#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Delhi Election Result 2025: ದೆಹಲಿಯಲ್ಲಿ ಆಪ್‌ಗೆ ಭಾರೀ ಮುಖಭಂಗ; ಹೀನಾಯ ಸೋಲಿಗೆ ಕಾರಣಗಳೇನು?

ಬಹು ನಿರೀಕ್ಷಿತ ದೆಹಲಿ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ಬಿಜೆಪಿ ಭಾರೀ ಮುನ್ನಡೆಯನ್ನು ಸಾಧಿಸುವ ಮೂಲಕ ವಿಜಯದ ನಗೆ ಬೀರಿದೆ. ಕಳೆದ ಹತ್ತು ವರ್ಷಗಳಿಂದ ದೆಹಲಿಯಲ್ಲಿ ಅಧಿಪತ್ಯ ಸಾಧಿಸಿದ್ದ ಆಮ್‌ ಆದ್ಮಿ ಸೋಲಿನತ್ತ ಮುಖ ಮಾಡಿದೆ. ಅರವಿಂದ್‌ ಕೇಜ್ರಿವಾಲ್‌ ಕೂಡ ಸೋತಿದ್ದಾರೆ. ಹಾಗಿದ್ದರೆ ಆಪ್‌ ಸೋಲಿಗೆ ಕಾರಣವಾದ ಅಂಶಗಳೇನು? ಇಲ್ಲಿದೆ ಡಿಟೇಲ್ಸ್‌

ಆಪ್‌ ಸೋಲಿಗೆ ಕಾರಣವಾದ ಅಂಶಗಳೇನು? ಇಲ್ಲಿದೆ ಡಿಟೇಲ್ಸ್‌

Delhi Election 2025

Profile Deekshith Nair Feb 8, 2025 1:27 PM

ನವದೆಹಲಿ: ಆಮ್‌ ಆದ್ಮಿ ಪಕ್ಷ ದೆಹಲಿ ಚುನಾವಣೆಯಲ್ಲಿ ಹೀನಾಯವಾಗಿ ಸೋತಿದೆ. ಅರವಿಂದ ಕೇಜ್ರಿವಾಲ್‌(Aravind Kejriwal) ಅವರ ಹ್ಯಾಟ್ರಿಕ್‌ ಗೆಲುವಿನ ಕನಸು ಭಗ್ನಗೊಂಡಿದೆ. ಸ್ವತಃ ಕೇಜ್ರಿವಾಲ್‌ ತಮ್ಮ ತವರು ಕ್ಷೇತ್ರದಲ್ಲಿಯೇ ಮಕಾಡೆ ಮಲಗಿದ್ದಾರೆ. ಬಿಜೆಪಿಯ ಪರ್ವೇಶ್‌ ವರ್ಮಾ(Parvesh ಕೇಜ್ರಿವಾಲ್‌(Delhi Election Result 2025) ವಿರುದ್ಧ ಗೆದ್ದು ಬೀಗಿದ್ದಾರೆ. ಆಮ್‌ ಆದ್ಮಿ ಪಕ್ಷದ ಸಾಲು ಸಾಲು ಹಗರಣಗಳೇ ಸೋಲಿಗೆ ಕಾರಣವಾಗಿದೆ. ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದ್ದ ಆಪ್‌ಗೆ ಮತದಾರರು ಸೋಲಿನ ರುಚಿ ತೋರಿಸಿದ್ದಾರೆ. ಹಾಗಿದ್ದರೆ ಕಳೆದ ಹತ್ತು ವರ್ಷಗಳಿಂದ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಆಪ್‌ ಈ ರೀತಿ ಹೀನಾಯವಾಗಿ ಸೋಲುಣ್ಣಲು ಕಾರಣವಾದ ಪ್ರಮುಖ ಅಂಶಗಳನ್ನು ಇಲ್ಲಿ ವಿವರಿಸಲಾಗಿದೆ.



