ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Physical Assault: ಕ್ಯಾಬ್ ಚಾಲಕನಿಗೆ ಬಾಡಿಗೆ ನೀಡದೆ ಸುಳ್ಳು ಕಿರುಕುಳದ ಆರೋಪ ಹೊರಿಸಿದ ಮಹಿಳೆ!

ಗುರುಗ್ರಾಮ್‌ ನಲ್ಲಿ ಅಚ್ಚರಿ ಮೂಡಿಸುವ ಘಟನೆ ವರದಿಯಾಗಿದೆ. ಮಹಿಳೆಯೊಬ್ಬಳು ಹಲವು ಗಂಟೆಗಳ ಕಾಲ ಕ್ಯಾಬ್‌ನಲ್ಲಿ ಸಂಚರಿಸಿದ ಬಳಿಕ ಬಾಡಿಗೆ ಹಣ ಪಾವತಿಸಲು ನಿರಾಕರಿಸಿದ್ದು ಮಾತ್ರವಲ್ಲದೆ, ಕ್ಯಾಬ್ ಚಾಲಕನ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ದಾಖಲಿಸಲು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾಳೆ. ಈ ಪ್ರಕರಣದಲ್ಲಿ ನುಹ್‌ ಜಿಲ್ಲೆಯ ಧಾನಾ ಗ್ರಾಮದ ನಿವಾಸಿ ಜಿಯಾವುದ್ದೀನ್‌ ಸಂತ್ರಸ್ತ ಚಾಲಕನಾಗಿದ್ದಾನೆ.

ಕ್ಯಾಬ್ ಬಾಡಿಗೆ ವಿವಾದ; ಚಾಲಕನ ಮೇಲೆ ಮಹಿಳೆ ಲೈಂಗಿಕ ದೌರ್ಜನ್ಯ ಆರೋಪ

ಸಾಂದರ್ಭಿಕ ಚಿತ್ರ -

Profile
Sushmitha Jain Jan 7, 2026 1:15 PM

ಗುರುಗ್ರಾಮ್, ಜ.7: ಮಹಿಳೆಯೊಬ್ಬಳು ಗಂಟೆಗಳ ಕಾಲ ಕ್ಯಾಬ್‌ (cab)ನಲ್ಲಿ ಪ್ರಯಾಣಿಸಿ ಬಾಡಿಗೆ ಹಣ ನೀಡಲು ನಿರಾಕರಿಸಿದ್ದಲ್ಲದೇ, ಚಾಲಕನ ವಿರುದ್ಧ ಲೈಂಗಿಕ ದೌರ್ಜನ್ಯದ(Physical Assault) ದೂರ ನೀಡಲು ಪೊಲೀಸ್ ಠಾಣೆಗೆ ತೆರಳಿರುವು ಘಟನೆ ಗುರುಗ್ರಾಮ್ (Gurugram)ನಲ್ಲಿ ಬೆಳಕಿಗೆ ಬಂದಿದೆ. ನುಹ್ (Nuh) ಜಿಲ್ಲೆಯ ಧಾನಾ (Dhana) ಗ್ರಾಮದ ನಿವಾಸಿಯಾದ ಜಿಯಾವುದ್ದೀನ್ (Ziauddin) ಸಂತ್ರಸ್ತ ಚಾಲಕನಾಗಿದ್ದಾನೆ.

ಕ್ಯಾಬ್ ಚಾಲಕ ಜಿಯಾವುದ್ದೀನ್ ನೀಡಿದ ದೂರಿನಲ್ಲಿ, ಜ್ಯೋತಿ ದಲಾಲ್ (Jyoti Dalal) ಎಂಬ ಮಹಿಳಾ ಪ್ರಯಾಣಿಕಳು ಮಂಗಳವಾರ ಬೆಳಿಗ್ಗೆ 8 ಗಂಟೆಗೆ ಕ್ಯಾಬ್ ಬುಕ್ ಮಾಡಿ ಮೊದಲು ಸೆಕ್ಟರ್ 31ಕ್ಕೆ ಕರೆದುಕೊಂಡು ಹೋಗಲು ಹೇಳಿದಳು, ನಂತರ ಬಸ್ ನಿಲ್ದಾಣಕ್ಕೆ, ಬಳಿಕ ಸೈಬರ್ ಸಿಟಿಗೆ ಕರೆದೊಯ್ಯುವಂತೆ ಕೇಳಿಕೊಂಡಿದ್ದಾಳೆ. ಬಳಿಕ “ಅವಳು ಹಣ ಕೇಳಿದಾಗ ನಾನು ₹700 ನೀಡಿದ್ದೇನೆ. ಅಷ್ಟೇ ಅಲ್ಲದೇ ವಿವಿಧ ಸ್ಥಳಗಳಲ್ಲಿ ಊಟ ಮತ್ತು ಪಾನೀಯ ಸೇವಿಸಿದ್ದು, ಅದರ ಎಲ್ಲಾ ಖರ್ಚನ್ನೂ ನಾನೇ ಪಾವತಿಸಿದ್ದೇನೆ. ಮಧ್ಯಾಹ್ನ ನಾನು ಬಾಡಿಗೆ ಹಣ ನೀಡಿ ರೈಡ್ ಎಂಡ್ ಮಾಡುವಂತೆ ಕೇಳಿದಾಗ, ಅವಳು ಕೋಪಗೊಂಡಳು,” ಎಂದು ಚಾಲಕ ತಿಳಿಸಿದ್ದಾನೆ.

