ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

NMMSS Scholarship: ಮೆರಿಟ್ ವಿದ್ಯಾರ್ಥಿ ವೇತನ ಮುಂದುವರಿಕೆಗೆ ಕೇಂದ್ರ ಚಿಂತನೆ; ಶಿಕ್ಷಣ ಇಲಾಖೆ ಹಿರಿಯ ಅಧಿಕಾರಿಗಳೊಂದಿಗೆ ಸಚಿವ ಪ್ರಲ್ಹಾದ್‌ ಜೋಶಿ ಚರ್ಚೆ

Pralhad Joshi: ಕೇಂದ್ರ ಶಿಕ್ಷಣ ಸಚಿವ ಪ್ರಲ್ಹಾದ್‌ ಜೋಶಿ ಅವರು ಶಿಕ್ಷಣ ಸಚಿವಾಲಯದ ಹಿರಿಯ ಅಧಿಕಾರಿಗಳ ಸಭೆ ನಡೆಸಿ, ರಾಷ್ಟ್ರೀಯ ಸಾಧನೆ ಆಧಾರಿತ ವಿದ್ಯಾರ್ಥಿ ವೇತನ (NMMSS) ಯೋಜನೆ ಮುಂದುವರಿಸುವ ಪ್ರಸ್ತಾವನೆ ಕುರಿತಂತೆ ಚರ್ಚಿಸಿದ್ದಾರೆ. ಈ ಕುರಿತ ಡಿಟೇಲ್ಸ್‌ ಇಲ್ಲಿದೆ.

ಮೆರಿಟ್ ವಿದ್ಯಾರ್ಥಿ ವೇತನ ಮುಂದುವರಿಕೆಗೆ ಕೇಂದ್ರ ಚಿಂತನೆ

ಶಿಕ್ಷಣ ಸಚಿವಾಲಯದ ಹಿರಿಯ ಅಧಿಕಾರಿಗಳ ಸಭೆ ನಡೆಸಿದ ಕೇಂದ್ರ ಶಿಕ್ಷಣ ಸಚಿವ ಪ್ರಲ್ಹಾದ್‌ ಜೋಶಿ. -

Profile
Siddalinga Swamy Aug 13, 2026 4:44 PM

ನವದೆಹಲಿ, ಆ.13: ರಾಷ್ಟ್ರೀಯ ಸಾಧನೆ ಆಧಾರಿತ ವಿದ್ಯಾರ್ಥಿ ವೇತನ (NMMSS) ಯೋಜನೆಯನ್ನು 4 ವರ್ಷ ಅವಧಿಗೆ ಮುಂದುವರಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಕೇಂದ್ರ ಶಿಕ್ಷಣ ಸಚಿವ ಪ್ರಲ್ಹಾದ್‌ ಜೋಶಿ ಅವರು (Pralhad Joshi) ಶಿಕ್ಷಣ ಸಚಿವಾಲಯದ ಹಿರಿಯ ಅಧಿಕಾರಿಗಳ ಸಭೆ ನಡೆಸಿ NMMSS ಯೋಜನೆ ಮುಂದುವರಿಸುವ ಪ್ರಸ್ತಾವನೆ ಕುರಿತಂತೆ ಚರ್ಚಿಸಿದ್ದಾರೆ. ಸಭೆಯ ಅಧ್ಯಕ್ಷತೆ ವಹಿಸಿದ್ದ ಸಚಿವರು, ಈ ಯೋಜನೆಯನ್ನು 2026-27 ರಿಂದ 2030-31ರ ವರೆಗೆ ವಿಸ್ತರಿಸುವ ಬಗ್ಗೆ ಉನ್ನತ ಅಧಿಕಾರಿಗಳಿಂದ ಅಗತ್ಯ ಮಾಹಿತಿ, ಸಲಹೆ ಪಡೆದಿದ್ದಾರೆ.

