ಸಿಜೆಪಿ ನಾಯಕರಿಗೆ ಮತ್ತೊಂದು ಆಘಾತ: ವಿಚಾರಣೆಗೂ ಮೊದಲೇ ದಾಖಲಾಗಿರುವ ಪ್ರಕರಣ ಕ್ರೈಮ್ ಬ್ರಾಂಚ್ಗೆ ವರ್ಗಾವಣೆ
ವಿಚಾರಣೆಗೂ ಮೊದಲೇ ಕಾಕ್ರೋಚ್ ಜನತಾ ಪಕ್ಷದ ನಾಯಕರಾದ ಸೌರವ್ ದಾಸ್ ಮತ್ತು ಅಶುತೋಷ್ ರಂಕಾ ಅವರ ವಿರುದ್ಧ ದಾಖಲಿಸಲಾಗಿರುವ ಪ್ರಕರಣವನ್ನು ದೆಹಲಿ ಪೊಲೀಸರು ಮಂಗಳವಾರ ಕ್ರೈಮ್ ಬ್ರಾಂಚ್ಗೆ ವರ್ಗಾಯಿಸಿದ್ದಾರೆ. ಜಂತರ್ ಮಂತರ್ ಪ್ರದೇಶಕ್ಕೆ ಅಕ್ರಮವಾಗಿ ಪ್ರವೇಶಿಸಿದ ಆರೋಪಕ್ಕೆ ಸಂಬಂಧಿಸಿದ ಮತ್ತೊಂದು ಪ್ರಕರಣ ಇದಾಗಿದೆ.
ಸಂಗ್ರಹ ಚಿತ್ರ -
ನವದೆಹಲಿ: ಕಾಕ್ರೋಚ್ ಜನತಾ ಪಕ್ಷದ (Cockroach Janata Party) ನಾಯಕರ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ಕ್ರೈಮ್ ಬ್ರಾಂಚ್ಗೆ (delhi crime branch)ವರ್ಗಾಯಿಸಲಾಗಿದೆ. ದೆಹಲಿಯ ಜಂತರ್ ಮಂತರ್ (Delhi Jantar Mantar) ಪ್ರದೇಶಕ್ಕೆ ಅಕ್ರಮವಾಗಿ ಪ್ರವೇಶಿಸಿದ ಆರೋಪಕ್ಕೆ ಸಂಬಂಧಿಸಿದ ಮತ್ತೊಂದು ಪ್ರಕರಣವನ್ನು ವಿಚಾರಣೆಗೂ ಮೊದಲೇ ದೆಹಲಿ ಪೊಲೀಸರು ಮಂಗಳವಾರ ಕ್ರೈಮ್ ಬ್ರಾಂಚ್ಗೆ ವರ್ಗಾಯಿಸಿದ್ದಾರೆ. ಅಕ್ಟೋಬರ್ 13ರಂದು ನಡೆದ ಪ್ರತಿಭಟನೆ ವೇಳೆ ಸೌರವ್ ದಾಸ್ (Sourav Das) ಮತ್ತು ಅಶುತೋಷ್ ರಂಕಾ ( Ashutosh Ranka) ವಿರುದ್ಧ ಎರಡು ಪ್ರತ್ಯೇಕ ಎಫ್ಐಆರ್ಗಳನ್ನು (FIR) ದಾಖಲಿಸಲಾಗಿತ್ತು.
ವಿಚಾರಣೆಗೆ ಮೊದಲೇ ಕಾಕ್ರೋಚ್ ಜನತಾ ಪಾರ್ಟಿಯ ನಾಯಕರಾದ ಸೌರವ್ ದಾಸ್ ಮತ್ತು ಅಶುತೋಷ್ ರಂಕಾ ವಿರುದ್ಧ ದಾಖಲಿಸಲಾಗಿದ್ದ ಪ್ರಕರಣವನ್ನು ದೆಹಲಿ ಪೊಲೀಸರು ಮಂಗಳವಾರ ಕ್ರೈಮ್ ಬ್ರಾಂಚ್ಗೆ ವರ್ಗಾಯಿಸಿದ್ದಾರೆ. ಹೀಗಾಗಿ ಇವರ ವಿರುದ್ಧ ದಾಖಲಾಗಿರುವ ಎರಡು ಪ್ರಕರಣಗಳ ತನಿಖೆಯನ್ನು ಇನ್ನು ಮುಂದೆ ಕ್ರೈಮ್ ಬ್ರಾಂಚ್ ಮುಂದುವರಿಸಲಿದೆ.
