ಹಣಕ್ಕಾಗಿ ಮಾಜಿ ರೂಮ್‌ಮೇಟ್‌ನಿಂದ ನಿಕಿತಾ ಗೋದಿಶಾಲಾ ಹತ್ಯೆ; ತಂದೆ ಆರೋಪ
Nikitha Godishala: ಕೊಲೆಗೆ ಹಣಕಾಸಿನ ವಿವಾದಗಳೇ ಕಾರಣ ಎಂದು ನಿಕಿತಾಳ ಸ್ನೇಹಿತರೊಂದಿಗೆ ಮಾತನಾಡಿದ್ದೀರಾ ಎಂದು ಕೇಳಿದಾಗ, ಅದರ ಬಗ್ಗೆ ತನಗೆ ತಿಳಿದಿಲ್ಲ ಎಂದು ಅವರು ಹೇಳಿದರು. ನಿಕಿತಾಳ ತಂದೆಯ ಪ್ರಕಾರ, ಡಿಸೆಂಬರ್ 31 ರ ರಾತ್ರಿ ನಿಕಿತಾ ಕೊನೆಯ ಬಾರಿಗೆ ಕರೆ ಮಾಡಿ ಹೊಸ ವರ್ಷದ ಶುಭಾಶಯ ಕೋರಿದ್ದರು.
Nikitha Godishala -
ಲಾಸ್ ವೇಗಸ್/ನ್ಯೂಯಾರ್ಕ್, ಜ. 6: ಅಮೆರಿಕದ ಕೊಲಂಬಿಯಾದಲ್ಲಿ ನಿಕಿತಾ ಗೋದಿಶಾಲಾ(Nikitha Godishala) (27) ಅವರ ತಂದೆ, ಆರೋಪಿಯು ಹಣಕಾಸಿನ ವಿವಾದದ ಹಿನ್ನೆಲೆಯಲ್ಲಿ ತನ್ನ ಮಗಳನ್ನು ಕೊಂದಿದ್ದಾನೆ ಎಂದು ಆರೋಪಿಸಿದ್ದಾರೆ. ಮೇರಿಲ್ಯಾಂಡ್‌ನ ಕೊಲಂಬಿಯಾದ ಹೊವಾರ್ಡ್ ಕೌಂಟಿಯಲ್ಲಿ ಹೊಸ ವರ್ಷದ ಮುನ್ನಾದಿನದಂದು ನಿಕಿತಾ ಗೋಡಿಶಾಲಾಕೊಲೆಯಾಗಿದ್ದು, ಆಕೆಯ ಮಾಜಿ ಗೆಳೆಯ ಅರ್ಜುನ್ ಶರ್ಮಾ(Arjun Sharma) ಆಕೆಯನ್ನು ಇರಿದು, ಭಾರತಕ್ಕೆ ಪರಾರಿಯಾಗಿದ್ದಾನೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ನಿಕಿತಾಳ ತಂದೆ ಆನಂದ್ ಗೋಡಿಶಾಲ ಹೈದರಾಬಾದ್‌ನಲ್ಲಿ ಮಾಧ್ಯಮಗಳೊಂದಿಗೆ ತಮ್ಮ ಮಗಳ ಸಾವಿನ ಬಗ್ಗೆ ಮಾತನಾಡಿದ್ದು, ನನ್ನ ಮಗಳು ನಾಲ್ಕು ವರ್ಷಗಳ ಹಿಂದೆ ಕೊಲಂಬಿಯಾಕ್ಕೆ ಹೋಗಿದ್ದಳು. ಅವಳು ಅಲ್ಲಿ ಕೆಲಸ ಮಾಡುತ್ತಿದ್ದಳು. ಅರ್ಜುನ್ ಶರ್ಮಾ ಮಗಳ ಮಾಜಿ ರೂಮ್‌ಮೇಟ್ ಆಗಿದ್ದನು. ಆಕೆಯ ಕೊಲೆಗೆ ಆರ್ಥಿಕ ಕಾರಣವೇ ಹೊರತು ಪ್ರಣಯ ಸಂಬಂಧದಲ್ಲಿನ ಯಾವುದೇ ವಿವಾದವಲ್ಲ ಎಂದು ಹೇಳಿದರು.
