ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ನೀವು ಬಳಸುವ ಲಿಪ್‌ಸ್ಟಿಕ್ ಸುರಕ್ಷಿತವೇ? ಆರೋಗ್ಯ ಅಪಾಯದ ಬಗ್ಗೆ ತಜ್ಞರ ಎಚ್ಚರಿಕೆ ಏನು?

Health Tips: ಇತ್ತೀಚೆಗೆ ಅನೇಕ ಬ್ರ್ಯಾಂಡ್ ನ ಲಿಪ್ ಸ್ಟಿಕ್ ಗಳು ಮಾರುಕಟ್ಟೆಗೆ ಬಂದಿದ್ದು ಮ್ಯಾಟ್, ಕ್ರೀಮ್, ಗ್ಲಾಸ್ ಮುಂತಾದ ವಿಧಗಳಲ್ಲಿ ಲಭ್ಯವಿದೆ. ಇತ್ತೀಚೆಗಂತು ಮಕ್ಕಳಿಂದ ಹಿಡಿದು ಹಿರಿಯರು ಕೂಡ ಲಿಪ್‌ಸ್ಟಿಕ್ ಅನ್ನು ಪ್ರಯಾಣದ ಸಂದರ್ಭದಲ್ಲಿಯೂ ಬಳಸುವಷ್ಟು ಅವಲಂಬಿಸಿದ್ದಾರೆ. ಆದರೆ ಇದು ಆರೋಗ್ಯಕ್ಕೆ ಸೂಕ್ತವೇ ಎನ್ನುವ ಪ್ರಶ್ನೆ ಹಲವರಲ್ಲಿ ಇದೆ. ನಿಮ್ಮ ಸೌಂದರ್ಯಕ್ಕಾಗಿ ಆರೋಗ್ಯವನ್ನು ಹಾಳುಮಾಡಬಾರದು ಎಂದು ಆರೋಗ್ಯ ತಜ್ಞರು ಎಚ್ಚರಿಕೆ ನೀಡಿದ್ದು ಆರೋಗ್ಯಕ್ಕೆ ಎಷ್ಟು ಅಪಾಯಕಾರಿ ಎಂದು ಮಾಹಿತಿ ನೀಡಿದ್ದಾರೆ.

ನಿಮ್ಮ ಲಿಪ್‌ಸ್ಟಿಕ್ ಸುರಕ್ಷಿತವೇ? ಆರೋಗ್ಯ ತಜ್ಞರು ಹೇಳೋದೇನು?

ಸಂಗ್ರಹ ಚಿತ್ರ -

Profile
Pushpa Kumari Feb 28, 2026 10:00 AM

ನವದೆಹಲಿ,ಫೆ.27: ಹೆಣ್ಮಕ್ಕಳ ಅತೀ ಇಷ್ಟವಾದ ವಸ್ತುಗಳಲ್ಲಿ ಲಿಪ್‌ಸ್ಟಿಕ್ (Lipstick for health) ಕೂಡ ಸೇರಿದೆ. ಮುಖದ ಅಂದವನ್ನು ಹೆಚ್ಚಿಸಲು ಲಿಪ್ ಸ್ಟಿಕ್ ಪ್ರಮುಖವಾಗಿದ್ದು ತುಟಿಗಳು ಹೊಳಪಾಗಿ ಮತ್ತು ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ. ಇತ್ತೀಚೆಗೆ ಅನೇಕ ಬ್ರ್ಯಾಂಡ್ ನ ಲಿಪ್ ಸ್ಟಿಕ್ ಗಳು ಮಾರುಕಟ್ಟೆಗೆ ಬಂದಿದ್ದು ಮ್ಯಾಟ್, ಕ್ರೀಮ್, ಗ್ಲಾಸ್ ಮುಂತಾದ ವಿಧಗಳಲ್ಲಿ ಲಭ್ಯವಿದೆ. ಇತ್ತೀಚೆಗಂತು ಮಕ್ಕಳಿಂದ ಹಿಡಿದು ಹಿರಿಯರು ಕೂಡ ಲಿಪ್‌ಸ್ಟಿಕ್ ಅನ್ನು ಪ್ರಯಾಣದ ಸಂದರ್ಭದಲ್ಲಿಯೂ ಬಳಸುವಷ್ಟು ಅವಲಂಬಿಸಿದ್ದಾರೆ. ಆದರೆ ಇದು ಆರೋಗ್ಯಕ್ಕೆ ಸೂಕ್ತವೇ ಎನ್ನುವ ಪ್ರಶ್ನೆ ಹಲವರಲ್ಲಿ ಇದೆ. ನಿಮ್ಮ ಸೌಂದರ್ಯಕ್ಕಾಗಿ ಆರೋಗ್ಯವನ್ನು ಹಾಳುಮಾಡಬಾರದು ಎಂದು ಆರೋಗ್ಯ ತಜ್ಞರು ಎಚ್ಚರಿಕೆ ನೀಡಿದ್ದು ಆರೋಗ್ಯಕ್ಕೆ ಎಷ್ಟು ಅಪಾಯಕಾರಿ ಎಂದು ಮಾಹಿತಿ ನೀಡಿದ್ದಾರೆ.

