Fashion Interview: ಫ್ಯಾಷನ್ ಶೋ ಡೈರೆಕ್ಟರ್ ರಾಜೇಶ್ ಶೆಟ್ಟಿ ಕಂಡಂತೆ ಅಪ್ಪು
Fashion Interview: ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಸಿಂಪಲ್ ಫ್ಯಾಷನ್ ಕುರಿತಂತೆ ಫ್ಯಾಷನ್‌ಲೋಕದ ಶೋ ಡೈರೆಕ್ಟರ್, ಡಿಸೈನರ್ ಹಾಗೂ ಕೊರಿಯಾಗ್ರಾಫರ್ ರಾಜೇಶ್ ಶೆಟ್ಟಿಯವರು ಒಂದಿಷ್ಟು ಫ್ಯಾಷನ್ ಸ್ಟೈಲಿಂಗ್ ವಿಷಯಗಳನ್ನು ವಿಶ್ವವಾಣಿ ನ್ಯೂಸ್‌ನೊಂದಿಗೆ ಹಂಚಿಕೊಂಡಿದ್ದಾರೆ. ಸಂದರ್ಶನದ ಸಾರಾಂಶ ಇಲ್ಲಿದೆ .

ಚಿತ್ರಗಳು: ರಾಜೇಶ್ ಶೆಟ್ಟಿ, ಫ್ಯಾಷನ್ ಶೋ ಡೈರೆಕ್ಟರ್

| ಸಂದರ್ಶನ: ಶೀಲಾ ಸಿ. ಶೆಟ್ಟಿ
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರದ್ದು ಸಿಂಪಲ್ ಫ್ಯಾಷನ್ ಆಗಿತ್ತು. ಅವರ ಒಂದೊಂದು ಔಟ್‌ಫಿಟ್‌ಗಳು ಅವರ ವ್ಯಕ್ತಿತ್ವವನ್ನು ಪ್ರತಿಬಿಂಬಿಸುವಂತಿದ್ದವು ಎಂದು ಭಾವುಕರಾಗಿ ನೆನಪಿಸಿಕೊಳ್ಳುತ್ತಾರೆ ಫ್ಯಾಷನ್ ಲೋಕದಲ್ಲಿ (Fashion Interview) ತಮ್ಮದೇ ಆದ ಛಾಪು ಮೂಡಿಸಿರುವ ಶೋ ಡೈರೆಕ್ಟರ್, ಡಿಸೈನರ್, ಫ್ಯಾಷನ್ ಕೊರಿಯಾಗ್ರಾಫರ್ ರಾಜೇಶ್ ಶೆಟ್ಟಿ. ಅಂದಹಾಗೆ, ರಾಜೇಶ್ ಶೆಟ್ಟಿ ಅವರು ಫ್ಯಾಷನ್ ಲೋಕದ ಸೀನಿಯರ್ ಎಂದರೂ ಅತಿಶಯೋಕ್ತಿಯಾಗದು. ಸದಾ ತಮ್ಮ ಒಂದಲ್ಲ ಒಂದು ಕ್ರಿಯೇಟಿವ್ ಶೋಗಳಿಂದಾಗಿ ಹೆಸರು ಮಾಡಿದವರು. ಎಷ್ಟೇ ಬ್ಯುಸಿಯಾಗಿದ್ದರೂ ಸದಾ ನಗುನಗುತ್ತಾ ಅಚ್ಚ ಕನ್ನಡದಲ್ಲೆ ಮಾತನಾಡುವ ಅವರು ಇದುವರೆಗೂ ಅಂತಾರಾಷ್ಟ್ರೀಯ ಫ್ಯಾಷನ್ ಶೋಗಳಿಂದಿಡಿದು ಪ್ರತಿಷ್ಠಿತ ಬ್ರ್ಯಾಂಡ್‌ಗಳ ಶೋಗಳನ್ನು ನಡೆಸಿಕೊಟ್ಟಿದ್ದಾರೆ. ಅಪ್ಪು ಅವರ ಜನ್ಮ ದಿನದಂದು ಅಪ್ಪು ಅವರನ್ನು ನೆನಪಿಸಿಕೊಳ್ಳುತ್ತಾ, ಅವರ ಫ್ಯಾಷನ್ ಸೆನ್ಸ್ ಹಾಗೂ ಸ್ಟೈಲಿಂಗ್ ಕುರಿತಂತೆ ವಿಶ್ವವಾಣಿಯೊಂದಿಗೆ ಒಂದಿಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ.
ವಿಶ್ವವಾಣಿ ನ್ಯೂಸ್: ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರಿಗೆ ಸ್ಟೈಲಿಂಗ್ ಮಾಡಿದ ಅನುಭವದ ಬಗ್ಗೆ ಹೇಳಿ?
