ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Delhi Exit Poll Results 2025: ಬಿಜೆಪಿಗೆ ಮತ್ತೆ ಅಧಿಕಾರ; ದಿಲ್ಲಿ ಚುನಾವಣೋತ್ತರ ಸಮೀಕ್ಷೆ ಹೇಳಿದ್ದೇನು?

ದಿಲ್ಲಿ ಚುನಾವಣೋತ್ತರ ಸಮೀಕ್ಷೆ ಪ್ರಕಟಗೊಂಡಿದ್ದು, ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದೇ ಭವಿಷ್ಯ ನುಡಿಯಲಾಗಿದೆ. ಒಟ್ಟು 6 ಸಮೀಕ್ಷೆಗಳು ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದಿದ್ದು, 35-60 ಸೀಟು ದೊರೆಯುವ ಸಾಧ್ಯತೆ ಇದೆ ಎಂದು ಊಹಿಸಿವೆ. ಇನ್ನು ಆಡಳಿತರೂಢ ಆಪ್‌ 32-37 ಕಡೆಗಳಲ್ಲಿ ಜಯ ಸಾಧಿಸಲಿದೆ ಎಂದು ತಿಳಿಸಿವೆ. ಸಮೀಕ್ಷೆ ಪ್ರಕಾರ ಬಿಜೆಪಿ ರಾಷ್ಟ್ರ ರಾಜಧಾನಿಯಲ್ಲಿ 27 ವರ್ಷಗಳ ಬಳಿಕ ಗದ್ದುಗೆಗೆ ಏರುವ ಸಾಧ್ಯತೆ ಇದೆ.

ದಿಲ್ಲಿ ಗದ್ದುಗೆ ಬಿಜೆಪಿಗೆ ಎಂದ ಚುನಾವಣೋತ್ತರ ಸಮೀಕ್ಷೆ

ಸಾಂದರ್ಭಿಕ ಚಿತ್ರ.

Profile Ramesh B Feb 5, 2025 8:26 PM

ಹೊಸದಿಲ್ಲಿ: ದಿಲ್ಲಿ ವಿಧಾನಸಭಾ ಚುನಾವಣೆ ಪೂರ್ಣಗೊಂಡಿದೆ (Delhi Election 2025). ಇದೀಗ ಚುನಾವಣೋತ್ತರ ಸಮೀಕ್ಷೆ ಪ್ರಕಟಗೊಂಡಿದ್ದು, ಬಿಜೆಪಿ (BJP) ಅಧಿಕಾರಕ್ಕೆ ಬರಲಿದೆ ಎಂದೇ ಬಹುತೇಕ ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಒಟ್ಟು 6 ಸಮೀಕ್ಷೆಗಳು ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದಿದ್ದು, 35-60 ಸೀಟು ದೊರೆಯುವ ಸಾಧ್ಯತೆ ಇದೆ ಎಂದು ಊಹಿಸಿವೆ. ಇನ್ನು ಆಡಳಿತರೂಢ ಆಪ್‌ (AAP) 32-37 ಕಡೆಗಳಲ್ಲಿ ಜಯ ಸಾಧಿಸಲಿದೆ ಎಂದು ತಿಳಿಸಿವೆ (Delhi Exit Poll Results 2025). ದಿಲ್ಲಿಯಲ್ಲಿ ಒಟ್ಟು 70 ಸೀಟುಗಳಿದ್ದು, ಮ್ಯಾಜಿಕ್‌ ನಂಬರ್‌ 36. ಸಮೀಕ್ಷೆ ಪ್ರಕಾರ ಬಿಜೆಪಿ ರಾಷ್ಟ್ರ ರಾಜಧಾನಿಯಲ್ಲಿ ಗದ್ದುಗೆಗೆ ಏರುವ ಸಾಧ್ಯತೆ ಇದೆ.

