Cotton Saree Styling 2025: ಕಾಟನ್ ಸೀರೆಯನ್ನು ಸ್ಟೈಲಿಶ್ ಆಗಿ ಉಡಲು ಇಲ್ಲಿದೆ 5 ಸಿಂಪಲ್ ಐಡಿಯಾ
Cotton Saree Styling 2025: ಕಾಟನ್ ಸೀರೆಗಳನ್ನು ಸ್ಟೈಲಿಶ್ ಆಗಿ ಉಟ್ಟು ಆಕರ್ಷಕವಾಗಿ ಕಾಣಿಸಿಕೊಳ್ಳಬಹುದು. ಇದಕ್ಕಾಗಿ ಒಂದಿಷ್ಟು ಸ್ಟೈಲಿಂಗ್ ಕಾನ್ಸೆಪ್ಟ್ ಅಳವಡಿಸಿಕೊಳ್ಳಬೇಕು ಎನ್ನುವ ಸೀರೆ ಸ್ಟೈಲಿಸ್ಟ್ ರೇಣುಕಾ ಪ್ರಕಾಶ್ ಒಂದಿಷ್ಟು ಉದಾಹರಣೆಯೊಂದಿಗೆ 5 ಸಿಂಪಲ್ ಐಡಿಯಾ ನೀಡಿದ್ದಾರೆ. ಈ ಕುರಿತಂತೆ ಇಲ್ಲಿದೆ ಡಿಟೇಲ್ಸ್.

ಚಿತ್ರಗಳು: ರೇಣುಕಾ ಪ್ರಕಾಶ್, ಸೀರೆ ಸ್ಟೈಲಿಸ್ಟ್ & ಡಿಸೈನರ್

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸಿಂಪಲ್ ಕಾಟನ್ ಸೀರೆಗಳನ್ನು ಸ್ಟೈಲಿಶ್ (Cotton Saree Styling 2025) ಆಗಿ ಕಾಣುವಂತೆಯೂ ಧರಿಸಬಹುದು. ಹೌದು, ಭಿನ್ನ-ವಿಭಿನ್ನ ಬ್ಲೌಸ್‌ಗಳನ್ನು ಕಾಟನ್ ಸೀರೆಯೊಂದಿಗೆ ಮಿಕ್ಸ್ –ಮ್ಯಾಚ್ ಮಾಡಿ, ಅದನ್ನು ವಿಭಿನ್ನವಾಗಿ ಇಲ್ಲವೇ ಗ್ಲಾಮರಸ್ ಆಗಿ ಉಟ್ಟಾಗ ಸುಂದರವಾಗಿ ಕಾಣಿಸಬಹುದು. ಜತೆಗೆ ಪ್ರಯೋಗಾತ್ಮಕ ಸ್ಟೈಲಿಂಗ್‌ಗೆ ಸೈ ಎಂದಾಗ ಮಾಡರ್ನ್ ಲುಕ್ ಪಡೆಯಬಹುದು ಎನ್ನುತ್ತಾರೆ ಸೀರೆ ಸ್ಟೈಲಿಸ್ಟ್ ರೇಣುಕಾ ಪ್ರಕಾಶ್. ಉದಾಹರಣೆಗೆ ಯಾವುದೇ ಕಾಟನ್ ಸೀರೆಗಳಿಗೂ ಅರ್ಗಾನ್ಜಾ ಸ್ಲೀವ್ ಬ್ಲೌಸ್ ಮ್ಯಾಚ್ ಮಾಡಬಹುದು. ಇದು ಡಿಫರೆಂಟ್ ಲುಕ್ ನೀಡುತ್ತದೆ. ಇನ್ನು ಇದಕ್ಕೆ ಧರಿಸುವ ಜುಮ್ಕಾ, ಬಿಗ್ ಫಿಂಗರ್ ರಿಂಗ್ಸ್ ಹಾಗೂ ಕ್ಲಿಪಾನ್ ಮೂಗುತಿ ಡಿಫರೆಂಟ್ ಲುಕ್ ನೀಡುತ್ತದೆ. ಸೊಂಟಕ್ಕೆ ಬಿಗಿಯುವ ಫಂಕಿ ಬೆಲ್ಟ್ ಇಂಡೋ- ವೆಸ್ಟರ್ನ್ ಲುಕ್ ನೀಡುತ್ತದೆ.
ಪ್ಯಾಂಟ್ ಪ್ಲಸ್ ಕಾಟನ್ ಸೀರೆ
ಲೆಗ್ಗಿಂಗ್ಸ್, ಜೀನ್ಸ್ ಪ್ಯಾಂಟ್ ಅಥವಾ ಪಲ್ಹೋಜೊ ಪ್ಯಾಂಟ್ ಜತೆಗೆ ಬುಟ್ಟಾ ಕಾಟನ್ ಸೀರೆ ಹಾಗೂ ರೇಸರ್ ಬ್ಲೌಸ್ ಮ್ಯಾಚ್ ಮಾಡಿ ಧರಿಸಬಹುದು. ಇದು ಇಂಡೋ-ವೆಸ್ಟರ್ನ್ ಲುಕ್ ನೀಡುತ್ತದೆ. ಇನ್ನು ಇದರೊಂದಿಗೆ ಮರದ ಬಳೆಗಳು, ಮ್ಯಾಚಿಂಗ್ ಬಳೆ, ಫುಟ್‌ವೇರ್ ಈ ಲುಕ್ಕನ್ನು ಆಕರ್ಷಕವಾಗಿ ಬಿಂಬಿಸುತ್ತವೆ.

