ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Job fair: ಎರಡು ದಿನಗಳ ಬೃಹತ್ ಉದ್ಯೋಗ ಮೇಳದಲ್ಲಿ 100-ಕ್ಕೂ ಅಧಿಕ ಕಂಪನಿಗಳು ಭಾಗಿ

ಉಜಿರೆ ಎಸ್.ಡಿ.ಎಂ ಕಾಲೇಜಿನಲ್ಲಿ ಬೆಳಗ್ಗೆ 9.30 ರಿಂದ ‘ಎಸ್.ಡಿ.ಎಂ ಉದ್ಯೋಗಂ – 2026’ ಎಂಬ ಈ ಬೃಹತ್ ಉದ್ಯೋಗ ಮೇಳ ಆರಂಭವಾಗಲಿದೆ. ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಸಮೂಹ ಆಯೋಜಿಸಿರುವ ಈ ಉದ್ಯೋಗ ಮೇಳದಲ್ಲಿ ಎಲ್ಲಾ ಉದ್ಯೋಗಾಕಾಂಕ್ಷಿಗಳಿಗೆ ಉಚಿತವಾಗಿ ನೋಂದಣಿ ಮಾಡಿಕೊಳ್ಳುವ ಅವಕಾಶ ನೀಡಲಾಗಿದೆ.

ಉಜಿರೆಯಲ್ಲಿ “ಎಸ್.ಡಿ.ಎಂ ಉದ್ಯೋಗಂ - 2026”

-

Profile
Ashok Nayak Apr 2, 2026 7:04 PM

ಉಜಿರೆ: ಏ6 ಮತ್ತು 7 ರಂದು ಎಸ್.ಡಿ.ಎಂ ಶಿಕ್ಷಣ ಸಂಸ್ಥೆ (ರಿ) ಇದರ ಆಶ್ರಯದಲ್ಲಿ ‘ಎಸ್.ಡಿ.ಎಂ ಉದ್ಯೋಗಂ – 2026’ ಎಂಬ ಬೃಹತ್ ಉದ್ಯೋಗ ಮೇಳ ನಡೆಯಲಿದೆ.

ಉಜಿರೆಯ ಎಸ್.ಡಿ.ಎಂ ಕಾಲೇಜು (ಸ್ವಾಯತ್ತ), ಎಸ್.ಡಿ.ಎಂ ತಾಂತ್ರಿಕ ಮಹಾವಿದ್ಯಾಲಯ ಹಾಗೂ ಎಸ್.ಡಿ.ಎಂ ಪಾಲಿಟೆಕ್ನಿಕ್ ಕಾಲೇಜು ಸಹಯೋಗದಲ್ಲಿ ನಡೆಯಲಿರುವ ಈ ಉದ್ಯೋಗ ಮೇಳದಲ್ಲಿ ಈಗಾಗಲೇ 100 ಕ್ಕೂ ಅಧಿಕ ಕಂಪನಿಗಳು ನೊಂದಾಯಿಸಿ ಕೊಂಡಿವೆ. ಒಟ್ಟು 4000 ಕ್ಕೂ ಅಧಿಕ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವ ಸಲು ವಾಗಿ ಅಭ್ಯರ್ಥಿಗಳ ಸಂದರ್ಶನ ನಡೆಸಲಿವೆ.

ಉಜಿರೆ ಎಸ್.ಡಿ.ಎಂ ಕಾಲೇಜಿನಲ್ಲಿ ಬೆಳಗ್ಗೆ 9.30 ರಿಂದ ‘ಎಸ್.ಡಿ.ಎಂ ಉದ್ಯೋಗಂ – 2026’ ಎಂಬ ಈ ಬೃಹತ್ ಉದ್ಯೋಗ ಮೇಳ ಆರಂಭವಾಗಲಿದೆ. ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಸಮೂಹ ಆಯೋಜಿಸಿರುವ ಈ ಉದ್ಯೋಗ ಮೇಳದಲ್ಲಿ ಎಲ್ಲಾ ಉದ್ಯೋಗಾಕಾಂಕ್ಷಿಗಳಿಗೆ ಉಚಿತವಾಗಿ ನೋಂದಣಿ ಮಾಡಿಕೊಳ್ಳುವ ಅವಕಾಶ ನೀಡಲಾಗಿದೆ.

