ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಬಂಗಾಳದಲ್ಲಿ ವೇಗ ಪಡೆದುಕೊಂಡ ಎರಡನೇ ಹಂತದ SIR ಪ್ರಕ್ರಿಯೆ; ವೃದ್ಧರು, ದುರ್ಬಲರು, ವಿಶೇಷ ಚೇತನರ ಪರದಾಟ

ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಎರಡನೇ ಹಂತದ ಪ್ರಕ್ರಿಯೆ ಪ್ರಾರಂಭವಾಗಿದ್ದು, ಬ್ಲಾಕ್ ಕಚೇರಿಗಳಲ್ಲಿ ಜನಸಂದಣಿ ಹೆಚ್ಚಾಗಿದೆ. ವೃದ್ಧರು, ವಿಶೇಷಚೇತನರು ಹಾಗೂ ಸಾಮಾನ್ಯ ನಾಗರಿಕರು ತಮ್ಮ ಮತದಾನದ ಹಕ್ಕು ಉಳಿಸಿಕೊಳ್ಳಲು ದಿನನಿತ್ಯದ ಕೆಲಸವನ್ನು ಬಿಟ್ಟು, ದೂರದೂರಿನಿಂದ ಬಂದು ಸರತಿ ಸಾಲಿನಲ್ಲಿ ದಿನ ಕಳೆಯುತ್ತಿದ್ದಾರೆ.

ಪಶ್ಚಿಮ ಬಂಗಾಳದ SIR ಪ್ರಕ್ರಿಯೆಗೆ ಚುರುಕು

ಸಾಂದರ್ಭಿಕ ಚಿತ್ರ -

Profile
Sushmitha Jain Jan 5, 2026 10:59 PM

ಕೊಲ್ಕತ್ತಾ, ಜ. 5: ಪಶ್ಚಿಮ ಬಂಗಾಳ (West Bengal)ದಲ್ಲಿ ಮತಪಟ್ಟಿಯ ವಿಶೇಷ ತೀವ್ರ ಪರಿಶೀಲನೆ (SIR) ಪ್ರಕ್ರಿಯೆಯ ಎರಡನೇ ಹಂತ ವೇಗ ಪಡೆದುಕೊಂಡಿದ್ದು, ಬ್ಲಾಕ್ ಕಚೇರಿಗಳು ಆತಂಕದ ಕೇಂದ್ರಗಳಾಗಿ ಮಾರ್ಪಟ್ಟಿವೆ. ವೃದ್ಧರು, ಅಂಗವಿಕಲರು ಮತ್ತು ಜನ ಸಾಮಾನ್ಯರು ಕಾನೂನುಬದ್ಧ ಮತದಾರರೆಂದು ಸಾಬೀತುಪಡಿಸಲು ದೈನಂದಿನ ಕೆಲಸ ಬಿಟ್ಟು ಕಿಲೋ ಮೀಟರ್‌ಗಟ್ಟಲೆ ಪ್ರಯಾಣಿಸಬೇಕಾದ ಸ್ಥಿತಿ ಎದುರಾಗಿದೆ.

ಮತದಾರರ ಪಟ್ಟಿಯಿಂದ ಹೆಸರು ಕೈಬಿಡುತ್ತಾರೆ ಎಂಬ ಭಯದಿಂದ ಕೆಲಸ ಬಿಟ್ಟು ನಿಂತಿರುವ ದಿನಗೂಲಿ ಕಾರ್ಮಿಕರು, ಸ್ಟ್ರೆಚರ್‌ಗಳಲ್ಲಿ ಹಾಗೂ ಸಂಬಂಧಿಕರ ಸಹಾಯದಿಂದ ಆಗಮಿಸುತ್ತಿರುವ ವಯೋವೃದ್ಧರು, ವಿಶೇಷಚೇತನರು ನೆಲದ ತೆವಳುತ್ತ ಸಾಗುತ್ತಿರುವ ಮನಕಲಕುವ ದೃಶ್ಯಗಳು ಗ್ರಾಮೀಣ ಮತ್ತು ನಗರಳ ವಿಚಾರಣಾ ಕೇಂದ್ರಗಳಲ್ಲಿ ಕಂಡುಬರುತ್ತಿದೆ.

"87 ವರ್ಷದ ವೃದ್ಧೆಯನ್ನು 32 ಕಿಲೋ ಮೀಟರ್ ದೂರದಿಂದ ವಿಚಾರಣೆಗೆ ಕರೆಸಲಾಗಿದೆ. ಶೇ. 80ರಷ್ಟು ಅಂಗವಿಕಲತೆಯುಳ್ಳ ವ್ಯಕ್ತಿಯೊಬ್ಬ ಬ್ಲಾಕ್ ಕಚೇರಿಯೊಳಗೆ ತೆವಳುತ್ತ ತೆವಳುತ್ತ ಆಗಮಿಸಿದ್ದಾರೆ. ವಿನಾಯಿತಿ ಇದ್ದರೂ 8 ತಿಂಗಳ ಗರ್ಭಿಣಿಯನ್ನೂ ವಿಚಾರಣೆಗೆ ಕರೆಸಲಾಗಿದೆ. ಇವೆಲ್ಲವೂ ಮತದಾರರ ಪಟ್ಟಿಯ ಸಾಮಾನ್ಯ ಪರಿಷ್ಕರಣೆ ಎಂಬ ಹೇಳಿಕೆಗೆ ವಿರುದ್ಧವಾಗಿವೆ" ಎಂದು ಕೆಲವರು ಆಕ್ರೋಶ ವ್ಯಕ್ತಿಪಡಿಸಿದ್ದಾರೆ.