ದೇಶಾದ್ಯಂತ ಪ್ರತಿಭಾವಂತ, ಸಾಧಕ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಬೆಂಬಲ ನೀಡುವ ನಿಟ್ಟಿನಲ್ಲಿ ಈ ಯೋಜನೆ ನಿರಂತರ ಅನುಷ್ಠಾನದ ಕುರಿತು ಸಚಿವರು ಮಹತ್ವದ ಚರ್ಚೆ ನಡೆಸಿದರು. ಅಲ್ಲದೆ, ಯೋಜನೆ ಪ್ರಮುಖ ಅಂಶಗಳ ಬಗ್ಗೆ ಗಮನ ಹರಿಸಿದ ಸಚಿವರು, ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಇದರ ಪ್ರಯೋಜನ ಲಭ್ಯವಾಗಬೇಕು ಎಂದು ಸಲಹೆ ನೀಡಿದರು.

ಈರುಳ್ಳಿ ದಾಸ್ತಾನು ಮೇಲೆ ನಿಗಾ

ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು, ಗ್ರಾಹಕ ವ್ಯವಹಾರ ಸಚಿವರೂ ಆಗಿರುವ ಪ್ರಲ್ಹಾದ್‌ ಜೋಶಿ ಅವರು ಗ್ರಾಹಕ ವ್ಯವಹಾರ ಇಲಾಖೆ ಅಧಿಕಾರಿಗಳ ಜತೆಯೂ ಸಭೆ ನಡೆಸಿ, ಈರುಳ್ಳಿ ಸಂಗ್ರಹ, ದಾಸ್ತಾನು ಮೇಲೆ ನಿಗಾ ಇಡುವಂತೆ ಸೂಚಿಸಿದರು.

ಈರುಳ್ಳಿ ಸಂಗ್ರಹಣೆ ಮತ್ತು ದಾಸ್ತಾನು ನಿರ್ವಹಣೆ ಬಗ್ಗೆ ಪರಿಶೀಲನೆ ನಡೆಸಿ, ಮಾರುಕಟ್ಟೆಯಲ್ಲಿ ಬೆಲೆ ಸ್ಥಿರತೆ ಬಗ್ಗೆ ಗಮನ ಹರಿಸಿ ಎಂದು ಗ್ರಾಹಕ ವ್ಯವಹಾರ ಇಲಾಖೆ ಕಾರ್ಯದರ್ಶಿಗೆ ಸಲಹೆ ನೀಡಿದರು.

Hubli-Varanasi Train: ʼಹುಬ್ಬಳ್ಳಿ-ವಾರಾಣಸಿ' ರೈಲು ಸಂಚಾರ ವಾರದಲ್ಲಿ 3 ದಿನ ವಿಸ್ತರಣೆ; ಕೇಂದ್ರ ರೈಲ್ವೆ ಸಚಿವ ಭರವಸೆ

ಈರುಳ್ಳಿ ವಿಲೇವಾರಿ ತಂತ್ರ, ಮಾರುಕಟ್ಟೆ ಪರಿಸ್ಥಿತಿ ಮತ್ತು ಸೂಕ್ತ ದರದಲ್ಲಿ ನಿರಂತರ ಪೂರೈಕೆ ಕುರಿತಂತೆ ಚರ್ಚೆ ನಡೆಸಿದರು. ಮಾರುಕಟ್ಟೆಯಲ್ಲಿ ಈರುಳ್ಳಿ ದಾಸ್ತಾನು ಮತ್ತು ಬೆಲೆ ಸ್ಥಿರತೆಯನ್ನು ಬಲಪಡಿಸಲು ನಿಕಟವಾಗಿ ನಿಗಾ ವಹಿಸಬೇಕು, ಆ ನಿಟ್ಟಿನಲ್ಲಿ ಸಮನ್ವಯದ ಕ್ರಮಗಳ ಅಗತ್ಯತೆ ಬಗ್ಗೆಯೂ ಸಚಿವರು ನಿರ್ದೇಶನ ನೀಡಿದರು.