Georgette Gown Fashion: ಮಾನಿನಿಯರನ್ನು ಸೆಳೆಯುತ್ತಿರುವ ಭಾರವಿಲ್ಲದ ಡಿಸೈನರ್ ಜಾರ್ಜೆಟ್ ಗೌನ್ಸ್
ಈ ಸೀಸನ್‌ಗೆ ಹೊಂದುವಂತಹ ಹೆಚ್ಚು ಭಾರವಿಲ್ಲದ ಲೈಟ್‌ವೈಟ್ ಜಾರ್ಜೆಟ್ ಗೌನ್‌ಗಳು ವುಮೆನ್ಸ್ ಡೇ ಫ್ಯಾಷನ್‌ನಲ್ಲಿ ಟ್ರೆಂಡಿಯಾಗಿವೆ. ಯಾವ್ಯಾವ ಬಗೆಯವು ಟ್ರೆಂಡಿಯಾಗಿವೆ? ಯಾವ ಬಗೆಯ ಡಿಸೈನ್‌ನವು ಬೇಡಿಕೆ ಹೆಚ್ಚಿಸಿಕೊಂಡಿವೆ? ಈ ಎಲ್ಲದರ ಕುರಿತಂತೆ ಡಿಸೈನರ್‌ಗಳು ಒಂದಿಷ್ಟು ಮಾಹಿತಿ ನೀಡಿದ್ದಾರೆ.

ಚಿತ್ರಕೃಪೆ: ಪಿಕ್ಸೆಲ್

- ಶೀಲಾ ಸಿ. ಶೆಟ್ಟಿ, ಬೆಂಗಳೂರು
ವುಮೆನ್ಸ್ ಡೇ ಸೀಸನ್‌ನಲ್ಲಿ, ಧರಿಸಿದರೇ ಭಾರವಿರದ ಲೈಟ್‌ವೇಟ್ ಜಾರ್ಜೆಟ್ ಗೌನ್‌ಗಳು (Georgette Gown Fashion), ಇದೀಗ ಫ್ಯಾಷನ್‌ಲೋಕದಲ್ಲಿ ಎಂಟ್ರಿ ನೀಡಿವೆ. ಗೌನ್ ಪ್ರಿಯ ಮಾನಿನಿಯರನ್ನು ಸಮ್ಮೋಹನಗೊಳಿಸಿವೆ. ಪರಿಣಾಮ, ಹೆವ್ವಿ ವಿನ್ಯಾಸವಿಲ್ಲದ ಈ ಸಿಂಪಲ್ ಲೈಟ್‌ವೇಟ್ ಜಾರ್ಜೆಟ್ ಗೌನ್‌ಗಳು ಎಲ್ಲಾ ವಯಸ್ಸಿನ ಯುವತಿಯರನ್ನು ಸೆಳೆದಿವೆ. ಈ ಹಿಂದೆ ಗೌನ್‌ಗಳೆಂದಾಕ್ಷಣ ಹೆವ್ವಿ ಫ್ಯಾಬ್ರಿಕ್‌ನದ್ದು ಎನ್ನಲಾಗುತ್ತಿತ್ತು. ಹೆವ್ವಿ ಡಿಸೈನ್‌ನ ಗೌನ್‌ಗಳು ಕೇವಲ ಗ್ರ್ಯಾಂಡ್ ಸಮಾರಂಭಗಳಿಗೆ ಮಾತ್ರ ಧರಿಸಬಹುದಾಗಿತ್ತು. ಹೆಚ್ಚು ಹೊತ್ತು ಧರಿಸಲು ಆಗುತ್ತಿರಲಿಲ್ಲ. ಇದಕ್ಕೆ ಪರಿಹಾರ ಎಂಬಂತೆ ಇದೀಗ ಈ ಕಾನ್ಸೆಪ್ಟ್ ಕಂಪ್ಲೀಟ್ ಬದಲಾಗಿದೆ. ಇದೀಗ ಡಿಸೈನರ್‌ಗಳು ವೆಸ್ಟರ್ನ್ ಕಾನ್ಸೆಪ್ಟ್ ಆಧರಿಸಿ ಡಿಸೈನ್‌ಮಾಡಿದ ಜಾರ್ಜೆಟ್‌ನ ಲೈಟ್‌ವೇಟ್ ಗೌನ್‌ಗಳು ಮಾರುಕಟ್ಟೆಗೆ ಆಗಮಿಸಿದ್ದು, ಸಿಂಪಲ್ ಡಿಸೈನ್‌ಗಳಿಂದಾಗಿ ಇವು ಪಾಪುಲರ್ ಆಗಿವೆ. ಕಂಫರ್ಟಬಲ್‌ವೇರ್ ಇದಾಗಿರುವುದರಿಂದ ಇವನ್ನು ಆಯ್ಕೆ ಮಾಡುವವರು ಕೂಡ ಹೆಚ್ಚಾಗಿದ್ದಾರೆ. ಹೆಚ್ಚು ಭಾರವಿಲ್ಲದ ಇವುಗಳ ವಿನ್ಯಾಸ ಕೆಲವರಿಗೆ ಇಷ್ಟವಾದರೆ, ಮತ್ತೆ ಕೆಲವರಿಗೆ ಕಂಟೆಂಪರರಿ ಸಿಂಪಲ್ ಡಿಸೈನ್ ಪ್ರಿಯವಾಗಿವೆ ಎನ್ನುತ್ತಾರೆ ಮಾಡೆಲ್ ದೀಪ್ತಿ.
ವೆರೈಟಿ ಜಾರ್ಜೆಟ್ ಗೌನ್ಸ್
ಈ ಸೀಸನ್‌ನಲ್ಲಿ ಜಾರ್ಜೆಟ್ ಗೌನ್‌ಗಳಲ್ಲಿ ಪ್ರಿಂಟೆಡ್, ಪ್ಲೇನ್, ಸ್ಲಿಟ್, ಫ್ರಾಕ್‌ಸ್ಟೈಲ್, ಅಸ್ಸೆಮ್ಮಿಟ್ರಿಕಲ್ ಗೌನ್‌ಗಳು ಹೆಚ್ಚು ಚಾಲ್ತಿಯಲ್ಲಿವೆ. ಅವರವರ ಬಾಡಿ ಟೈಪ್‌ಗೆ ತಕ್ಕಂತೆ ಆಯ್ಕೆ ಮಾಡಬೇಕು ಎನ್ನುತ್ತಾರೆ ಸ್ಟೈಲಿಸ್ಟ್ ರೀಟಾ.

ಕಲರ್‌ಫುಲ್ ಜಾರ್ಜೆಟ್ ಪ್ರಿಂಟೆಡ್ ಗೌನ್
ಮಲ್ಟಿ ಶೇಡ್‌ನ ಫ್ಲೋರಲ್, ಜೆಮೆಟ್ರಿಕ್ ಹಾಗೂ ಟ್ರಾಪಿಕಲ್ ಪ್ರಿಂಟೆಡ್‌ನ ಜಾರ್ಜೆಟ್ ಫ್ಯಾಬ್ರಿಕ್‌ನ ಗೌನ್‌ಗಳು ನೋಡಲು ಮನಮೋಹಕ ವಿನ್ಯಾಸದಲ್ಲಿ ಕಟ್‌ಔಟ್‌ಡಿಸೈನ್‌ನಲ್ಲಿ ಬಂದಿವೆ. ಧರಿಸಿದಾಗ ಇವು ನೋಡಲು ಫ್ರೆಶ್‌ಲುಕ್ ನೀಡುತ್ತವೆ. ಎಲ್ಲದಕ್ಕಿಂತ ಹೆಚ್ಚಾಗಿ ಯಂಗ್‌ಲುಕ್‌ನೀಡುತ್ತವೆ.