ಕಾಗದಪತ್ರಗಳ ಗೊಂದಲಕ್ಕಿಂತಲೂ ಮತದಾರರ ಪಟ್ಟಿಯಿಂದ ಹೆಸರನ್ನು ಕೈಬಿಡುವ ಭಯವೇ ವಯೋ ವೃದ್ಧರು, ಪ್ರಯಾಣಿಸಲು ಸಾಧ್ಯವಾಗದವರೂ ಬ್ಲಾಕ್ ಕಚೇರಿಗಳಿಗೆ ನೇರವಾಗಿ ಹಾಜರಾಗುವಂತೆ ಮಾಡಿದೆ.

ಬಂಗಾಳದ SIR ಕರಡು ಪಟ್ಟಿ ಪ್ರಕಟ; 58 ಲಕ್ಷಕ್ಕೂ ಅಧಿಕ ಮತದಾರರ ಹೆಸರು ಡಿಲಿಟ್‌!

ಚುನಾವಣಾ ಆಯೋಗವು ಡಿಸೆಂಬರ್ 16ರಂದು ಪಶ್ಚಿಮ ಬಂಗಾಳದ SIRನ ಮೊದಲ ಹಂತದ ಬಳಿಕ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಿತು. ಅದರಲ್ಲಿ 58 ಲಕ್ಷಕ್ಕೂ ಹೆಚ್ಚು ಹೆಸರನ್ನು ಕೈಬಿಡಲಾಗಿದ್ದು, ಮತದಾರರ ಸಂಖ್ಯೆ 7.66 ಕೋಟಿಯಿಂದ 7.08 ಕೋಟಿಗೆ ಇಳಿಕೆಯಾಯಿತು. ಡಿಸೆಂಬರ್ 27ರಿಂದ ಆರಂಭವಾದ ಎರಡನೇ ಹಂತದಲ್ಲಿ 1.67 ಕೋಟಿ ಮತದಾರರನ್ನು ವಿಚಾರಣೆ ನಡೆಸಲಾಗುತ್ತಿದ್ದು, ಇದರಲ್ಲಿ 1.36 ಕೋಟಿ ತಾರ್ಕಿಕ ವ್ಯತ್ಯಾಸಗಳಿಂದ ಗುರುತಿಸಲ್ಪಟ್ಟವರು ಹಾಗೂ 31 ಲಕ್ಷ ದಾಖಲೆಗಳಿಗೆ ಮ್ಯಾಪಿಂಗ್ ಇಲ್ಲದವರು ಸೇರಿದ್ದಾರೆ.

2002ರ ಪಟ್ಟಿಯಲ್ಲಿ ಹೆಸರು ಕಾಣಿಸದಿರುವುದೇ ಅನೇಕ ಸಮನ್ಸ್‌ಗಳಿಗೆ ಕಾರಣವಾಗಿದ್ದು, ಇದು ವಲಸೆ ಕಾರ್ಮಿಕರು, ಬಾಡಿಗೆದಾರರು, ವಿವಾಹದ ನಂತರ ವಾಸಸ್ಥಾನ ಬದಲಿಸಿದ ಮಹಿಳೆಯರು ಹಾಗೂ ಅಧಿಕಾರಿಗಳು ಭೇಟಿ ನೀಡಿದ ತಮ್ಮ ಮೂಲ ಜಿಲ್ಲೆಗಳಲ್ಲಿ ಇರದ ವೃದ್ಧರ ಮೇಲೆ ಹೆಚ್ಚಿನ ಪ್ರಭಾವ ಬೀರಿದೆ. ಚುನಾವಣಾ ಆಯೋಗದ ಮಾರ್ಗಸೂಚಿಗಳು ಮನೆ ಮನೆ ವಿಚಾರಣೆ ಮತ್ತು ವಿನಾಯಿತಿಗಳಿಗೆ ಅವಕಾಶ ನೀಡಿದ್ದರೂ, ದುರ್ಬಲ ಮತದಾರರನ್ನು ಪುನಃ ಪುನಃ ವಿಚಾರಣೆ ಕರೆಸುತ್ತಿರುವುದು ಪ್ರಕ್ರಿಯೆಯಲ್ಲಿನ ದೋಷಗಳನ್ನು ಎತ್ತಿ ತೋರಿಸುತ್ತವೆ.

ಆಡಳಿತಾರೂಢ ಟಿಎಂಸಿ ಈ SIR ಪ್ರಕ್ರಿಯಿಂದ ಆಗುತ್ತಿರುವ ತೊಂದರೆಗಳನ್ನು ಮುಂದಿಟ್ಟುಕೊಂಡು, 2026ರ ಚುನಾವಣೆಗೂ ಮುನ್ನ ನಿಜವಾದ ಮತದಾರರನ್ನು ಮತಹಕ್ಕಿನಿಂದ ವಂಚಿಸಲು ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿದೆ. ಬಿಜೆಪಿ ಮಾತ್ರ, ಮತದಾರರ ಪಟ್ಟಿಗಳ ಪಾರದರ್ಶಕತೆ ಮತ್ತು ನೈತಿಕತೆಯನ್ನು ಖಚಿತಪಡಿಸಲು ಈ ಪರಿಷ್ಕರಣೆ ಅಗತ್ಯವಿದ್ದು, ಅದನ್ನು ರಾಜಕೀಯಗೊಳಿಸಬಾರದು ಎಂದು ವಾದಿಸಿದೆ.