ಆರ್.ವಿ.ಐ.ಎಂ ನಲ್ಲಿ 2024–26ನೇ ಸಾಲಿನ ಎಂಬಿಎ ಮತ್ತು ಪಿ ಜಿ ಡಿ ಬಿ ಎ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ
ಶಿಕ್ಷಣ ಮತ್ತು ಉದ್ಯಮ ಕ್ಷೇತ್ರಗಳ ಗಣ್ಯರು, ಸಂಸ್ಥೆಯ ನಾಯಕತ್ವ, ಬೋಧಕವರ್ಗದ ಸದಸ್ಯರು, ಹೆಮ್ಮೆಯ ಪೋಷಕರು, ಪದವಿ ಪಡೆಯುತ್ತಿರುವ ವಿದ್ಯಾರ್ಥಿಗಳು ಹಾಗೂ ನೂತನ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಈ ಸಮಾರಂಭವು ಹೆಮ್ಮೆ, ಸ್ಫೂರ್ತಿ ಮತ್ತು ಹೊಸ ಆಶಯ ಗಳ ಸಂಗಮವಾಗಿ ಮೂಡಿ ಬಂದಿತು.
-
ಬೆಂಗಳೂರು: ಬೆಂಗಳೂರಿನ ಆರ್ವಿ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸಂಸ್ಥೆಯು 2024–26ನೇ ಸಾಲಿನ ಎಂಬಿಎ ಮತ್ತು ಪಿ ಜಿ ಡಿ ಬಿ ಎ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗಳನ್ನು ಗೌರವಿಸುವ ಪದವಿ ಪ್ರದಾನ ಸಮಾರಂಭವನ್ನು ಹಾಗೂ 2026–28ನೇ ಸಾಲಿನ ನೂತನ ಎಂಬಿಎ ಮತ್ತು ಪಿಜಿಡಿಬಿಎ ವಿದ್ಯಾರ್ಥಿಗಳನ್ನು ಸ್ವಾಗತಿಸುವ ಜಿನಿಸಿಸ್.2026–28 ಕಾರ್ಯಕ್ರಮವನ್ನು ಸಂಭ್ರಮದಿಂದ ಆಚರಿಸಿತು.
ಈ ಮಹತ್ವದ ಕಾರ್ಯಕ್ರಮವು ಒಂದು ಶೈಕ್ಷಣಿಕ ಪಯಣದ ಯಶಸ್ವಿ ಸಮಾಪ್ತಿ ಮತ್ತು ಮತ್ತೊಂದು ಹೊಸ ಪಯಣದ ಶುಭಾರಂಭವನ್ನು ಸಂಕೇತಿಸಿತು. ಪದವಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಸಾಧನೆಗಳನ್ನು ಸಂಭ್ರಮಿಸುತ್ತಾ ವೃತ್ತಿಜೀವನದ ಹೊಸ ಅವಕಾಶಗಳತ್ತ ಹೆಜ್ಜೆ ಹಾಕಲು ಸಜ್ಜಾದರೆ, ಭಾರತದ ವಿವಿಧ ಭಾಗಗಳಿಂದ ಆರ್.ವಿ.ಐ.ಎಂ ಗೆ ಆಗಮಿಸಿರುವ ನೂತನ ವಿದ್ಯಾರ್ಥಿಗಳನ್ನು ಸಂಸ್ಥೆಯ ಶೈಕ್ಷಣಿಕ ಸಮುದಾಯಕ್ಕೆ ಆತ್ಮೀಯವಾಗಿ ಸ್ವಾಗತಿಸಲಾಯಿತು.
ಶಿಕ್ಷಣ ಮತ್ತು ಉದ್ಯಮ ಕ್ಷೇತ್ರಗಳ ಗಣ್ಯರು, ಸಂಸ್ಥೆಯ ನಾಯಕತ್ವ, ಬೋಧಕವರ್ಗದ ಸದಸ್ಯರು, ಹೆಮ್ಮೆಯ ಪೋಷಕರು, ಪದವಿ ಪಡೆಯುತ್ತಿರುವ ವಿದ್ಯಾರ್ಥಿಗಳು ಹಾಗೂ ನೂತನ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಈ ಸಮಾರಂಭವು ಹೆಮ್ಮೆ, ಸ್ಫೂರ್ತಿ ಮತ್ತು ಹೊಸ ಆಶಯ ಗಳ ಸಂಗಮವಾಗಿ ಮೂಡಿ ಬಂದಿತು.
