. ‘ಜೈಷ್-ಇ-ಮೊಹಮ್ಮದ್’ ಭಯೋತ್ಪಾದಕ ಸಂಘಟನೆ ಹೆಸರಿನಲ್ಲಿ ಮೋಹಿತ್ ಕುಮಾರ್ ಎಂಬಾತ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಇ-ಮೇಲ್‌ ವಿಳಾಸಕ್ಕೆ ಬಾಂಬ್ ಬೆದರಿಕೆ ಸಂದೇಶ ಕಳುಹಿಸಿದ್ದಾನೆ.

ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ವಿಮಾನ ನಿಲ್ದಾಣ ಸೇರಿದಂತೆ ಬೆದರಿಕೆ ಸಂದೇಶದಲ್ಲಿ ಉಲ್ಲೇಖಿಸಲಾಗಿರುವ ಮಾಲ್‌ಗಳಲ್ಲಿ ತೀವ್ರ ತಪಾಸಣೆ ನಡೆಸಿದ್ದಾರೆ. ಆದರೆ ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗಿಲ್ಲ. ಹೀಗಾಗಿ ಇದು ಹುಸಿ ಬಾಂಬ್ ಬೆದರಿಕೆ ಎಂಬುದು ದೃಢಪಟ್ಟಿದೆ. ಈ ಕುರಿತು ಕೇಂದ್ರ ಸೈಬರ್ ಕ್ರೈಂ ಪೊಲೀಸ್ ಸ್ಟೇಷನ್ ನಲ್ಲಿ ಎಫ್​ಐಆರ್ ದಾಖಲಿಸಲಾಗಿದೆ.