ರಾಜೇಶ್ ಶೆಟ್ಟಿ: ಅವರದ್ದು ಸಿಂಪಲ್ ಫ್ಯಾಷನ್! ಒಮ್ಮೆ ಅವರ ಪರ್ಸನಲ್ ವಾರ್ಡ್ರೋಬ್‌ಗೆ ಕೆಲವು ಸೂಟ್ ಹಾಗೂ ಕ್ಯಾಶುವೇರ್ ಸೆಲೆಕ್ಟ್ ಮಾಡಿ ಕೊಟ್ಟಿದ್ದೆ. ಸಿನಿಮಾಗೆ ಅವರು ಕಲರ್‌ಫುಲ್ ಔಟ್‌ಫಿಟ್ ಧರಿಸಿರಬಹುದು. ಆದರೆ, ಡೈಲಿ ರುಟೀನ್‌ನಲ್ಲಿ ಅವರದ್ದು ತೀರಾ ಸಿಂಪಲ್ ಫ್ಯಾಷನ್ ಆಗಿತ್ತು.
ವಿಶ್ವವಾಣಿ ನ್ಯೂಸ್ : ಅವರ ಡ್ರೆಸ್‌ಕೋಡ್ ಆಯ್ಕೆ ಹೇಗಿರುತ್ತಿತ್ತು ?
ರಾಜೇಶ್ ಶೆಟ್ಟಿ: ಹೆಚ್ಚು ಆಡಂಬರವಿಲ್ಲದ ಸಿಂಪಲ್ ಡ್ರೆಸ್‌ಕೋಡ್ ಅವರದ್ದಾಗಿತ್ತು.
ವಿಶ್ವವಾಣಿ ನ್ಯೂಸ್: ಸ್ಟಾರ್ ಲುಕ್‌ನಿಂದ ಅವರು ದೂರವಿದ್ದರಾ?
ರಾಜೇಶ್ ಶೆಟ್ಟಿ: ಖಂಡಿತಾ. ಅವರು ಸಿನಿಮಾಗಳಲ್ಲಿ ಮಾತ್ರ ಲಕ್ಷುರಿ ಲುಕ್ ಅಥವಾ ಪ್ರಯೋಗಾತ್ಮಕ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದರು. ತಾವು ಸ್ಟಾರ್ ಎಂಬುದನ್ನು ಸೈಡಿಗೆ ಇರಿಸಿ, ಸದಾ ಸಿಂಪಲ್ ಆಗಿ ಕಾಣಿಸಿಕೊಳ್ಳುತ್ತಿದ್ದರು.
ವಿಶ್ವವಾಣಿ: ಫಿಟ್‌ನೆಸ್ ಫ್ರೀಕ್ ಆಗಿದ್ದ ಅವರ ಔಟ್‌ಫಿಟ್ ಸೆಲೆಕ್ಷನ್‌ನಲ್ಲಿ ನಿಮಗೆ ಅಚ್ಚರಿ ಮೂಡಿಸಿದ್ದೇನು?
ರಾಜೇಶ್ ಶೆಟ್ಟಿ: ಫಿಟ್ ಬಾಡಿ ಹೊಂದಿದ್ದ ಪುನೀತ್‌ರವರಿಗೆ ತೀರಾ ದೊಗಲೆಯಾದ ಔಟ್‌ಫಿಟ್ ಹೊಂದುತ್ತಿರಲಿಲ್ಲ! ಹಾಗಾಗಿ ಅವರು ಕಸ್ಟಮೈಸ್ ಮಾಡಿಸುತ್ತಿದ್ದರು. ಇಲ್ಲವೇ ತಮಗೆ ಫಿಟ್ ಆಗಿ ಹೊಂದುವಂತಹ ಔಟ್‌ಫಿಟ್‌ಗಳನ್ನು ಖುದ್ದು ಆಯ್ಕೆ ಮಾಡುತ್ತಿದ್ದರು.
ಈ ಸುದ್ದಿಯನ್ನೂ ಓದಿ | Power Star Fashion: ಹೀಗಿತ್ತು ನಮ್ಮ ನಿಮ್ಮೆಲ್ಲರ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಸ್ಟೈಲಿಂಗ್!
ವಿಶ್ವವಾಣಿ ನ್ಯೂಸ್: ನಿಮಗೆ ಅವರಲ್ಲಿ ಇಷ್ಟವಾಗಿದ್ದ ಸಂಗತಿ ಏನು ?
ರಾಜೇಶ್ ಶೆಟ್ಟಿ: ಮೊದಲ ಬಾರಿ ಭೇಟಿಯಾದಾಗಲೇ ಅವರು ಬಹಳ ಆತ್ಮಿಯರಂತೆ ಮಾತನಾಡಿಸಿದ್ದರು. ಅಲ್ಲದೇ, ಅಷ್ಟು ದೊಡ್ಡ ಸ್ಟಾರ್ ಆಗಿದ್ದರೂ ಕೂಡ ನನಗೆ ಏನು ಚೆನ್ನಾಗಿ ಕಾಣುತ್ತದೆ? ಯಾವುದು ಬೆಸ್ಟ್? ಎಂದೆಲ್ಲಾ ಕೇಳಿದ್ದು, ನಿಜಕ್ಕೂ ಅವರ ಡೌನ್ ಟು ಅರ್ತ್ ನೇಚರ್ ಕಂಡು ಮೂಕವಿಸ್ಮಿತನಾಗಿದ್ದೆ.
(ಲೇಖಕಿ: ಫ್ಯಾಷನ್ ಪತ್ರಕರ್ತೆ)