ಮೆಕ್ಕಾ ಮಸೀದಿಯಲ್ಲಿ ಅನೈತಿಕ ಕೃತ್ಯ ಆರೋಪ: ಇಬ್ಬರು ಬಾಂಗ್ಲಾದೇಶೀಯರಿಗೆ ಸೌದಿ ಅರೇಬಿಯಾದಲ್ಲಿ ಮರಣದಂಡನೆ
ಈ ಕುರಿತು ಮಾಹಿತಿ ನೀಡಿರುವ ದೆಹಲಿ ಪೊಲೀಸರು, ಜಂತರ್ ಮಂತರ್ ಪ್ರದೇಶಕ್ಕೆ ಪ್ರವೇಶಿಸಿದ ಆರೋಪಕ್ಕೆ ಸಂಬಂಧಿಸಿ ಸೌರವ್ ದಾಸ್ ಮತ್ತು ಅಶುತೋಷ್ ರಂಕಾ ಅವರ ವಿರುದ್ಧ ದಾಖಲಾಗಿರುವ ಮತ್ತೊಂದು ಪ್ರಕರಣ ಇದಾಗಿದೆ.
ಅಕ್ಟೋಬರ್ 13ರಂದು ಸೌರವ್ ದಾಸ್ ಮತ್ತು ಅಶುತೋಷ್ ರಂಕಾ, ಅಜಿಂಕ್ಯ ಶಿಂಧೆ ಸೇರಿದಂತೆ ಸಿಜೆಪಿಯ 11 ಸದಸ್ಯರು ಖಾಸಗಿ ಆವರಣದ ಮೂಲಕ ಅತಿಕ್ರಮ ಪ್ರವೇಶ ಮಾಡಿ, ಪ್ರತಿಭಟನಾ ಸ್ಥಳವಾಗಿ ನಿಗದಿಪಡಿಸದ ಜಂತರ್ ಮಂತರ್ ಪ್ರದೇಶವನ್ನು ತಲುಪಿದ್ದರು.
ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಪೊಲೀಸರು ಇವರನ್ನು ತಡೆಯಲು ಪ್ರಯತ್ನಿಸಿದ್ದರು. ಈ ವೇಳೆ ಒಟ್ಟು 14 ಜನರನ್ನು ವಶಕ್ಕೆ ಪಡೆಯಲಾಗಿತ್ತು. ಬಳಿಕ ಎರಡು ಪ್ರತ್ಯೇಕ ಎಫ್ಐಆರ್ಗಳನ್ನು ದಾಖಲಿಸಲಾಗಿದೆ.
Gauribidanur News: ಆರ್.ಎಲ್.ಜಾಲಪ್ಪ ಇಂದಿನ ರಾಜಕಾರಣಿಗಳಿಗೆ ಮಾದರಿ ನಾಯಕ: ಆರ್. ಅಶೋಕ್ ಕುಮಾರ್
ಸಿಜೆಪಿ ನಾಯಕರ ವಿರುದ್ಧ ದಾಖಲಾಗಿರುವ ಸಾರ್ವಜನಿಕ ಶಾಂತಿಗೆ ಭಂಗ ಉಂಟು ಮಾಡುವುದನ್ನು ತಡೆಯುವ ಒಪ್ಪಂದವನ್ನು ಉಲ್ಲಂಘಿಸಿದ ಆರೋಪದ ಮೇಲೆ ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಅವರು ಅಕ್ಟೋಬರ್ 14 ರಂದು ಸೌರವ್ ದಾಸ್ ಮತ್ತು ಅಶುತೋಷ್ ರಂಕಾ ಅವರನ್ನು ಐದು ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಸೋಮವಾರ ಅವರ ನ್ಯಾಯಾಂಗ ಬಂಧನದ ಅವಧಿಯನ್ನು ಇನ್ನೂ ಎರಡು ದಿನಗಳ ಕಾಲ ವಿಸ್ತರಿಸಿ ಆದೇಶಿಸಿದ್ದರು. ಈ ನಡುವೆಯೇ ಇದೀಗ ಅವರ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ಕ್ರೈಮ್ ಬ್ರಾಂಚ್ಗೆ ದೆಹಲಿ ಪೊಲೀಸರು ವರ್ಗಾವಣೆ ಮಾಡಿದ್ದಾರೆ.