ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರ್ವಾ ಚೌತ್ ವ್ರತಾಚರಣೆಗೆ ನಿರಾಕರಿಸಿದ ಪತ್ನಿ; ವಿಚ್ಛೇದನ ನೀಡುವುದಾಗಿ ಬೆದರಿಕೆಯೊಡ್ಡಿ ಠಾಣೆ ಮೆಟ್ಟಿಲೇರಿದ ಪತಿ

ಕರ್ವಾ ಚೌತ್ ವ್ರತಾಚರಣೆಗೆ ನಿರಾಕರಿಸಿದ ಪತ್ನಿಗೆ ವಿಚ್ಛೇದನ ನೀಡುವುದಾಗಿ ಘೋಷಿಸಿ ಪತಿಯು ಪೊಲೀಸ್ ಠಾಣೆ ಮೆಟ್ಟಿಲೇರಿರುವ ವಿಚಿತ್ರ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ವ್ರತಾಚರಣೆಯನ್ನು ಮಾಡದೇ ಆಕೆ ನನ್ನನ್ನು ಕೊಲ್ಲಲು ಬಯಸುತ್ತಿದ್ದಾಳೆ ಎಂದು ಶಿವಪುರಿಯ ಬಿಜ್ರವಾನ್ ಗ್ರಾಮದ ಬರೇಲಾಲ್ ಆದಿವಾಸಿ ಎಂಬಾತ ಪೊಲೀಸರಿಗೆ ದೂರು ನೀಡಿದ್ದಾನೆ.

ಕರ್ವಾ ಚೌತ್ ಆಚರಣೆಗೆ ನಿರಾಕರಿಸಿದ ಪತ್ನಿಗೆ ವಿಚ್ಛೇದನ ಘೋಷಿಸಿದ  ಪತಿ

ಸಂಗ್ರಹ ಚಿತ್ರ -

ಮಧ್ಯಪ್ರದೇಶ: ಪತ್ನಿ ನನ್ನನ್ನು ಕೊಲ್ಲಲು (Murder threat) ಬಯಸುತ್ತಿದ್ದಾಳೆ. ಅವಳು ಕರ್ವಾ ಚೌತ್ ವ್ರತಾಚರಣೆಗೆ (Karwa Chauth Fast) ನಿರಾಕರಿಸಿದ್ದಾಳೆ. ಆಕೆಗೆ ವಿಚ್ಛೇದನ ನೀಡುವುದಾಗಿ ವ್ಯಕ್ತಿಯೊಬ್ಬ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಘಟನೆ ಮಧ್ಯಪ್ರದೇಶದಲ್ಲಿ (Madhya Pradesh) ನಡೆದಿದೆ. ಶಿವಪುರಿಯ (shivapuri) ಬಿಜ್ರವಾನ್ ಗ್ರಾಮದ ಬರೇಲಾಲ್ ಆದಿವಾಸಿ ಎಂಬಾತ ತನ್ನ ಪತ್ನಿ ಮಿಥಿಲೇಶ್ ಆದಿವಾಸಿ ನಂಬಿಕೆ ದ್ರೋಹ ಮಾಡುತ್ತಿದ್ದಾರೆ ಎಂದು ಆರೋಪಿಸಿ ಶಿವಪುರಿಯ ಕೋಲಾರಸ್‌ನ ಉಪ-ವಿಭಾಗೀಯ ಪೊಲೀಸ್ ಠಾಣೆಯಲ್ಲಿ ಗುರುವಾರ ದೂರು ದಾಖಲಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಶಿವಪುರಿಯ ಕೋಲಾರಸ್‌ನ ಉಪ-ವಿಭಾಗೀಯ ಪೊಲೀಸ್ ಅಧಿಕಾರಿ ಸಂಜಯ್ ಮಿಶ್ರಾ, ಪೊಲೀಸ್ ಠಾಣೆಗೆ ಗುರುವಾರ ಒಂದು ವಿಚಿತ್ರ ದೂರು ಬಂದಿದೆ. ಶಿವಪುರಿಯ ವ್ಯಕ್ತಿಯೊಬ್ಬರು ತಮ್ಮ ಪತ್ನಿ 'ಕರ್ವಾ ಚೌತ್' ಹಬ್ಬವನ್ನು ಆಚರಿಸಲು ನಿರಾಕರಿಸಿದ್ದಕ್ಕಾಗಿ ದೂರು ಸಲ್ಲಿಸಿದ್ದಾರೆ.