ಇದನ್ನೂ ಓದಿ: Bangalore News: ಅಂಬೇಡ್ಕರ್ ಅವರನ್ನು ವ್ಯಕ್ತಿಯಾಗಿ ಅಲ್ಲ, ಸಿದ್ಧಾಂತವಾಗಿ ನೋಡಬೇಕು: ಕೋಡಿ ರಂಗಪ್ಪ ಕರೆ
ಆರ್.ವಿ.ಐ.ಎಂ ನ ಪ್ರಾಧ್ಯಾಪಕ ಹಾಗೂ ನಿರ್ದೇಶಕರಾದ ಡಾ.ಪುರುಷೋತ್ತಮ್ ಬಂಗ್ ಅವರು ಪದವಿ ಪ್ರದಾನ ಸಮಾರಂಭವನ್ನು ಔಪಚಾರಿಕವಾಗಿ ಉದ್ಘಾಟಿಸಿದರು. ಶಿಕ್ಷಣ ಮತ್ತು ಉದ್ಯಮ ಕ್ಷೇತ್ರಗಳ ಗಣ್ಯರು ನೀಡಿದ ಮಾರ್ಗದರ್ಶನದ ಮಾತುಗಳು ಪದವೀಧರ ವಿದ್ಯಾರ್ಥಿಗಳಿಗೆ ಸ್ಫೂರ್ತಿ ಯಾಯಿತು.
ಬೆಂಗಳೂರಿನ ಡಾ.ಮನಮೋಹನ್ ಸಿಂಗ್ ಬೆಂಗಳೂರು ಸಿಟಿ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ರಮೇಶ್ ಬಿ. ಅವರು ಪದವಿ ಪ್ರದಾನ ಭಾಷಣ ಮಾಡಿದರು. ಬದಲಾಗುತ್ತಿರುವ ವೃತ್ತಿಪರ ಜಗತ್ತಿನಲ್ಲಿ ಎದುರಾಗುವ ಅವಕಾಶಗಳು ಮತ್ತು ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ವಿದ್ಯಾರ್ಥಿಗಳಿಗೆ ನೆರವಾಗುವ ಅಮೂಲ್ಯ ವಿಚಾರಗಳನ್ನು ಹಂಚಿಕೊಂಡರು.
ವೈಥಮ್ ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ವಿಕ್ರಮ್ ಪಿ. ರಾವ್ ಅವರು ಉದ್ಯಮ ಕ್ಷೇತ್ರದ ದೃಷ್ಟಿಕೋನದಿಂದ ಪದವೀಧರರನ್ನು ಉದ್ದೇಶಿಸಿ ಮಾತನಾಡಿದರು. ಯಶಸ್ವಿ ವೃತ್ತಿಜೀವನವನ್ನು ರೂಪಿಸಿಕೊಳ್ಳಲು ವೃತ್ತಿಪರ ನಡವಳಿಕೆ, ಪ್ರಾಮಾಣಿಕತೆ, ಬದಲಾವಣೆಗಳಿಗೆ ಹೊಂದಿಕೊಳ್ಳುವ ಸಾಮರ್ಥ್ಯ ಮತ್ತು ನಿರಂತರ ಕಲಿಕೆ ಅತ್ಯಗತ್ಯವೆಂದು ಒತ್ತಿ ಹೇಳಿದರು.
