ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Celebrities Ugadi Fashion: ಟ್ರೆಡಿಷನಲ್‌ವೇರ್‌ನಲ್ಲಿ ಯುಗಾದಿ ಹಬ್ಬ ಆಚರಿಸಿದ ಸೆಲೆಬ್ರೆಟಿಗಳಿವರು

Celebrities Ugadi Fashion: ವೈವಿಧ್ಯಮಯ ಎಥ್ನಿಕ್‌ವೇರ್‌ ಹಾಗೂ ಟ್ರೆಡಿಷನಲ್‌ವೇರ್‌ಗಳಲ್ಲಿ ಕಾಣಿಸಿಕೊಂಡ ಸೆಲೆಬ್ರೆಟಿಗಳು ಯುಗಾದಿ ಹಬ್ಬವನ್ನು ಸಡಗರ-ಸಂಭ್ರಮದಿಂದ ಆಚರಿಸಿದರು. ಯಾರ‍್ಯಾರು ಹೇಗೆಲ್ಲಾ ಕಾಣಿಸಿಕೊಂಡರು? ಯಾವ ಬಗೆಯ ಔಟ್‌ಫಿಟ್‌ಗಳನ್ನು ಧರಿಸಿದ್ದರು? ಎಂಬುದರ ಕುರಿತಂತೆ ಫ್ಯಾಷನ್‌ ವಿಮರ್ಶಕರು ತಿಳಿಸಿದ್ದಾರೆ. ಈ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ವಿವರ.

ಟ್ರೆಡಿಷನಲ್‌ವೇರ್‌ನಲ್ಲಿ ಯುಗಾದಿ ಹಬ್ಬ ಆಚರಿಸಿದ ಸೆಲೆಬ್ರೆಟಿಗಳಿವರು

ಚಿತ್ರಗಳು: ವೈವಿಧ್ಯಮಯ ಎಥ್ನಿಕ್‌ವೇರ್‌ನಲ್ಲಿ ಯುಗಾದಿ ಆಚರಿಸಿದ ಸೆಲೆಬ್ರೆಟಿಗಳು

-ಶೀಲಾಸಿ. ಶೆಟ್ಟಿ, ಬೆಂಗಳೂರು

ವೈವಿಧ್ಯಮಯ ಎಥ್ನಿಕ್‌ವೇರ್‌ ಹಾಗೂ ಟ್ರೆಡಿಷನಲ್‌ವೇರ್‌ಗಳಲ್ಲಿ ಕಾಣಿಸಿಕೊಂಡ ಸೆಲೆಬ್ರೆಟಿಗಳು ಯುಗಾದಿ ಹಬ್ಬವನ್ನು ಸಡಗರ-ಸಂಭ್ರಮದಿಂದ ಆಚರಿಸಿದರು. ಹಬ್ಬ ಎಂದಾಕ್ಷಣ ಎಂತಹ ಸೆಲೆಬ್ರೆಟಿಗಳು (Celebrities Ugadi Fashion) ಕೂಡ ತಾತ್ಕಲಿಕವಾಗಿ, ವೆಸ್ಟರ್ನ್‌ವೇರ್‌ಗಳಿಂದ ದೂರ ಉಳಿದು ಎಥ್ನಿಕ್‌ವೇರ್‌ ಅಥವಾ ಟ್ರೆಡಿಷನಲ್‌ವೇರ್‌ಗಳನ್ನು ಧರಿಸುತ್ತಾರೆ. ಇನ್ನು, ಹಬ್ಬ ಎಂದಾಕ್ಷಣಾ ಟ್ರೆಡಿಷನಲ್‌ವೇರ್‌ಗಳನ್ನು ಧರಿಸುತ್ತಾರೆ. ಅವು ಟ್ರೆಡಿಷನಲ್‌ ಪೂಜೆಗಳಿಗೆ ಪೂರಕವಾಗಿರುವಂತಿರುತ್ತವೆ. ಈ ನಿಟ್ಟಿನಲ್ಲಿ, ಹಬ್ಬಗಳು ಸಾಂಪ್ರದಾಯಿಕ ಉಡುಗೆ-ತೊಡುಗೆಗಳನ್ನು ಪ್ರಮೋಟ್‌ ಮಾಡುತ್ತಿವೆ ಎನ್ನಬಹುದು ಎನ್ನುತ್ತಾರೆ ಫ್ಯಾಷನಿಸ್ಟಾ ವಿದ್ಯಾ. ಅವರ ಪ್ರಕಾರ, ಫೆಸ್ಟೀವ್‌ ಸೀಸನ್‌ನ ಔಟ್‌ಫಿಟ್‌ಗಳು ನಮ್ಮ ಸಂಸ್ಕೃತಿಯನ್ನು ಎತ್ತಿಹಿಡಿಯಲು ಸಹಕರಿಸುತ್ತಿವೆಯಂತೆ.