ಸಿಂಪಲ್ ಜಾರ್ಜೆಟ್ ಸಾದಾ ಗೌನ್
ನಾನಾ ಬಗೆಯ ಸಾದಾ ವರ್ಣದ ಪ್ಲೇನ್ ಫ್ಯಾಬ್ರಿಕ್‌ನ ಜಾರ್ಜೆಟ್ ಗೌನ್‌ಗಳು ನೋಡಲು ಎಲಿಗೆಂಟ್‌ಲುಕ್ ನೀಡುತ್ತವೆ. ಜತೆಗೆ ಇವನ್ನು ಥೀಮ್‌ವೈಸ್ ಧರಿಸಬಹುದು. ಹೆಚ್ಚು ಮೇಕಪ್‌ಅಗತ್ಯವಿಲ್ಲ. ಆಕ್ಸೆಸರೀಸ್ ಧರಿಸಿದಲ್ಲಿ ಸಖತ್ ಆಗಿ ಕಾಣುವುದು.

ಗ್ಲಾಮರಸ್ ಲುಕ್‌ಗಾಗಿ ಸ್ಲಿಟ್ ಜಾರ್ಜೆಟ್ ಗೌನ್
ಗ್ಲಾಮರಸ್‌ಲುಕ್ ನೀಡಲು ಈ ಸ್ಲಿಟ್ ಜಾರ್ಜೆಟ್ ಗೌನ್‌ಗಳು ಸಹಕಾರಿ. ಕಾಲನ್ನು ಅಂದವಾಗಿ ಬಿಂಬಿಸುವುದರೊಂದಿಗೆ ಉದ್ದನಾಗಿ ಬಿಂಬಿಸುತ್ತವೆ. ಸೆಂಟರ್, ಸೈಡ್ ಹಾಗೂ ಕೆಲವೊಮ್ಮೆ ಎಲ್ಲೆಂದರಲ್ಲಿ ನೀಡುವ ಸ್ಲಿಟ್‌ಗಳು ಈ ಗೌನ್‌ಗಳ ಆಕರ್ಷಣೆ ಎನ್ನಬಹುದು.
ಫ್ರಾಕ್ ಸ್ಟೈಲ್ ಗೌನ್
ಫ್ರಾಕ್‌ನಂತೆ ಕಾಣುವ ಫ್ರಿಲ್‌ಹಾಗೂ ಫ್ಲೀಟ್ಸ್ ಜಾರ್ಜೆಟ್ ಗೌನ್‌ಗಳು ಯಂಗ್‌ಲುಕ್ ನೀಡುವುದರೊಂದಿಗೆ ಹಾಲಿಡೇ ಫ್ಯಾಷನ್‌ಗೂ ಮ್ಯಾಚ್‌ಆಗುತ್ತವೆ. ಟೀನೇಜ್ ಹುಡುಗಿಯರಿಗೆ ಇವು ಹೇಳಿ ಮಾಡಿಸಿದಂತಿರುತ್ತವೆ.
ಈ ಸುದ್ದಿಯನ್ನೂ ಓದಿ | Frocks Fashion: ಮುಂಬರುವ ಸೀಸನ್‌ಗೂ ಮುನ್ನವೇ ಲಗ್ಗೆ ಇಟ್ಟ ಬ್ಯೂಟಿಫುಲ್ ಫ್ರಾಕ್‌ಗಳಿವು!
ಅಸ್ಸೆಮ್ಮಿಟ್ರಿಕಲ್ ಗೌನ್
ಕ್ರಿಸ್‌ಕ್ರಾಸ್, ಉದ್ದ ಗಿಡ್ಡವಾಗಿರುವಂತೆ ಕಾಣುವ ಈ ಗೌನ್‌ಗಳು ಹೊಸ ಪ್ರಯೋಗ ಮಾಡುವವರಿಗೆ ಸೂಕ್ತ. ನೋಡಲು ಮಾಡರ್ನ್ ಲುಕ್ ನೀಡುತ್ತದೆ.
(ಲೇಖಕಿ: ಫ್ಯಾಷನ್ ಪತ್ರಕರ್ತೆ)