ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

PES University: ಎಚ್‌ಎಎಲ್ ಏರೋಥನ್ 2026ರಲ್ಲಿ ಪಿಇಎಸ್ ವಿವಿ ವಿದ್ಯಾರ್ಥಿ ಗೌರವ್.ಎಸ್ ನೇತೃತ್ವದ ತಂಡಕ್ಕೆ ಪ್ರಥಮ ಸ್ಥಾನ

HAL Aerothon 2026: ಇಂದೋರ್‌ನಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರಮಟ್ಟದ 'ಎಚ್‌ಎಎಲ್ ಏರೋಥನ್ 2026' ರ ಅಂತಿಮ ಸುತ್ತಿನಲ್ಲಿ ಪಿಇಎಸ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಗೌರವ್ ಎಸ್. ಪ್ರಥಮ ಸ್ಥಾನವನ್ನು ಪಡೆದಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

ಎಚ್‌ಎಎಲ್ ಏರೋಥನ್ 2026ರಲ್ಲಿ ಪಿಇಎಸ್ ವಿವಿ ವಿದ್ಯಾರ್ಥಿ ತಂಡ ಪ್ರಥಮ

ಎಚ್‌ಎಎಲ್ ಏರೋಥನ್ 2026ರಲ್ಲಿ ಪ್ರಥಮ ಸ್ಥಾನ ಪಡೆದ ಪಿಇಎಸ್ ವಿವಿ ವಿದ್ಯಾರ್ಥಿ ಗೌರವ್ ಎಸ್. ನೇತೃತ್ಬದ ತಂಡ. -

Profile
Siddalinga Swamy Aug 14, 2026 3:54 PM

ಬೆಂಗಳೂರು, ಆ.14: ಐಐಟಿ ಇಂದೋರ್‌ನಲ್ಲಿ ಆ.7 ಮತ್ತು 8ರಂದು ನಡೆದ ರಾಷ್ಟ್ರಮಟ್ಟದ 'ಎಚ್‌ಎಎಲ್ ಏರೋಥನ್ 2026' ರ ಅಂತಿಮ ಸುತ್ತಿನಲ್ಲಿ ಪಿಇಎಸ್ ವಿಶ್ವವಿದ್ಯಾಲಯದ (PES University) ವಿದ್ಯಾರ್ಥಿ ಗೌರವ್ ಎಸ್. ಪ್ರಥಮ ಸ್ಥಾನವನ್ನು ಪಡೆದಿದ್ದಾರೆ. "ಮೇವರಿಕ್ಸ್" (Mavericks) ತಂಡದ ಭಾಗವಾಗಿದ್ದ ಇವರು, ಎನ್‌ಎಂಐಟಿಯ ಕೀರ್ತನಾ ಭಟ್ ಮತ್ತು ಎಂ.ಎಸ್. ರಾಮಯ್ಯ ವಿವಿಯ ಶ್ರದ್ಧಾ ಆರ್.ಕೆ. ಅವರೊಂದಿಗೆ, "ಹೈಬ್ರಿಡ್ ಮಾನವ ರಹಿತ ವೈಮಾನಿಕ ವಾಹನ" (Hybrid UAV Propulsion System) ಎಂಬ ಅತ್ಯುತ್ತಮ ಯೋಜನೆಯ ಮೂಲಕ ಈ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ.

ಈ ಸ್ಪರ್ಧೆಯಲ್ಲಿ ದೇಶಾದ್ಯಂತ 2600 ತಂಡಗಳು ಭಾಗವಹಿಸಿದ್ದವು. ಅವುಗಳಲ್ಲಿ ಐಐಟಿಗಳಾದ ಐಐಟಿ ಬಾಂಬೆ, ಧನ್ಮಾದ್, ರೋಪರ್, ತಿರುಪತಿ, ಧಾರವಾಡ ಮತ್ತು ಎನ್‌ಐಟಿ ಸುರತ್ಕಲ್ ಮತ್ತು ಯುಪಿಇಎಸ್ ಡೆಹ್ರಾಡೂನ್ ಸೇರಿವೆ. ಅತ್ಯಂತ ಪೈಪೋಟಿಯಿಂದ ಕೂಡಿದ ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ವಿಜೇತ ತಂಡವಾಗಿ ಹೊರಹೊಮ್ಮಿರುವ, ಗೌರವ್ ನೇತೃತ್ಯದ 'ಟೀಮ್ ಮೇವರಿಕ್ಸ್' ನ ಪ್ರದರ್ಶನ ನಿಜಕ್ಕೂ ಪ್ರಶಂಸನೀಯ.

ʼಈ ಗಮನಾರ್ಹ ಸಾಧನೆಯು ಬಲವಾದ ಶೈಕ್ಷಣಿಕ ಅಡಿಪಾಯ ಮತ್ತು ಪಿಇಎಸ್ ವಿಶ್ವವಿದ್ಯಾಲಯದಲ್ಲಿ ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆಯಂತಹ ಅತ್ಯಾಧುನಿಕ ಡೊಮೇನ್‌ಗಳ ಮೇಲೆ ನಮ್ಮ ನಿರಂತರ ಒತ್ತು ನೀಡುವಿಕೆಯನ್ನು ಪ್ರತಿಬಿಂಬಿಸುತ್ತದೆ. ಇದು ನಾವೀನ್ಯತೆಯನ್ನು ಬೆಳೆಸುವ ಮತ್ತು ಜಾಗತಿಕವಾಗಿ ಸ್ಪರ್ಧಾತ್ಮಕ ಪ್ರತಿಭೆಯನ್ನು ಪೋಷಿಸುವ ನಮ್ಮ ಬದ್ಧತೆಯನ್ನು ಬಲಪಡಿಸುತ್ತದೆʼ ಎಂದು ಪಿಇಎಸ್ ವಿಶ್ವವಿದ್ಯಾಲಯದ ಕುಲಾಧಿಪತಿ ಪ್ರೊ. ಜವಾಹರ್ ದೊರೆಸ್ವಾಮಿ ಹೇಳಿದರು.‌

NMMSS Scholarship: ಮೆರಿಟ್ ವಿದ್ಯಾರ್ಥಿ ವೇತನ ಮುಂದುವರಿಕೆಗೆ ಕೇಂದ್ರ ಚಿಂತನೆ; ಶಿಕ್ಷಣ ಇಲಾಖೆ ಹಿರಿಯ ಅಧಿಕಾರಿಗಳೊಂದಿಗೆ ಸಚಿವ ಪ್ರಲ್ಹಾದ್‌ ಜೋಶಿ ಚರ್ಚೆ

ʼಗೌರವ್ ಎಸ್. ಅವರ ಈ ಅತ್ಯುತ್ತಮ ಸಾಧನೆಗಾಗಿ ನಾನು ಅವರಿಗೆ ನನ್ನ ಹತೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಅವರ ಈ ಸಾಧನೆಯ ಬಗ್ಗೆ ನಮಗೆ ಅಪಾರ ಹೆಮ್ಮೆಯಿದೆ ಮತ್ತು ಅವರ ಮುಂದಿನ ಎಲ್ಲಾ ಪ್ರಯತ್ನಗಳಲ್ಲೂ ಅವರಿಗೆ ನಿರಂತರ ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆʼ ಎಂದು ಅವರು ತಿಳಿಸಿದ್ದಾರೆ.