ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಕೂದಲು ನೋಡಿ ಮೆಚ್ಚಿ ಮದುವೆಯಾದವಳಿಗೆ ಕಾದಿತ್ತು ಶಾಕ್; ಬೋಳು ತಲೆ ಪತಿ ವಿರುದ್ಧ ದೂರು ದಾಖಲಿಸಿದ ಪತ್ನಿ

ದಪ್ಪ ಕೂದಲು, ಒಳ್ಳೆಯ ಶಿಕ್ಷಣ, ಉತ್ತಮ ಆರ್ಥಿಕ ಪರಿಸ್ಥಿತಿಯ ಬಗ್ಗೆ ನಂಬಿಸಿ ಮದುವೆಯಾಗಿ ವಂಚಿಸಿದ ಬೋಳು ತಲೆಯ ಪತಿಯ ವಿರುದ್ಧ ಮಹಿಳೆಯೊಬ್ಬರು ದೂರು ದಾಖಲಿಸಿದ ಘಟನೆ ನೋಯ್ಡಾದಲ್ಲಿ ನಡೆದಿದೆ. 2024ರಲ್ಲಿ ತಮ್ಮ ಮದುವೆಯಾಗಿದ್ದು, ಪತಿ ಅಂತಾರಾಷ್ಟ್ರೀಯ ಮಾದಕವಸ್ತು ಕಳ್ಳಸಾಗಣೆಯಲ್ಲೂ ಭಾಗಿಯಾಗಿರುವುದಾಗಿ ಮಹಿಳೆ ದೂರಿದ್ದಾರೆ.

ಬೋಳು ತಲೆ ಪತಿ ವಿರುದ್ಧ ವಂಚನೆಯ ದೂರು

ಸಾಂದರ್ಭಿಕ ಚಿತ್ರ -

ನೋಯ್ಡಾ: ದಪ್ಪ ಕೂದಲು ಇರುವುದಾಗಿ ಬಿಂಬಿಸಿ ವಂಚಿಸಿದ ಪತಿಯ ವಿರುದ್ಧ ಮಹಿಳೆಯೊಬ್ಬರು ದೂರು ದಾಖಲಿಸಿರುವ ಘಟನೆ ನೋಯ್ಡಾದಲ್ಲಿ (Noida) ನಡೆದಿದೆ. ತನ್ನ ಗಂಡ ಬೋಳು ತಲೆಯನ್ನು (Husband Hide Baldness) ಮರೆ ಮಾಡಿ ದಪ್ಪ ಕೂದಲು ಇದೆ ಎಂಬುದಾಗಿ ಬಿಂಬಿಸಿದ್ದಾನೆ. ಅಲ್ಲದೆ ತನ್ನ ಆದಾಯ, ಶೈಕ್ಷಣಿಕ ಹಿನ್ನೆಲೆಯ ಬಗ್ಗೆಯೂ ಸುಳ್ಳು ಹೇಳಿ ಮದುವೆಯಾಗಿದ್ದಾನೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. 2024ರ ಜನವರಿಯಲ್ಲಿ ತಮ್ಮ ವಿವಾಹವಾಗಿದ್ದು, ಆತ ಅಂತಾರಾಷ್ಟ್ರೀಯ ಮಾದಕವಸ್ತು ಕಳ್ಳಸಾಗಣೆಯಲ್ಲೂ (international drug smuggler) ಭಾಗಿಯಾಗಿರುವುದಾಗಿ ಮಹಿಳೆ ದೂರಿದ್ದಾರೆ.

ನೋಯ್ಡಾದ ಗೌರ್ ಸಿಟಿ ಅವೆನ್ಯೂ -1 ರ ನಿವಾಸಿಯಾಗಿರುವ ಲವಿಕಾ ಗುಪ್ತಾ ತನ್ನ ಗಂಡ ದಪ್ಪ ಕೂದಲು ಹೊಂದಿದ್ದಾನೆ ಎಂದು ಭಾವಿಸಿದ್ದರು. ಆದರೆ ಮದುವೆಯ ಬಳಿಕ ಆತ ಬೋಳು ತಲೆಯವನು ಎಂದು ಗೊತ್ತಾಗಿದೆ. ಆತ ನಕಲಿ ಕೂದಲು ಇಟ್ಟಿದ್ದ ಎಂಬುದು ತಿಳಿಯಿತು ಎಂಬುದಾಗಿ ಲವಿಕಾ ದೂರಿನಲ್ಲಿ ತಿಳಿಸಿದ್ದಾರೆ.

