ಉತ್ತರ ಪ್ರದೇಶ: ಟೈಪಿಸ್ಟ್ (UP typist) ವೊಬ್ಬರಿಗೆ ಸೇರಿದ ಮನೆ, ಕಚೇರಿ ಮೇಲೆ ದಾಳಿ ನಡೆಸಿದ ಉತ್ತರ ಪ್ರದೇಶದ ವಿಜಿಲೆನ್ಸ್ ತಂಡ (UP Vigilance team) ಆತನಿಗೆ ಸೇರಿದ ತೋಟದ ಮನೆಗಳು ಮತ್ತು ಪ್ಲಾಟ್‌ಗಳು ಸೇರಿದಂತೆ 33 ಆಸ್ತಿ ನೋಂದಣಿಗಳಿಗೆ ಸಂಬಂಧಿಸಿದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ. ಬಿಹಾರದ (Bihar) ಬಂಕಾ, ಭಾಗಲ್ಪುರ್ ಜಿಲ್ಲೆ ಮತ್ತು ಜಾರ್ಖಂಡ್‌ನ (Jharkhand) ದಿಯೋಘರ್ ಜಿಲ್ಲೆಯಲ್ಲಿ ವಿಜಿಲೆನ್ಸ್ ಇಲಾಖೆಯ 24 ಸದಸ್ಯರ ಮೂರು ತಂಡಗಳು ದಾಳಿ (Vigilance raid) ನಡೆಸಿ ಶೋಧ ಕಾರ್ಯಾಚರಣೆ ನಡೆಸಿದೆ.
ಉತ್ತರ ಪ್ರದೇಶದ ಮೌ ಜಿಲ್ಲಾ ಸರಬರಾಜು ಅಧಿಕಾರಿಯ ಕಚೇರಿಯಲ್ಲಿ ನಿಯೋಜಿಸಲಾದ ಟೈಪಿಸ್ಟ್ ವೊಬ್ಬರು 17 ಕೋಟಿ ರೂ. ಗಳಿಗಿಂತ ಹೆಚ್ಚು ಮೌಲ್ಯದ ಆಸ್ತಿ ಹೊಂದಿದ್ದಾರೆ, ಒಬ್ಬ ಟೈಪಿಸ್ಟ್ ಯಾವ ರೀತಿ ಸಂಬಳ ಪಡೆಯುತ್ತಿದ್ದಾರೆ ಎನ್ನುವ ಪ್ರಶ್ನೆ ಕೇಳಿ ಬಂದ ಬಳಿಕ ವಿಜಿಲೆನ್ಸ್ ತನಿಖೆಗೆ ಆದೇಶಿಸಲಾಯಿತು.
ವಾಕಿಂಗ್‌ಗೆ ಹೋಗುತ್ತಿದ್ದ ಬಾಣಂತಿ ಮೇಲೆ ಸಾಕು ನಾಯಿ ದಾಳಿ!
ಬಿಹಾರ, ಜಾರ್ಖಂಡ್‌ನ ಮೂರು ಜಿಲ್ಲೆಗಳಲ್ಲಿ ಉತ್ತರ ಪ್ರದೇಶ ವಿಜಿಲೆನ್ಸ್ ಇಲಾಖೆಯ ಗೋರಖ್‌ಪುರ ವಲಯವು ನಡೆಸಿದ ದಾಳಿಯ ಬಳಿಕ ಟೈಪಿಸ್ಟ್ ಗಗನ್ ಕುಮಾರ್ ಸಿಂಗ್ ಒಡೆತನದಲ್ಲಿದ್ದ ಅಪಾರ ಮೌಲ್ಯದ ಆಸ್ತಿಗಳನ್ನು ಪತ್ತೆ ಹಚ್ಚಿದ್ದಾರೆ. ಇದು ಅಧಿಕೃತ ಮೂಲದಿಂದ ಬಂದ ಆಸ್ತಿ ಎನ್ನುವ ಶಂಕೆ ವ್ಯಕ್ತವಾಗಿದೆ.
ಗಗನ್ ಕುಮಾರ್ ಗೆ ಸೇರಿದ ಬಿಹಾರದ ಬಂಕಾ, ಭಾಗಲ್ಪುರ ಜಿಲ್ಲೆಗಳಲ್ಲಿ ಮತ್ತು ಜಾರ್ಖಂಡ್‌ನ ದಿಯೋಘರ್ ಜಿಲ್ಲೆಯಲ್ಲಿನ ಆಸ್ತಿಗಳ ಮೇಲೆ ದಾಳಿ ನಡೆಸಿದ 24 ಸದಸ್ಯರ ಮೂರು ತಂಡಗಳು ತೋಟದ ಮನೆಗಳು ಮತ್ತು ಪ್ಲಾಟ್‌ಗಳು ಸೇರಿದಂತೆ 33 ಆಸ್ತಿ ನೋಂದಣಿಗಳಿಗೆ ಸಂಬಂಧಿಸಿದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.
ದೆಹಲಿ ಪೊಲೀಸ್ ಕಮಾಂಡೋ ಹತ್ಯೆ ಕೇಸ್; ಕೊಲೆಗೂ ಮುನ್ನ ವಿಡಿಯೋ ಮಾಡಿದ್ದ ಪಾಪಿ ಪತಿ
ಬಂಕಾದಲ್ಲಿ ಗಗನ್ ಪೂರ್ವಜರ ಮನೆಯಲ್ಲಿ 4.29 ಕೋಟಿ ರೂ. ಮೌಲ್ಯದ ಗೋದಾಮು, 1.70 ಕೋಟಿ ರೂ. ಮೌಲ್ಯದ ವಸತಿ ಕಟ್ಟಡ, ಭಾಗಲ್ಪುರದಲ್ಲಿ 34 ಲಕ್ಷ ರೂ. ಮೌಲ್ಯದ ಫ್ಲಾಟ್, ದಿಯೋಘರ್‌ನಲ್ಲಿ 1.17 ಕೋಟಿ ರೂ. ಮೌಲ್ಯದ ಮತ್ತೊಂದು ಗೋದಾಮು ದಾಖಲೆಯನ್ನು ತನಿಖೆಗಾಗಿ ವಶಕ್ಕೆ ಪಡೆದಿದ್ದಾರೆ.
ಉತ್ತರ ಪ್ರದೇಶದ ಮೌ ನಲ್ಲಿನ ಜಿಲ್ಲಾ ಸರಬರಾಜು ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗುಮಾಸ್ತನೊಬ್ಬ ಕೋಟಿಗಟ್ಟಲೆ ರೂ. ಮೌಲ್ಯದ ಸಂಪತ್ತನ್ನು ಗಳಿಸಿದ್ದು ಹೇಗೆ ಎನ್ನುವ ಕುರಿತು ಅಕ್ರಮ ಆಸ್ತಿ ಪ್ರಕರಣದ ಅಡಿಯಲ್ಲಿ ಪ್ರಕರಣ ದಾಖಲಿಸಿರುವ ವಿಜಿಲೆನ್ಸ್ ಇಲಾಖೆ ಈ ಕುರಿತು ತನಿಖೆ ನಡೆಸುತ್ತಿದೆ.