ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Anarkali Suit Fashion 2026: ಕಾಜಲ್‌ ಅಗರ್ವಾಲ್‌ ಅಲಿಯಾ ಕಟ್‌ ಅನಾರ್ಕಲಿ ಸೂಟ್‌ಗೆ ಯುವತಿಯರು ಫಿದಾ!

Kajal Aggarwal: ಕಾಜಲ್‌ ಅಗರ್ವಾಲ್‌ ಸಿನಿಮಾ ಇವೆಂಟ್‌ವೊಂದರಲ್ಲಿ ಧರಿಸಿದ್ದ ಅಲಿಯಾ ಕಟ್‌ ಅನಾರ್ಕಲಿ ಉಡುಗೆ ಯುವತಿಯರನ್ನು ಸೆಳೆದಿದೆ. ಸೀಸನ್‌ನಲ್ಲಿ ಮರಳಿರುವ ಈ ಡಿಸೈನರ್‌ವೇರ್ ಸ್ಪೆಷಾಲಿಟಿ ಏನು? ಡಿಸೈನರ್‌ ಯಾರು? ಈ ಕುರಿತ ಡಿಟೇಲ್ಸ್ ಇಲ್ಲಿದೆ.

ಕಾಜಲ್‌ ಅಗರ್ವಾಲ್‌ ಅಲಿಯಾ ಕಟ್‌ ಅನಾರ್ಕಲಿ ಸೂಟ್‌ಗೆ ಯುವತಿಯರು ಫಿದಾ!

ಚಿತ್ರಗಳು: ಕಾಜೋಲ್‌ ಅಗರ್‌ವಾಲ್‌, ನಟಿ -

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಕಾಜಲ್‌ ಅಗರ್ವಾಲ್‌ (Kajal Aggarwal) ಸಿನಿಮಾ ಇವೆಂಟ್‌ವೊಂದರಲ್ಲಿ ಧರಿಸಿದ್ದ ಅಲಿಯಾ ಕಟ್‌ ಅನಾರ್ಕಲಿ ಸೂಟ್‌ (Anarkali Suit Fashion 2026) ಯುವತಿಯರನ್ನು ಸೆಳೆದಿದೆ. ಹೌದು, ಐವರಿ ಕಲರ್‌ನ ಗ್ರ್ಯಾಂಡ್‌ ಲುಕ್‌ ನೀಡುವ ಎಂಬ್ರಾಯ್ಡರಿ ಜತೆಗೆ ಅಲಿಯಾ ಕಟ್‌ನೊಂದಿಗೆ ಎ ಲೈನ್‌ ವಿನ್ಯಾಸ ಹೊಂದಿರುವ ಈ ಅನಾರ್ಕಲಿ ಸೂಟ್‌ ಸದ್ಯ ಎಲ್ಲಾ ವಯಸ್ಸಿನ ಮಾನಿನಿಯರನ್ನು ಸೆಳೆದಿದೆ. ಅದರಲ್ಲೂ ಗ್ರ್ಯಾಂಡ್‌ ಲುಕ್‌ ಬಯಸುವ ಯುವತಿಯರನ್ನು ಆಕರ್ಷಿಸಿದೆ.

Alia cut Anarkali suit

ಡಿಸೈನರ್‌ ಅನಿತಾ ಡೊಂಗ್ರೆ ಡಿಸೈನರ್‌ವೇರ್‌

ಬಾಲಿವುಡ್‌ನ ಸೆಲೆಬ್ರೆಟಿ ಡಿಸೈನರ್‌ ಅನಿತಾ ಡೊಂಗ್ರೆ ಸಿದ್ಧಪಡಿಸಿದ ಡಿಸೈನರ್‌ವೇರ್‌ ಇದು. ಕಂಫರ್ಟಬಲ್‌ ಟ್ರೆಡಿಷನಲ್‌ ಲುಕ್‌ ನೀಡುವ ಸಲುವಾಗಿ ಡಿಸೈನ್‌ ಮಾಡಿರುವ ಈ ಅನಾರ್ಕಲಿ ಸೂಟ್‌ ನಟಿ ಕಾಜೋಲ್‌ ಕಾಜಲ್‌ ಅಗರ್ವಾಲ್‌ಗೆ ರಾಯಲ್‌ ಲುಕ್‌ ಕಲ್ಪಿಸಿದೆ.

Anarkali Suit Fashion

ಅಲಿಯಾ ಕಟ್‌ ಅನಾರ್ಕಲಿ

ಈ ಅನಾರ್ಕಲಿ ಸೂಟ್‌ ಉಡುಗೆಯ ಮುಂಭಾಗದಲ್ಲಿ ಅಲಿಯಾ ಕಟ್‌ ವಿನ್ಯಾಸ ಹೊಂದಿದೆ. ಅಂದಹಾಗೆ, ಈ ಡಿಸೈನ್‌ನ ಕುರ್ತಾ ಹಾಗೂ ಅನಾರ್ಕಲಿ ಸೂಟ್‌ಗಳು ಕೆಲವು ವರ್ಷಗಳ ಹಿಂದೆ ಸಖತ್‌ ಟ್ರೆಂಡಿಯಾಗಿದ್ದವು. ಅದರಲ್ಲೂ ನಟಿ ಅಲಿಯಾ ಭಟ್‌ ಸಿನಿಮಾವೊಂದರಲ್ಲಿ ಧರಿಸಿದ ನಂತರ ಸಖತ್‌ ಟ್ರೆಂಡಿಯಾಗಿದ್ದವು ಎನ್ನುತ್ತಾರೆ ಫ್ಯಾಷನಿಸ್ಟಾಗಳು.

Kajal Aggarwal

ಅಲಿಯಾ ಕಟ್‌ ಅನಾರ್ಕಲಿ ಸೂಟ್‌ ಟಿಪ್ಸ್

  • ಈ ಶೈಲಿಯ ಅನಾರ್ಕಲಿ ಸೂಟ್‌ ಎಲ್ಲರಿಗೂ ಹೊಂದಿಕೆಯಾಗದು. ಉತ್ತಮ ಪರ್ಸಾನಾಲಿಟಿ ಹೊಂದಿರುವವರಿಗೆ ಮಾತ್ರ ಮ್ಯಾಚ್‌ ಆಗುತ್ತವೆ.
  • ಪ್ಲಂಪಿಯಾಗಿರುವವರಿಗೆ ನಾಟ್‌ ಓಕೆ. ಮುಂಭಾಗದಲ್ಲಿ ಈ ಕಟ್‌ ಅಗಲವಾಗಿ ಕಾಣಿಸುತ್ತದೆ. ಹಾಗಾಗಿ ದಪ್ಪಗಿರುವವರು ಅವಾಯ್ಡ್ ಮಾಡಿ.
  • ದುಪಟ್ಟಾ ಕೂಡ ಇರುವುದರಿಂದ ಸ್ಟೈಲಿಂಗ್‌ ಸೂಕ್ತವಾಗಿ ಮಾಡುವುದು ಅಗತ್ಯ.
  • ಉದ್ದಗಿರುವವರಿಗೆ ಅತ್ಯಾಕರ್ಷಕವಾಗಿ ಕಾಣಿಸುವುದು.

(ಲೇಖಕಿ: ಫ್ಯಾಷನ್‌ ಪತ್ರಕರ್ತೆ)