2

ಟ್ರೆಡಿಷನಲ್‌ವೇರ್‌ನಲ್ಲಿ ತಾರೆಯರು

ನಟ- ನಟಿಯರಾದ ಯಶ್‌-ರಾಧಿಕಾ ಪಂಡಿತ್‌, ರಿಷಬ್‌ ಶೆಟ್ಟಿ ದಂಪತಿ, ಡಾಲಿ ಧನಂಜಯ ದಂಪತಿ, ಪ್ರಿಯಾಂಕಾ ಉಪೇಂದ್ರಾ ಟ್ರೆಡಿಷನಲ್‌ ಔಟ್‌ಫಿಟ್‌ನಲ್ಲಿ ಕಾಣಿಸಿಕೊಂಡು ಹಬ್ಬ ಆಚರಿಸಿದರು. ಇನ್ನು ನಟಿಯರಾದ ಶ್ವೇತಾ ಶ್ರೀವಾತ್ಸವ್‌, ಅಮೂಲ್ಯ, ಆಶಿಕಾ, ಕಾರುಣ್ಯ, ದೀಪಿಕಾ ದಾಸ್‌, ಚೈತ್ರಾ ಆಚಾರ್‌, ಸೋನಾಲ್‌, ಮಯೂರಿ, ಸಪ್ತಮಿ ಗೌಡ, ಮಾನ್ಯ, ರ‍್ಯಾಪರ್‌ ಇಶಾನಿ ಸೇರಿದಂತೆ ಸಾಕಷ್ಟು ತಾರೆಯರು ರೇಷ್ಮೆ ಸೀರೆ, ಲೆಹೆಂಗಾ ಹಾಗೂ ಲಂಗ-ದಾವಣಿಯಲ್ಲಿ ಅತ್ಯಾಕರ್ಷಕವಾಗಿ ಕಾಣಿಸಿಕೊಂಡರು. ಅವರೆಲ್ಲರ ಹಬ್ಬದ ಉಡುಗೆ-ತೊಡುಗೆಗಳ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ಅಭಿಮಾನಿಗಳನ್ನು ಸೆಳೆದವು. ಒಟ್ಟಾರೆ, ಸೀರೆ, ಲೆಹೆಂಗಾ, ಲಂಗ-ದಾವಣಿಯಲ್ಲಿ ನಟಿಯರು ಕಾಣಿಸಿಕೊಂಡರೆ, ನಟರು ಪಂಚೆ, ಧೋತಿ ಅಥವಾ ಫಾರ್ಮಲ್ಸ್‌ ಎಥ್ನಿಕ್‌ವೇರ್‌ಗಳಲ್ಲಿ ಕಾಣಿಸಿಕೊಂಡು ಟ್ರೆಡಿಷನಲ್‌ವೇರ್‌ಗಳ ಪ್ರಾಮುಖ್ಯತೆ ಸಾರಿದ್ದಾರೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು.