ಇದನ್ನೂ ಓದಿ: Job fair: 26 ಸಾವಿರ ಜನರಿಗೆ ಉದ್ಯೋಗ ಮೇಳ ಆಸರೆ

ಐಟಿ ಮತ್ತು ಸಾಪ್ಟ್ವೇರ್ ಡೆವಲಪ್‌ಮೆಂಟ್, ಫಾರ್ಮಾಸ್ಯೂಟಿಕಲ್ಸ್, ಬ್ಯಾಂಕಿಂಗ್ ಮತ್ತು ಫಿನ್ಯಾನ್ಸ್, ಐಟಿ ಮತ್ತು ಐಟಿಇಎಸ್, ಸೇಲ್ಸ್ ಮತ್ತು ಮಾರ್ಕೆಟಿಂಗ್, ರೀಟೈಲ್ ಮತ್ತು ಸೇಲ್ಸ್, ಶಿಕ್ಷಣ, ಪ್ರವಾಸೋದ್ಯಮ ಮತ್ತು ಆತಿಥ್ಯ, ಅಕೌಂಟಿAಗ್ ಮತ್ತು ಟ್ಯಾಕ್ಸ್ ಕನ್ಸಲ್ಟೆನ್ಸಿ, ಉತ್ಪಾದನೆ, ಅಟೋಮೊಬೈಲ್, ಟೆಲಿಕಾಂ ಮತ್ತು ಮೀಡಿಯಾ, ಕನ್‌ಸ್ಟ್ರಕ್ಷನ್ ಮತ್ತು ಇನ್‌ಫ್ರಾಸ್ಟ್ರಕ್ಚರ್ ಹಾಗೂ ಫಿನಾನ್ಶಿಯಲ್ ಕನ್‌ಸಲ್ಟೆನ್ಸಿ ಸೇರಿದಂತೆ ಹಲವು ವರ್ಗಗಳಿಗೆ ಸಂಬಂಧಿಸಿದ ಕಂಪನಿಗಳು ಈ ಉದ್ಯೋಗ ಮೇಳದಲ್ಲಿ ಭಾಗವಹಿಸಲಿದ್ದು ಉದ್ಯೋಗಾ ಕಾಂಕ್ಷಿಗಳಿಗೆ ವಿಸ್ತೃತ ಆಯ್ಕೆಯ ಅವಕಾಶವನ್ನು ಒದಗಿಸಿವೆ.

ಪಿ.ಯು.ಸಿ, ಬಿ.ಎ, ಬಿ.ಬಿ.ಎ, ಬಿ.ಕಾಂ, ಬಿ.ಸಿ.ಎ, ಬಿ.ಎಸ್ಸಿ, ಬಿ.ವೋಕ್, ಐ.ಟಿ.ಐ, ಡಿಪ್ಲೋಮಾ, ಇಂಜಿನಿಯರಿಂಗ್, ಬಿ. ಟೆಕ್, ಬಿ.ಎಡ್, ಎಂ.ಎ, ಎಂ.ಸಿ.ಜೆ, ಎಂ.ಎಸ್.ಡಬ್ಲ್ಯು, ಎಂ.ಕಾಮ್, ಎಂ.ಸಿ.ಎ, ಎಂ.ಎಸ್ಸಿ, ಎಂ.ಬಿ.ಎ, ಮತ್ತು ಜಿ.ಎನ್.ಎಂ ನರ್ಸಿಂಗ್ ಸೇರಿದಂತೆ ಯಾವುದೇ ಶೈಕ್ಷಣಿಕ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಕೂಡಾ ‘ಎಸ್.ಡಿ.ಎಂ ಉದ್ಯೋಗಂ – 2026’ ಬೃಹತ್ ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದಾಗಿದ್ದು, ಇದರ ಜೊತೆಗೆ ತಾಲೂಕಿ ನಾದ್ಯಂತವಿರುವ ವಿವಿಧ ಶೈಕ್ಷಣಿಕ ಸಂಸ್ಥೆಗಳಲ್ಲಿ ಅಂತಿಮ ಪದವಿ ಹಂತದಲ್ಲಿ ಕಲಿಯು ತ್ತಿರುವ ವಿದ್ಯಾರ್ಥಿಗಳೂ ಪಾಲ್ಕೊಳ್ಳುವ ಮುಕ್ತ ಅವಕಾಶ ಒದಗಿಸಲಾಗಿದೆ.