ನಂತರ ಜ್ಯೋತಿ ದಲಾಲ್ ನನ್ನ ಮೇಲೆ ಕಳ್ಳತನ ಅಥವಾ ಲೈಂಗಿಕ ಕಿರುಕುಳದ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿದಳು ಎಂದು ಚಾಲಕ ಆರೋಪಿಸಿದ್ದಾನೆ. ಬಳಿಕ ಆ ಮಹಿಳೆ ಸೆಕ್ಟರ್ 29ರ ಪೊಲೀಸ್ ಠಾಣೆಗೆ ಹೋಗಿ ಗಲಾಟೆ ಮಾಡಿದ್ದಾಳೆ ಎಂದು ಚಾಲಕ ಜಿಯಾವುದ್ದೀನ್ ತಿಳಿಸಿದ್ದಾನೆ.

Physical Assault: ಮಹಿಳೆ ಮೇಲೆ ಅತ್ಯಾಚಾರ ಮಾಡಿ ಕೊಲ್ಲುವುದಾಗಿ ಬೆದರಿಕೆ ಹಾಕಿದ ಬಿಜೆಪಿ ನಾಯಕಿಯ ಪತಿ

ಜ್ಯೋತಿ ದಲಾಲ್ ಅಲ್ಲಿಂದ ಹೊರಟ ನಂತರ, ಜಿಯಾವುದ್ದೀನ್ ಪೊಲೀಸ್ ಅಧಿಕಾರಿಗಳಿಗೆ ಸಂಪೂರ್ಣ ಘಟನೆಯನ್ನು ವಿವರಿಸಿದ್ದಾನೆ. ಆಗ ಈ ಜ್ಯೋತಿ ದಲಾಲ್ ಹಿಂದೆಯೂ ಒಬ್ಬ ಕ್ಯಾಬ್ ಚಾಲಕ ಹಾಗೂ ಒಂದು ಬ್ಯೂಟಿ ಸ್ಯಾಲೂನ್ ಅನ್ನು ವಂಚಿಸಿದ್ದ ಅದೇ ಮಹಿಳೆ ಎಂಬುದು ಪೊಲೀಸರಿಗೆ ತಿಳಿದುಬಂದಿದೆ.

ಪೊಲೀಸ್ ಮಾಹಿತಿಯ ಪ್ರಕಾರ, ಜ್ಯೋತಿ ದಲಾಲ್ ಈ ಹಿಂದೆ ಒಂದು ಸ್ಯಾಲೂನ್‌ನಲ್ಲಿ ₹20,000 ವಂಚನೆ ಮಾಡಿದ್ದಳು, ಅಷ್ಟೇ ಅಲ್ಲದೇ ಮತ್ತೊಬ್ಬ ಕ್ಯಾಬ್ ಚಾಲಕನಿಗೆ ₹2,000 ಬಾಡಿಗೆ ನೀಡಲು ನಿರಾಕರಿಸಿ ವಂಚಿಸಿದ್ದಳು. ಫೆಬ್ರವರಿ 2024ರಲ್ಲಿ, ಕ್ಯಾಬ್ ಬಾಡಿಗೆ ವಿಚಾರದಲ್ಲಿ ಚಾಲಕನೊಂದಿಗೆ ವಾಗ್ವಾದ ನಡೆಸುತ್ತಿರುವ ಜ್ಯೋತಿ ದಲಾಲ್ ಅವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿಯೂ ವೈರಲ್ ಆಗಿತ್ತು.

ಇನ್ನೂ “ಜ್ಯೋತಿ ದಲಾಲ್ ವಿರುದ್ಧ ವಂಚನೆ ಸೇರಿದಂತೆ ಭಾರತೀಯ ನ್ಯಾಯ ಸಂಹಿತೆಯ (BNS) ವಿವಿಧ ಕಲಂಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ತನಿಖೆ ಮುಂದುವರೆದಿದ್ದು, ಶೀಘ್ರದಲ್ಲೇ ಅವಳನ್ನು ಬಂಧಿಸಲಾಗುವುದು,” ಎಂದು ಸೆಕ್ಟರ್ 29 ಪೊಲೀಸ್ ಠಾಣೆಯ ಎಸ್‌ಎಚ್‌ಒ ರವಿ ಕುಮಾರ್ ತಿಳಿಸಿದ್ದಾರೆ.