Delhi Exit Poll Results 2025: ದಿಲ್ಲಿಯಲ್ಲಿ ಬಿಜೆಪಿ ಸರ್ಕಾರ; ಮತ್ತೆ 3 ಚುನಾವಣೋತ್ತರ ಸಮೀಕ್ಷೆಗಳ ಭವಿಷ್ಯ
ದಿಲ್ಲಿ ವಿಧಾನಸಭಾ ಚುನಾವಣೆ ಪೂರ್ಣಗೊಂಡಿದೆ. ಇದೀಗ ಚುನಾವಣೋತ್ತರ ಸಮೀಕ್ಷೆಗಳೂ ಪ್ರಕಟಗೊಂಡಿದ್ದು, ಬಿಜೆಪಿ ಅಧಿಕಅರಕ್ಕೆ ಬರುವುದು ಬಹುತೇಕ ಖಚಿತ ಎಂಬಂತಾಗಿದೆ. ಎಲ್ಲ ಸಮೀಕ್ಷೆಗಳು ದಿಲ್ಲಿಯಲ್ಲಿ ಬಿಜೆಪಿ ಕನಿಷ್ಠ 42 ಸೀಟುಗಳನ್ನು ಗೆಲ್ಲಲಿದೆ ಎಂದಿವೆ. ಇದು ಬಹುಮತಕ್ಕೆ ಅಗತ್ಯವಾದ ಸೀಟಿಗಿಂತ ಸುಮಾರು 6 ಸೀಟು ಹೆಚ್ಚು. ಸತತ 3ನೇ ಬಾರಿಗೆ ಅಧಿಕಾರಕ್ಕೆ ಏರಬೇಕೆಂಬ ಕನಸು ಕಟ್ಟಿಕೊಂಡಿರುವ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಪ್ ಈ ಬಾರಿ ಕೇವಲ 27 ಸೀಟುಗಳಿಗೆ ಸೀಮಿತವಾಗಲಿದೆ ಎಂದು ಎಕ್ಸಿಟ್ ಪೋಲ್‌ಗಳು ಭವಿಷ್ಯ ನುಡಿದಿವೆ.
ಹೊಸದಿಲ್ಲಿ: ದೇಶದ ಗಮನ ಸೆಳೆದಿದ್ದ ದಿಲ್ಲಿ ವಿಧಾನಸಭಾ ಚುನಾವಣೆ ಒಂದೇ ಹಂತದಲ್ಲಿ ಯಶಸ್ವಿಯಾಗಿ ಪೂರ್ಣಗೊಂದಿದ್ದು, ಫೆ. 8ರಂದು ಫಲಿತಾಂಶ ಘೋಷಣೆಯಾಗಲಿದೆ. ಈಗಾಗಲೇ ಹೊರಬಿದ್ದ ಚುನಾಣೋತ್ತರ ಸಮೀಕ್ಷೆಗಳು (Delhi Exit Poll Results 2025) ಮತ್ತೆ ದಿಲ್ಲಿ ಗದ್ದುಗೆ ಬಿಜೆಪಿ (BJP) ಪಾಲಾಗಲಿದೆ ಎಂದು ಭವಿಷ್ಯ ನುಡಿದಿವೆ. ಗುರುವಾರ (ಫೆ. 6) ಪ್ರಕಟಗೊಂಡ ಮತ್ತೆ 3 ಸಮೀಕ್ಷೆಗಳೂ ಕೇಸರಿ ಪಕ್ಷ ಸರ್ಕಾರ ರಚಿಸಲಿದೆ ಎಂದು ಊಹಿಸಿದೆ. ಟುಡೇಸ್ ಚಾಣಕ್ಯ, ಆಕ್ಸಿಸ್ ಮೈ ಇಂಡಿಯಾ ಮತ್ತು ಸಿಎನ್‌ಎಕ್ಸ್ ಗುರುವಾರ ಸಮೀಕ್ಷೆಯನ್ನು ಪ್ರಕಟಿಸಿದ್ದು, ರಾಷ್ಟ್ರ ರಾಜಧಾನಿಯಲ್ಲಿ ಬಿಜೆಪಿ 1998 ಬಳಿಕ ಮೊದಲ ಬಾರಿ ಆಡಳಿತಕ್ಕೆ ಬರಲಿದೆ ಎಂದು ತಿಳಿಸಿದೆ. ದಿಲ್ಲಿಯಲ್ಲಿ ಒಟ್ಟು 70 ಕ್ಷೇತ್ರಗಳಿದ್ದು, ಮ್ಯಾಜಿಕ್ ನಂಬರ್ 36.
ಆಕ್ಸಿಸ್ ಮೈ ಇಂಡಿಯಾ ಪ್ರಕಾರ ಕಮಲ ಪಡೆ 45-55 ಸೀಟುಗಳಲ್ಲಿ ಜಯ ಗಳಿಸಲಿದೆ. ಸಿಎನ್‌ಎಕ್ಸ್ ಪ್ರಕಾರ 49-61 ಕ್ಷೇತ್ರಗಳಲ್ಲಿ ತಾವರೆ ಅರಳಲಿದೆ. ಇನ್ನು ಟುಡೇಸ್ ಚಾಕಣ್ಯ ಬಿಜೆಪಿಗೆ 51 ಸೀಟುಗಳನ್ನು ಊಹಿಸಿದೆ. ಇtft ಆಮ್ ಆದ್ಮಿ ಪಾರ್ಟಿಯು ಆಕ್ಸಿಸ್ ಮೈ ಇಂಡಿಯಾದ ಸಮೀಕ್ಷೆಯಲ್ಲಿ 15-25 ಸೀಟುಗಳಲ್ಲಿ, ಸಿಎನ್‌ಎಕ್ಸ್ ಎಕ್ಸಿಟ್ ಪೋಲ್‌ನಲ್ಲಿ 10-19 ಕಡೆಗಳಲ್ಲಿ ಮತ್ತು ಟುಡೇಸ್ ಚಾಣಕ್ಯ ಪ್ರಕಾರ 19 ಕ್ಷೇತ್ರಗಳಲ್ಲಿ ಜಯ ಗಳಿಸಲಿದೆ.