ಈಗಾಗಲೇ ಉದ್ಯೋಗ ಮೇಳದಲ್ಲಿ ಭಾಗವಹಿಸುವ ಅಭ್ಯರ್ಥಿಗಳು ನೋಂದಾಯಿಸಿ ಕೊಳ್ಳುವ ಸಲುವಾಗಿ ಗೂಗಲ್ ಫಾರ್ಮ್ ಲಿಂಕ್ ಸೃಷ್ಟಿಸಿದ್ದು, ಅದರ ಮೂಲಕ ಎರಡು ಸಾವಿರಕ್ಕೂ ಅಧಿಕ ಉದ್ಯೋಗಾಕಾಂಕ್ಷಿಗಳು ಈಗಾಗಲೇ ರಿಜಿಸ್ಟರ್ ಮಾಡಿಕೊಂಡಿದ್ದಾರೆ. ಸಂಪೂರ್ಣ ಉದ್ಯೋಗ ಮೇಳದ ನೋಂದಣಿ ಮತ್ತು ಆಯ್ಕೆ ಪ್ರಕ್ರಿಯೆಯನ್ನು ಪೇಪರ್ ರಹಿತವಾಗಿಸಿದ್ದು, ಆನ್‌ಲೈನ್ ಮೂಲಕವೇ ಎಲ್ಲಾ ನೋಂದಣಿ ಮಾಡಿಕೊಳ್ಳಲಾಗುತ್ತಿದೆ. ಇದರ ಜೊತೆಗೆ ಎಸ್.ಡಿ.ಎಂ ಉದ್ಯೋಗ ಮೇಳಂ ಸಲುವಾಗಿ ವಿಶೇಷ ಸಾಪ್ಟ್ವೇರ್ ರೂಪಿಸ ಲಾಗಿದ್ದು, ಅದರ ಮೂಲಕ ಸಂದರ್ಶನ ಪ್ರಕ್ರಿಯೆಯಲ್ಲಿ ಪಾಲ್ಗೊಂಡ ಅಭ್ಯರ್ಥಿಗಳಿಗೆ ತಮ್ಮ ಸಂದರ್ಶನದ ಫಲಿತಾಂಶವನ್ನು ಮೊಬೈಲ್ ಮೂಲಕವೇ ತಿಳಿದುಕೊಳ್ಳುವಂತಹ ವ್ಯವಸ್ಥೆಯನ್ನೂ ಮಾಡಲಾಗಿದೆ.

ತಾಲೂಕಿನ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳು ಪ್ರಪ್ರಥಮ ಬಾರಿಗೆ ಆಯೋಜಿಸಲಾಗುತ್ತಿದೆ ಎರಡು ದಿನಗಳ ಈ ಬೃಹತ್ ಉದ್ಯೋಗ ಮೇಳದಲ್ಲಿ ಉದ್ಯೋಗಾಕಾಂಕ್ಷಿಗಳೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸದುಪಯೋಗ ಪಡಿಸಿಕೊಳ್ಳಬೇಕಾಗಿ ಕೋರಲಾಗಿದೆ.