ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Gudibande News: ಚುನಾವಣಾ ಸಮಯದಲ್ಲಿ ಟೂರ್‌ʼಗೆ ಬಂದವರಿಗೆ ಶಾಸಕರ ಬಗ್ಗೆ ಮಾತನಾಡುವ ನೈತಿಕತೆಯಿಲ್ಲ : ಲಕ್ಷ್ಮೀನಾರಾಯಣ

ಕಳೆದೆರಡು ದಿನಗಳ ಹಿಂದೆ ಮುಖಂಡ ಡಿ.ಜೆ.ನಾಗರಾಜರೆಡ್ಡಿ ಶಾಸಕ ಸುಬ್ಬಾರೆಡ್ಡಿಯವರ ವಿರುದ್ದ ಕೆಲವೊಂದು ಹೇಳಿಕೆಗಳನ್ನು ನೀಡಿದ್ದು, ಅದರ ಹೇಳಿಕೆಗಳ ಕುರಿತು ಪಟ್ಟಣದ ಪತ್ರಕರ್ತರ ಭವನದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗುಡಿಬಂಡೆ ತಾಲೂಕಿನವರೇ ಆದ ಡಿ.ಜೆ.ನಾಗರಾಜರೆಡ್ಡಿಯವರು ರಾಜಕೀಯ ಮಾಡಲಿ ನಾವು ಅದಕ್ಕೆ ವಿರೋಧವಿಲ್ಲ, ತಕರಾರಿಲ್ಲ

ನಿಮ್ಮ ಜೊತೆಗೆ ಚರ್ಚೆ ಮಾಡಲು ನಾವು ಸಾಕು, ಶಾಸಕರ ಅಗತ್ಯತೆ ಇಲ್ಲ

ಶಾಸಕ ಸುಬ್ಬಾರೆಡ್ಡಿಯವರ ವಿರುದ್ದ ಮುಖಂಡ ಡಿ.ಜೆ.ನಾಗರಾಜ್ ರವರು ನೀಡಿದ ಆರೋಪಗಳ ವಿರುದ್ದ ಕಾಂಗ್ರೇಸ್ ಮುಖಂಡರು ಪತ್ರಿಕಾಗೋಷ್ಟಿಯನ್ನು ನಡೆಸಿದರು. -

Profile
Ashok Nayak May 1, 2026 12:05 AM

ಗುಡಿಬಂಡೆ: ಕ್ಷೇತ್ರದಲ್ಲಿ ಚುನಾವಣಾ ಸಮಯ ಹತ್ತಿರ ಬರುತ್ತಿದ್ದಂತೆ ಕೆಲ ರಾಜಕಾರಣಿಗಳು ಟೂರ್‌ʼಗೆ ಬಂದಂತೆ ಬರುತ್ತಾರೆ. ಅಂತಹವರು ಜನಮನ ಗೆದ್ದ ಶಾಸಕ ಸುಬ್ಬಾರೆಡ್ಡಿಯವರ ಕುರಿತು ಮಾತನಾಡುವ ನೈತಿಕೆ ಇಲ್ಲ ಎಂದು ಕಾಂಗ್ರೆಸ್ ಮುಖಂಡ ಲಕ್ಷ್ಮೀನಾರಾಯಣ ತಿಳಿಸಿದರು.

ಕಳೆದೆರಡು ದಿನಗಳ ಹಿಂದೆ ಮುಖಂಡ ಡಿ.ಜೆ.ನಾಗರಾಜರೆಡ್ಡಿ ಶಾಸಕ ಸುಬ್ಬಾರೆಡ್ಡಿಯವರ ವಿರುದ್ದ ಕೆಲವೊಂದು ಹೇಳಿಕೆಗಳನ್ನು ನೀಡಿದ್ದು, ಅದರ ಹೇಳಿಕೆಗಳ ಕುರಿತು ಪಟ್ಟಣದ ಪತ್ರಕರ್ತರ ಭವನದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗುಡಿಬಂಡೆ ತಾಲೂಕಿನವರೇ ಆದ ಡಿ.ಜೆ.ನಾಗರಾಜರೆಡ್ಡಿಯವರು ರಾಜಕೀಯ ಮಾಡಲಿ ನಾವು ಅದಕ್ಕೆ ವಿರೋಧವಿಲ್ಲ, ತಕರಾರಿಲ್ಲ. ಆದರೆ ಚುನಾವಣೆ ಹತ್ತಿರ ಬಂದ ಸಮಯದಲ್ಲಿ ಕ್ಷೇತ್ರಕ್ಕೆ ಬಂದು ಸತತ ಮೂರು ಬಾರಿ ಗೆದ್ದ ಶಾಸಕರ ವಿರುದ್ದ ಇಲ್ಲ ಸಲ್ಲದ ಆರೋಪ ಗಳನ್ನು ಮಾಡುವುದು ಚಾಳಿಯಾಗಿಟ್ಟುಕೊಂಡಿದ್ದಾರೆ. ʼ