ಆ‌ಪ್‌ ಸೋಲಿಗೆ ಪ್ರಮುಖ ಕಾರಣಗಳು

  • ಭ್ರಷ್ಟಾಚಾರ ಆರೋಪ: ಅರವಿಂದ್ ಕೇಜ್ರಿವಾಲ್, ಮನೀಶ್ ಸಿಸೋಡಿಯಾ ಮತ್ತು ಸತ್ಯೇಂದ್ರ ಜೈನ್ ವಿರುದ್ಧ ಭ್ರಷ್ಟಾಚಾರ ಆರೋಪಗಳು ಕೇಳಿಬಂದಿದ್ದವು. ಜೈಲಿಗೂಈ ಹೋದರು. ಈ ಕಾನೂನು ವಿವಾದಗಳು ಎಎಪಿಯ ಭ್ರಷ್ಟಾಚಾರ-ವಿರೋಧಿ ವರ್ಚಸ್ಸನ್ನು ದುರ್ಬಲಗೊಳಿಸಿದವು. ಆಪ್‌ ತನ್ನ ಭರವಸೆಗಳನ್ನು ಈಡೇರಿಸದೆ ಮತದಾರರ ವಿಶ್ವಾಸವನ್ನು ಕಳೆದುಕೊಂಡಿತು. ಯಮುನಾ ನದಿಯನ್ನು ಸ್ವಚ್ಛಗೊಳಿಸುವುದು, ದೆಹಲಿ ರಸ್ತೆಗಳನ್ನು ಪ್ಯಾರಿಸ್‌ನಂತೆ ಮಾಡುವುದು ಮತ್ತು ಶುದ್ಧ ನೀರು ಒದಗಿಸುವುದು ಹೀಗೆ ಅರವಿಂದ ಕೇಜ್ರಿವಾಲ್ ನೀಡಿದ ಮೂರು ಪ್ರಮುಖ ಭರವಸೆಗಳು ಈಡೇರಲಿಲ್ಲ.
  • ನಾಯಕತ್ವದ ಕೊರತೆ: ಅರವಿಂದ ಕೇಜ್ರಿವಾಲ್ ಅವರ ಬಂಧನ ಮತ್ತು ರಾಜೀನಾಮೆಯಿಂದ ಪಕ್ಷದಲ್ಲಿ ನಾಯಕತ್ವದ ಕೊರತೆ ಉಂಟಾಯಿತು. ಹೊಸ ಮುಖ್ಯಮಂತ್ರಿಯಾಗಿ ಅತಿಶಿ ನೇಮಕಗೊಂಡಿದ್ದರೂ, ನಾಯಕತ್ವದಲ್ಲಿನ ಈ ಬದಲಾವಣೆಯು ಪಕ್ಷಕ್ಕೆ ನುಂಗಲಾರದ ತುತ್ತಾಯಿತು. ಬಹುಮುಖ್ಯವಾಗಿ ಅರವಿಂದ್ ಕೇಜ್ರಿವಾಲ್ ಬೆಳೆಸಿಕೊಮಂಡಿದ್ದ ನಾಯಕತ್ವದ ಇಮೇಜ್‌ ಸಂಪೂರ್ಣವಾಗಿ ಕುಸಿದಿತ್ತು.
  • ಕಾಂಗ್ರೆಸ್ ಮತಗಳ ವಿಭಜನೆ:  ದೆಹಲಿ ಚುನಾವಣೆಯಲ್ಲಿ ಕಾಂಗ್ರೆಸ್ ಶೂನ್ಯ ಸಾಧನೆ ತೋರಿಸಿದೆ. ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಎಎಪಿ ಕಾಂಗ್ರೆಸ್‌ನೊಂದಿಗೆ ಮಾಡಿದಂತೆಯೇ ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ ಮತಗಳನ್ನು ವಿಭಜಿಸಿತ್ತು. 2013 ರ ನಂತರ, ಕಾಂಗ್ರೆಸ್ಸಿನ ಮತಬ್ಯಾಂಕ್ ಆಮ್ ಆದ್ಮಿ ಪಕ್ಷದ ಕಡೆಗೆ ತಿರುಗಿತ್ತು. ಆದ್ದರಿಂದ ಕಾಂಗ್ರೆಸ್ ಮರಳುವಿಕೆಯಿಂದ ಎಎಪಿ ತೀವ್ರ ಸಂಕಷ್ಟ ಅನುಭವಿಸಿತು. ಮತದಾರರ ವಿಶ್ವಾಸವು ಕ್ಷೀಣವಾಯಿತು.
  • ಆಂತರಿಕ ಕಚ್ಚಾಟ:  ಪಕ್ಷದೊಳಗಿನ ಆಂತರಿಕ ಕಲಹ ಮತ್ತು ಕೈಲಾಶ್ ಗೆಹ್ಲೋಟ್ ಮತ್ತು ರಾಜ್ ಕುಮಾರ್ ಆನಂದ್ ಅವರಂತಹ ಪ್ರಮುಖ ನಾಯಕರು ಪಕ್ಷವನ್ನು ತೊರೆದದ್ದೇ ಪಕ್ಷಕ್ಕೆ ಮುಳುವಾಯಿತು. ಚುನಾವಣೆಯ ಬೆನ್ನಲ್ಲೇ ಆಪ್‌ನ ಎಂಟು ಶಾಸಕರು ಪಕ್ಷಕ್ಕೆ ರಾಜೀನಾಮೆ ನೀಡಿದ್ದರು.
  • ವಿರೋಧ ಪಕ್ಷಗಳ ಆರೋಪ: ವಿರೋಧ ಪಕ್ಷಗಳು ಎಎಪಿ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದವು. ಕೇಜ್ರಿವಾಲ್‌ ಹಗರಣಗಳನ್ನೇ ಬಿಜೆಪಿ ಪ್ರಬಲ ಅಸ್ತ್ರವಾಗಿಸಿಕೊಂಡಿತು. ಹಗರಣಗಳೇ ಎಎಪಿಗೆ ಕುತ್ತು ತಂದಿತು. ಒಟ್ಟಾರೆ ಆಮ್‌ ಆದ್ಮಿಯ ಹಗರಣಗಳೇ ವಿರೋಧ ಪಕ್ಷಕ್ಕೆ ಬ್ರಹ್ಮಾಸ್ತ್ರವಾಯಿತು. ಆಡಳಿತ ವಿರೋಧಿ ಅಲೆ ಬಿಜೆಪಿಗೆ ವರದಾನವಾಯಿತು.