ಆಮ್ಲೆಟ್‌ ಚೂರು, ಎಐ ಸಹಾಯದಿಂದ ಮಹಿಳೆ ಕೊಲೆ ಪ್ರಕರಣ ಬೇಧಿಸಿದ ಪೊಲೀಸರು; ಸಿನಿಮೀಯ ಕಾರ್ಯಾಚರಣೆ ಹೇಗಿತ್ತು?

2024ರ ಜನವರಿ 16ರಂದು ಮದುವೆಯಾಗಿದ್ದ ಲವಿಕಾ ಗುಪ್ತಾ ತನ್ನ ಗಂಡ ಹಾಗೂ ಮನೆಯವರು ತನಗೆ ವಂಚಿಸಿದ್ದಾರೆ ಎಂದು ಬಿಸ್ರಾಖ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಮದುವೆಯ ಮೊದಲು ತನ್ನ ಗಂಡನ ಕುರಿತಾದ ಹಲವಾರು ಸತ್ಯಗಳನ್ನು ತನ್ನಿಂದ ಮುಚ್ಚಿಡಲಾಗಿದೆ. ಪತಿ ಸಂಪೂರ್ಣವಾಗಿ ಬೋಳಾಗಿದ್ದು, ನಕಲಿ ಕೂದಲನ್ನು ಬಳಸುತ್ತಿದ್ದನು. ಆದರೆ ಮದುವೆಯ ಸಮಯದಲ್ಲಿ ಅವನಿಗೆ ದಪ್ಪ ಕೂದಲು ಇದೆ ಎಂದು ಹೇಳಲಾಗಿತ್ತು. ಇವಿಷ್ಟೇ ಅಲ್ಲದೆ ಪತಿಯ ನಿಜವಾದ ಆದಾಯ, ಶೈಕ್ಷಣಿಕ ಹಿನ್ನೆಲೆಯನ್ನು ಕೂಡ ತನ್ನಿಂದ ಗೌಪ್ಯವಾಗಿಡಲಾಗಿದೆ. ಮದುವೆಯ ಬಳಿಕ ಪತಿ ತನ್ನ ಖಾಸಗಿ ಛಾಯಾಚಿತ್ರಗಳನ್ನು ತೆಗೆದು ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ದೈಹಿಕವಾಗಿಯೂ ಹಲ್ಲೆ ನಡೆಸಿದ್ದಾನೆ. ವಿದೇಶ ಪ್ರವಾಸದಲ್ಲಿದ್ದಾಗ ಪತಿ ತನ್ನ ಮೇಲೆ ಹಲ್ಲೆ ನಡೆಸಿದ್ದು, ಥೈಲ್ಯಾಂಡ್‌ನಿಂದ ಭಾರತಕ್ಕೆ ಗಾಂಜಾ ತರುವಂತೆ ಒತ್ತಡ ಹೇರಿದ್ದಾನೆ ಎಂದು ಲವಿಕಾ ದೂರಿನಲ್ಲಿ ತಿಳಿಸಿರುವುದಾಗಿ ಬಿಸ್ರಾಖ್ ಪೊಲೀಸ್ ಠಾಣೆಯ ಉಸ್ತುವಾರಿ ಮನೋಜ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

ಹಣಕ್ಕಾಗಿ ಮಾಜಿ ರೂಮ್‌ಮೇಟ್‌ನಿಂದ ನಿಕಿತಾ ಗೋದಿಶಾಲಾ ಹತ್ಯೆ; ತಂದೆ ಆರೋಪ

ಲವಿಕಾ ಅವರು ನೀಡಿರುವ ದೂರಿನ ಆಧಾರದಲ್ಲಿ ಆರೋಪಿ ಅವರ ಪತಿ, ಅತ್ತೆ, ಮಾವ ಸೇರಿದಂತೆ ಐವರ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಅಡಿಯಲ್ಲಿ ದೂರು ದಾಖಲಿಸಲಾಗಿದೆ. ಆರೋಪಿಗಳ ವಿರುದ್ಧ ಸೆಕ್ಷನ್ 85, ಸೆಕ್ಷನ್ 352, ಸೆಕ್ಷನ್ 351, ಸೆಕ್ಷನ್ 316, ಸೆಕ್ಷನ್ 115 ಸೇರಿದಂತೆ ವರದಕ್ಷಿಣೆ ನಿಷೇಧ ಕಾಯ್ದೆಯ ಸೆಕ್ಷನ್ 3 ಮತ್ತು 4 ರ ಅಡಿಯಲ್ಲಿಯೂ ಪ್ರಕರಣ ದಾಖಲಿಸಲಾಗಿದೆ. ಈ ಕುರಿತು ಹೆಚ್ಚಿನ ತನಿಖೆ ನಡೆಸುವುದಾಗಿ ಸಿಂಗ್ ತಿಳಿಸಿದ್ದಾರೆ.