ಚಾಣಕ್ಯ ಸ್ಟ್ರಾಟಜಿಸ್, ಜೆವಿಸಿ, ಪೋಲ್ ಡೈರಿ, ಪಿ-ಮಾರ್ಕ್, ಪೀಪಲ್ಸ್ ಇನ್‌ಸೈಟ್‌ ಮತ್ತು ಪೀಪಲ್ಸ್ ಪಲ್ಸ್ ಮುಂತಾದ 6 ಚುನಾವಣೋತ್ತರ ಸಮೀಕ್ಷೆ ಪ್ರಕಾರ ಬಿಜೆಪಿ ಸರಳ ಬಹುಮತದ ಮೂಲಕ 27 ವರ್ಷಗಳ ಬಳಿಕ ದಿಲ್ಲಿಯಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ತಿಳಿಸಿದೆ.



ಸಮೀಕ್ಷೆಗಳು ಏನು ಹೇಳುತ್ತವೆ? ಇಲ್ಲಿವೆ ವಿವರ

ಪೀಪಲ್ಸ್ ಪಲ್ಸ್ ಬಿಜೆಪಿ ಭಾರಿ ಗೆಲುವು ಸಾಧಿಸಲಿದೆ ಎಂದು ಭವಿಷ್ಯ ನುಡಿದಿದೆ. ಚುನಾವಣೋತ್ತರ ಸಮೀಕ್ಷೆಯು ಬಿಜೆಪಿ 51-60 ಸ್ಥಾನಗಳನ್ನು ಗೆಲ್ಲಲಿದೆ ಎಂದು ಹೇಳಿದೆ. ಎಎಪಿ 10-19 ಸ್ಥಾನಗಳನ್ನು ಗೆಲ್ಲಲಿದೆ. ಕಾಂಗ್ರೆಸ್ ಒಂದೇ ಒಂದು ಸ್ಥಾನವನ್ನು ಗೆಲ್ಲುವುದಿಲ್ಲ ಎಂದು ಅದು ಭವಿಷ್ಯ ನುಡಿದಿದೆ.

ಚಾಣಕ್ಯ ಸ್ಟ್ರಾಟಜಿಸ್ ಚುನಾವಣೋತ್ತರ ಸಮೀಕ್ಷೆಯು ಬಿಜೆಪಿ 39-44 ಸ್ಥಾನಗಳನ್ನು ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದೆ. ಎಎಪಿ 25-28 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ. ಕಾಂಗ್ರೆಸ್‌ 3 ಕಡೆ ಜಯ ದಾಖಲಿಸುವ ಸಾಧ್ಯತೆ ಇದೆ ಎಂದಿದೆ.

ಮ್ಯಾಟ್ರಿಜ್ ಪ್ರಕಾರ ಬಿಜೆಪಿ 35-40 ಸ್ಥಾನಗಳನ್ನು ಗೆಲ್ಲಲಿದೆ. ಇನ್ನು ಎಎಪಿ 32-37 ಸ್ಥಾನಗಳಲ್ಲಿ ಜಯ ಗಳಿಸಲಿದ್ದು, ಕಾಂಗ್ರೆಸ್ 0-1 ಸ್ಥಾನಗಳಲ್ಲಿ ಛಾಪು ಬೀರಲಿದೆ.

ಜೆವಿಸಿ ಚುನಾವಣೋತ್ತರ ಸಮೀಕ್ಷೆಯು ಬಿಜೆಪಿಗೆ 39-45 ಸ್ಥಾನಗಳನ್ನು ಮತ್ತು ಆಮ್ ಆದ್ಮಿ ಪಕ್ಷಕ್ಕೆ 22-31 ಸ್ಥಾನಗಳನ್ನು ನೀಡಿದೆ. ಕಾಂಗ್ರೆಸ್ ಗೆ 0-2 ಸ್ಥಾನಗಳಲ್ಲಿ ಜಯ ಗಳಿಸಲಿದೆ ಎಂದಿದೆ.

