ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Monsoon Fashion 2026: ಮಾನ್ಸೂನ್‌ ಲುಕ್‌ನಲ್ಲಿ ನಟಿ ತೇಜಸ್ವಿನಿ ಶರ್ಮಾ ಫೋಟೋಶೂಟ್‌

ಸ್ಯಾಂಡಲ್‌ವುಡ್‌ ನಟಿ ತೇಜಸ್ವಿನಿ ಶರ್ಮಾ ಮಾನ್ಸೂನ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಶ್ವೇತ ವರ್ಣದ ಟೈಯರ್ಡ್ ಮ್ಯಾಕ್ಸಿ ಸ್ಕರ್ಟ್‌ಗೆ ಬ್ಲ್ಯೂ ಹಾಗೂ ವೈಟ್‌ ಪ್ರಿಂಟೆಡ್‌ ಪೆಪ್ಲಂ ಟಾಪನ್ನು ತೇಜಸ್ವಿನಿ ಶರ್ಮಾ ಧರಿಸಿದ್ದಾರೆ. ಅವರ ಈ ಲುಕ್‌ ಹೇಗಿದೆ? ಈ ಕುರಿತಂತೆ ಫ್ಯಾಷನ್‌ ವಿಮರ್ಶಕರು ಏನು ಹೇಳಿದ್ದಾರೆ ಇಲ್ಲಿದೆ ವಿವರ.

ಮಾನ್ಸೂನ್‌ ಲುಕ್‌ನಲ್ಲಿ ನಟಿ ತೇಜಸ್ವಿನಿ ಶರ್ಮಾ ಫೋಟೋಶೂಟ್‌

ಚಿತ್ರಗಳು: ತೇಜಸ್ವಿನಿ ಶರ್ಮಾ, ನಟಿ -

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಸ್ಯಾಂಡಲ್‌ವುಡ್‌ ನಟಿ ತೇಜಸ್ವಿನಿ ಶರ್ಮಾ ಮಾನ್ಸೂನ್‌ ಫ್ಯಾಷನ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಹೌದು, ಮಳೆಯಲ್ಲಿ ಕೊಡೆ ಹಿಡಿದು ತಮ್ಮದೇ ಆದ ಫ್ಯಾಷನ್‌ ಸ್ಟೇಟ್‌ಮೆಂಟ್‌ನಲ್ಲಿ ಕಾಣಿಸಿಕೊಂಡು ಮಳೆಯನ್ನು ಎಂಜಾಯ್‌ ಮಾಡುತ್ತಿದ್ದಾರೆ.

ತೇಜಸ್ವಿನಿ ಶರ್ಮಾ ಮಾನ್ಸೂನ್‌ ಡ್ರೆಸ್‌

ಅಂದಹಾಗೆ, ತೇಜಸ್ವಿನಿ ಶರ್ಮಾ ಧರಿಸಿರುವುದು ಪಕ್ಕಾ ಮಾನ್ಸೂನ್‌ ಡ್ರೆಸ್‌ಕೋಡ್‌ ಏನಲ್ಲ! ಆದರೆ, ಈ ಉಡುಗೆ ಈ ಮಳೆಯಲ್ಲಿನ ಫೋಟೋಶೂಟ್‌ನಲ್ಲಿ ಎಷ್ಟು ಚೆನ್ನಾಗಿ ಕಾಣಿಸುತ್ತಿದೆ ಎಂದರೇ, ನೋಡಲು ಮನಮೋಹಕವಾಗಿದೆ ಎಂದಿದ್ದಾರೆ ಫ್ಯಾಷನ್‌ ವಿಮರ್ಶಕರಾದ ಮಿಂಚು.

ಅವರ ಪ್ರಕಾರ, ಈ ಉಡುಗೆ ಹಾಗೂ ಮೇಕೋವರ್‌ ತೇಜಸ್ವಿನಿ ಶರ್ಮಾ ಅವರನ್ನು ಅತ್ಯಾಕರ್ಷಕವಾಗಿಸಿದೆಯಂತೆ.

Maxi skirt

ಪೆಪ್ಲಂ ಜತೆಗೆ ಮ್ಯಾಕ್ಸಿ ಸ್ಕರ್ಟ್

ಶ್ವೇತ ವರ್ಣದ ಟೈಯರ್ಡ್ ಮ್ಯಾಕ್ಸಿ ಸ್ಕರ್ಟ್‌ಗೆ ಬ್ಲ್ಯೂ ಹಾಗೂ ವೈಟ್‌ ಪ್ರಿಂಟೆಡ್‌ ಪೆಪ್ಲಂ ಟಾಪನ್ನು ತೇಜಸ್ವಿನಿ ಶರ್ಮಾ ಧರಿಸಿದ್ದಾರೆ. ಅವರ ಬಾಡಿ ಮಾಸ್‌ ಇಂಡೆಕ್ಸ್‌ಗೆ ತಕ್ಕಂತೆ ಈ ಉಡುಗೆ ಕೂಡ ಫಿಟ್‌ ಹಾಗೂ ಮ್ಯಾಚ್‌ ಆಗಿದೆ.

Maxi skirt

ಕ್ಲಾಸಿಕ್‌ ಲುಕ್‌ ನೀಡಿದ ಔಟ್‌ಲುಕ್‌

ನೋಡಲು ಲೇಯರ್‌ ಲುಕ್‌ನಂತೆ ಕಾಣಿಸುವ ಈ ಔಟ್‌ಫಿಟ್‌ ಅದರೊಂದಿಗೆ ಅವರು ಹಿಡಿದಿರುವ ಪಾರದರ್ಶಕವಾದ ಛತ್ರಿ ಅವರಿಗೆ ಕಂಪ್ಲೀಟ್‌ ಮಾನ್ಸೂನ್‌ ಫ್ಯಾಷನ್‌ ಲುಕ್‌ ನೀಡಿದೆ. ಕ್ಲಾಸಿಯಾಗಿ ಬಿಂಬಿಸಿದೆ ಎಂದಿದ್ದಾರೆ ಫ್ಯಾಷನ್‌ ವಿಶ್ಲೇಷಕರು.

Monsoon Look

ತೇಜಸ್ವಿನಿ ಶರ್ಮಾ ಮಾನ್ಸೂನ್‌ ಲವ್‌

ಇನ್ನು, ತೇಜಸ್ವಿನಿ ಶರ್ಮಾ ಅವರ ಮಾನ್ಸೂನ್‌ ಲವ್‌ ಈ ಫ್ಯಾಷನ್‌ ಶೂಟ್‌ ನೋಡಿದಾಗಲೇ ತಿಳಿಯುತ್ತದೆ. ಆ ಮಟ್ಟಿಗೆ ಅವರು ಈ ಲುಕ್‌ನಲ್ಲಿ ಅಂದವಾಗಿ ಕಾಣಿಸುತ್ತಿದ್ದಾರೆ ಎಂದಿದ್ದಾರೆ ಫ್ಯಾಷನ್‌ ಎಕ್ಸ್‌ಪರ್ಟ್ಸ್.

(ಲೇಖಕಿ: ಫ್ಯಾಷನ್‌ ಪತ್ರಕರ್ತೆ)