ಲಿಪ್ ಸ್ಟಿಕ್ ಗಳು ಮುಖದ ಸೌಂದರ್ಯ ಹೆಚ್ಚಿಸುತ್ತವೆ ನಿಜ, ಆದರೆ ಇದರಲ್ಲಿ ಬಳಕೆ ಮಾಡುವ ಕೆಮಿಕಲ್ ಪದಾರ್ಥಗಳು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.‌ ಮಹಿಳೆಯರು ಅದರ ಬಣ್ಣ ಮತ್ತು ಫಿನಿಶಿಂಗ್ ಗೆ ಆಸಕ್ತಿವಹಿಸದೆ ಅದರ ಹಿಂದಿರುವ ಹಾನಿಕಾರಕ ಕೆಮಿಕಲ್ ಬಗ್ಗೆಯೂ ಯೋಚಿಸಬೇಕು ಎಂದು ಆರೋಗ್ಯ ತಜ್ಞರು ಎಚ್ಚರಿಕೆ ನೀಡಿದ್ದಾರೆ.

Health Tips: ಗರ್ಭಾವಸ್ಥೆಯಲ್ಲಿ ಮಾಡುವ ಈ ತಪ್ಪಿನಿಂದ ಮಗುವಿನ ಮೇಲೆ ಏನೆಲ್ಲಾ ಪರಿಣಾಮ ಗೊತ್ತಾ?

ತಜ್ಞರ ಪ್ರಕಾರ ಕೆಲವು ಲಿಪ್‌ಸ್ಟಿಕ್‌ಗಳು ಸೀಸ, ಪಾದರಸ, ಆರ್ಸೆನಿಕ್ ಮತ್ತು ನಿಕಲ್‌ನಂತಹ ಲೋಹಗಳ ಪ್ರಮಾಣವನ್ನು ಹೊಂದಿರಬಹುದು. ಇದು ಆರೋಗ್ಯಕ್ಕೆ ಅಪಾಯವನ್ನು ಉಂಟು ಮಾಡಬಹುದು. ವರ್ಣದ್ರವ್ಯಗಳ ಸಂಗ್ರಹಣೆ ಮತ್ತು ಉತ್ಪಾದನಾ ಪ್ರಕ್ರಿಯೆಗಳಲ್ಲಿ ಈ ರಾಸಾಯನಿಕ ಗಳು ಕಲ್ಮಶಗಳಾಗಿ ಉಂಟು ಮಾಡಬಹುದು. ಇವುಗಳನ್ನು ಉದ್ದೇಶಪೂರ್ವಕವಾಗಿ ಸೇರಿಸದಿದ್ದರೂ ಇವುಗಳ ಬಳಸುವಿಕೆ ಆರೋಗ್ಯಕ್ಕೆ ಅಪಾಯಕಾರಿಯಾಗಿದೆ.

ಇನ್ನು ಭಾರ ಲೋಹಗಳು ಸ್ವತಂತ್ರ ರಾಡಿಕಲ್‌ಗಳನ್ನು ಉತ್ಪಾದಿಸಬಹುದು. ಅವು ಆಕ್ಸಿಡೇಟಿವ್ ಒತ್ತಡ ಮತ್ತು ಜೀವಕೋಶಕ್ಕೆ ಹಾನಿಯನ್ನುಂಟುಮಾಡಬಹುದು‌. ಈ ಲೋಹಗಳು ನಮ್ಮ ಡಿಎನ್ ಎ ರಚನೆಯ ಮೇಲೆ ಪ್ರಭಾವ ಬೀರಿ ಹಾನಿಯುಂಟು ಮಾಡಬಹುದು. ದೈನಂದಿನ ಬಳಕೆಯ ಉತ್ಪನ್ನಗಳು ಮುಖ್ಯ ಆದರೆ ಸಣ್ಣ, ದೈನಂದಿನ ಆಯ್ಕೆಗಳು ದೀರ್ಘಾವಧಿಯ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.