ಇದನ್ನೂ ಓದಿ: Gudibande News: ಕಾಮಗಾರಿ ಬಿಲ್ ಮಾಡಲು 3.5 ಲಕ್ಷ ಲಂಚ: ಗುಡಿಬಂಡೆ ಪಿಡಿಒ ವೀಡಿಯೋ ವೈರಲ್

ನೀವು ಶಾಸಕರ ಜೊತೆಗೆ ಚರ್ಚೆಗೆ ಕರೆದಿದ್ದೀರಿ ಅದಕ್ಕೆ ನೀವು ಸೂಕ್ತರಲ್ಲ. ನಿಮಗೆ ನಾವೇ ಉತ್ತರ ಕೊಡೋಕೆ ಸಿದ್ದವಾಗಿದ್ದೇವೆ. ಗುಡಿಬಂಡೆಯವರೇ ಆದ ನೀವು ತಾಲೂಕಿಗೆ ಕೊಟ್ಟ ಕೊಡುಗೆ ಆದರೂ ಏನು, ಶಾಸಕರಾದವರು ಭೂಮಿ ಖರೀದಿ ಮಾಡಬಾರದೇ, ಕಾನೂನಿ ನಂತೆ ಭೂಮಿ ಖರೀದಿ ಮಾಡಿದ್ದಾರೆ. ಈ ಕುರಿತು ನಿಮ್ಮ ಜೊತೆಗೆ ಚರ್ಚೆ ಮಾಡಲು ನಾವು ಸಾಕು ಶಾಸಕರ ಅಗತ್ಯತೆ ಇಲ್ಲ ಎಂದು ಆಕ್ರೋಶ ಹೊರ ಹಾಕಿದರು.

ಬಳಿಕ ಮುಖಂಡ ಪ್ರಕಾಶ್ ಮಾತನಾಡಿ, ಇಡೀ ಬಾಗೇಪಲ್ಲಿ-ಗುಡಿಬಂಡೆ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಬಾರಿ ಗೆದ್ದವರು ಮತ್ತೊಮ್ಮೆ ಗೆದ್ದಿರುವ ಚರಿತ್ರೆ ಇಲ್ಲ. ಆದರೆ ಸುಬ್ಬಾ ರೆಡ್ಡಿಯವರು ಸತತ ಮೂರು ಬಾರಿ ಶಾಸಕರಾಗಿ ದಾಖಲೆ ಸೃಷ್ಟಿಸಿದ್ದಾರೆ. ಅವರು ಜನರ ಪರ ಕೆಲಸ ಮಾಡದೇ ಇದಿದ್ದರೇ ಅವರನ್ನು ಜನರು ಏಕೆ ಆಯ್ಕೆ ಮಾಡುತ್ತಾರೆ. ಇತ್ತೀಚೆಗೆ ಚುನಾ ವಣೆ ಹತ್ತಿರ ಬರುತ್ತಿದ್ದಂತೆ ಶಾಸಕರ ಮೇಲೆ ಆರೋಪಗಳನ್ನು ಮಾಡುವುದು ಸಾಮಾನ್ಯ ವಾಗಿದೆ. ಆಧಾರವಿಲ್ಲದೇ ತಾವು ಈ ರೀತಿಯ ಆರೋಪಗಳನ್ನು ಮಾಡುವುದು ಸರಿಯಲ್ಲ. ಇದು ಮುಂದುವರೆದರೇ ಅದಕ್ಕೆ ತಕ್ಕ ಪಾಠ ಕಲಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಇದೇ ಸಮಯದಲ್ಲಿ ಮುಖಂಡ ದಪ್ಪರ್ತಿ ನಂಜುಂಡ, ಕೆಡಿಪಿ ಸದಸ್ಯ ರಿಯಾಜ್ ಪಾಷ ಮಾತನಾಡಿದರು. ಈ ಸಮಯದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆದಿರೆಡ್ಡಿ, ಮುಖಂಡರಾದ ಆನಂದರೆಡ್ಡಿ, ರಮೇಶ್, ಮಂಜುನಾಥ್, ನವೀನ್ ರಾಜ್ ಸೇರಿದಂತೆ ಹಲವರು ಇದ್ದರು.