ಅಂಚಿರುವ ಕಾಟನ್ ಸೀರೆಗೆ ಕೋಟ್
ಇನ್ನು, ಪಟ್ಟದ ಅಂಚು ಕಾಟನ್ ಸೀರೆ ಹಾಗೂ ನಾನಾ ಬಗೆಯ ಅಂಚಿರುವ ಸೀರೆಗಳೊಂದಿಗೆ ಜತೆ ಜಾಕೆಟ್ ಧರಿಸಿ, ಸಿಲ್ವರ್ ಜ್ಯುವೆಲರಿ, ಜುಮ್ಕಾ, ಬ್ಲಾಕ್ ಶೂ ಧರಿಸಿದಾಗ ಟ್ರೆಡಿಷನಲ್ ಲುಕ್ ಕೂಡ ಸ್ಟೈಲಿಶ್ ಆಗಿ ಕಾಣಿಸುತ್ತದೆ.

ಸೆಲ್ವಾರ್ ಟಾಪ್‌ನೊಂದಿಗೆ ಕಾಟನ್ ಸೀರೆ
ಗಂಚಾ ಕಾಟನ್ ಸೀರೆಯೊಂದಿಗೆ ಸೆಲ್ವಾರ್ ಟಾಪ್ ಮ್ಯಾಚ್ ಮಾಡಿ, ಅದಕ್ಕೆ ಡಿಫರೆಂಟ್ ಆಗಿ ಪಲ್ಲು ಹಾಕಿದಲ್ಲಿ, ಕಂಪ್ಲೀಟ್ ಡಿಫರೆಂಟ್ ಲುಕ್ ನೀಡುತ್ತದೆ.

ಮಲ್ಟಿ ಶೇಡ್ ಬ್ಲೌಸ್‌ಗೆ ಇಳಕಲ್ ಕಾಟನ್ ಸೀರೆ
ಮಲ್ಟಿ ಶೇಡ್‌ನ ಚೆಕ್ಸ್ ಬ್ಲೌಸ್‌ಗೆ, ಹಸಿರು ಇಳಕಲ್ ಕಾಟನ್ ಸೀರೆ ಉಟ್ಟು, ಸಿಲ್ವರ್ ಹಸ್ಲಿ, ಬ್ಯಾಂಗಲ್ಸ್, ಜೂತಿ ಧರಿಸಿದಲ್ಲಿ ಸುಂದರವಾಗಿ ಬಿಂಬಿಸುತ್ತದೆ. ಇನ್ನು, ಇದೇ ರೀತಿ ನಾನಾ ಶೈಲಿಯಲ್ಲಿ ನಿಮ್ಮ ಪರ್ಸನಾಲಿಟಿಗೆ ಮ್ಯಾಚ್ ಆಗುವಂತೆ ಕಾಟನ್ ಸೀರೆಗೆ ಸ್ಟೈಲಿಂಗ್ ಮಾಡಿದಲ್ಲಿ ನೀವು ಅತ್ಯಾಕರ್ಷಕವಾಗಿ ಕಾಣಿಸುವುದಂತೂ ಗ್ಯಾರಂಟಿ ಎನ್ನುತ್ತಾರೆ ಸೀರೆ ಸ್ಟೈಲಿಸ್ಟ್ ರೇಣುಕಾ.
(ಲೇಖಕಿ: ಫ್ಯಾಷನ್ ಪತ್ರಕರ್ತೆ)
ಈ ಸುದ್ದಿಯನ್ನೂ ಓದಿ | Holi Dupatta Fashion 2025: ಹೋಳಿ ಫೆಸ್ಟಿವ್ ಸೀಸನ್‌ನಲ್ಲಿ ಡಿಸೈನರ್‌ವೇರ್ಸ್‌ಗೆ ರಂಗುರಂಗಿನ ದುಪಟ್ಟಾ ಸಾಥ್!