ಬದಲಾವಣೆಗಳನ್ನು ಸ್ವೀಕರಿಸುವುದು, ಶ್ರೇಷ್ಠತೆಯ ಗುರಿಯೊಂದಿಗೆ ಕಾರ್ಯನಿರ್ವಹಿಸುವುದು ಹಾಗೂ ಸ್ಪರ್ಧಾತ್ಮಕ ಉದ್ಯಮ ವಾತಾವರಣದಲ್ಲಿ ಯಶಸ್ವಿಯಾಗಲು ಅಗತ್ಯವಾದ ಕೌಶಲಗಳನ್ನು ಬೆಳೆಸಿಕೊಳ್ಳುವುದು ಭವಿಷ್ಯದ ನಿರ್ವಾಹಕರಿಗೆ ಮುಖ್ಯವೆಂಬ ಸಂದೇಶವನ್ನು ನೀಡಿದರು.
ಜೆನಿಸಿಸ್ 2026–28 ನೂತನ ವಿದ್ಯಾರ್ಥಿಗಳ ಸ್ವಾಗತ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಾ.ಪಿ.ಬಿ.ಕೋಟೂರ್ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ನಿರ್ವ ಹಣಾ ಶಿಕ್ಷಣದ ಪಯಣವನ್ನು ಆರಂಭಿಸುತ್ತಿರುವ ವಿದ್ಯಾರ್ಥಿಗಳಿಗೆ ಸ್ಫೂರ್ತಿದಾಯಕ ವಿಚಾರ ಗಳನ್ನು ಹಂಚಿಕೊಂಡರು. ಗೌರವ ಅತಿಥಿಗಳಾದ ಜಸ್ವಂತ್ ಶರಣಾರ್ಥಿ ಅವರು ಸಹ ವಿದ್ಯಾರ್ಥಿ ಗಳನ್ನು ಉದ್ದೇಶಿಸಿ ಮಾತನಾಡಿ, ತಮ್ಮ ಶೈಕ್ಷಣಿಕ ಅನುಭವವನ್ನು ಸದುಪಯೋಗ ಪಡಿಸಿಕೊಳ್ಳಲು ಹಾಗೂ ಭವಿಷ್ಯದ ವೃತ್ತಿಪರ ಜವಾಬ್ದಾರಿಗಳಿಗೆ ಸಿದ್ಧರಾಗಲು ಅಮೂಲ್ಯ ಸಲಹೆ ಮತ್ತು ಮಾರ್ಗ ದರ್ಶನ ನೀಡಿದರು.
ಸಿಎ ಡಾ.ಎ.ಎಸ್.ವಿಷ್ಣು ಭರತ್ ಅವರು ಅಧ್ಯಕ್ಷೀಯ ನುಡಿಗಳನ್ನಾಡಿ, ಸಭಿಕರಿಗೆ ತಮ್ಮ ಅನುಭವದ ಸಾರವನ್ನು ಹಂಚಿಕೊಂಡು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮತ್ತು ಪ್ರೋತ್ಸಾಹ ನೀಡಿದರು. ಯಶಸ್ವಿ ನಿರ್ವಹಣಾ ವೃತ್ತಿಪರರನ್ನು ರೂಪಿಸುವಲ್ಲಿ ಶೈಕ್ಷಣಿಕ ಬದ್ಧತೆ, ನೈತಿಕ ನಾಯಕತ್ವ, ಶಿಸ್ತು ಮತ್ತು ನಿರಂತರ ಕಲಿಕೆಯ ಮಹತ್ವವನ್ನು ಅವರು ಒತ್ತಿ ಹೇಳಿದರು.
ಕಾರ್ಯಕ್ರಮದ ಔಪಚಾರಿಕ ಭಾಗವು ಆರ್.ವಿ.ಐ.ಎಂ ನ ಉಪನಿರ್ದೇಶಕರಾದ ಡಾ.ಕೆ.ಅಪರ್ಣಾ ರಾವ್ ಅವರು ಸಲ್ಲಿಸಿದ ವಂದನಾರ್ಪಣೆಯೊಂದಿಗೆ ಮುಕ್ತಾಯಗೊಂಡಿತು. ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಗಣ್ಯರು, ಸಂಸ್ಥೆಯ ನಾಯಕತ್ವ, ಬೋಧಕ ವರ್ಗದ ಸದಸ್ಯರು, ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ಅವರು ಕೃತಜ್ಞತೆ ಸಲ್ಲಿಸಿದರು.