Delhi Election 2025: ದೆಹಲಿಯಲ್ಲಿ ಮತದಾನದ ವೇಳೆ ಬಿಜೆಪಿ- ಆಪ್ ಕಾರ್ಯಕರ್ತರ ನಡುವೆ ಮಾರಾಮಾರಿ
ದೆಹಲಿಯ ವಿಧಾನ ಸಭಾ ಚುನಾವಣೆಯ ವೇಳೆ ಆಮ್ ಆದ್ಮಿ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದ್ದು, ಎರಡೂ ಪಕ್ಷಗಳು ಒಬ್ಬರ ಮೇಲೆ ಒಬ್ಬರು ಆರೋಪ ಮಾಡಿದ್ದಾರೆ. ದೆಹಲಿಯ ಸೀಲಾಂಪುರದಲ್ಲಿ ನಕಲಿ ಮತದಾನ ನಡೆದಿದೆ ಎನ್ನುವ ಆರೋಪ ಬಿಜೆಪಿ ಮಾಡಿದೆ.
![Delhi Election](https://cdn-vishwavani-prod.hindverse.com/media/images/Delhi_Election_3.max-1280x720.jpg)
![Profile](https://vishwavani.news/static/img/user.5c7ca8245eec.png)
ನವದೆಹಲಿ: ದೆಹಲಿಯಲ್ಲಿ ವಿಧಾನ ಸಭಾ ಚುನಾವಣೆ(Delhi Election 2025) ನಡೆಯುತ್ತಿದೆ. ಅರ್ಧದಷ್ಟು ಮತದಾನ ಮುಗಿದಿದ್ದು, ದೆಹಲಿಯ ಸೀಲಾಂಪುರದಲ್ಲಿ ನಕಲಿ ಮತದಾನ ನಡೆದಿದೆ ಎನ್ನುವ ಆರೋಪ ಕೇಳಿಬಂದಿದ್ದು, ಆಮ್ಆದ್ಮಿ ಪಕ್ಷ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದೆ. ಬಿಜೆಪಿ ನಾಯಕರು ಆಮ್ ಆದ್ಮಿ ಪಕ್ಷದ ಮೇಲೆ ಗಂಭೀರ ಆರೋಪ ಮಾಡಿದ್ದು, ಬುರ್ಖಾ ಧರಿಸಿದ ಮಹಿಳೆಯರು ಮತಗಟ್ಟೆಗಳಲ್ಲಿ ನಕಲಿ ಮತ ಚಲಾವಣೆ ಮಾಡಿದ್ದು, ಚುನಾವಣಾ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿದ್ದಾರೆ.
#BREAKING | Delhi CM Atishi Marlena’s alleged PA caught red-handed distributing cash in Giri Nagar, Kalkaji, on the eve of the election; ₹5 lakh recovered.#DelhiElection2025 #Delhi pic.twitter.com/KukKnG4CCH
— Ashwini Shrivastava (@AshwiniSahaya) February 4, 2025
ದೆಹಲಿಯ ಸೀಲಾಂಪುರದಲ್ಲಿ ಬುರ್ಖಾ ಧರಿಸಿದ ಮಹಿಳೆಯರು ಅಕ್ರಮ ಮತದಾನವನ್ನು ಮಾಡಿದ್ದಾರೆ. ಅವರ ಬಳಿ ಯಾವುದೇ ಗುರುತಿನ ಚೀಟಿಯಿಲ್ಲ. ನಾವು ಈ ಬಗ್ಗೆ ಚುನಾವಣಾ ಆಯೋಗಕ್ಕೆ ಮನವಿ ಮಾಡಿಕೊಳ್ಳುತ್ತಿದ್ದು, ದಯವಿಟ್ಟು ಈ ಬಗ್ಗೆ ಕ್ರಮ ಕೈಗೊಳ್ಳಿ ಎಂದು ಬಿಜೆಪಿ ಕಾರ್ಯಕರ್ತರು ಮನವಿ ಮಾಡಿದ್ದಾರೆ. ಇನ್ನು ಜಂಗ್‌ಪುರ ಕ್ಷೇತ್ರದಲ್ಲಿ ಬಿಜೆಪಿ ಅಕ್ರಮ ಹಣ ಹಂಚಿಕೆ ಮಾಡುವ ಮೂಲಕ ಮತದಾರರನ್ನು ಸೆಳೆಯಲು ಪ್ರಯತ್ನಿಸುತ್ತದೆ ಎಂದು ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಮನೀಷ್ ಸಿಸೋಡಿಯ ಆರೋಪ ಮಾಡಿದ್ದಾರೆ.
BIG BREAKING: Tension erupts in Muslim-dominated Seelampur over burqa checks before voting.
— Ashwini Shrivastava (@AshwiniSahaya) February 5, 2025
Women in burqas allegedly caught casting fake votes in Seelampur. Authorities are closely monitoring the situation amid rising tensions.#Delhi #DelhiElection2025 #Seelampur pic.twitter.com/4MEoOMdJoW
ಈ ಸುದ್ದಿಯನ್ನೂ ಓದಿ: Delhi Election 2025: ದೆಹಲಿ ಚುನಾವಣೆ;ಬಿಜೆಪಿಯ ಮತ್ತೊಂದು ಪ್ರಣಾಳಿಕೆ ರಿಲೀಸ್- ಉಚಿತ ಶಿಕ್ಷಣ ಘೋಷಣೆ
ಮಾಹಿತಿಯ ಪ್ರಕಾರ, ಬೆಳಿಗ್ಗೆ 11 ಗಂಟೆಯ ಹೊತ್ತಿಗೆ ಶೇ. 19.95 ರಷ್ಟು ಮತದಾರರು ತಮ್ಮ ಮತ ಚಲಾಯಿಸಿದ್ದರು. ಈಶಾನ್ಯ ದೆಹಲಿಯಲ್ಲಿ ಅತಿ ಹೆಚ್ಚು ಶೇ. 24.87 ರಷ್ಟು ಮತದಾನ ದಾಖಲಾಗಿದ್ದು, ಬಾಬರ್‌ಪುರ್ ಶೇ. 31.30 ರಷ್ಟು ಮತದಾನವಾಗಿದೆ. ಇದಕ್ಕೆ ವಿರುದ್ಧವಾಗಿ, ಕೇಂದ್ರ ದೆಹಲಿಯಲ್ಲಿ ಶೇ. 16.46 ರಷ್ಟು ಮತದಾನವಾಗಿದ್ದು, ಕರೋಲ್ ಬಾಗ್‌ನಲ್ಲಿ ಕೇವಲ ಶೇ. 11 ರಷ್ಟು ಮತದಾರರು ಭಾಗವಹಿಸಿದ್ದಾರೆ. ಮೋತಿ ಬಾಗ್‌ನಲ್ಲಿ ಮತ ಚಲಾಯಿಸಿದ ನಂತರ, ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ರಾಜೀವ್ ಕುಮಾರ್ ನಾಗರಿಕರು ಸಕ್ರಿಯವಾಗಿ ಭಾಗವಹಿಸುವಂತೆ ಒತ್ತಾಯಿಸಿದರು.