Makeup Ideas: 10 ನಿಮಿಷಕ್ಕೆ ಫಟಾಫಟ್ ಮೇಕಪ್ ಮಾಡುವುದು ಹೇಗೆ?
Makeup Ideas: ಮೇಕಪ್ ಎಂದರೆ ಗಂಟೆಗಟ್ಟಲೇ ಕೆಲಸ ಎಂದುಕೊಂಡಿದ್ದರೆ ಅದು ನಿಮ್ಮ ತಪ್ಪು ಕಲ್ಪನೆ. ಕೇವಲ ಹತ್ತು ನಿಮಿಷದಲ್ಲೂಅತ್ಯುತ್ತಮವಾಗಿ ಮೇಕಪ್ ಮಾಡಿಕೊಳ್ಳಬಹುದು. ಈ ಕುರಿತಂತೆ ಮೇಕಪ್ ಎಕ್ಸ್‌ಪರ್ಟ್ ಮಂಗಲಾ ಭಾನಸುಧೆ ಸಿಂಪಲ್ ಐಡಿಯಾ ನೀಡಿದ್ದಾರೆ. ಫಾಲೋ ಮಾಡಿ ನೋಡಿ.

ಚಿತ್ರಕೃಪೆ: ಪಿಕ್ಸೆಲ್

- ಶೀಲಾ ಸಿ. ಶೆಟ್ಟಿ, ಬೆಂಗಳೂರು
ಕೇವಲ 10 ನಿಮಿಷದಲ್ಲಿ ಮೇಕಪ್ ಮಾಡಿ ಆಕರ್ಷಕವಾಗಿ ಕಾಣಿಸಬಹುದು ಎನ್ನುತ್ತಾರೆ ಮೇಕಪ್ ಎಕ್ಸ್‌ಪರ್ಟ್ಸ್. ಹೌದು, ಗಂಟೆಗಟ್ಟಲೇ ಇದಕ್ಕಾಗಿ ಸಮಯ ವ್ಯಯ ಮಾಡುವ ಬದಲು ಒಂದಿಷ್ಟು ಟೆಕ್ನಿಕ್ಸ್ ಹಾಗೂ ಟಿಪ್ಸ್ ಫಾಲೋ ಮಾಡಿದಲ್ಲಿ ಕಡಿಮೆ ಸಮಯದಲ್ಲಿ ಅಂದವಾಗಿ ಕಾಣಿಸಬಹುದು ಎನ್ನುತ್ತಾರೆ. ಅಂದಹಾಗೆ, ಬ್ಯೂಟಿ ಇನ್ಸ್‌ಟಿಟ್ಯೂಟ್‌ನ ಸಮೀಕ್ಷೆಯೊಂದರ ಪ್ರಕಾರ, ಹೆಣ್ಣು ಮಕ್ಕಳು ಮೇಕಪ್ ಮಾಡುತ್ತಾ ಕುಳಿತರೆಂದರೆ, ಕೆಲವು ಗಂಟೆಗಳು ಮಾತ್ರವಲ್ಲ, ಅರ್ಧ ದಿನವೇ ಬೇಕಾಗಬಹುದಂತೆ. ಆದರೆ, ಇಂದಿನ ಜನರೇಷನ್‌ನ ಮೇಕಪ್ ಆರ್ಟಿಸ್ಟ್‌ಗಳು ಹೇಳುವಂತೆ, 10 ನಿಮಿಷದಲ್ಲೂ ಅತ್ಯಾಕರ್ಷಕವಾಗಿ ಮೇಕಪ್ ಮಾಡಿ (10 Minute Makeup Ideas) ಮುಗಿಸಬಹುದಂತೆ.

ತ್ವಚೆಯ ಆರೋಗ್ಯದ ಪ್ರಮುಖ ಪಾತ್ರ
ಮುಖದ ಚರ್ಮದ ಆರೋಗ್ಯವಾಗಿದ್ದಲ್ಲಿ ಯಾವ ಬಗೆಯ ಮೇಕಪ್ ಮಾಡಿದರೂ ಸುಂದರವಾಗಿ ಕಾಣುವುದು. ಆದರೆ, ಸಮಾರಂಭ ಹಾಗೂ ಕಚೇರಿಗೆ ಹೋಗುವಾಗ ಸಮಯಕ್ಕೆ ಹೊಂದುವಂತೆ, ಕಡಿಮೆ ಸಮಯದಲ್ಲಿ, ಮೇಕಪ್‌ನ ಶೆಡ್ಯೂಲ್ ರೂಢಿಸಿಕೊಳ್ಳಬೇಕು. ಇದರಿಂದ ಸಮಯ ಉಳಿತಾಯವಾಗುವುದಲ್ಲದೆ, ಟೈಮ್ ಮ್ಯಾನೇಜ್ಮೆಂಟ್ ಅಭ್ಯಾಸವಾಗುವುದು ಎನ್ನುತ್ತಾರೆ ಮೇಕಪ್ ಆರ್ಟಿಸ್ಟ್ ಮಂಗಲಾ.