3

ಸಂಸ್ಕೃತಿ ಬಿಂಬಿಸುವ ಉಡುಗೆಗಳು

ನಮ್ಮ ಸಂಸ್ಕೃತಿ ಬಿಂಬಿಸುವ ಉಡುಗೆ-ತೊಡುಗೆಗಳನ್ನು ಪ್ರಮೋಟ್‌ ಮಾಡುವಲ್ಲಿ ಇತ್ತೀಚೆಗೆ ಸೆಲೆಬ್ರೆಟಿಗಳು ಕೂಡ ಪ್ರಮುಖ ಪಾತ್ರವಹಿಸುತ್ತಿದ್ದಾರೆ. ಇದಕ್ಕೆ ಸೋಷಿಯಲ್‌ ಮೀಡಿಯಾ ಕೂಡ ಸಹಕಾರಿಯಾಗಿದೆ. ಇದನ್ನು ನೋಡುವ ಅಭಿಮಾನಿಗಳು ಹಾಗೂ ಫ್ಯಾಷನ್‌ಪ್ರಿಯರು ಕೂಡ ತಾವೇನೂ ಕಡಿಮೆ ಇಲ್ಲವೆಂಬಂತೆ ಹಬ್ಬಗಳಿಗೆ ಮ್ಯಾಚ್‌ ಆಗುವ ಉಡುಗೆ-ತೊಡುಗೆಗಳನ್ನು ಧರಿಸುತ್ತಿದ್ದಾರೆ. ಇದು ನಮ್ಮ ಸಂಸ್ಕೃತಿಗೆ ಪೂರಕವಾಗಿದೆ. ಇದು ಉತ್ತಮ ಬೆಳವಣಿಗೆ ಎಂದಿದ್ದಾರೆ ಫ್ಯಾಷನ್‌ ವಿಮರ್ಶಕರಾದ ವಿದ್ಯಾ ವಿವೇಕ್‌.

4

ಈ ಸುದ್ದಿಯನ್ನೂ ಓದಿ | Ugadi Jewel Fashion: ಯುಗಾದಿ ಹಬ್ಬದ ಸೀಸನ್‌ನಲ್ಲಿ ಟ್ರೆಡಿಷನಲ್‌ ಡಿಸೈನ್‌ನ ಆಭರಣಗಳಿಗೆ ಹೆಚ್ಚಾದ ಬೇಡಿಕೆ

ಬಾಲನಟಿಯರ ಡಿಸೈನರ್‌ವೇರ್ಸ್‌

ಇನ್ನು, ಈ ಔಟ್‌ಲುಕ್‌ ಬಾಲನಟಿಯರಿಗೂ ಹೊರತಾಗಿರಲಿಲ್ಲ! ಬಾಲ ನಟಿ ಅನ್ಯಾ ಶೆಟ್ಟಿ, ವೈಷ್ಣವಿ, ಅಂಕಿತಾ ಜಯರಾಂ ಇದೀಗ ಟೀನೇಜ್‌ ಹುಡುಗಿಯರಾಗಿದ್ದು, ಲಂಗ ದಾವಣಿ ಧರಿಸಿ, ಯುಗಾದಿ ಸಂಭ್ರಮಿಸಿದ್ದಾರೆ.

ಒಟ್ಟಾರೆ, ಹಿರಿ ತೆರೆ, ಕಿರುತೆರೆಯ ನಾನಾ ತಾರೆಯರು ತಮ್ಮದೇ ಆದ ಎಥ್ನಿಕ್‌ವೇರ್‌ಗಳಲ್ಲಿ ಯುಗಾದಿ ಸಂಭ್ರಮಿಸಿದ್ದಾರೆ. ಟ್ರೆಡಿಷನಲ್‌ವೇರ್‌ಗಳಲ್ಲಿ ಮಿಂಚಿದ್ದಾರೆ. ಸಂಸ್ಕೃತಿ ಬಿಂಬಿಸುವ ಉಡುಗೆಗಳನ್ನು ಧರಿಸಿ, ಇತರರಿಗೂ ಮಾದರಿಯಾಗಿದ್ದಾರೆ ಎನ್ನಬಹುದು!

(ಲೇಖಕಿ: ಫ್ಯಾಷನ್‌ ಪತ್ರಕರ್ತೆ)