3 ಸಮೀಕ್ಷೆಗಳೂ ಕಾಂಗ್ರೆಸ್ ಬಗ್ಗೆ ಯಾವುದೇ ನಿರೀಕ್ಷೆ ಇಟ್ಟುಕೊಂಡಿಲ್ಲ. ಒಟ್ಟಿನಲ್ಲಿ ಇದುವರೆಗೆ ಪ್ರಕಟಗೊಂಡ ಎಲ್ಲ 12 ಸಮೀಕ್ಷೆಗಳೂ ದಿಲ್ಲಿಯಲ್ಲಿ ಕಾಂಗ್ರೆಸ್ ಸಂಪೂರ್ಣ ನೆಲಕಚ್ಚಲಿದೆ ಎಂದೇ ಭವಿಷ್ಯ ನುಡಿದಿವೆ.
ಸಮೀಕ್ಷೆಗಳು ಹೇಳೋದೇನು?
ಎಲ್ಲ ಸಮೀಕ್ಷೆಗಳು ದಿಲ್ಲಿಯಲ್ಲಿ ಬಿಜೆಪಿ ಕನಿಷ್ಠ 42 ಸೀಟುಗಳನ್ನು ಗೆಲ್ಲಲಿದೆ ಎಂದಿವೆ. ಇದು ಬಹುಮತಕ್ಕೆ ಅಗತ್ಯವಾದ ಸೀಟಿಗಿಂತ ಸುಮಾರು 6 ಸೀಟು ಹೆಚ್ಚು. ಸತತ 3ನೇ ಬಾರಿಗೆ ಅಧಿಕಾರಕ್ಕೆ ಏರಬೇಕೆಂಬ ಕನಸು ಕಟ್ಟಿಕೊಂಡಿರುವ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಪ್ ಈ ಬಾರಿ ಕೇವಲ 27 ಸೀಟುಗಳಿಗೆ ಸೀಮಿತವಾಗಲಿದೆ. 2015ರಲ್ಲಿ 67 ಮತ್ತು 2020ರಲ್ಲಿ 62 ಕ್ಷೇತ್ರಗಳನ್ನು ಗೆದ್ದ ಆಪ್ ಈ ಬಾರಿ ಮ್ಯಾಜಿಕ್ ಮಾಡುವಲ್ಲಿ ವಿಫಲವಾಗಲಿದೆ ಎಂದು ಸಮೀಕ್ಷೆಗಳು ಹೇಳಿವೆ.
ಕಳೆದರಡು ಬಾರಿಯೂ ಒಂದೇ ಒಂದು ಸ್ಥಾನವನ್ನೂ ಗೆದ್ದುಕೊಂಡಿರದ ಕಾಂಗ್ರೆಸ್ ಕೇವಲ 1 ಸೀಟಿಗೆ ಸೀಮಿತವಾಗುವ ಸಾಧ್ಯತೆ ಇದೆ. ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬಂದರೆ ಸುಮಾರು 27 ವರ್ಷಗಳ ಬಳಿಕ ದಿಲ್ಲಿ ಗದ್ದುಗೆಗೆ ಏರಿದಂತಾಗುತ್ತದೆ.
ಈ ಸುದ್ದಿಯನ್ನೂ ಓದಿ: Delhi Exit Poll Results 2025: ರಾಜಕೀಯದಲ್ಲಿ ಸೋತ ಕೇಜ್ರಿವಾಲ್‌ಗೆ ಚಿತ್ರರಂಗದಲ್ಲಿ ಉತ್ತಮ ಭವಿಷ್ಯವಿದೆ; ಬಿಜೆಪಿ ಲೇವಡಿ
ಆದಾಗ್ಯೂ ಆಪ್ ಸಮೀಕ್ಷಾ ವರದಿಯನ್ನು ತಿರಸ್ಕರಿಸಿದೆ. 2015 ಮತ್ತು 2020ರಲ್ಲಿ ಇದೇ ರೀತಿಯ ಸಮೀಕ್ಷೆಗಳು ಸುಳ್ಳಾಗಿದ್ದವು ಎಂದು ಹೇಳಿದೆ. ಆಪ್ ನಾಯಕ ಸುಶೀಲ್ ಗುಪ್ತಾ ಸುದ್ದಿ ಸಂಸ್ಥೆ ಎಎನ್‌ಐ ಜತೆ ಮಾತನಾಡಿ, "ಇದು ನಮ್ಮ 4ನೇ ಚುನಾವಣೆ. ಪ್ರತಿ ಬಾರಿಯೂ ಎಕ್ಸಿಟ್ ಪೋಲ್‌ಗಳು ಆಪ್ ವಿರುದ್ಧವಾಗಿದ್ದವು. ಬಳಿಕ ಫಲಿತಾಂಶಗಳು ನಮ್ಮ ಪರವಾಗಿ ಬಂದಿದ್ದವು. ಈ ಬಾರಿ ಮತ್ತೆ ನಾವು ಸರ್ಕಾರ ರಚಿಸುತ್ತೇವೆ" ಎಂದು ವಿಶ್ವಾಸ ಮವ್ಯಕ್ತಪಡಿಸಿದ್ದಾರೆ.