"ಒಂದು ಅಪಾರ್ಟ್‌ಮೆಂಟ್‌ನಲ್ಲಿ ನಾಲ್ಕು ಜನರು ವಾಸಿಸುತ್ತಿದ್ದರು. ಅವಳ ಮಾಜಿ ರೂಮ್‌ಮೇಟ್ ನನ್ನ ಮಗಳಿಂದ ಬಹಳಷ್ಟು ಹಣವನ್ನು ತೆಗೆದುಕೊಳ್ಳುತ್ತಿದ್ದ. ಭಾರತಕ್ಕೆ ಪ್ರಯಾಣಿಸುವ ಮೊದಲು ಹಣವನ್ನು ಹಿಂತಿರುಗಿಸುವಂತೆ ಅವಳು ಕೇಳಿದಾಗ, ಅವನು ಅವಳನ್ನು ಕೊಂದು ಓಡಿಹೋದನು. ನನ್ನ ಮಗಳ ದೇಹವನ್ನು ಆದಷ್ಟು ಬೇಗ ಹಸ್ತಾಂತರಿಸುವಂತೆ ನಾನು ರಾಜ್ಯ ಮತ್ತು ಕೇಂದ್ರ ಸರ್ಕಾರವನ್ನು ವಿನಂತಿಸುತ್ತೇನೆ" ಎಂದು ಆನಂದ್ ಹೇಳಿದರು. ತನ್ನ ಮಗಳ ಸಾವಿಗೆ ಕಾರಣವಾದ ವ್ಯಕ್ತಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದರು.
ಕೊಲೆಗೆ ಹಣಕಾಸಿನ ವಿವಾದಗಳೇ ಕಾರಣ ಎಂದು ನಿಕಿತಾಳ ಸ್ನೇಹಿತರೊಂದಿಗೆ ಮಾತನಾಡಿದ್ದೀರಾ ಎಂದು ಕೇಳಿದಾಗ, ಅದರ ಬಗ್ಗೆ ತನಗೆ ತಿಳಿದಿಲ್ಲ ಎಂದು ಅವರು ಹೇಳಿದರು. ನಿಕಿತಾಳ ತಂದೆಯ ಪ್ರಕಾರ, ಡಿಸೆಂಬರ್ 31 ರ ರಾತ್ರಿ ನಿಕಿತಾ ಕೊನೆಯ ಬಾರಿಗೆ ಕರೆ ಮಾಡಿ ಹೊಸ ವರ್ಷದ ಶುಭಾಶಯ ಕೋರಿದ್ದರು.
ರೌಡಿಶೀಟರ್‌ನ ಕೈ ಮುರಿದು, ಕಣ್ಣಿಗೆ ಇರಿದ ಪತ್ನಿ! ಪೊಲೀಸ್ ಠಾಣೆಗೆ ಓಡಿ ಬಂದ ಗಂಡ!
ನಿಕಿತಾಳ ಸೋದರಸಂಬಂಧಿ ಸರಸ್ವತಿ ಗೋಡಿಶಾಲ ಕೂಡ ಅಮೆರಿಕದಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ದೂರು ನೀಡಿ, ಕೊಲೆಗೆ ಕೆಲವು ದಿನಗಳ ಮೊದಲು ಅರ್ಜುನ್ ತೆಗೆದುಕೊಂಡ ಹಣದ ಮೊತ್ತದ ಬಗ್ಗೆ ವಿವರ ನೀಡಿದ್ದಾರೆ ಎಂದು ವರದಿಯಾಗಿದೆ. ಆಕೆಯ ಕೊಲೆಗೆ ಕೆಲವು ದಿನಗಳ ಮೊದಲು ಅರ್ಜುನ್ 4,500 ಡಾಲರ್ (4.07 ಲಕ್ಷ ರೂ.) ಸಾಲ ಪಡೆದಿದ್ದ ಎಂದು ಮಾಧ್ಯಮ ವರದಿಗಳು ಹೇಳುತ್ತವೆ.
ಮೇರಿಲ್ಯಾಂಡ್‌ನಲ್ಲಿ ನೆಲೆಸಿರುವ ಭಾರತೀಯ ಮೂಲದ ನಿಕಿತಾ ಗೋಡಿಶಾಲಾ ಜನವರಿ 2 ರಂದು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿತ್ತು. ಈ ನಡುವೆ ಅರ್ಜುನ್ ಶರ್ಮಾ, ಜ.2ರಂದು ಕಡೆಯ ಬಾರಿ ನಾನು ನಿಖಿತಾಳನ್ನು ಆಕೆಯ ಮೇರಿಲ್ಯಾಂಡ್ ಅಪಾರ್ಟ್‌ಮೆಂಟ್‌ನಲ್ಲಿ ನೋಡಿದ್ದೆ. ಬಳಿಕ ಆಕೆ ಕಾಣೆಯಾಗಿದ್ದಾಳೆ ಎಂದು ದೂರು ನೀಡಿದ್ದ. ಈ ಹಿನ್ನೆಲೆಯಲ್ಲಿ ಆಕೆಯ ಮನೆ ತಪಾಸಣೆ ನಡೆಸಿದಾಗ ಅಲ್ಲಿ ಆಕೆಯ ಶವ ಪತ್ತೆಯಾಗಿದೆ. ದೇಹದ ಮೇಲೆ ಇರಿತದ ಗುರುತುಗಳು ಕೂಡಾ ಪತ್ತೆಯಾಗಿದೆ.