ಪಿ-ಮಾರ್ಕ್ ಸಮೀಕ್ಷೆಯು ಬಿಜೆಪಿಗೆ 39-49 ಸ್ಥಾನಗಳು ಮತ್ತು ಎಎಪಿಗೆ 21-31 ಸ್ಥಾನಗಳನ್ನು ನೀಡಿದೆ. ಕಾಂಗ್ರೆಸ್‌ಗೆ 0-1 ಸ್ಥಾನವನ್ನು ಊಹಿಸಿದೆ. ಪೀಪಲ್ಸ್ ಇನ್‌ಸೈಟ್‌ ಬಿಜೆಪಿ 40-44 ಸ್ಥಾನಗಳಲ್ಲಿ ಮತ್ತು ಎಎಪಿ 25-29 ಸ್ಥಾನಗಳಲಲಿ ಜಯ ಗಳಿಸಲಿದೆ ಎಂದು ಊಹಿಸಿದೆ. ಇನ್ನು ಕಾಂಗ್ರೆಸ್‌ಗೆ 0-1 ಸ್ಥಾನ ನೀಡಿದೆ.

ಪೋಲ್‌ ಡೈರಿ ಪ್ರಕಾರ ಬಿಜೆಪಿ 42-50 ಸ್ಥಾನಗಳಲ್ಲಿ ಮತ್ತು ಎಎಪಿ 18-25 ಕಡೆ ಜಯ ಗಳಿಸಲಿದೆ. ಕಾಂಗ್ರೆಸ್ 0-2 ಸ್ಥಾನಗಳಿಗೆ ಸೀಮಿತವಾಗಲಿದೆ.

ಚುನಾವಣೋತ್ತರ ಸಮೀಕ್ಷೆ

ಸಮೀಕ್ಷೆ ಬಿಜೆಪಿ ಆಪ್‌ ಕಾಂಗ್ರೆಸ್‌
ಎಬಿಪಿ-ಮ್ಯಾಟ್ರಿಜ್‌ 3೦-40 27-32 0-೦1
ಪಿ-ಮಾರ್ಕ್‌ 39-49 21-31 0-೦1
ಪೀಪಲ್ಸ್‌ ಪಲ್ಸ್‌ 51-60 10-19 -
ಚಾಣಕ್ಯ 39-44 25-28 02-03
ಜೆವಿಸಿ 39-45 22-31 0-೦2
ಪೋಲ್‌ ಡೈರಿ 42-50 18-25 0-೦2

ಈ ಸುದ್ದಿಯನ್ನೂ ಓದಿ: Delhi Election 2025: ದೆಹಲಿಯಲ್ಲಿ ಮತದಾನದ ವೇಳೆ ಬಿಜೆಪಿ- ಆಪ್‌ ಕಾರ್ಯಕರ್ತರ ನಡುವೆ ಮಾರಾಮಾರಿ

2015 ಮತ್ತು 2020ರ ಚುನಾವಣೆಯಲ್ಲಿ ಏನಾಗಿತ್ತು?

2015ರ ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿ 70 ಸ್ಥಾನಗಳಲ್ಲಿ 67 ಸ್ಥಾನಗಳನ್ನು ಗೆದ್ದು ಇತಿಹಾಸ ಬರೆದಿತ್ತು. ಉಳಿದ 3 ಸ್ಥಾನಗಳನ್ನು ಬಿಜೆಪಿ ಗೆದ್ದುಕೊಂಡಿತ್ತು. ಕಾಂಗ್ರೆಸ್ ತನ್ನ ಖಾತೆಯನ್ನು ತೆರೆದಿರಲಿಲ್ಲ. ಆಪ್‌ 2020ರಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬಂದಿತ್ತು. ಆ ಬಾರಿ 62 ಸ್ಥಾನಗಳನ್ನು ಗೆದ್ದುಕೊಂಡರೆ ಬಿಜೆಪಿ 8 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಕಾಂಗ್ರೆಸ್‌ ಸಾಧನೆ ಮತ್ತೆ ಶೂನ್ಯದಲ್ಲೇ ಮುಂದುವರಿದಿತ್ತು. ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬಂದರೆ ಸುಮಾರು 27 ವರ್ಷಗಳ ಬಳಿಕ ಗದ್ದುಗೆಗೆ ಏರಿದಂತಾಗುತ್ತದೆ.