ಮೇಕಪ್ ಎಕ್ಸ್‌ಪರ್ಟ್ಸ್ ಅಭಿಪ್ರಾಯ
ಮೇಕಪ್ ಮಾಡುವುದು ಒಂದು ಕಲೆ. ಇಷ್ಟಪಟ್ಟು ಮಾಡುವ ಮೇಕಪ್ ಸುಂದರವಾಗಿ ಕಾಣಲು ಸಹಾಯ ಮಾಡುತ್ತದೆ. ನೂರು ಜನರ ಮಧ್ಯೆಯೂ ಹೈಲೈಟ್ ಆಗುತ್ತದೆ ಎಂಬುದು ಬಹಳಷ್ಟು ಮೇಕಪ್ ಆರ್ಟಿಸ್ಟ್‌ಗಳ ಅಭಿಪ್ರಾಯ ಕೂಡ. ಹಾಗಾದಲ್ಲಿ, ನೀವೂ ಕೂಡ ಈ 10 ನಿಮಿಷದೊಳಗೆ ಮೇಕಪ್ ಮಾಡಲು ಯಾಕೆ ಪ್ರಯತ್ನಿಸಬಾರದು? ಒಮ್ಮೆ ಪ್ರಯತ್ನಿಸಿ ನೋಡಿ…

10 ಮಿನಟ್ಸ್ ಮೇಕಪ್ ಟಿಪ್ಸ್
- 1-3 ನಿಮಿಷ: ಮೊದಲಿಗೆ ಮಾಯಿಶ್ಚರೈಸರ್ ಲೇಪಿಸಿ. ಇತ್ತೀಚೆಗೆ ಆಲ್ ಇನ್ ವನ್ ಇರುವಂತಹ ಫೌಂಡೇಶನ್ ಕ್ರೀಮ್ ದೊರೆಯುತ್ತವೆ. ಅವನ್ನು ಬಳಸಿ. ನಂತರ ಮುಖ ಹಾಗೂ ಕುತ್ತಿಗೆಯ ಮೇಲೆಲ್ಲಾ ಲೇಪಿಸಿಕೊಳ್ಳಿ.
- 3 - 4: ತೆಳುವಾಗಿ ಬ್ಲಶ್ ಆನ್ ಮಾಡಿ
- 4 - 5 ನಿಮಿಷ: ಕಣ್ಣುಗಳಿಗೆ ಅಗತ್ಯವಿರುವ ಐ ಲೈನರ್, ಶೇಡ್ಸ್ ಹಾಗೂ ಮಸ್ಕರಾ ಹಚ್ಚಿ.
- 5 - 6: ತುಟಿಗಳಿಗೆ ಲಿಪ್ ಲೈನರ್ ಹಾಕಿ, ಕೊಂಚ ಲಿಪ್ ಗ್ಲೊಸ್ ಹಚ್ಚಿ. ಲಿಪ್ಸ್ಟಿಕ್ ಲೇಪಿಸಿ.
- 6 - 7 ನಿಮಿಷ: ಮೇಕಪ್ ಸ್ಪ್ರೇ ಮಾಡಿ. ಅಗತ್ಯವಿದ್ದಲ್ಲಿ ಪೌಡರ್ ಲೇಪಿಸಿ.
- 7 - 9 ನಿಮಿಷ: ಕೂದಲನ್ನು ಬಾಚಿ ವಿನ್ಯಾಸ ಮಾಡಿಕೊಳ್ಳಿ.
- 9 - 10 ನಿಮಿಷ: ಮತ್ತೊಮ್ಮೆ ಮುಖವನ್ನು ಕನ್ನಡಿಯಲ್ಲಿ ನೋಡಿಕೊಳ್ಳಿ. ಮೇಕಪ್‌ನಲ್ಲಿಇನ್ನೇನಾದರೂ ಬಿಟ್ಟು ಹೋಗಿದೆಯೇ ಎಂಬುದನ್ನು ಪರಿಶೀಲಿಸಿ. ಕೊನೆಗೆ ಟಚ್-ಅಪ್ ಮಾಡಿ.
ಇಲ್ಲಿಗೆ ನಿಮ್ಮ ಫಟಾ ಫಟ್ ಮೇಕಪ್ ಮುಗಿಯಿತು. ಮೊದಲ ಬಾರಿ, ಸಮಯ ಸಾಕಾಗಲಿಲ್ಲವೇ! ಹಾಗಾದಲ್ಲಿ ನಾಳೆ ಮತ್ತೊಮ್ಮೆ ಪ್ರಯತ್ನಿಸಿ.
(ಲೇಖಕಿ: ಫ್ಯಾಷನ್ ಪತ್ರಕರ್ತೆ)
ಈ ಸುದ್ದಿಯನ್ನೂ ಓದಿ | Georgette Gown Fashion: ಮಾನಿನಿಯರನ್ನು ಸೆಳೆಯುತ್ತಿರುವ ಭಾರವಿಲ್ಲದ ಡಿಸೈನರ್ ಜಾರ್ಜೆಟ್ ಗೌನ್ಸ್