ಇದ್ದಕ್ಕಿದ್ದಂತೆ ಬದಲಾದ ಜೀವನ ಶೈಲಿ, ಐಷಾರಾಮಿ ಬದುಕು; ಮನೆಯೊಳಗೆ ಹೂತಿಟ್ಟ ಡ್ರಮ್‌ನಲ್ಲಿ ಪತ್ತೆಯಾಯ್ತು ಕೋಟಿ ಕೋಟಿ ರೂಪಾಯಿ: ಖಿಲಾಡಿ ಸಹೋದರರು ಸಿಕ್ಕಿಬಿದ್ದಿದ್ದು ಹೇಗೆ?

ಪತ್ನಿಗೆ ವಿಚ್ಛೇದನ ನೀಡುವುದಾಗಿ ಬೆದರಿಕೆ ಹಾಕಿರುವ ಅವರು ಹಿಂದೂ ಧರ್ಮದಲ್ಲಿ ವಿವಾಹಿತ ಮಹಿಳೆಯರು ತಮ್ಮ ಪತಿಯ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸಿ ಈ ವ್ರತವನ್ನು ಆಚರಿಸುತ್ತಾರೆ. ಆದರೆ ತನ್ನ ಪತ್ನಿ ಇದನ್ನು ಆಚರಿಸದೆ ತನ್ನನ್ನು ಕೊಲ್ಲಲು ಬಯಸುತ್ತಿದ್ದಾಳೆ ಎಂದು ಆರೋಪಿಸಿದ್ದಾರೆ.

ದೂರುದಾರರಾದ ಬರೇಲಾಲ್ ಆದಿವಾಸಿ, ಅವರು ತಮ್ಮ ಪತ್ನಿ ಮಿಥಿಲೇಶ್ ಆದಿವಾಸಿ ವಿರುದ್ಧ ದೂರು ನೀಡಿದ್ದು, ಪತ್ನಿ ನನಗೆ ನಂಬಿಕೆಗೆ ದ್ರೋಹ ಮಾಡುತ್ತಿದ್ದಾರೆ. ಅವರು ನನಗಾಗಿ ಕರ್ವಾ ಚೌತ್ ವ್ರತವನ್ನು ಆಚರಿಸುತ್ತಿಲ್ಲ ಮತ್ತು ನನ್ನನ್ನು ಕೊಲ್ಲಲು ಬಯಸುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ನನಗಾಗಿ ಚಂದ್ರ ಪೂಜೆಯನ್ನು ಮಾಡುತ್ತಿಲ್ಲ. ನನ್ನ ಆಯಸ್ಸು ಹೆಚ್ಚಾಗಲಿ ಎಂದು ಚಂದ್ರನನ್ನು ನೋಡುವಂತೆ ನಾನು ಆಕೆಗೆ ಹೇಳಿದ್ದೆ. ಆದರೆ ಅವರು ಅದನ್ನು ಮಾಡದೆ ನನ್ನನ್ನು ಕೊಲ್ಲಲು ಬಯಸುತ್ತಿರುವಂತಿದೆ. ಪತ್ನಿ ಕರ್ವಾ ಚೌತ್ ಹಬ್ಬವನ್ನು ಆಚರಿಸದಿದ್ದರೆ ಮತ್ತು ತನ್ನ ಒಳಿತಿಗಾಗಿ ವ್ರತ ಕೈಗೊಳ್ಳದಿದ್ದರೆ ಆಕೆಗೆ ವಿಚ್ಛೇದನ ನೀಡುವುದಾಗಿ ಬರೇಲಾಲ್ ದೂರಿನಲ್ಲಿ ತಿಳಿಸಿದ್ದಾರೆ.

Digital Arrest: ಶಹಾಪುರದಲ್ಲಿ ನಿವೃತ್ತ ಉಪನ್ಯಾಸಕನಿಗೆ ಡಿಜಿಟಲ್ ಅರೆಸ್ಟ್; 10 ಲಕ್ಷ ದೋಚಿದ ಸೈಬರ್ ಖದೀಮರು!‌

ಅವರ ದೂರಿನ ಬಳಿಕ ಕ್ರಮಕ್ಕೆ ಮುಂದಾಗಿರುವ ಪೊಲೀಸರು, ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರ ಸಹಾಯದೊಂದಿಗೆ ದಂಪತಿಯ ನಡುವಿನ ಭಿನ್ನಾಭಿಪ್ರಾಯ ಬಗೆಹರಿಸಲು ಪ್ರಯತ್ನಿಸುವುದಾಗಿ ಹೇಳಿದರು.