ಈ ಸುದ್ದಿಯನ್ನೂ ಓದಿ:Delhi Election Result 2025: ಆಪ್‌ಗೆ ಬಿಗ್‌ ಲಾಸ್‌...ಇನ್ಮುಂದೆ ದೆಹಲಿಯಲ್ಲಿ ಬಿಜೆಪಿಯೇ ಬಿಗ್‌ ಬಾಸ್‌; ಕೇಜ್ರಿವಾಲ್‌ಗೆ ಹೀನಾಯ ಸೋಲು

ಅ‍‍ಣ್ಣಾ ಹಜಾರೆ ಕಿಡಿ

ಇತ್ತ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಕೂಡ ಹಗರಣಗಳೇ ಆಪ್‌ ಕೊಚ್ಚಿ ಹೋಗುವಂತೆ ಮಾಡಿದೆ ಎಂದು ಗುಡುಗಿದ್ದಾರೆ. ಕಾರಣವಾಗಿದೆ. ಆಮ್‌ ಆದ್ಮಿ ಪಕ್ಷ ದೆಹಲಿ ಚುನಾವಣೆಯಲ್ಲಿ ಹೀನಾಯವಾಗಿ ಸೋತಿದೆ. ಅರವಿಂದ ಕೇಜ್ರಿವಾಲ್‌ ಅವರ ಹ್ಯಾಟ್ರಿಕ್‌ ಗೆಲುವಿನ ಕನಸು ಭಗ್ನಗೊಂಡಿದೆ. ಸ್ವತಃ ಕೇಜ್ರಿವಾಲ್‌ ತಮ್ಮ ತವರು ಕ್ಷೇತ್ರದಲ್ಲಿಯೇ ಮಕಾಡೆ ಮಲಗಿದ್ದಾರೆ. ಬಿಜೆಪಿಯ ಪರ್ವೇಶ್‌ ವರ್ಮಾ ಕೇಜ್ರಿವಾಲ್‌ ವಿರುದ್ಧ ಗೆದ್ದು ಬೀಗಿದ್ದಾರೆ. ಆಮ್‌ ಆದ್ಮಿ ಪಕ್ಷದ ಸಾಲು ಸಾಲು ಹಗರಣಗಳೇ ಸೋಲಿಗೆ ಕಾರಣವಾಗಿದೆ. ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದ್ದ ಆಪ್‌ಗೆ ಮತದಾರರು ಸೋಲಿನ ರುಚಿ ತೋರಿಸಿದ್ದಾರೆ.ಇತ್ತ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಕೂಡ ಹಗರಣಗಳೇ ಆಪ್‌ ಕೊಚ್ಚಿ ಹೋಗುವಂತೆ ಮಾಡಿದೆ ಎಂದು ಗುಡುಗಿದ್ದಾರೆ.

ಭ್ರಷ್ಟಾಚಾರಿ ವಿರೋಧಿ ಆಂದೋಲನದಿಂದ ರಾಜಕೀಯ ಪ್ರವೇಶಿಸಿದ ಕೇಜ್ರಿವಾಲ್ ಮತ್ತು ಆಪ್ ವಿರುದ್ಧ ಅಬಕಾರಿ ಹಗರಣ, ಶೀಶ್‌ಮಹಲ್ ಬಂಗಲೆ ಹಗರಣ, ವಕ್ಸ್ ಮಂಡಳಿ ನೇಮಕಾತಿ ಹಗರಣ, ವಿವಿಧ ಸಚಿವರು, ಶಾಸಕರ ವಿರುದ್ಧ ಕೇಳಿ ಬಂದಿದ್ದ ಭ್ರಷ್ಟಾಚಾರದ ಆರೋಪಗಳನ್ನು ಬಿಜೆಪಿ ಹಾಗೂ ಕಾಂಗ್ರೆಸ್‌ ಚುನಾವಣಾ ಅಸ್ತ್ರಗಳಾಗಿ ಬಳಸಿಕೊಂಡಿದ್ದವು. ದೆಹಲಿ ಅಬಕಾರಿ ನೀತಿ ಹಗರಣದ ಆರೋಪದ ಮೇಲೆ ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್‌ ಜೈಲಿಗೆ ಹೋಗಿದ್ದರು. ನಂತರ ಜಾಮೀನಿನ ಮೇಲೆ ಹೊರಬಂದರು. ಶೀಶ್‌ ಮಹಲ್‌ ಹಗರಣದಿಂದಲೂ ಕೇಜ್ರಿವಾಲ್‌ ಭಾರೀ ಟೀಕೆ ಮತ್ತು ವಿವಾದಗಳನ್ನು ಎದುರಿಸಿದರು.